Connect with us

LATEST NEWS

ಐಸಿಸ್‌ ಉಗ್ರ ಸಂಘಟನೆ ಜತೆ ಲಿಂಕ್‌: ಬೆಂಗಳೂರಿನಲ್ಲಿ ವೈದ್ಯನ ಬಂಧನ..!

Published

on

ಬೆಂಗಳೂರು : ಎನ್ ಐ ಎ ಅಧಿಕಾರಿಗಳು ಬೆಂಗಳೂರಿನಲ್ಲಿ ಉಗ್ರ ಸಂಘಟನೆ ಐಸಿಸಿ ನೊಂದಿಗೆ ಸಂಪರ್ಕಹೊಂದಿದ್ದ ವೈದ್ಯಕೀಯ ವಿಧ್ಯಾರ್ಥಿಯೊಬ್ಬನನ್ನು ಇಂದು ಬಂಧಿಸಿದ್ದಾರೆ. ಅಬ್ದುಲ್‌ ರೆಹಮಾನ್ ಬಂಧಿತ ಶಂಕಿತ ಉಗ್ರ. ಬೆಂಗಳೂರಿನ ಬಸವನಗುಡಿಯಲ್ಲಿ ಈತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಹೊಸದಿಲ್ಲಿಯ ಎನ್ಐಎ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಇಸ್ಲಾಮಿಕ್‌ ಸ್ಟೇಟ್ ಕೊರೋಸನ್ ಪ್ರಾವಿನ್ಸ್ (ISKP) ಎಂಬ ಸಂಘಟನೆ ಜತೆ ಅಬ್ದುಲ್‌ ರೆಹಮಾನ್‌ ನಂಟು ಹೊಂದಿದ್ದಾನೆ ಎಂದು ಹೇಳಲಾಗಿದೆ.

ಈಗ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಆಪ್ತೋಲ್ಮಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಈತ ಐಸಿಎಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ. ಈತನನ್ನು ಶಂಕೆಯ ಮೇಲೆ ವಶಕ್ಕೆ ಪಡೆಯಲಾಗಿದೆ. ಬಾಂಗ್ಲಾ ಮೂಲದ ನಿಷೇಧಿತ ಇಸ್ಲಾಮಿಕ್‌ ಸ್ಟೇಟ್ ಕೊರೋಸನ್ ಪ್ರೋವಿನ್ಸ್ ಸಂಘಟನೆಯ ಸದಸ್ಯನಾಗಿದ್ದ.

ದಾಳಿ ವೇಳೆ ಫೋನ್, ಲ್ಯಾಪ್ ಟಾಪ್ ಹಾಗೂ ಡಿಜಿಟಲ್ ಡಿವೈಸ್ ಗಳನ್ನ ಎನ್‍ಐಎ ವಶಪಡಿಸಿಕೊಂಡಿದೆ. ವಿಚಾರಣೆ ವೇಳೆ, ತನಗೆ ಐಸಿಸ್ ನಂಟಿರುವ ಬಗ್ಗೆ ರೆಹಮಾನ್ ಒಪ್ಪಿಕೊಂಡಿದ್ದಾನೆ. ಸ್ಥಳೀಯ ಐಸಿಸ್ ಉಗ್ರರಿಗೆ ವೈದ್ಯಕೀಯ ವಿಚಾರದಲ್ಲಿ ನೆರವಾಗಿರುವ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ.

2014ರಲ್ಲಿ ಸಿರಿಯಾಗೆ ಭೇಟಿ ನೀಡಿದ್ದು, ಈ ವೇಳೆ ಐಸಿಸ್ ಉಗ್ರರಿಗೆ ಚಿಕಿತ್ಸೆ ನೀಡಿದ್ದೇನೆ. ಅಲ್ಲದೆ 10 ದಿನಗಳ ಕಾಲ ಸಿರಿಯಾದಲ್ಲಿದ್ದು ಚಿಕಿತ್ಸೆ ನೀಡಿ ವಾಪಸ್ ಆಗಿದ್ದರ ಬಗ್ಗೆಯೂ ಅಬ್ದುರ್ ರೆಹಮಾನ್ ತಿಳಿಸಿದ್ದಾನೆ. ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಹಾಗೂ ಸಹೋದರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್‌ಕೆಪಿ) ಉಗ್ರರ ಜೊತೆ ನಂಟು ಹೊಂದಿದ್ದ ಅಬ್ದುಲ್,ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ಇಲ್ಲಿಂದಲೇ ಸಂಘಟನೆಯ ಇತರೆ ಸದಸ್ಯರ ಜೊತೆ ಸಂಪರ್ಕ ಸಾಧಿಸುತ್ತಿದ್ದ ಎನ್ನಲಾಗಿದೆ.

ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ 2014ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದ ಅಬ್ದುಲ್, 2017ರಲ್ಲಿ ಸರ್ಕಾರಿ ಕೋಟಾದಡಿ ಎಂ.ಎಸ್ ವ್ಯಾಸಂಗಕ್ಕಾಗಿ ಅದೇ ಕಾಲೇಜಿಗೆ ಸೇರಿದ್ದ. ಇದೇ ಜುಲೈನಲ್ಲಿ ಅಂತಿಮ ಪರೀಕ್ಷೆಯನ್ನೂ ಬರೆದಿದ್ದ. ಕಾಲೇಜಿನ ಹೊರಗೆ ಆತನ ಚಟುವಟಿಕೆಗಳ ಬಗ್ಗೆ ನಮಗೆ ಗೊತ್ತಿರಲಿಲ್ಲ’ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲೇ ಭಯೋತ್ಪಾದನಾ ದಾಳಿ ನಡೆಸಲು ಐಎಸ್‌ಕೆಪಿ ಸಂಚು ರೂಪಿಸಿತ್ತು. ಅದನ್ನು ಪತ್ತೆ ಹಚ್ಚಿದ್ದ ಎನ್‌ಐಎ ಅಧಿಕಾರಿಗಳು, ಪುಣೆಯ ಸಾದಿಯಾ ಅನ್ವರ್ ಹಾಗೂ ನಬೀಲ್ ಸಿದ್ಧಿಕಿ ಖತ್ರಿ ಸೇರಿದಂತೆ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು.ಬಂಧಿತ ಆರೋಪಿಗಳ ಜೊತೆಯೂ ಅಬ್ದುಲ್ ರೆಹಮಾನ್ ನಂಟು ಹೊಂದಿದ್ದ. ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಬ್ದುಲ್‌ನನ್ನು ಸೆರೆ ಹಿಡಿದಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉದ್ಯಮಿಯನ್ನು ‘ಹನಿಟ್ರ್ಯಾಪ್’ ಮಾಡಲು ಹೋಗಿ ತಗಲಾಕ್ಕೊಂಡ ನರ್ಸ್ & ಗ್ಯಾಂಗ್

Published

on

ಮಂಗಳೂರು/ದಾವಣಗೆರೆ : ಖಾಸಗಿ ಆಸ್ಪತ್ರೆ ನರ್ಸ್​​ ಒಬ್ಬಳು ಕಷ್ಟ ಎಂದು ಹೇಳಿಕೊಂಡು ಬಂದು ಉದ್ಯಮಿಗೆ ಗಾಳ ಹಾಕಿದ್ದಳು. ಆದರೆ, ಹಾಳು ಬುದ್ದಿ  ತೋರಿಸಿ ಇದೀಗ ಜೈಲು ಪಾಲಾಗಿದ್ದಾಳೆ. ಈ ಘಟನೆ ನಡೆದಿರೋದು ದಾವಣಗೆರೆಯಲ್ಲಿ.

ಸುಶ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಪರಿಚಯ…ಸಲುಗೆ…ಹನಿಟ್ರ್ಯಾಪ್ :

ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಶ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು, ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಬಳಿಕ ಈ ಪರಿಚಯ ಸ್ನೇಹವಾಗಿ ಬದಲಾಗಿತ್ತು. ಸುಶ್ಮಿತಾ ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭುರನ್ನು ಅಪಾರ್ಟ್ಮೆಂಟ್‌ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ಸುಶ್ಮಿತಾ ಹಾಗೂ ಪ್ರಭು ಒಟ್ಟಿಗೆ ಇದ್ದ ವೀಡಿಯೋವನ್ನು ಇತರ ಆರೋಪಿಗಳು ಮಾಡಿಕೊಂಡಿದ್ದರು. ಬಳಿಕ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ರೂಮಿಗೆ ನುಗ್ಗಿ, ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿ  25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಪ್ರಭು, 12 ಲಕ್ಷಕ್ಕೆ ಒಪ್ಪಿಕೊಂಡಿದ್ದು, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆರೋಪಿಗಳ ಬೆ*ದರಿಕೆಗೆ ಬೇಸತ್ತು ಠಾಣೆಗೆ ಪ್ರಭು ದೂರು ನೀಡಿದ್ದು,  ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Continue Reading

LATEST NEWS

ರಿಪ್ಪನ್‌ ಪೇಟೆ ಬಳಿ ಬೀಕರ ಅಗ್ನಿ ಅವಘಡ, ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾದ ಕಾರು

Published

on

ಶಿವಮೊಗ್ಗ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಬಳಿ ಶನಿವಾರ ತಡರಾತ್ರಿ ನಡೆದಿದೆ.


ಶಿವಮೊಗ್ಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ಮದುವೆ ಕಾರ್ಯದ ನಿಮಿತ್ತವಾಗಿ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಕಾರಿನ ಎಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಮಲಗಿದ್ದಲ್ಲೇ ಆರೋಗ್ಯ ಇಲಾಖೆ ನೌಕರ ಹೃದಯಾ*ಘಾತಕ್ಕೆ ಬ*ಲಿ

ಚಾಲಕ ಶ್ರೀಕಾಂತ್ ಮತ್ತು ಮತ್ತೊಬ್ಬ ಪ್ರಯಾಣಿಕ ಗಂಗಾಧರ ಗೌಡ ಅವರು ಹೊಗೆ ಕಾಣಿಸಿಕೊಂಡ ತಕ್ಷಣ ಕಾರಿನಿಂದ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ರಸ್ತೆ ಮಧ್ಯೆಯೇ ಧಗಧಗನೆ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ.

Continue Reading

FILM

‘ನಮ್ಮನ್ನ ಯಾಕೆ ಮದುವೆಗೆ ಕರೆದಿಲ್ಲ?’: ವಿಜಯ್-ರಶ್ಮಿಕಾ ವಿರುದ್ಧ ಮುನಿಸಿಕೊಂಡ ಪುಟ್ಟ ಅಭಿಮಾನಿ!

Published

on

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಉದಯಪುರದಲ್ಲಿ ವಿವಾಹವಾದರು. ಈ ಮದುವೆಗೆ ತನ್ನನ್ನು ಕರೆದಿಲ್ಲ ಎಂದು ಪುಟ್ಟ ಅಭಿಮಾನಿಯೊಬ್ಬರು ಕೋಪದಿಂದ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಆ ಪುಟ್ಟ ಬಾಲಕಿ ವಿಡಿಯೋದಲ್ಲಿ, “ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ನಮ್ಮನ್ನು ಯಾಕೆ ಮದುವೆಗೆ ಕರೆಯಲಿಲ್ಲ?” ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ.
ಈ ವಿಡಿಯೋಗೆ ವಿಜಯ್ ಅವರು ತುಂಬಾ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. “ಬುಜ್ಜಿ ತಲ್ಲಿ.. ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ. ನಿನಗೆ ಇಷ್ಟವಾದ ಅಡುಗೆ ಮತ್ತು ಸಿಹಿತಿಂಡಿಗಳನ್ನು ಹೇಳು, ಮನೆಯಲ್ಲಿ ಎಲ್ಲವನ್ನೂ ಮಾಡಿಸಿ ಒಟ್ಟಿಗೆ ತಿನ್ನೋಣ” ಎಂದು ಕಮೆಂಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಕೂಡ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಆ ಬಾಲಕಿಗೆ ವಿಶೇಷ ಉಡುಗೊರೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್!

ಈ ದಂಪತಿಗಳು ತಮ್ಮ ಮದುವೆಯ ನಂತರ ದೇವಸ್ಥಾನಗಳಲ್ಲಿ ಸಿಹಿತಿಂಡಿ ಹಂಚುವ ಮೂಲಕ ಮತ್ತು ಅಭಿಮಾನಿಗಳೊಂದಿಗೆ ವಿಶೇಷ ಊಟ ಮಾಡುವ ಮೂಲಕ ಸಂಭ್ರಮವನ್ನು ಆಚರಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page