Connect with us

DAKSHINA KANNADA

ಕರಾವಳಿಯ ಪಡುಪಣಂಬೂರಿನಲ್ಲಿ ನಡೆಯಿತು ಐತಿಹಾಸಿಕ ಅರಸು ಕಂಬಳ..!

Published

on

ಕರಾವಳಿಯ ಪಡುಪಣಂಬೂರಿನಲ್ಲಿ ನಡೆಯಿತು ಐತಿಹಾಸಿಕ ಅರಸು ಕಂಬಳ..!

ಮಂಗಳೂರು: ಕರಾವಳಿ ಜಿಲ್ಲೆಯ ಕಂಬಳಗಳಲ್ಲಿ  ಸರ್ವಶ್ರೇಷ್ಠ ಕಂಬಳವಾಗಿ ಗುರುತಿಸಿಕೊಂಡಿದೆ ಪಡು ಪಣಂಬೂರಿನ ಕಂಬಳ.

 

ನಾಲ್ಕು ನೂರು ವರ್ಷದ ಹಿನ್ನಲೆಯುಳ್ಳ ಮೂಲ್ಕಿಯ  ಒಂಬತ್ತು ಮಾಗಣೆಯ ಐತಿಹಾಸಿಕ ಮೂಲ್ಕಿ ಸೀಮೆಯ ಅರಸು ಕಂಬಳ, ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿ ಇಂದು ಪಡುಪಣಂಬೂರಿನಲ್ಲಿ ನಡೆಯಿತು. ಕೋವಿಡ್ ಹಾವಳಿಯಿಂದ  ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಯಾವುದೇ ಸ್ಪರ್ಧೆ ಇಲ್ಲದೆ ಸೀಮೆಯ ಗೌರವಪೂರ್ವಕವಾಗಿ ಗೌಣವಾಗಿ ಕಂಬಳ ಕೋಣಗಳ ಮಾಲೀಕರು ಭಾಗವಹಿಸಿ ಕಂಬಳ ಶಾಸ್ತ್ರ ನಡೆಸಿದರು.

ಹಗ್ಗ ಕಿರಿಯ, ನೇಗಿಲು ಕಿರಿಯ ವಿಭಾಗದ  ಕೋಣಗಳನ್ನು ಮಾತ್ರ  ಗದ್ದೆಗೆ ಇಳಿಸುವ ಮುಖೇನ ಸಾಂಪ್ರದಾಯಿಕವಾಗಿ ಅರಸು ಕಂಬಳ ನಡೆಯಿತುಈ ಸಂದರ್ಭದಲ್ಲಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ” ಮಹಾಮಾರಿ ಕೊರೋನ ಹಿನ್ನೆಲೆಯಲ್ಲಿ ಈ ಬಾರಿಯ ಅರಸು ಕಂಬಳ ಸಾಂಪ್ರದಾಯಿಕವಾಗಿ ನಡೆದಿದೆ.

 

ಸಾರ್ವಜನಿಕು ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿ, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಈ ಬಾರಿಯ ಕಂಬಳಗಳಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.

DAKSHINA KANNADA

ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ, ಇನ್ನೋರ್ವನಿಗಾಗಿ ಶೋಧ

Published

on

ಮಂಗಳೂರು : ಜಾರ್ಖಂಡ್ ಮೂಲದ ವಲಸೆ ಕಾರ್ಮಿಕ ದಿಲ್‌ಜಾನ್‌ ಅನ್ಸಾರಿ ಎಂಬಾತನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದ ಆರೋಪಿಗಳಾದ ಕೂಳೂರು ನಿವಾಸಿ ಸಾಗರ್‌, ಧನುಷ್‌, ಲಾಲು ಯಾನೆ ರತೀಶ್‌ ಮತ್ತು ಮೋಹನ್ ಎಂಬ ನಾಲ್ವರ ಪೈಕಿ ಕಾವೂರು ಪೊಲೀಸರು ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಎಂಬವರನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


ಜನವರಿ 11 ರಂದು ಸಂಜೆ ಸುಮಾರು 6 :05ರ ಸುಮಾರಿಗೆ ಜಾರ್ಖಂಡ್ ಮೂಲದ ಕಾರ್ಮಿಕ ದಿಲ್‌ಜಾನ್ ಅನ್ಸಾರಿ ಎಂಬಾತನನ್ನು ತಡೆದು ನಿಲ್ಲಿಸಿದ ನಾಲ್ವರು ಆರೋಪಿಗಳು, ‘ನೀನು ಬಾಂಗ್ಲಾದೇಶದವನು’ ಎಂದು ಕೂಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂದು ದಿಲ್‌ಜಾನ್‌ ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಜೊತೆಗೆ 3(5) ಅಡಿ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮಂಗಳೂರಿನ ಪೆಡ್ಲರ್‌ಗಳಿಗೆ ಡ್ರಗ್‌ ಸಪ್ಲೈ ಮಾಡುತ್ತಿದ್ದ ಉಗಾಂಡ ಮಹಿಳೆ ಅರೆಸ್ಟ್

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೋರ್ವ ಆರೋಪಿ ಕಾವೂರು ನಿವಾಸಿ ಮೋಹನ್‌ ಎಂಬಾತ ಪರಾರಿಯಾಗಿದ್ದು, ಈತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಈಗಾಗಲೇ ಬಂಧಿತ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

Continue Reading

DAKSHINA KANNADA

ಅನುಪಮ ಮಹಿಳಾ ಮಾಸಿಕ ಪತ್ರಿಕೆ; ಜ.15ರಂದು ಬೆಳ್ಳಿ ಹಬ್ಬ ಸಂಭ್ರಮ, ವಿಶೇಷ ಸಂಚಿಕೆ ಬಿಡುಗಡೆ

Published

on

ಮಂಗಳೂರು: ಅನುಪಮ ಮಹಿಳಾ ಮಾಸಿಕ ಪತ್ರಿಕೆಯ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜ.15ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ.


ಬೆಳ್ಳಿ ಹಬ್ಬವನ್ನು ಖ್ಯಾತ ಸಾಹಿತಿ ಡಾ. ಕೆ. ಷರೀಫಾ ಉದ್ಘಾಟಿಸಲಿದ್ದಾರೆ ಎಂದು ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ ನಡೆಯಲಿದೆ. ಗೌರವ ಅತಿಥಿಗಳಾಗಿ ಸ್ಪೀಕರ್ ಯು.ಟಿ ಖಾದರ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರನ್ನು ಕೂಡಾ ಸನ್ಮಾನಿಸಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಪ್ರತಾಪ್‌ಸಿಂಹ ನಾಯಕ್‌

ಸುದ್ದಿಗೋಷ್ಠಿಯಲ್ಲಿ ಕರಾವಳಿ ಇತರ ಮಹಿಳಾ ಸಾಹಿತಿಗಳು, ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Continue Reading

DAKSHINA KANNADA

ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಪ್ರತಾಪ್‌ಸಿಂಹ ನಾಯಕ್‌

Published

on

ಮಂಗಳೂರು: ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆದಿದ್ದು, ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಆಗುವುದಕ್ಕಿಂತ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದ ರೈತರ, ಮಹಿಳೆಯರ, ಕಾರ್ಮಿಕರ ಬಗ್ಗೆ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್‌ ಆರೋಪಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡು ದಿನಗಳ ಸಮಯಾವಕಾಶ ಕಡಿಮೆ ಆಯಿತು ಎನ್ನುವ ಕಾರಣಕ್ಕೆ ಎರಡು ದಿನಗಳ ಕಾಲಾವಕಾಶ ವಿಸ್ತರಿಸಿ ಎಂದು ಬಿಜೆಪಿ ಆಗ್ರಹಿಸಿದರೂ ಅದನ್ನು ವಿಸ್ತರಿಸಿಲ್ಲ. ಕೇವಲ ನಾಮಾಕಾವಸ್ತೆ ಉತ್ತರಕರ್ನಾಟಕದ ಸಮಸ್ಯೆ ಬಗ್ಗೆ ಬೆಳಗಾವಿಯಲ್ಲಿ ಮಾಡಲಾಗಿದೆಯೇ ಹೊರತು ಬೇರೆ ವಿಚಾರಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ದೂರಿದರು.

ಈಗ ಮತ್ತೆ ತಕ್ಷಣ ಅಧಿವೇಶನ ಕರೆಯುವ ಬಗ್ಗೆ ಜೀ ರಾಮ್‌ಜೀ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಆದರೆ ಬಿಜೆಪಿ ಬಹಿರಂಗ ಚರ್ಚೆಗೂ ಸಿದ್ದ. ನಾವು ಚರ್ಚೆಯಿಂದ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ಓದಿ: ಡೆಲಿವರಿ ಬಾಯ್‌ ಆದ ರಾಜ್ಯಸಭಾ ಸಂಸದ; ವೀಡಿಯೋ ವೈರಲ್

ಆದರೆ ಈ ಚರ್ಚೆ ಪಾರ್ಲಿಮೆಂಟ್‌ನಲ್ಲಿ ಆಗುವಾಗ ನೀವು ಪ್ರತಿಪಕ್ಷವಾಗಿ ಏನು ಮಾಡಿದಿರಿ..? ಇದಕ್ಕೆ ಸಂಬಂಧಪಟ್ಟ ಮಂತ್ರಿಗಳು ಶಿವರಾಜ್ ಸಿಂಗ್ ಚೌಹಾನ್‌ ಅವರನ್ನು ಮಾತನಾಡ್ಲಿಕ್ಕೆ ಬಿಡಲಿಲ್ಲ. ನೀವು ಅಂದು ನಡೆದುಕೊಂಡ ರೀತಿ ಎಂತದ್ದು. ಕಾಂಗ್ರೆಸ್ಸಿಗೆ ಈ ಮಸೂದೆಯ ಚರ್ಚೆ ಬೇಕಾಗಿಲ್ಲ. ಜನರ ದಾರಿತಪ್ಪಿಸಲು ಅವರು ಮುಂದಾಗಿದ್ದಾರೆ. ಕೇಂದ್ರದ ಯೋಜನೆಗಳ ಬಗ್ಗೆ ನಿಮ್ಮ ವಿರೋಧವೇಕೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page