Connect with us

LATEST NEWS

ಉಡುಪಿ : ಮಳೆಯ ನಡುವೆಯೂ ನಡೆಯಿತು ದೈವದ ನೇಮ

Published

on

ಉಡುಪಿ : ಸುಡುಬಿಸಿಲಿನಿಂದ ಕಂಗೆಟ್ಟಿರುವ ಕರಾವಳಿಯಲ್ಲಿ ವರುಣಾಗಮನ ತಂಪೆರೆದಿದೆ. ಆದರೆ, ದಿಢೀರ್ ಆಗಿ ಸುರಿಯುವ ಮಳೆಯಿಂದಾಗಿ ಹಲವೆಡೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಮುಖವಾಗಿ ಜಾತ್ರೋತ್ಸವಗಳು ನಡೆಯುತ್ತಿರುವ ಊರುಗಳಲ್ಲಿ ಮಳೆಯಿಂದಾಗಿ ದೇವರ ಉತ್ಸವಕ್ಕೆ ಮಳೆ ಅಡ್ಡಿ ಪಡಿಸಿದ್ರೆ, ಜಾತ್ರೆಯ ವ್ಯಾಪಾರಿಗಳು ಪರದಾಡುವಂತೆ ಮಾಡಿದೆ.

ಇದೀಗ ಅಂತಹುದೇ ಒಂದು ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ. ದೈವದ ನೇಮವೊಂದಕ್ಕೆ ಮಳೆ ವಿಘ್ನ ತಂದೊಡ್ಡಿದೆ. ಸಾಮಾನ್ಯವಾಗಿ ಮಳೆ ಸಂಜೆ ಸುರಿಯುತ್ತಿದ್ದಾದ್ರೂ ಇಂದು(ಏ.11) ಮುಂಜಾನೆಯೇ ಎಂಟ್ರಿ ಕೊಟ್ಟಿದ್ದಾನೆ. ಹೀಗಾಗಿ ಉಡುಪಿಯ ಕಟಪಾಡಿ ಏಣಗುಡ್ಡೆ ಬಬ್ಬಸ್ವಾಮಿ ಪರಿವಾರ ದೈವಗಳ ನೇಮೋತ್ಸವಕ್ಕೆ ಅಡ್ಡಿ ಉಂಟು ಮಾಡಿದ್ದಾನೆ.

ನಿನ್ನೆ ರಾತ್ರಿ ನೇಮೋತ್ಸವ ಆರಂಭವಾಗಿದ್ದು ಇಂದು ಮುಂಜಾನೆ ಬಬ್ಬು ಸ್ವಾಮಿ ಮತ್ತು ತನ್ನಿ ಮಾನಿಗ ದೈವದ ನೇಮತ್ಸೋವ ನಡೆಯುವಾಗ ಮಳೆ ಒಕ್ಕರಿಸಿದೆ. ಮಳೆಯ ಹಿನ್ನೆಲೆಯಲ್ಲಿ ದೈವದ ಚಾಕರಿಯವರು ಹಾಗೂ ಪ್ರಮುಖರನ್ನು ಹೊರತು ಪಡಿಸಿ ಉಳಿದವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ : ಅಂದು ಮಿಸ್ ಇಂಡಿಯಾ ಆಗಿ ಮಿಂಚಿದ್ದ ಬೆಡಗಿ ಇಂದು ಭಾರತೀಯ ಸೇನಾ ಅಧಿಕಾರಿ ..! ಯಾರು ಗೊತ್ತಾ ..?

ಆದರೆ, ದೈವದ ನರ್ತನ ಸೇವೆ ಮಳೆಯ ನಡುವೆಯೇ ಮುಂದುವರಿಸಿಕೊಂಡು ಹೋಗಲಾಗಿದೆ. ನರ್ತನ ಸೇವೆ ನಡೆಯುತ್ತಿದ್ದ ಜಾಗದಲ್ಲಿ ಮಳೆ ನೀರು ತುಂಬಿಕೊಂಡು ಕೆಸರಾಗಿದ್ರೂ ದೈವದ ಪಾತ್ರಿಗಳು ತಮ್ಮ ನರ್ತನ ಸೇವೆಯನ್ನು ಪೂರ್ತಿಗೊಳಿಸಿದ್ದಾರೆ.

 

ವಿಡಿಯೋ ನೋಡಿ:

DAKSHINA KANNADA

ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ

Published

on

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತದ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಹವಾಮಾನ ಇಲಾಖೆಯು ಇಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ನಿನ್ನೆ ರಾತ್ರಿ ವೇಳೆಯೇ ಕೆಲವು ಕಡೆ ಮಳೆಯಾಗಿದ್ದು, ಇಂದು ಮುಜಾನೆಯಿಂದ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ.

ಗಾಳಿ ಮಳೆಯಿಂದಾಗಿ ಕೆಲವು ಕಡೆ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಬಳಿಯ ಪಲ್ಲಿಕಂಡದಲ್ಲಿ ಸಿಸಿಲಿಯಾ ಪಿಂಟೊ ಎಂಬುವವರ ಮನೆ ಕುಸಿದು ಬಿದ್ದ ಘಟನೆ ಸಂಭವಿಸಿದ್ದು, ಯಾವುದೇ ಜಿವ ಹಾನಿಯಾಗಿಲ್ಲ.

ಕೆಲವು ಕಡೆ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಉಂಟಾದ ಘಟನೆಯೂ ಸಂಭವಿಸಿದೆ. ಉಡುಪಿ, ಕಾರ್ಕಳ, ಕುಂದಾಪುರ, ಕಾಪು,ಪಡುಬಿದ್ರಿ ಸಹಿತ ಕರಾವಳಿಯ ಎಲ್ಲಾ ತಾಲೂಕುಗಳಲ್ಲಿ ಧಾರಾಕಾರ ಮಳೆ ಬಂದಿದೆ.

ಇದನ್ನೂ ಓದಿ: ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರು ಯುವತಿಯರ ಸಾ*ವು

ಕಾರ್ಮೋಡ ಮುಸುಕಿದ ವಾತಾವರಣವಿದ್ದು ದಿನಪೂರ್ತಿ ಮಳೆ ಬರುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

 

Continue Reading

LATEST NEWS

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹ*ತ್ಯೆ

Published

on

ಮಡಿಕೇರಿ: ಜೀವನದಲ್ಲಿ ಜಿಗುಪ್ಸೆಗೊಂಡು ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.

ನಾರೂರು ಮನೆ ಮಧು (ಅಶೋಕ್) ಮೃತ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮದ್ಯ ಸೇವಿಸಿ ತಲೆಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಮೂರು ವರ್ಷದ ಪುತ್ರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಪತ್ನಿ ಮತ್ತು ಪುತ್ರಿ ಬೆಂಗಳೂರಿಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ಮೃತನ ತಾಯಿ ಕೂಡ ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭ ತನ್ನ ಮನೆಯಲ್ಲಿ ಇದ್ದ ಡಬಲ್ ಬ್ಯಾರೆಲ್ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರು ಯುವತಿಯರ ಸಾ*ವು

ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Continue Reading

DAKSHINA KANNADA

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ

Published

on

ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಮುಂಬಯಿ ನಿವಾಸಿ ಮಸೀವುಲ್ಲಾ ಅತಿವುಲ್ಲಾ ಖಾನ್‌ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 1,65,000 ರೂಪಾಯಿ ಹಣವನ್ನು ಪಡೆದು ಯುವಕರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 1 ಕೋಟಿ 82 ಲಕ್ಷ ರೂಪಾಯಿ ಹಣವನ್ನು ಪಡೆದು ನಂಬಿಕೆ ದ್ರೋಹ ಎಸಗಿರುವುದಾಗಿ ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: ಬೆಳ್ತಂಗಡಿಯ ಆಕಾಂಕ್ಷ ನಿಗೂಢ ಸಾ*ವು ಪ್ರಕರಣ; ಸೂಕ್ತ ತನಿಖೆಗೆ ಪಂಜಾಬ್‌ ಸರ್ಕಾರಕ್ಕೆ ದಿನೇಶ್‌ ಗುಂಡೂರಾವ್‌ ಒತ್ತಾಯ

ಆರೋಪಿಯ ವಿರುದ್ದ ಈಗಾಗಲೇ ಅನಧಿಕೃತ ಕಂಪೆನಿ ತೆರೆದು ವಿದೇಶದಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಇಮಿಗ್ರೇಷನ್ ಅಧಿಕಾರಿಗಳಿಂದ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 2024 ನೇ ಡಿಸೆಂಬರ್ ನಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಬಿ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page