Connect with us

LATEST NEWS

ತಬ್ಬಲಿ  ಅಪ್ರಾಪ್ತ ಬಾಲಕಿಯನ್ನು  ಹುರಿದು ಮುಕ್ಕಿದ ಕಾಮುಕರು; ಬೆಚ್ಚಿ ಬಿದ್ದ ಕರುನಾಡು..!

Published

on

ತಬ್ಬಲಿ  ಅಪ್ರಾಪ್ತ ಬಾಲಕಿಯನ್ನು  ಹುರಿದು ಮುಕ್ಕಿದ ಕಾಮುಕರು; ಬೆಚ್ಚಿ ಬಿದ್ದ ಕರುನಾಡು..!

ಮಂಗಳೂರು: ಹೆತ್ತಮ್ಮನಿಲ್ಲದ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೋರ್ವಳನ್ನು 30ಕ್ಕೂ ಅಧಿಕ ಜನ ಕಾಮುಕರು ನಾಲ್ಕೈದು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರವೆಸಗಿದ ವಿಕೃತ ಘಟನೆ ಶೃಂಗೇರಿ ಸಮೀಪ ನಡೆದಿದೆ.

ಘಟನೆಯಿಂದ ಎಲ್ಲರೂ ಬೆಚ್ಚಿ ಬೀಳುವಂತಾಗಿದೆ. ತಾಯಿಯನ್ನು ಕಳೆದುಕೊಂಡ ದು:ಖದಲ್ಲಿರುವಾಗಲೇ ಇಂತಹ ಹೇಯ ಕೃತ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ.ಶೃಂಗೇರಿ ಸುತ್ತಮುತ್ತಲಿನ 30ಕ್ಕೂ ಅಧಿಕ ಯುವಕರು ನಿರಂತರ ಅತ್ಯಾಚಾರವೆಸಗಿ ಈ ದುಷ್ಕೃತ್ಯವನ್ನು ಮೊಬೈಲಿನಲ್ಲಿ ಚಿತ್ರೀಕರಿಸಿ ವೈರಲ್ ಮಾಡುವುದಾಗಿ ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿ ತಿಳಿದು ಬಂದಿದೆ.

ಸಂತ್ರಸ್ತ ಬಾಲಕಿಗೆ ಹೆಚ್ಚಿನ ಆರೋಪಿಗಳ ಗುರುತೂ ಇಲ್ಲವೆನ್ನಲಾಗುತ್ತಿದ್ದು ಈ ಕುಕೃತ್ಯಕ್ಕೆ ಆಕೆಯ ಚಿಕ್ಕಮ್ಮಳ ಸಹಕಾರವಿತ್ತು ಎನ್ನಲಾಗುತ್ತಿದೆ.

ಶೃಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, 17ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಾಗಿದೆ.

LATEST NEWS

ಕೆಎಸ್‌ಆರ್‌ಟಿಸಿ ಸಾಧನೆ : ಏಳು ರಾಷ್ಟ್ರೀಯ ಹಾಗೂ ವಿಶ್ಚ ನಾವೀನ್ಯತೆ ಪ್ರಶಸ್ತಿಗೆ ಆಯ್ಕೆ

Published

on

ಮಂಗಳೂರು/ಬೆಂಗಳೂರು : ಏಳು ರಾಷ್ಟ್ರೀಯ ಹಾಗೂ ವಿಶ್ಚ ನಾವೀನ್ಯತೆ ಪ್ರಶಸ್ತಿಗಳು ಕೆಎಸ್‌ಆರ್‌ಟಿಸಿ ಅನುಷ್ಟಾನಗೊಳಿಸಿರುವ ಜನಸ್ನೇಹಿ ಉಪಕ್ರಮಗಳಿಗೆ  ದೊರೆತಿದ್ದು, ಫೆ.17, ಫೆ.18 ಮತ್ತು ಫೆ.21ರಂದು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆ ತಿಳಿಸಿದೆ.

ಕೆಎಸ್‌ಆರ್‌ಟಿಸಿ ಉತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ, ಉದ್ಯೋಗದಲ್ಲಿ ಆರೋಗ್ಯ ನಿರ್ವಹಣೆಗಾಗಿ ಕನಸುಗಳ ಕಂಪೆನಿಗಳು ಪ್ರಶಸ್ತಿ, ಕಾರ್ಯಸ್ಥಳ ಮತ್ತು ಜನಸಂಪತ್ತು ಅಭಿವೃದ್ಧಿಗಾಗಿ ವರ್ಷದ ವ್ಯವಹಾರ ನಾಯಕ ಪ್ರಶಸ್ತಿಯನ್ನು ಸಂಸ್ಥೆ ಪಡೆದುಕೊಲ್ಳುತ್ತಿದೆ. ಜೊತೆಗೆ ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮಕ್ಕಾಗಿ ವಿಶ್ವ ಆರೈಕೆ ಪ್ರಶಸ್ತಿ, ಆರೋಗ್ಯ ತಂತ್ರಜ್ಞಾನದಲ್ಲಿ ಉತ್ತಮ ನಾವೀನ್ಯತೆಗಾಗಿ ವಿಶ್ವ ನಾವಿನ್ಯತೆ ಪ್ರಶಸ್ತಿ, ಸುಸ್ಥಿರತೆಗಾಗಿ ಜಾಗತಿಕ ತಯಾರಿಕಾ ನಾಯಕರ ಪ್ರಶಸ್ತಿ ಮತ್ತು ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿಗಳಿಗೆಕೆ ಎಸ್‌ಆರ್‌ಟಿಸಿ ಭಾಜನವಾಗಿದೆ.

Continue Reading

LATEST NEWS

ವಲಸೆ ಕಾರ್ಮಿಕನ ಕೊಲೆ ಪ್ರಕರಣ; ಮೂವರ ಬಂಧನ

Published

on

ಉಡುಪಿ: ಕರಾವಳಿ ಜಂಕ್ಷನ್ ಬಳಿ ಒಂದು ವರ್ಷ ನಾಲ್ಕು ತಿಂಗಳ ಹಿಂದೆ ನಡೆದ ವಲಸೆ ಕಾರ್ಮಿಕನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕನಕಪ್ಪ ಹನುಮಂತ ರೋಡಿ(46), ಯಮನೂರ ತಿಪ್ಪಣ್ಣ ಮಾರಣ ಬಸರಿ(24), ಯಮನೂರಪ್ಪಜೇಡಿ(26) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಳಕಲ್ ನಿವಾಸಿಗಳಾದ್ದು, ಗುಜರಿ ಹೆಕ್ಕುತ್ತಿದ್ದ ಸುಮಾರು 45 ರಿಂದ 48 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರನ್ನು 2023ರ ಅ.16ರಂದು ರಾತ್ರಿ ವೇಳೆ ಹೋಟೇಲ್ ಕರಾವಳಿ ಬಳಿ ಹರಿತವಾದ ಆಯುಧದಿಂದ ಬಲಕೈಯನ್ನು ಕಡಿದು ದಾರುಳವಾಗಿ ಕೊಲೆ ಮಾಡಿದ್ದರು.

ಇದನ್ನೂ ಓದಿ : ಫುಟ್‌ಬಾತ್ ಮೇಲೆ ಹತ್ತಿದ ಕಾರು; ಸದ್ಯ ಪ್ರಯಾಣಿಕರು ಪಾರು

ಈ ಕೊಲೆಯ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಮೃತರನ್ನು ಹುಬ್ಬಳ್ಳಿಯ ಕಿತ್ತೂರ ಯಾನೆ ಸಿದ್ದಪ್ಪ ಶಿವನಪ್ಪಎಂದು ಗುರುತಿಸಿದ್ದರು. ಬಳಿಕ ತನಿಖೆ ಮುಂದುವರೆಸಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading

LATEST NEWS

ಬೈಂದೂರು: ಸ್ಕೂಟರ್ ಅಪಘಾತ ಸಂಭವಿಸಿ ಸವಾರ ಸಾವು

Published

on

ಬೈಂದೂರು: ಸ್ಕೂಟರ್ ಸ್ಟಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಳ ಘಟನೆ ಯಳಜಿತ್ ಗ್ರಾಮದ ಗೋವಿಂದ ಮಾಸ್ಟರ್ ಮನೆ ಸಮೀಪದ ತಿರುವು ರಸ್ತೆಯಲ್ಲಿ ನಡೆದಿದೆ.

ನಾಗರಾಜ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸ್ಕೂಟರ್ ಅಪಘಾತದ ಸಂದರ್ಭ ಮೃತರ ಪತ್ನಿ, ಸಹಸವಾರೆ ಆಶಾ ಎಂಬವರು ಗಾಯಗೊಂಡಿದ್ದರು.

ಇದನ್ನೂ ಓದಿ : ಫುಟ್‌ಬಾತ್ ಮೇಲೆ ಹತ್ತಿದ ಕಾರು; ಸದ್ಯ ಪ್ರಯಾಣಿಕರು ಪಾರು

ದಂಪತಿಯು ಸ್ಕೂಟರಿನಲ್ಲಿ ಫೆ.3ರಂದು ಸಂಜೆ ಬೈಂದೂರು ಕಡೆಗೆ ಹೋಗುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.8ರಂದು ಮಧ್ಯಾಹ್ನ ವೇಳೆ ಇಹಲೋಕ ತ್ಯಜಿಸಿದ್ಧಾರೆ. ಈ ಘಟನೆ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page