Connect with us

DAKSHINA KANNADA

‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಬಳಿಕ ರಕ್ತ ಕುದಿಯುವಂತಾಯಿತು’

Published

on

ಮಂಗಳೂರು: ಇತ್ತೀಚೆಗೆ ತೆರೆ ಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುವ ಜೊತೆಗೆ ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿರುವ ದಿ ಕಾಶ್ಮೀರಿ ಫೈಲ್ಸ್​​ ಚಿತ್ರವನ್ನು ಸ್ವಾಮೀಜಿಗಳಿಗೆ ವೀಕ್ಷಣೆ ಮಾಡಲು ವಿಶ್ವ ಹಿಂದೂ ಪರಿಷತ್ ಅವಕಾಶ ಮಾಡಿಕೊಟ್ಟಿದ್ದು ನಗರದ ಸಿನಿ ಪೊಲೀಸ್ ಮಲ್ಟಿಫ್ಲೆಕ್ಸ್‌ನಲ್ಲಿ ಚಿತ್ರವನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.


ಪ್ರಧಾನಿ ಮೋದಿಯಿಂದ ಇದೀಗ ದೇಶದಲ್ಲಿ ಎಲ್ಲಾ ವಯೋಮಾನದವರು ಈ ಸಿನಿಮಾವನ್ನು ವೀಕ್ಷಣೆ ಮಾಡಿದ್ದು ಹೊಸ ದಾಖಲೆ ನಿರ್ಮಾಣ ಮಾಡಿದೆ.

ಮಂಗಳೂರಿನಲ್ಲೂ ಚಿತ್ರ ವೀಕ್ಷಿಸಿ ಪ್ರತಿಕ್ರಿಯಿಸಿದ ಅವರು ಸ್ವಾಮೀಜಿಗಳು ’32 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಸುತ್ತ ಹೆಣದಿರುವ ಚಿತ್ರ ಇದಾಗಿದೆ’ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಿದ ಬಳಿಕ ರಕ್ತ ಕುದಿಯುವಂತಾಯಿತು. ಪಾಕಿಸ್ತಾನಿಗಳು ಯಾವ ರೀತಿ ಕುಮ್ಮಕ್ಕು ನೀಡಿ ಭಯೋತ್ಪಾದನೆ ಬೆಳೆಸಿತು ಎಂಬುವುದು ಇದರಲ್ಲಿದೆ.


ಆದರೆ ಇನ್ನು ಮುಂದೆ ಕೇರಳ ಫೈಲ್ಸ್, ಕೊಡಗು ಫೈಲ್ಸ್‌ ಆಗದಂತೆ ಹಿಂದೂಗಳಾದ ನಾವು ಜಾಗೃತರಾಗಬೇಕು. ನಮ್ಮ ಮೇಲೆ ಯಾವ ರೀತಿ ದೌರ್ಜನ್ಯ ಆಗಿದೆ ಎಂಬುವುದನ್ನು ಈ ಚಿತ್ರ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಅಲ್ಲದೇ, ಸಿನಿಮಾ ನೋಡುವ ಸಂದರ್ಭ ಕಣ್ಣಲ್ಲಿ ನೀರು ಬರುತ್ತದೆ ಎಂದರು. ಇದೊಂದು ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ’ ಎಂದು ಹೇಳಿದರು.

ಕೊಂಡೆವೂರಿನ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಾವೂರು ಆದಿಚುಂಚನಗಿರಿ ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ಕದ್ರಿ ಯೋಗೀಶ್ವರ (ಜೋಗಿ) ಮಠದ ನಿರ್ಮಲನಾಥಜೀ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ,

ಕೇಮಾರು ಮಠದ ಈಶವಿಠಲದಾಸ ಸ್ವಾಮೀಜಿ, ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ, ಒಡಿಯೂರಿನ ಸಾಧ್ವಿ ಮಾತಾನಂದಮಯಿ, ಚಿಲಿಂಬಿ ಮಠದ ವಿದ್ಯಾನಂದ ಸರಸ್ವತಿ, ಸ್ವಾಮೀಜಿಗಳು ಸೇರಿದಂತೆ ಸ್ವಾಮೀಜಿಗಳ ಶಿಷ್ಯ ವರ್ಗ ಸಹ ಸಿನಿಮಾ ವೀಕ್ಷಣೆ ಮಾಡಿತು.

 

ದಿ ಕಾಶ್ಮೀರಿ ಫೈಲ್ಸ್ ಚಿತ್ರ ವೀಕ್ಷಿಸಿದ ಸ್ವಾಮೀಜಿಗಳು
ಈ ಚಿತ್ರ ಎಲ್ಲರಿಗೂ ಎಚ್ಚರಿಕೆ ಗಂಟೆಯ ಚಿತ್ರವಾಗಿದೆ..
ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಖಾವಿಧಾರಿಗಳು

DAKSHINA KANNADA

ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಐಟಿಐ ವಿದ್ಯಾರ್ಥಿಗಳ ಮಧ್ಯೆ ಚೂರಿ ಇರಿತ-ಇಬ್ಬರಿಗೆ ಗಾಯ

Published

on

ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ವಾಗ್ವಾದ ನಡೆದು ಚೂರಿ ಇರಿತ ಸಂಭವಿಸಿದ ಘಟನೆ ವಿಟ್ಲದ ಖಾಸಗಿ ಐಟಿಐ ಕಾಲೇಜೊಂದರಲ್ಲಿ ಇಂದು ನಡೆದಿದೆ.


ವಿಟ್ಲದ ಖಾಸಗಿ ಐಟಿಐ ಒಂದರಲ್ಲಿ ವಿದ್ಯಾರ್ಥಿಗಳ ನಡುವೆ ಚೂರಿ ಇರಿತ ನಡೆದಿದೆ. ಆರಂಭದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದು ಬಳಿಕ ಚೂರಿ ಇರಿತ ಸಂಭವಿಸಿದ್ದು, ಘಟನೆಯಿಂದಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಜೋರಾಗಿ ಕೆಮ್ಮಿದ ಎಂಬ ಕಾರಣಕ್ಕೆ ನೆರೆಮನೆಯವರಿಂದಲೇ ಯುವಕನ ಕೊಲೆ

ಇದೇ ವೇಳೆ ಗಲಾಟೆ ಬಿಡಿಸಲು ಹೋದ ವಿದ್ಯಾರ್ಥಿಗೂ ಗಾಯವಾಗಿರುವುದಾಗಿ ಮಾಹಿತಿ ಲಭಿಸಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.

Continue Reading

DAKSHINA KANNADA

ಪುತ್ತೂರು: ಎಂ.ಡಿ.ಎಂ.ಎ. ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

Published

on

ಪುತ್ತೂರು: ಉಪ್ಪಿನಂಗಡಿ ಗ್ರಾಮದ ಪಂಜಳ ಎಂಬಲ್ಲಿ ಮಾದಕ ದ್ರವ್ಯ ಎಂ.ಡಿ.ಎಂ.ಎ. ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಮೂರು ಸಾವಿರ ರೂಪಾಯಿ ಮೌಲ್ಯದ 2.16 ಗ್ರಾಂ ಎಂ.ಡಿ.ಎಂ.ಎ., 45 ಸಾವಿರ ರೂಪಾಯಿ ಮೌಲ್ಯದ ಐಪೋನ್ ಮತ್ತು ಒಂದು ಸಾವಿರ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಕೀ-ಪ್ಯಾಡ್ ಮೊಬೈಲ್ ಸೇರಿದಂತೆ ಒಟ್ಟು 49 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಕೊಕ್ಕಡ ನಿವಾಸಿ ಯಾಹ್ಯಾ (48) ಬಂಧಿತ ಆರೋಪಿಯಾಗಿದ್ದಾನೆ. ಉಪ್ಪಿನಂಗಡಿ ಪೊಲೀಸರು ಪಂಜಳ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಅನುಮಾನಾಸ್ಪದವಾಗಿ ಕಂಡು ಬಂದಿದ್ದ ಯಾಹ್ಯಾ ಕೊಕ್ಕಡನನ್ನು ವಿಚಾರಿಸಿದಾಗ ಆತ ಎಂ.ಡಿ.ಎಂ.ಎ. ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಜೋರಾಗಿ ಕೆಮ್ಮಿದ ಎಂಬ ಕಾರಣಕ್ಕೆ ನೆರೆಮನೆಯವರಿಂದಲೇ ಯುವಕನ ಕೊಲೆ

ಉಪ್ಪಿನಂಗಡಿ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಫೆ.11-14: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ-ಕುಂಭ ಮಹೋತ್ಸವ

Published

on

ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಕುಂಭ ಮಹೋತ್ಸವ ಫೆ.11ರಿಂದ ಆರಂಭಗೊಂಡು ಫೆ.14ರವರೆಗೆ ಜರುಗಲಿದೆ.

ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಇವರ ಆಶೀರ್ವಾದದೊಂದಿಗೆ ಕ್ಷೇತ್ರದ ತಂತ್ರಿ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಜನಾರ್ದನ ಭಟ್ಟರ ಉಪಸ್ಥಿತಿಯಲ್ಲಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿರುವುದು.

ಫೆ.11ರಂದು ದೀಪಪ್ರಜ್ವಲನೆ ಮೂಲಕ ಭಜನಾ ಸಂಕೀರ್ತಣೆ ಸಂಜೆ 3 ಗಂಟೆಗೆ ಆರಂಭಗೊಳ್ಳಲಿದೆ. ಫೆ.12ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಾಭಿಷೇಕ ಇತ್ಯಾದಿ ನಡೆದು ಮಧ್ಯಾಹ್ನ ಮಹಾರಥೋತ್ಸವ ಬಳಿಕ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ ಆಯೋಜನೆ ಮಾಡಲಾಗಿದೆ. 

6 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಆಗಮಿಸಲಿರುವರು ಎಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page