Connect with us

LATEST NEWS

VIDEO: ಹೊತ್ತಿ ಉರಿದ ಕಾರು.. ಜೀವ ಪಣಕ್ಕಿಟ್ಟು ಚಾಲಕನನ್ನು ಕಾಪಾಡಿದ ಸ್ಥಳೀಯರು..!

Published

on

ರಸ್ತೆ ಬದಿಯಲ್ಲಿ ಕಾರೊಂದು ಬೆಂಕಿ ಹತ್ತಿಕೊಂಡು ಹೊತ್ತಿ ಉರಿದಿದ್ದು ಸ್ಥಳೀಯರು ತಮ್ಮ ಪ್ರಾಣವನ್ನೆ ಪಣಕಿಟ್ಟು ಕಾರಿನಲ್ಲಿದ್ದ ವ್ಯಕ್ತಿಯನ್ನು ಬಚಾವ್‌ ಮಾಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದ್ದು ಯುವಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ವೈರಲ್​​ ಆಗಿರುವ ವಿಡಿಯೋದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಕಾಣಬಹುದು. ಕಾರಿನ ಚಾಲಕ ಒಳಗೆ ಸಿಲುಕಿಕೊಂಡಿದ್ದು, ತಕ್ಷಣ ಸ್ಥಳೀಯರು ಸಹಾಯಕ್ಕೆ ಮುಂದಾಗಿದ್ದಾರೆ. ಕಾರಿನ ಬಾಗಿಲು ತೆಗೆಯಲು ನಾಲ್ಕೈದು ಜನ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಇದಲ್ಲದೇ ಬೆಂಕಿ, ಹೊಗೆ ಮಧ್ಯೆ ಪಟ್ಟು ಬಿಡದೇ ಕಾರಿನ ಗಾಜು ಹೊಡೆದು ಕಾರಿನೊಳಗಿದ್ದ ವ್ಯಕ್ತಿಯನ್ನು ಹೊರತಂದಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದೆ.

rajputroyal_143 ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋದಲ್ಲಿ ರಿಯಲ್​​​ ಹಿರೋಸ್​​ ಎಂದು ಕ್ಯಾಪ್ಷನ್​ ಕೂಡ ಬರೆಯಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ 6 ದಿನಗಳಲ್ಲಿ 15.1 ಮಿಲಿಯನ್​ ಅಂದರೆ ಒಂದು ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

DAKSHINA KANNADA

ತಲಪಾಡಿ: ಟ್ಯಾಂಕರ್ ಗೆ ಗುದ್ದಿದ ಕಾರು, ತಪಾಸಣೆ ವೇಳೆ ಕಾರಿನಲ್ಲಿ ಸಿಕ್ತು ಲಕ್ಷಾಂತರ ಮೌಲ್ಯದ ಡ್ರಗ್ಸ್..!

Published

on

ಉಳ್ಳಾಲ: ಕಾರೊಂದು ಟ್ಯಾಂಕರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದು ಕಾರಿನೊಳಗೆ ಲಕ್ಷಾಂತರ ರೂ. ಮೌಲ್ಯದ ನಿಷೇಧಿತ ಎಂಡಿಎಂಎ ಪತ್ತೆಯಾದ ಘಟನೆ ಮಂಗಳೂರು ಹೊರ ವಲಯದ ತಲಪಾಡಿಯಲ್ಲಿ ಇಂದು ನಡೆದಿದೆ.

ಮಂಗಳೂರಿನಿಂದ‌ ಉಪ್ಪಳದ ಕಡೆಗೆ ಬರುತ್ತಿದ್ದ ಕಾರು ತಲಪಾಡಿಯ ಆರ್ ಟಿಓ ಚೆಕ್ ಪೋಸ್ಟ್ ಬಳಿ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ  ಆದಮ್‌ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಪೊಲೀಸರು ತನಿಖೆಗೆ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ ಸುಮಾರು 78 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಕಾರು ಚಾಲಕ ಸಿದ್ಧೀಕ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಸಿದ್ಧೀಕ್ ಮತ್ತು ಆದಮ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳೆಂದು ತಿಳಿದುಬಂದಿದೆ. ಅಪಘಾತದ ಕುರಿತಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

 

Continue Reading

LATEST NEWS

3 ತಿಂಗಳ ಬಳಿಕ ಮತ್ತೆ ಕೈ ಸೇರಿದ ಮೊಬೈಲ್, ಉಡುಪಿ ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ 60 ಮಂದಿ

Published

on

ಉಡುಪಿ: ಜಿಲ್ಲಾ ನಗರ ಠಾಣೆ ಪೊಲೀಸರಿಂದ ಮೊಬೈಲ್ ಕಳೆದುಕೊಂಡಿದ್ದ 60 ಮಂದಿಗೆ ಮೊಬೈಲ್ ಹಸ್ತಾಂತರ ಮಾಡಲಾಗಿದೆ. 8 ಲಕ್ಷದ 83 ಸಾವಿರದ 400 ರೂ. ಮೌಲ್ಯದ 60 ಮೊಬೈಲ್ ಹಸ್ತಾಂತರ ಮಾಡಲಾಗಿದ್ದು ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಮಂದಹಾಸ ಮೂಡಿದೆ.

ಮೊಬೈಲ್ ಕಳೆದುಕೊಂಡಿದ್ದವರಿಂದ ಸಿಎಐಆರ್ ಪೋರ್ಟಲ್ ನಲ್ಲಿ ದೂರು ದಾಖಲಾಗಿತ್ತು. ಸಿಎಐಆರ್ ನಲ್ಲಿ ದಾಖಲಾಗಿದ್ದ ದೂರನ್ನು ಆಧರಿಸಿ ಮೂರು ತಿಂಗಳಲ್ಲಿ 60 ಮಂದಿಯ ಮೊಬೈಲ್ ಟ್ರೇಸ್ ಮಾಡಲಾಗಿದೆ. ಮೊಬೈಲ್ ವಶಕ್ಕೆ ಪಡೆದು ಸೂಕ್ತ ದಾಖಲೆ ಮೇಲೆ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ.

ಮೂರು ತಿಂಗಳ ಬಳಿಕ ಮೊಬೈಲ್ ಕಂಡು ವಾರೀಸುದಾರರು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಸಲಹೆ ನೀಡಿದ  ಡಿವೈಎಸ್ಪಿ ಡಿ.ಟಿ ಪ್ರಭು ಮೊಬೈಲ್ ಕಳೆದುಕೊಂಡರೆ ಗಾಬರಿಯಾಗದೆ ಸಿಎಐಆರ್ ಪೋರ್ಟಲ್ ನಲ್ಲಿ ದೂರು ದಾಖಲಿಸಿ. ಈ ವರ್ಷ ಸಿಎಐಆರ್ ಪೋರ್ಟಲ್ ನಲ್ಲಿ ಮೊಬೈಲ್ ಕಳವು ದೂರು ಹೆಚ್ಚಾಗಿದೆ ಎಂದು ಹೇಳಿದರು.

Continue Reading

LATEST NEWS

ಸೈಕಲ್ ಆಟವಾಡುತ್ತಾ ಆಯತಪ್ಪಿ ನೀರಿನ ಸಂಪ್ ಗೆ ಬಿದ್ದ ಬಾಲಕ ಸಾವು

Published

on

ಹಾಸನ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಚಿಕ್ಕ ಮಕ್ಕಳ ಮೇಲೆ ಅದೆಷ್ಟೇ ನಿಗಾ ವಹಿಸಿದರೂ ಕೂಡಾ ದುರ್ಘಟನೆಗಳು ನಡೆಯುತ್ತಿರುತ್ತದೆ. ಇದಕ್ಕೆ ಮತ್ತೊಂದು ರೀತಿಯಾಗಿ ಪೋಷಕರ ಬೇಜವಾಬ್ದಾರಿತನವೂ ಕೂಡಾ ಕಾರಣವಾಗಿರುತ್ತದೆ.

ಸೈಕಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ನೀರಿನ ಸಂಪ್‌ಗೆ ಬಿದ್ದು ಪುಟ್ಟ ಬಾಲಕನೋರ್ವ ಮೃತಪಟ್ಟಿರುವ ಘಟನೆ ಹಾಸನದ ಅಣಚಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಎಡನ್ ಸ್ವೀವ್ (4) ಮೃತ ಬಾಲಕ. ಮನೆಯ ಮುಂದೆ ಎಡನ್ ಸ್ವೀವ್ ಆಟವಾಡುತ್ತಿದ್ದ.

ಈ ವೇಳೆ ಪೋಷಕರು ಮನೆಯೊಳಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮನೆಯಿಂದ ಹೊರ ಬಂದ ಪೋಷಕರು ಮಗುವಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ನೀರಿನ ಸಂಪ್ ಬಳಿ ಮಗುವಿನ ಸೈಕಲ್ ಬಿದ್ದಿದ್ದು ಸಂಪ್ ಪರಿಶೀಲಿಸಿದಾಗ ಶವ ನೀರಿನಲ್ಲಿ ತೇಲುತ್ತಿರುವುದು ಕಾಣಿಸಿದೆ.

ಕೂಡಲೇ ಹಾಸನ ನಗರದ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page