ಯೂಟ್ಯೂಬ್ ಅಂದರೆ ಸಾಮಾಜಿಕ ಜಾಲತಾಣದ ಆದಾಯದ ಮೂಲ. ಇವತ್ತಿನ ಕಾಲದಲ್ಲಿ ಯೂಟ್ಯೂಬ್ ಒಂದು ದೊಡ್ಡ ವ್ಯವಹಾರ ಆಗಿದೆ. ಸಣ್ಣ ಪುಟ್ಟ ಯೂಟ್ಯೂಬ್ ಚಾನೆಲ್ ಸ್ಥಾಪಿಸುವುದು ಅದಕ್ಕೆ ವಿಡಿಯೋಗಳನ್ನ ಪೋಸ್ಟ್ ಮಾಡುವುದು. ಇದರಿಂದ ಹೆಚ್ಚಿನ ಜನರು ಆದಾಯವನ್ನು ಗಳಿಸುತ್ತಿದ್ದಾರೆ.

ದಿನದಿಂದ ದಿನಕ್ಕೆ ಯುಟ್ಯೂಬ್‌ನಲ್ಲಿ ಕನ್ನಡ ವಿಡಿಯೋಗಳನ್ನು ಕ್ರಿಯೇಟ್ ಮಾಡುವ ಕ್ರಿಯೇಟಿವ್ ಮೈಂಡ್‌ಗಳು ಹೆಚ್ಚಾಗುತ್ತಿದೆ. ಎಲ್ಲರೂ ಕುಳಿತಲ್ಲಿ, ನಿಂತಲ್ಲಿ ವಿಡಿಯೋಗಳನ್ನ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯರೇ ಹೆಚ್ಚಿನ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಾರೆ. ಹಾಗಾದರೆ ಕನ್ನಡ ಮಹಿಳಾ ಮಣಿಗಳಿಗೆ ಯೂಟ್ಯೂಬ್ ನಿಂದ ತಿಂಗಳಿಗೆ ಬರುವ ಆದಾಯವೆಷ್ಟು ಎಂಬುದನ್ನು ತಿಳಿಯೋಣ..
ನಿಶಾ ನಿಖಿಲ್ ವ್ಲಾಗ್ಸ್:

ಎಲ್ಲರೂ ಸ್ನೇಹಿತರೊಂದಿಗೆ ಅಮ್ಮ ಮಗಳೊಂದಿಗೆ ಸೇರಿ ಯೂಟ್ಯೂಬ್ ಮಾಡಿದ್ದರೆ, ಇಲ್ಲಿ ಅಣ್ಣ ತಂಗಿ ವಿಡಿಯೋ ಮಾಡಿ ಫೇಮಸ್ ಆಗಿದ್ದಾರೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ನಿಖಿಲ್ ರವೀಂದ್ರ ಮತ್ತು ನಿಶಾ ರವೀಂದ್ರ ವಿಡಿಯೋಗಳು ಸಖತ್ ವೈರಲ್ ಆಯ್ತು. ಈಗ youtune ನಲ್ಲಿ ಇವರಿಗೆ 1 ಮಿಲಿಯನ್‌ಗಿಂತಲೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಇಲ್ಲಿಯವರೆಗೆ 437 ವಿಡಿಯೋಸ್‌ಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಇವರಿಗೆ ಯೂಟ್ಯೂಬ್‌ನಲ್ಲಿ ತಿಂಗಳಿಗೆ 3 ಲಕ್ಷದ 50 ಸಾವಿರ ಆದಾಯ ಬರುತ್ತದೆ.
ಮಧು ಗೌಡ:

ಇನ್‌ಸ್ಟಾಗ್ರಾಮ್ ಹಾಗೂ ಯುಟ್ಯೂಬರ್ ಬಳಕೆದಾರರಿಗೆ ಮಧು ಗೌಡ ಯಾರೆಂಬುದು ಗೊತ್ತೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ ಆಗಿರುವ ಮಧು ಗೌಡ ಯೂಟ್ಯೂಬರ್ ಯೇ ಆಗಿರುವಂತಹ ನಿಖಿಲ್ ರವೀಂದ್ರ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಪ್ರತಿ ಬಾರೀ ಆಕ್ಟಿವ್ ಆಗಿರುವ ಈ ಜೋಡಿ ತಮ್ಮ ಜೀವನದ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಾರೆ. ಮಧು ಗೌಡ ಇವರಿಗೆ ಯೂಟ್ಯೂಬ್‌ನಲ್ಲಿ 742K subscribers ಹಾಗೂ ಇಲ್ಲಿಯವರೆಗೆ 538 ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇವರಿಗೆ ಯೂಟ್ಯೂಬ್‌ನಿಂದ ತಿಂಗಳಿಗೆ 2 ಲಕ್ಷದ 80 ಸಾವಿರ ಆದಾಯ ಬರುತ್ತದೆ.
ರೇಖಾ ಅಡುಗೆ ಚಾನೆಲ್:

ರೇಖಾ ಅಡುಗೆ ಯೂಟ್ಯೂಬ್ ಚಾನೆಲ್ ಹೆಸರಿಗೆ ತಕ್ಕಂತೆ ಇದೊಂದು ಪಕ್ಕಾ ಆಹಾರದ ರೆಸಿಪಿಗಳನ್ನು ಸಿದ್ಧಪಡಿಸಿ ತೋರಿಸುವ ಚಾನೆಲ್. ಮಧ್ಯಮ ವರ್ಗದಿಂದ ಬಂದಿರುವ ರೇಖಾ ಇಂದು ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿ. ಇವರು ಅಡುಗೆ ಮನೆಯಿಂದಲೇ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಇವರಿಗೆ ಯೂಟ್ಯೂಬ್‌ನಲ್ಲಿ 2.75 ಮಿಲಿಯನ್ subscribers ಹಾಗೂ ಇಲ್ಲಿಯವರೆಗೆ 1500 ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇವರಿಗೆ ಯೂಟ್ಯೂಬ್‌ನಿಂದ ತಿಂಗಳಿಗೆ 2 ಲಕ್ಷದ 50 ಸಾವಿರ ಆದಾಯ ಬರುತ್ತದೆ.
ಅಧಿತಿ ಪ್ರಭುದೇವ್:

ನಟಿ ಅಧಿತಿ ಪ್ರಭುದೇವ್ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿರುತ್ತಾರೆ. ಇದಾಗಲೇ ಚಿಕ್ಕ ಮಗುವಿರುವ ಇವರು ಮಗಳ ಲಾಲನೆ, ಪಾಲನೆ, ದೈನಂದಿನ ಫುಡ್‌ಗಳ ಬಗ್ಗೆ ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಹಾಕುತ್ತಾರೆ. ಅಧಿತಿ ಪ್ರಭುದೇವ್ ಇವರಿಗೆ ಯೂಟ್ಯೂಬ್‌ನಲ್ಲಿ 622K subscribers ಹಾಗೂ ಇಲ್ಲಿಯವರೆಗೆ 273 ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇವರಿಗೆ ಯೂಟ್ಯೂಬ್‌ನಿಂದ ತಿಂಗಳಿಗೆ 1 ಲಕ್ಷದ 50 ಸಾವಿರ ಆದಾಯ ಬರುತ್ತದೆ.
ಸೋನು ಶ್ರೀನಿವಾಸ್ ಗೌಡ:

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಒಟಿಟಿ ಸೀಸನ್ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಒಂದಲ್ಲಾ ಒಂದು ವಿಚಾರವನ್ನು ತಮ್ಮ ಯೂಟ್ಯೂಬ್‌ನಲ್ಲಿ ಹಾಕುತ್ತಿರುತ್ತಾರೆ. ಇವರಿಗೆ ಯೂಟ್ಯೂಬ್‌ನಲ್ಲಿ 484K subscribers ಹಾಗೂ ಇಲ್ಲಿಯವರೆಗೆ 594 ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇವರಿಗೆ ಯೂಟ್ಯೂಬ್‌ನಿಂದ ತಿಂಗಳಿಗೆ 1 ಲಕ್ಷದ 50 ಸಾವಿರ ಆದಾಯ ಬರುತ್ತದೆ.
ಉತ್ತರ ಕರ್ನಾಟಕ ರೆಸಿಪಿ:

ಉತ್ತರ ಕರ್ನಾಟಕ ಶೈಲಿಯ ಖಾದ್ಯಗಳನ್ನು ಮಾಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚುವ ಈ ಮಹಿಳೆಗೆ ಹಲವಾರು ಫ್ಯಾನ್ಸ್‌ಗಳಿದ್ದಾರೆ. ಇವರಿಗೆ ಯೂಟ್ಯೂಬ್‌ನಲ್ಲಿ 887K subscribers ಹಾಗೂ ಇಲ್ಲಿಯವರೆಗೆ 1300 ಕ್ಕೂ ಹೆಚ್ಚಿನ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇವರಿಗೆ ಯೂಟ್ಯೂಬ್‌ನಿಂದ ತಿಂಗಳಿಗೆ 1 ಲಕ್ಷದ 50 ಸಾವಿರ ಆದಾಯ ಬರುತ್ತದೆ.
ವರ್ಷಾ ಕಾವೇರಿ:

ವರ್ಷಾ ಕಾವೇರಿ ಸೋಷಿಯಾಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರೋದು ಕಮ್ಮಿ. ಆದರೆ ಕೆಲವೊಂದು ವಿಡಿಯೋಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುತ್ತಾರೆ. ಇವರಿಗೆ ಯೂಟ್ಯೂಬ್‌ನಲ್ಲಿ 1.41 ಮಿಲಿಯನ್ subscribers ಇದ್ದರೂ ಕೂಡ ಕೇವಲ 206 ವಿಡಿಯೋವನ್ನು ಮಾತ್ರ ಅಪ್‌ಲೋಡ್ ಮಾಡಿದ್ದಾರೆ. ಇವರಿಗೆ ಯೂಟ್ಯೂಬ್‌ನಿಂದ ತಿಂಗಳಿಗೆ 50 ಸಾವಿರ ಆದಾಯ ಬರುತ್ತದೆ.