Connect with us

LATEST NEWS

ಸರಕಾರಿ ಕೆಲಸದ ಹುಡುಗನೇ ಬೇಕೆಂದು ಮಂಟಪದಲ್ಲೇ ವರನನ್ನು ತಿರಸ್ಕರಿಸಿದ ವಧು !!

Published

on

ಮಂಗಳೂರು/ಉತ್ರರ ಪ್ರದೇಶ: ತಾವು ಮದುವೆಯಾಗುವ ಹುಡುಗ ಹ್ಯಾಂಡ್ಸಮ್‌ ಆಗಿರ್ಬೇಕು, ಉತ್ತಮ ಸಂಬಳವನ್ನು ಪಡೆಯುವ ಉದ್ಯೋಗದಲ್ಲಿರಬೇಕು ಎಂದು ಹೆಚ್ಚಿನ ಹುಡುಗಿಯರು ಬಯಸುತ್ತಾರೆ. ಇನ್ನೂ ಕೆಲವರು ಹುಡುಗ ಹೇಗಿದ್ದರೂ ಪರವಾಗಿಲ್ಲ ಆದರೆ ಅವನಿಗೆ ಸರ್ಕಾರಿ ಕೆಲಸ ಇದ್ರೆ ಸಾಕಪ್ಪಾ ಎನ್ನುತ್ತಾರೆ. ಅದೇ ರೀತಿಯ ಘಟನೆಯೊಂದು ಉತ್ರರ ಪ್ರದೇಶದ ಫರೂಕಾಬಾದ್‌ನಲ್ಲಿ ನಡೆದಿದೆ.

ಯುವತಿಯೊಬ್ಬಳು ತನಗೆ ಸರ್ಕಾರಿ ಕೆಲಸದಲ್ಲಿರುವ ಗಂಡನೇ ಬೇಕೆಂದು ಮದುವೆ ಮಂಟಪದಲ್ಲಿಯೇ ಖಾಸಗಿ ಕಂಪೆನಿಯಲ್ಲಿ ತಿಂಗಳಿಗೆ 1.2 ಲಕ್ಷ ಸಂಬಳ ಗಳಿಸುವ ವರನನ್ನು ತಿರಸ್ಕರಿಸಿ, ಆಗಬೇಕಿದ್ದ ಮದುವೆಯನ್ನೇ ಮುರಿದಿದ್ದಾಳೆ. ಸಂಪ್ರದಾಯಬದ್ಧವಾಗಿ ವರ ಮಾಲೆಯನ್ನು ವಿನಿಯಮ ಮಾಡಿಕೊಂಡ ಬಳಿಕ ವರ ಸರ್ಕಾರಿ ಕೆಲಸದಲ್ಲಿಲ್ಲ ಎಂಬ ವಿಚಾರ ತಿಳಿದು ವಧು ಮದುವೆಯಾಗುವುದಿಲ್ಲ ಎಂದಿದ್ದಾಳೆ.

ಬ್ರೋಕರ್ ಮಾತು ನಂಬಿದ್ದ ಯುವತಿ :

ವರದಿಗಳ ಪ್ರಕಾರ, ವಧುವಿನ ಕುಟುಂಬವು ಛತ್ತೀಸ್‌ಗಢದ ಬಲರಾಮ್‌ಪುರದ ಹುಡುಗನೊಂದಿಗೆ ಮದುವೆಯನ್ನು ಏರ್ಪಡಿಸಿದ್ದರು. ಮದುವೆ ಬ್ರೋಕರ್‌ ‘ಹುಡುಗ ಸರ್ಕಾರಿ ಇಂಜಿನಿಯರ್‌, ಆತನ ಹೆಸರಲ್ಲಿ ಆರು ನಿವೇಶನಗಳಿವೆ ಜೊತೆಗೆ ಕೃಷಿ ಭೂಮಿಯೂ ಕೂಡಾ ಇದೆ’ ಎಂದು ಹೇಳಿ ಮದುವೆಗೆ ಒಪ್ಪಿಸಿದ್ದರು. ವಾಸ್ತವದಲ್ಲಿ ಹುಡುಗನ ಕುಟುಂಬ ಕನೌಜ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಜೊತೆಗೆ ವರನಿಗೆ ಯಾವುದೇ ಸರ್ಕಾರಿ ಕೆಲಸ ಕೂಡಾ ಇರಲಿಲ್ಲ ಬದಲಾಗಿ ಆತ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ.

ಮಂಟಪದಲ್ಲೇ ಮುರಿದು ಬಿದ್ದ ಮದುವೆ :

ಮದುವೆಯ ದಿನ ವರ ಮಾಲೆಯನ್ನು ವಿನಿಮಯ ಮಾಡಿಕೊಂಡ ಬಳಿಕ ವಧುವಿಗೆ ಈ ಸತ್ಯ ತಿಳಿದಿದ್ದು, ‘ನನಗೆ ಈ ಹುಡುಗ ಬೇಡ’ ಎಂದು ಮದುವೆಯನ್ನು ನಿರಾಕರಿಸಿದ್ದಾಳೆ. ನಂತರ ಎರಡೂ ಕುಟುಂಬದವರು ವಧುವಿನ ಮನವೊಲಿಸಲು ಪ್ರಯತ್ನಿಸಿದರೂ ಆಕೆ ‘ನನಗೆ ಈತ ಬೇಡ್ವೇ ಬೇಡಾ’ ಎಂದು ಪಟ್ಟು ಹಿಡಿದಿದ್ದಾಳೆ. ಅಷ್ಟೇ ಅಲ್ಲದೆ ವರ ತನ್ನ ಸ್ಯಾಲರಿ ಸ್ಲಿಪ್‌ ತೋರಿಸಿ ‘ನೋಡು. ನನಗೆ ಸರ್ಕಾರಿ ಕೆಲಸ ಇಲ್ಲಂದ್ರೆ ಏನಂತೆ ನಾನು ತಿಂಗಳಿಗೆ 1.2 ಲಕ್ಷ ಸಂಪಾದನೆ ಮಾಡುತ್ತೇನೆ’ ಎಂದು ಹೇಳಿದ್ದಾನೆ. ಇವರ ಯಾವ ಮಾತಿಗೂ ಬಗ್ಗದ ವಧು ‘ನಾನು ಮದುವೆಯಾದ್ರೆ ಸರ್ಕಾರಿ ಕೆಲಸದ ಹುಡುಗನನ್ನೇ’ ಎಂದು ಹೇಳಿದ್ದಾಳೆ.

ಬಳಿಕ ಎರಡೂ ಕುಟುಂಬದವರು ಮಾತುಕತೆ ನಡೆಸಿ ಮದುವೆಗಾದ ಖರ್ಚನ್ನು ಸಮಪಾಲು ಮಾಡೋಣ ಎಂಬ ಒಪ್ಪಂದಕ್ಕೆ ಬಂದು ಮದುವೆಯನ್ನು ನಿಲ್ಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್‌ ದೂರು ದಾಖಲಾಗಿಲ್ಲ.

LATEST NEWS

ಖಾವಿ ವೇಷದಲ್ಲಿ ಮನೆಗೆ ಬರ್ತಾರೆ, ಭಸ್ಮ ಹಾಕ್ತಾರೆ-ಇಂಥವರನ್ನು ಕಂಡ್ರೆ ಹುಷಾರಾಗಿರಿ..!

Published

on

ಕಾರ್ಕಳ: ಸ್ವಾಮೀಜಿಗಳ ವೇಷದಲ್ಲಿ ಕೆಲವರು ವಾಹನವೊಂದರಲ್ಲಿ ಮನೆ ಮನೆಗೆ ತೆರಳುತ್ತಿರುವ ಕುರಿತಂತೆ ಫೋಟೊ ಮತ್ತು ಎಚ್ಚರಿಕೆಯ ಸಂದೇಶ ನೀಡುವ ಆಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ  ಸ್ವಾಮೀಜಿ ವೇಷಧಾರಿಗಳು ಕಾರ್ಕಳದ ಮಿಯ್ಯಾರ್ ಪರಿಸರದಲ್ಲಿ ರಿಕ್ಷಾ ಟೆಂಪೊ ಮಾದರಿಯ ವಾಹನದಲ್ಲಿ ಪ್ರಯಾಣಿಸುತ್ತಾ ಮನೆ ಮನೆಗೆ ತೆರಳುತ್ತಿದ್ದಾರೆ.

ಮನೆಯೊಂದಕ್ಕೆ ತೆರಳಿ ಅಲ್ಲಿದ್ದ ಮಹಿಳೆಗೆ ಭಸ್ಮ ಹಾಕಿರುವುದು ಮತ್ತು ಪರಿಸರದ ಜನರು ಬಂದು ಈ ವೇಷಧಾರಿಗಳನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಇಂತಹ ಕಪಟ  ಸ್ವಾಮೀಜಿ ವೇಷಧಾರಿಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಬೇಕೆಂಬ ಎಚ್ಚರಿಕೆಯ ಸಂದೇಶವನ್ನು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ.

ಇವರು ಎಂಎಚ್‌ ರಿಜಿಸ್ಟ್ರೇಷನ್‌ ಹೊಂದಿರುವ ವಾಹನದಲ್ಲಿ  ಆಗಮಿಸಿದ್ದು ಉತ್ತರ ಭಾರತದಿಂದ ಬಂದ ಕಪಟರಾಗಿದ್ದು, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವ ಇಂತಹ ಸ್ವಾಮೀಜಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.

 

Continue Reading

DAKSHINA KANNADA

ಡಿ.7ರಂದು ಶಾರದಾ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ, ಸಾಂಸ್ಕೃತಿಕ ವೈಭವ

Published

on

ಮಂಗಳೂರು: ಮಕ್ಕಳಲ್ಲಿ ಶಿಸ್ತು, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಸ ಕ್ರೀಡೆ, ನೃತ್ಯ, ಸಂಗೀತ ಇವೆಲ್ಲವುಗಳನ್ನೊಳಗೊಂಡ ಹೊನಲು ಬೆಳಕಿನ ಕ್ರೀಡೋತ್ಸವ ಡಿ7ರ ಭಾನುವಾರದದಂದು ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ನಡೆಯಲಿದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಈ ಬಾರಿಯ ಕ್ರೀಡೋತ್ಸವ ಸಮಾರಂಭವನ್ನು ಮೈಸೂರಿನ ಸಂಸದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಆಗಮಿಸಲಿದ್ದಾರೆ. ಸಾಹಸ ಕ್ರೀಡೆ, ಸಾಂಸ್ಕೃತಿಕ ಪ್ರದರ್ಶನದಲ್ಲಿ ಸುಮಾರು 2000 ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ಸಮೀರ್ ಪುರಾಣಿಕ್ ಮಾತನಾಡಿ 4ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲ್ಲಕಂಬ, ಫೈರ್ ಜಂಪ್, ಯೋಗಾಸನ ಸೇರಿದಂತೆ ಪಿರಮಿಡ್ ರಚನೆಯ ಕ್ರೀಡಾ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: WATCH : ಉಡುಪಿ: ಶಾಲೆಯ ರೋಡ್ ಸರಿ ಇಲ್ಲ…ನಗರಸಭೆ ಆಯುಕ್ತರಿಗೆ ದೂರು ಕೊಟ್ಟ ಪುಟ್ಟ ವಿದ್ಯಾರ್ಥಿ

ಸಂಸ್ಥೆಯ ಪ್ರಾಂಶುಪಾಲ ದಯಾನಂದ ಕಟೀಲ್ ಶೋಭಾಯಾತ್ರೆಯಲ್ಲಿ ಒಡೆಯರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಈ ಕ್ರೀಡೋತ್ಸವಕ್ಕೆ ಮಕ್ಕಳನ್ನು ತಯಾರು ಮಾಡಲು ಯಾವುದೇ ತರಬೇತುದಾರರಿಲ್ಲ. ಶಾರದಾ ಕುಟುಂಬ ಜೊತೆಯಾಗಿ ಸೇರಿಕೊಂಡೇ ಮಕ್ಕಳನ್ನು ಸಿದ್ಧಪಡಿಸಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಸುಧಾಕರ್ ಪೇಜಾವರ, ಶಾರದಾ ಪಿಯು ಕಾಲೇಜು ಪ್ರಾಂಶುಪಾಲ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.

Continue Reading

LATEST NEWS

ತನ್ನ ಮೂರು ವರ್ಷದ ಮಗು ಸೇರಿ ನಾಲ್ಕು ಮಕ್ಕಳನ್ನು ಹತ್ಯೆ ಮಾಡಿದ ಮಹಿಳೆ; ಕಾರಣ ಕೇಳಿದ್ರೆ ಶಾಕ್ ಆಗ್ತಿರಾ!

Published

on

ಪಾಣಿಪತ್: ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೂ ಜನರನ್ನು ಬೆಚ್ಚಿಬೀಳಿಸಿದೆ. ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ಈ ಘಟನೆ ಸುಳ್ಳು ಮಾಡಿದೆ. ಇಲ್ಲೊಬ್ಬ ತಾಯಿ ತನ್ನ ಸ್ವಂತ ಮಗುವನ್ನು ಸೇರಿ ಸಂಬಂಧಿಕರ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.


ನೌಲ್ತಾ ಗ್ರಾಮದ ಪೂನಂ(32) ಕೃತ್ಯ ಎಸಗಿದ ತಾಯಿ.

ಪೂನಂ ಕಳೆದ ಎರಡು ವರ್ಷಗಳಲ್ಲಿ, ತನ್ನ ಮೂರು ವರ್ಷದ ಮಗು ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಮದುವೆ ಮನೆಯಲ್ಲಿ ರಾದ್ಧಾಂತ ಮಾಡಿದ ವರನ ಕುಟುಂಬ; ಕಾರಣ ಏನು ಗೊತ್ತಾ?

ನಾಲ್ಕು ಮಕ್ಕಳ ಕೊಲೆ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆಯ ರಹಸ್ಯ ಬಯಲಾಗಿದ್ದು, ಮಕ್ಕಳ ಸೌಂದರ್ಯದ ಬಗ್ಗೆ ಆಕೆಗಿದ್ದ ಅತಿಯಾದ ಅಸೂಯೆಯೇ ಈ ಕೊಲೆಗಳಿಗೆ ಕಾರಣ ಎಂದು ತಿಳಿದುಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page