Connect with us

LATEST NEWS

ವಿಮಾನ ಸಿಬಂದಿಗಳ ಎಡವಟ್ಟು.. 12 ಗಂಟೆಗಳಿಂದ ವಿಮಾನದಲ್ಲೇ ಲಾಕ್ ಆದ ಪ್ರಯಾಣಿಕರು..!

Published

on

ದೆಹಲಿ/ಮಂಗಳೂರು:  ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಸ್ಪೈಸ್‌ಜೆಟ್ ಏರ್‌ಲೈನ್ಸ್‌ ವಿಮಾನದಲ್ಲಿ ಸಿಬಂದಿಗಳ ಎಡವಟ್ಟಿನಿಂದ ಪ್ರಯಾಣಿಕರು ಸುಮಾರು 12 ಕ್ಕೂ ಅಧಿಕ ಗಂಟೆಗಳ ಕಾಲ ವಿಮಾನದಲ್ಲೇ ಲಾಕ್‌ ಆದ ಘಟನೆ ನಡೆದಿದೆ. ಜು.5 ರಂದು ದೆಹಲಿಯಿಂದ ಬೆಂಗಳೂರಿಗೆ ಸಂಜೆ 7.40ಗಂಟೆಗೆ ಟೇಕಾಫ್ ಆಗಬೇಕಿದ್ದ ವಿಮಾನ SG 8151ನ ಸ್ಪೈಸ್ ಜೆಟ್ ಏರ್‌ಲೈನ್ಸ್‌ ನಲ್ಲಿ ಸುಮಾರು 60 ಪ್ರಯಾಣಿಕರು ಸತತ 12 ಗಂಟೆಗೂ ಅಧಿಕ ಸಮಯ ವಿಮಾನದೊಳಗೆ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ತಾಂತ್ರಿಕ ದೋಷ ಎಂದು ನಿನ್ನೆ ಸಂಜೆಯಿಂದ ಬೆಳಗ್ಗಿನವರೆಗೂ ದೆಹಲಿ ಏರ್‌ಪೋರ್ಟ್‌ನಲ್ಲೇ  ವಿಮಾನವನ್ನು ನಿಲ್ಲಿಸಿ ಪ್ರಯಾಣಿಕರನ್ನು ಹೊರಗೆ ಬಿಡದೆ ಎಡವಟ್ಟು ಮಾಡಿದ್ದಾರೆ.

ವಿಮಾನದಲ್ಲಿ 60 ಕ್ಕೂ ಅಧಿಕ ಪ್ರಯಾಣಿಕರಿದ್ದು ಅದರಲ್ಲಿ ವಿದೇಶದಿಂದ ಬಂದವರು,  ವೃದ್ದರು, ಮಕ್ಕಳು, ಸೇರಿದಂತೆ ಮಹಿಳೆಯರೊ ಇದ್ದು ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ ಪ್ರಯಾಣಿಕರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡದೆ ಬೇಜವಾಬ್ದಾರಿ ಮೆರೆದಿದ್ದಾರೆ.

ತಾಯ್ನಾಡಿಗೆ ಬಂದ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ..! ಗೆಲುವಿನ ಸಂಭ್ರಮಾಚರಣೆಗೆ ಸಾಕ್ಷಿಯಾದ ಮುಂಬೈ

ಪ್ರಯಾಣಿಕರು ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಫ್ಲೈಟ್‌ ಅನ್ನು ಹೈಜಾಕ್ ಮಾಡಿದ್ದೀರಾ..? ಎಂದು ಪ್ರಶ್ನೆ ಮಾಡಿದ್ದಾರೆ. ಏಳೆಂಟು ಬಾರಿ ಬೋರ್ಡಿಂಗ್ ಪಾಸ್ ಚೇಂಜ್ ಮಾಡಿರುವ ಆರೋಪ ಕೂಡಾ ಕೇಳಿ ಬಂದಿದೆ. ಸೂಕ್ತ ಕಾರಣ ನೀಡದೆ ಫ್ಲೈಟ್‌ನಲ್ಲೇ ಕೂರಿಸಿದಕ್ಕೆ ಪ್ರಯಾಣಿಕರು ಸಿಬಂದಿ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಫ್ಲೈಟ್ ಟಿಕೆಟ್ ಖರೀದಿಸಿದರೂ ಸಮರ್ಪಕ ಸೇವೆ ನೀಡುತ್ತಿಲ್ಲ ಎಂದು ಗರಂ ಆಗಿದ್ದಾರೆ. ಸ್ಪೈಸ್‌ ಜೆಟ್‌ ಸಿಬಂದಿ ವಿರುದ್ದ ಸರಕಾರ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

LATEST NEWS

ಉಡುಪಿ: ಡೆತ್ ನೋಟ್ ಬರೆದಿಟ್ಟು ಬ್ರಹ್ಮಾವರದ ಇಂಜಿನಿಯರ್ ಆತ್ಮಹತ್ಯೆ

Published

on

ಉಡುಪಿ: ಡೆತ್ ನೋಟ್ ಬರೆದಿಟ್ಟು ಬ್ರಹ್ಮಾವರ ಮೂ ಲದ ಎಂಜಿನಿಯರ್ ಗಂಗಾವತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನ ನಡೆದಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಂ.ಕೆ.ಟೆಂಪಲ್ ಕನ್‌ಸ್ಪೆಕ್ಷನ್ ಮಾಲೀಕ, ಯುವ ಇಂಜಿನಿಯರ್ ಬ್ರಹ್ಮಾವರದ ವಿನಯ್ ಕುಮಾರ್ (38) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಕನಕಗಿರಿ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿನಯ್ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಗಾವತಿಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಲಾಗಿದೆ. ಬ್ರಹ್ಮಾವರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದಿದ್ದಾರೆ.

Continue Reading

LATEST NEWS

ಬಗೆಬಗೆಯ ಬೇಡಿಕೆಗಳ ಈಡೇರಿಸುವಂತೆ ಕೋರಿ ಹೊರ ಗುತ್ತಿದೆ ಕಂಪ್ಯೂಟರ್ ಆಪರೇಟರ್‌ಗಳ ಮುಷ್ಕರ

Published

on

ಹಾಸನ : ಸಮಾನ ಕೆಲಸಕ್ಕೆ ಸಮಾನ ವೇತನದ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನೋಂದಣಿ ಹಾಗೂ ಉಪ-ನೋಂದಣಿ ಕಛೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ(ಕಾವೇರಿ ಯೋಜನೆ) ಹೊರ ಗುತ್ತಿಗೆ ಕಂಪ್ಯೂಟರ್ ಅಪರೇಟರ್‌ಗಳ ರಾಜ್ಯ ಸಂಘದಿಂದ ಫೆ.17ರಿಂದ ಮುಷ್ಕರ ಆರಂಭಗೊಳ್ಳಲಿದ್ದು, ದ.ಕ.ಜಿಲ್ಲೆಯ ಎಲ್ಲಾ ತಾಲೂಕುಗಳ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೊರ ಗುತ್ತಿಗೆ ಕಂಪ್ಯೂಟರ್ ಆಪರೇಟರ್‌ಗಳಿಂದ ಜಿಲ್ಲಾ ನೋಂದಣಿ ಕಛೇರಿಯ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ರಾಜ್ಯ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ರಾಜ್ಯಾದ್ಯಂತ ಜಿಲ್ಲಾ ನೋಂದಣಿ ಹಾಗೂ ಉಪ-ನೋಂದಣಿ ಕಛೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಕಂಪ್ಯೂಟರ್ ಆಪರೇಟರ್‌ಗಳ ವಿವಿಧ ಬೇಡಿಕೆಗಳನ್ನು ಫೆ.15ರೊಳಗೆ ಈಡೇರಿಸದೆ ಇದ್ದಲ್ಲಿ ಆಯಾ ಜಿಲ್ಲೆಯ ಜಿಲ್ಲಾ ನೋಂದಣಿ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ, ಗುತ್ತಿಗೆ ಪಡೆದ ಸಿ.ಎಮ್.ಎಸ್ ಕಂಪೆನಿಯವರಿಗೆ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಸಚಿವರಿಗೆ ಈಗಾಗಲೇ ಮನವಿ ಮಾಡಿ ತಿಳಿಸಲಾಗಿದೆ. ಆದರೆ ಇಲ್ಲಿಯವರೆಗೆ ಸರಕಾರದಿಂದ, ಇಲಾಖೆ ಮುಖ್ಯಸ್ಥರಿಂದ ಹಾಗೂ ಗುತ್ತಿಗೆ ಪಡೆದ ಕಂಪನಿಯಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಫೆ.17ರಿಂದ ಆಯಾ ಜಿಲ್ಲೆಯ ಜಿಲ್ಲಾ ನೋಂದಣಿ ಕಛೇರಿಯ ಮುಂದೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೇಡಿಕೆಗಳು: ಪೇಮೆಂಟ್ ಆಫ್ ವೇಜಿನ್ ಆಕ್ಟ್ 1936ರ ಮೇರೆಗೆ ಗುತ್ತಿಗೆ ನೌಕರರಿಗೆ ಪ್ರತೀ ತಿಂಗಳು 7ನೇ ದಿನಾಂಕದ ಒಳಗಾಗಿ ವೇತನ ವಿತರಿಸಬೇಕು. ಆದರೆ ಗುತ್ತಿಗೆ ಪಡೆದ ಕಂಪೆನಿಯವರು 5 ತಿಂಗಳಾದರೂ ವೇತನ ಬಟವಾಡೆ ಮಾಡಿರುವುದಿಲ್ಲ.

ಈ ದುಸ್ಥಿತಿಯನ್ನು ನಿವಾರಿಸಿ ಪ್ರತೀ ತಿಂಗಳು ಸಕಾಲಕ್ಕೆ ಸಂಬಳ ಬಟವಾಡೆ ಮಾಡಬೇಕು. ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿ ಸರಕಾರ ಆದೇಶ ನೀಡಬೇಕು. ಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್‌ಗಳು ಯಾವುದೇ ಕೆಲಸದ ದಿನ ನಿಯಮಿತ 8 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುವುದು ಅನಿವಾರ್ಯವಾಗಿದ್ದು ಹೆಚ್ಚುವರಿ ಸೇವೆಗೆ ಸಿಗುವ ಓವರ್ ಟೈಮ್ ಅಲಯನ್ಸ್‌ನಿಂದ ವಂಚಿತರಾಗಿರುತ್ತಾರೆ. ಪ್ರತೀ ಕಛೇರಿಯಲ್ಲಿ ಸ್ಥಾಪಿಸಿರುವ ಬಯೋಮೆಟ್ರಿಕ್ ಸಿಸ್ಟಮ್‌ನಲ್ಲೇ ಗುತ್ತಿಗೆ ನೌಕರರ ಹಾಜರಾತಿ ದಾಖಲಾಗುತ್ತಿರುವುದರಿಂದ ಹೆಚ್ಚುವರಿ ಕೆಲಸಕ್ಕೆ ಓವರ್ ಟೈಮ್ ಅಲಯನ್ಸ್ ಕಾನೂನು ಮೇರೆಗೆ ಲಭಿಸುವಂತೆ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ಮಾಡಲಿದ್ದಾರೆ.

Continue Reading

LATEST NEWS

ಇಂದಿನಿಂದ ಮಹಿಳಾ ಪ್ರೀಮಿಯರ್ ಲೀಗ್; ಆರ್ಸಿಬಿಗೆ ಕಠಿಣ ಸವಾಲು

Published

on

ಮಂಗಳೂರು/ವಡೋದರಾ : ಇಂದಿನಿಂದ ಮಹಿಳಾ ಪ್ರೀಮಿಯರ್ ಲೀಗ್ 3ನೇ ಆವೃತ್ತಿಯು ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ.

ಜಾಗತಿಕ ಸೂಪರ್ ಸ್ಟಾರ್‌ಗಳು ಸ್ಪರ್ಧೆಗೆ ಅಪಾರ ಮೌಲ್ಯವನ್ನು ತಂದಿದ್ದರೂ ಲೀಗ್‌ನ ನಿಜವಾದ ಯಶಸ್ಸು ದೇಶೀಯ ಆಟಗಾರ್ತಿಯರ ಏಳಿಗೆಯಲ್ಲಡಗಿದೆ. ಮೊದಲ ಎರಡು ಋತುಗಳಲ್ಲಿ ಶ್ರೇಯಾಂಕಾ ಪಾಟೀಲ್ ಮತ್ತು ಸೈಕಾ ಇಶಾಕ್ ಅವರಂತಹ ಹಲವಾರು ದೇಶೀಯ ಪ್ರತಿಭೆಗಳು ಹೊರಹೊಮ್ಮಿದ್ದು, ರಾಷ್ಟ್ರೀಯ ತಂಡದಿಂದಲೂ ಕರೆ ಸ್ವೀಕರಿಸಿದ್ದಾರೆ. ಈ ಬಾರಿಯೂ ಹಲವು ಪ್ರತಿಭಾನ್ವಿತ ಆಟಗಾರರಿಗೆ ಡಬ್ಲ್ಯುಪಿಎಲ್ ಉತ್ತಮ ವೇದಿಕೆಯಾಗುವ ನಿರೀಕ್ಷೆ ಇದೆ.

ಮೊದಲ ಪಂದ್ಯದಲ್ಲೇ ಆರ್‌ಸಿಬಿಗೆ ಕಠಿಣ ಸವಾಲು

ಸ್ಮೃತಿ ಮಂದಾನ ನಾಯಕತ್ವದಲ್ಲಿ ಆಡುತ್ತಿರುವ ಆರ್‌ಸಿಬಿ ತಂಡಕ್ಕೆ ಮೊದಲ ಪಂದ್ಯದಲ್ಲೇ ಸವಾಲು ಎದುರಾಗಿದೆ. ಕಳೆದ ಆವೃತ್ತಿಯಲ್ಲಿ ಮಿಂಚಿದ್ದ ಸೋಫಿ ಮಾಲಿನೆ, ಸೋಫಿ ಡಿವೈನ್ ಹಾಗೂ ಕೇಟ್ ಕ್ರಾಸ್ ಅವರಿಲ್ಲದೇ ತಂಡವು ಕಣಕ್ಕಿಳಿಯಲಿದೆ.

ಇನ್ನು ಎಲ್ಲಿಸ್ ಪೆರ್ರಿ, ಶ್ರೇಯಂಕಾ ಪಾಟೀಲ್ ಮತ್ತು ಆಶಾ ಶೋಭನಾ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿ ಆರ್‌ಸಿಬಿ ತಂಡದ ಹಿನ್ನೆಡೆಗೆ ಕಾರಣವಾಗಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಯಶಸ್ವಿಯಾಗುವುದೇ ಎಂಬುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: RCB ತಂಡಕ್ಕೆ ಹೊಸ ಸಾರಥಿ; ಕೊಹ್ಲಿ ಏನಂದ್ರು?

“ಕಳೆದ ಆವೃತ್ತಿಯಲ್ಲಿ ಆಡಿದ್ದವರಲ್ಲಿ ಬಹುತೇಕರು ಈ ಬಾರಿ ಲಭ್ಯವಿಲ್ಲ. ಶ್ರೇಷ್ಠ ಆಲ್‌ರೌಂಡರ್ ಸೋಫಿ (ಡಿವೈನ್) ಅವರು ಕೂಡ ಆಡುತ್ತಿಲ್ಲ. ಇನ್ನು ಕೆಲವರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಮಾನಸಿಕವಾಗಿ ನಾವು ಸಮರ್ಥರಾಗಿದ್ದೇವೆ. ಚೆನ್ನಾಗಿ ಆಡುತ್ತೇವೆ” ಎಂದು ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಹೇಳಿದರು.

 

 

 

Continue Reading
Advertisement

Trending

Copyright © 2025 Namma Kudla News

You cannot copy content of this page