Connect with us

bangalore

ಫಸ್ಟ್ ನೈಟ್ ದಿನ ತಲೆದಿಂಬು ತಬ್ಕೊಂಡು ನಿಂತ ಯಜಮಾನ ಹೀರೋ

Published

on

ಮದುವೆಯ ಮೊದಲ ರಾತ್ರಿಯ ಶಾಸ್ತ್ರವನ್ನು ಗ್ರ್ಯಾಂಡ್ ಆಗಿ ಮಾಡುವುದು ಸಾಮಾನ್ಯ. ಅಂತೆಯೇ ಜಾನ್ಸಿ ಮತ್ತು ರಾಘವೇಂದ್ರನ ಕೋಣೆಯನ್ನು ಹೂಗಳಿಂದ ಬಹಳ ಸುಂದರವಾಗಿ ಅಲಂಕರಿಸಲಾಗಿತ್ತು. ಆದರೆ, ಜಾನ್ಸಿಯು ತನ್ನನ್ನು ಮುಟ್ಟುವಂತಿಲ್ಲ ಎಂಬ ಷರತ್ತನ್ನು ಮೊದಲೇ ಹಾಕಿದ್ದಳು. ಆ ವೇಳೆ ನಿರ್ದೇಶಕರು ಹಳೆಯ ಟ್ರಿಕ್ ಬಳಸಿ ಜಾನ್ಸಿ ಮತ್ತು ರಾಘವೇಂದ್ರನನ್ನು ಒಂದು ಮಾಡಿದ್ದರು. ಏನಿದು ಕಥೆ ? ಜಾನ್ಸಿ ಹಾಗೂ ರಾಘವೇಂದ್ರ ಯಾರು ? ಅವರಿಬ್ಬರು ಹೇಗೆ ಒಂದಾದ್ರು ? ಇಲ್ಲಿದೆ ನೋಡಿ.

ಹಣದ ಬಲದಿಂದ ಮಧ್ಯಮ ವರ್ಗದ ಹುಡುಗ ರಾಘವೇಂದ್ರನನ್ನು ಬಾಡಿಗೆ ಗಂಡನನ್ನಾಗಿ ಮಾಡಿಕೊಳ್ಳುವಲ್ಲಿ ಜಾನ್ಸಿ ಯಶಸ್ವಿಯಾಗಿದ್ದಾಳೆ. ಕೇವಲ ಒಂದು ತಿಂಗಳಿನ ಒಪ್ಪಂದದ ಮೇಲೆ ರಾಘವೇಂದ್ರ ಪರಿಸ್ಥಿತಿಯ ಗೊಂಬೆಯಾಗಿ ಹಠಮಾರಿ, ಜಂಬದ ಕೋಳಿ ಜಾನ್ಸಿಯನ್ನು ಮದುವೆಯಾಗಿದ್ದಾನೆ. ಆದರೆ ಇದು ಒಂದು ತಿಂಗಳ ಒಪ್ಪಂದ ಮದುವೆ ಅನ್ನೋ ವಿಷಯ ಜಾನ್ಸಿ ಅಜ್ಜ ಸೇರಿದಂತೆ ಬಹುತೇಕ ಯಾರಿಗೂ ಗೊತ್ತಿಲ್ಲ. ಹಾಗಾಯೇ ಮದುವೆ ಪೂರ್ವ ಮತ್ತು ನಂತರದ ಶಾಸ್ತ್ರಗಳನ್ನು ಜಾನ್ಸಿ ಕುಟುಂಬಸ್ಥರು ಆಯೋಜಿಸಿದ್ದರು. ಈ ರೀತಿಯ ರೋಚಕ ತಿರುವು ನೀಡುತ್ತಿರುವ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಜಮಾನ ಧಾರಾವಾಹಿ ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ.

ಮೊದವೆಯ ಮೊದಲ ರಾತ್ರಿ ದಿನ ಜಾನ್ಸಿ ರಾಘವೇಮದ್ರನಿಗೆ ದೂರವಿರುವಂತೆ ಹೇಳುತ್ತಾಳೆ. ಈ ವೇಳೆ ನಿರ್ದೇಶಕರು ಹಳೆಯ ಟ್ರಿಕ್ ಬಳಸಿ ಜಾನ್ಸಿ ಮತ್ತು ರಾಘವೇಂದ್ರನನ್ನು ಒಂದು ಮಾಡಿದ್ದರು. ಅದೇ ಹಲ್ಲಿ, ಜಿರಳೆ ಕಂಡ್ರೆ ಹುಡುಗಿಯರು ನೂರು ಕಿಲೋ ಮೀಟರ್ ದೂರ ಓಡುತ್ತಾರೆ. ಇಲ್ಲಿಯೂ ನಿರ್ದೇಶಕರು ಹಲ್ಲಿ ಬಳಸಿ ಜಾನ್ಸಿಯನ್ನು ಹೆದರಿಸಿ ರೆಡಿಮೇಡ್ ಗಂಡ ರಾಘವೇಂದ್ರನನ್ನು ತಬ್ಬಿಕೊಂಡು ಒಂದಾಗುವಂತೆ ಮಾಡಿದ್ದಾರೆ.

ಧಾರಾವಾಹಿ ಎಂದರೆ ಕಲಾವಿದರು ಸೇರಿದಂತೆ ಇನ್ನುಳಿದ ಸಿಬ್ಬಂದಿ ಹಗಲು -ರಾತ್ರಿ ಅಂತ ನೋಡದೇ ಕೆಲಸ ಮಾಡುತ್ತಾರೆ. ರಾತ್ರಿಯ ದೃಶ್ಯಗಳನ್ನು ಆ ಸಮಯದಲ್ಲಿಯೇ ಶೂಟಿಂಗ್ ಮಾಡಲಿ ಪ್ಲಾನ್ ಮಾಡಲಾಗಿರುತ್ತದೆ. ಹಾಗಾಗಿ ಕೆಲವೊಮ್ಮೆ ಶೂಟಿಂಗ್ ಬೆಳಗಿನ ಜಾವ 5 ಗಂಟಯವರೆಗೂ ನಡೆಯುತ್ತಿರುತ್ತದೆ. ಯಜಮಾನ ಸೀರಿಯಲ್‌ನಲ್ಲಿ ಜಾನ್ಸಿ ಹಾಗೂ ರಾಘವೇಂದ್ರನ ಫಸ್ಟ್ ನೈಟ್ ದೃಶ್ಯವನ್ನೂ ಮದ್ಯರಾತ್ರಿ ಮಾಡಲಾಗಿದೆ. ತೆರೆ ಮೇಲೆ ದೃಶ್ಯವೊಂದು ಚೆನ್ನಾಗಿ ಮೂಡಿ ಬರಲು ತೆರೆ ಹಿಂದಿನವರ ಪ್ರಾಮುಖ್ಯತೆ ತುಂಬಾ ಇದೆ.

bangalore

ಬೆಂಗಳೂರಲ್ಲಿ ಜ್ಯೂ. ಎನ್‌ಟಿಆರ್ ಕ್ರೇಜ್: ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರಿಂದ ಲಾಠಿಚಾರ್ಜ್‌

Published

on

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಕಿಮ್ಸ್ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಜ್ಯೂ. ಎನ್‌ಟಿಆರ್ ಅವರನ್ನು ನೋಡಲು ಅಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.


ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ಮುಗಿಬಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ನಿಯಂತ್ರಣಕ್ಕೆ ಬರದಿದ್ದಾಗ, ಲಘು ಲಾಠಿ ಪ್ರಹಾರ ಮಾಡಿ ಜನರನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಇದನ್ನೂ ಓದಿ: ಒಂದೇ ದಿನ 3 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಬಂಧನ

ನೂಕುನುಗ್ಗಲಿದ್ದರಿಂದ ಎಸ್ಕಲೇಟರ್ ಮುರಿದು ಹೋಗಿದೆ. ಈ ನಡುವೆಯೂ ಜ್ಯೂ. ಎನ್‌ಟಿಆರ್ ಅವರು ಅಭಿಮಾನಿಗಳಿಗೆ ಕೈಬೀಸಿ ವಂದಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Continue Reading

bangalore

ರಾಮನಗರದಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸ್ಥಳದಲ್ಲೇ ದುರ್ಮರಣ

Published

on

ರಾಮನಗರ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಬೆಂಗಳೂರು-ಕನಕಪುರ ಮುಖ್ಯರಸ್ತೆಯ ಕಗ್ಗಲೀಪುರದ ಆಗರ ಕ್ರಾಸ್ ಬಳಿ ನಡೆದಿದೆ.


ಸೈಯದ್ ಪಾಷ(22), ಯೂನಿಫ್ ಬಾನ್(23), ಅಜರ್ ಪಾಷ(22) ಮೃತಪಟ್ಟಿದ್ದು, ಫರಾಜ್ ಎಂಬವನಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಮುಂಜಾನೆ 3 ಗಂಟೆಯ ವೇಳೆ ಈ ಅಪಘಾತ ನಡೆದಿದ್ದು, ವೇಗವಾಗಿ ಬಂದ ಕಾರು ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ದೇವಸ್ಥಾನದ ಸ್ನಾನಗೃಹದಲ್ಲಿ ಇಬ್ಬರು ಯುವತಿಯರ ಶವ ಪತ್ತೆ

ಘಟನಾ ಸ್ಥಳಕ್ಕೆ ಧಾವಿಸಿದ ಕಗ್ಗಲೀಪುರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Continue Reading

bangalore

ಕ್ಯಾಬ್‌ನಲ್ಲಿ ಗುಟ್ಟು ಬಿಟ್ಟುಕೊಟ್ಟ ಕುಟುಂಬ; ರಾತ್ರಿ ಮನೆ ದೋಚಿದ ಡ್ರೈವರ್!

Published

on

ಬೆಂಗಳೂರು: ರಂಜಾನ್ ಹಬ್ಬದ ಶಾಪಿಂಗ್‌ಗೆ ತೆರಳಿದ ಒಂದು ಕುಟುಂಬಕ್ಕೆ ದಿನನಿತ್ಯದ ಕ್ಯಾಬ್ ಪ್ರಯಾಣವೇ ದೊಡ್ಡ ನಷ್ಟಕ್ಕೆ ಕಾರಣವಾಗಿದ್ದು, ಕ್ಯಾಬ್ ಚಾಲಕನೇ ಪ್ರಯಾಣದ ವೇಳೆ ಕುಟುಂಬದ ಮಧ್ಯೆ ನಡೆದ ಮಾತುಕತೆಯನ್ನು ದುರುಪಯೋಗಪಡಿಸಿಕೊಂಡು ಮನೆ ಕಳ್ಳತನ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅಬ್ದುಲ್ ರೆಹಮಾನ್(40) ಎಂಬಾತನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.


ಕುಟುಂಬವೊಂದು ರಂಜಾನ್ ಹಬ್ಬದ ಹಿನ್ನೆಲೆ ಫೆಬ್ರವರಿ 11ರಂದು ಖರೀದಿಗಾಗಿ ಕುಟುಂಬ ಸಮೇತ ಮುಂಬೈಗೆ ತೆರಳಲು ಅವರು ಮನೆಗೆ ಬೀಗ ಹಾಕಿ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ, ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ಮತ್ತು ತಮ್ಮ ಬಳಿ ಇರುವ ಬೆಲೆಬಾಳುವ ವಸ್ತುಗಳ ಬಗ್ಗೆ ಚಾಲಕನ ಮುಂದೆಯೇ ಚರ್ಚಿಸಿದ್ದಾರೆ. ಇದನ್ನು ಗಮನಿಸಿದ ಕ್ಯಾಬ್ ಡ್ರೈವರ್, ಆ ಕುಟುಂಬ ಅಂದು ರಾತ್ರಿ ಮನೆಯಲ್ಲಿ ಇರುವುದಿಲ್ಲ ಎಂಬ ವಿಷಯ ತಿಳಿದು ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾನೆ.

ಅದೇ ರಾತ್ರಿ ಕುಟುಂಬದ ಸದಸ್ಯರು ಮನೆಯಲ್ಲಿ ಇಲ್ಲದ ಸಮಯ ನೋಡಿ, ಡ್ರೈವರ್ ಮನೆಯ ಬೀಗ ಮುರಿದು ನಗದು ಮತ್ತು ಸುಮಾರು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯಿಂದ 180 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕದ್ದ ಚಿನ್ನದ ಒಂದು ಭಾಗವನ್ನು ಶಿವಾಜಿನಗರ ಮತ್ತು ಕೆ.ಜಿ.ಹಳ್ಳಿ ಪ್ರದೇಶಗಳಲ್ಲಿನ ಅಂಗಡಿಗಳಲ್ಲಿ ಅಡವಿಟ್ಟಿದ್ದರೆ, ಉಳಿದ ಭಾಗವನ್ನು ತಮಿಳುನಾಡಿನ ವೆಲ್ಲೂರಿನ ಪರಿಚಯಸ್ಥರಿಗೆ ಮಾರಾಟ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬೀಡಿಗಾಗಿ ಜೈಲಿನಲ್ಲಿ ದಾಂ*ಧಲೆ ನಡೆಸಿದ ವಿಚಾರಣಾಧೀನ ಖೈದಿಗಳು

ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಅಬ್ದುಲ್ ರೆಹಮಾನ್ ಈ ಹಿಂದೆ ಕೂಡ ಮೂರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page