Connect with us

FILM

ಚಿತ್ರರಂಗಕ್ಕೆ ಮತ್ತೊಂದು ಅಘಾತ : ‘ಕುಂದನಪು ಬೊಮ್ಮ’ ಖ್ಯಾತಿಯ ತೆಲುಗು ನಟ ಸುಧೀರ್‌ ವರ್ಮಾ ಆತ್ಮಹತ್ಯೆ..!

Published

on

ತೆಲುಗು ಸಿನಿಮಾ ರಂಗದ ‘ಕುಂದನಪು ಬೊಮ್ಮ’ ಖ್ಯಾತಿಯ ತೆಲುಗು ನಟ ಸುಧೀರ್‌ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೈದರಾಬಾದ್ : ಭಾರತೀಯ ಚಿತ್ರರಂಗಕ್ಕೆ ಒಂದಲ್ಲ ಒಂದು ಅಘಾತಗಳು  ಎದುರಾಗುತ್ತಲೇ ಇದ್ದು ಒಂದೆಡೆ ವಯಸ್ಸಿನ ಅಂತರವಿಲ್ಲದೆ ನಟ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದರೆ ಮತ್ತೊಂದೆಡೆ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ.

ಇದೀಗ ಮತ್ತೊಂದು ಆಘಾತ ಎದುರಾಗಿದೆ. ಇದೀಗ ತೆಲುಗು ಸಿನಿಮಾ ರಂಗದ ‘ಕುಂದನಪು ಬೊಮ್ಮ’ ಖ್ಯಾತಿಯ ತೆಲುಗು ನಟ ಸುಧೀರ್‌ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೈಯಕ್ತಿಕ ಕಾರಣಗಳಿಂದಾಗಿ ನಿನ್ನೆ ತಮ್ಮ ವೈಜಾಗ್ ನ ಮನೆಯಲ್ಲಿ ಸುಧೀರ್ ತನ್ನ ಬದುಕನ್ನೇ ಅಂತ್ಯಗೊಳಿಸಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಷ್ಮಿತಾ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಶೂಟೌಟ್ ವೆಬ್ ಸಿರೀಸ್ ನಲ್ಲಿ ನಟಿಸಿದ್ದ ಹಾಗೂ ‘ಸೆಕೆಂಡ್ ಹ್ಯಾಂಡ್’ ಸಿನಿಮಾದ ಮೂಲಕ ತೆಲುಗು ಚಿತ್ರೋದ್ಯಮದಲ್ಲಿ ಹೆಸರು ಗಳಿಸಿದ್ದ ಸುಧೀರ್ ವರ್ಮಾ ಈ ಹಠತ್ ನಿರ್ಧಾರ ತೆಲುಗು ಚಿತ್ರರಂಗಕ್ಕೆ ದೊಡ್ಡ ಅಘಾತ ನೀಡಿದೆ.

ಸೆಕೆಂಡ್ ಹ್ಯಾಂಡ್, ಕುಂದನಪು ಬೊಮ್ಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದ ಸುಧೀರ್, ಎರಡೂ ಚಿತ್ರಗಳ ಮೂಲಕ ಒಳ್ಳೆಯ ಹೆಸರನ್ನು ಸಂಪಾದಿಸಿದ್ದರು.

ಆದರೆ, ಇತ್ತೀಚಿನ ದಿನಗಳ ಲ್ಲಿ ಹೇಳಿಕೊಳ್ಳುವಂತಹ ಅವಕಾಶ ಅವರಿಗೆ ಸಿಗಲಿಲ್ಲ. ಹಾಗಾಗಿ ಅವರು ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.

ಪೊಲೀಸರು ಪ್ರಕರಣ ದಾಖಲು ಮಾಡಿ  ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

FILM

ಆಸ್ಕರ್ ಅಂಗಳಕ್ಕೆ ಕಾಂತಾರ 1 : ಶುಭ ಹಾರೈಸಲು ಹೋಗಿ ಎಡವಟ್ಟು ಮಾಡಿಕೊಂಡ ಬಾಲಿವುಡ್ ನಟ!

Published

on

ಮಂಗಳೂರು/ಬೆಂಗಳೂರು : ಕಾಂತಾರ ಅಧ್ಯಾಯ 1 ದೇಶ ವಿದೇಶದಲ್ಲಿ ಭಾರೀ ಸದ್ದು ಮಾಡಿದ ಚಿತ್ರ. ಸದ್ಯ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ. ಈ ಬಗ್ಗೆ ಚಿತ್ರರಂಗದ ಹಲವರು ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರತಂಡಕ್ಕೆ ಶುಭಹಾರೈಸುತ್ತಿದ್ದಾರೆ.

ತುಳುನಾಡಿನ ದೈವಾರಾಧನೆಯ ಕಥಾಹಂದರವನ್ನೊಳಗೊಂಡಿದ್ದ ಕಾಂತಾರ ಚಾಪ್ಟರ್ 1 ಎಲ್ಲೆಡೆ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ರಿಷಬ್ ನಟನೆ, ನಿರ್ದೇಶನ, ಚಿತ್ರದ ಕಥೆ, ಪಾತ್ರವರ್ಗ ಎಲ್ಲವೂ  ಜನ ಮನ ಗೆದ್ದಿತ್ತು.  ಆಸ್ಕರ್‌ಗೆ ಕಾಲಿಟ್ಟಿರುವ ಕಾಂತಾರ 1 ಗೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಶುಭ ಹಾರೈಸಿದ್ದಾರೆ. ಈ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ.

ಎಡವಟ್ಟೇನು?

ಕಾಂತಾರ 1 ಆಸ್ಕರ್‌ಗೆ ಪ್ರವೇಶ ಪಡೆದಿರುವ ಬಗ್ಗೆ ಅಭಿನಂದಿಸುವ ಭರದಲ್ಲಿ ವಿವೇಕ್ ಒಬೆರಾಯ್ ಎಡವಿದ್ದಾರೆ.

ತುಳುನಾಡಿನ ಪ್ರಾಚೀನ ಪವಿತ್ರ ಆಚರಣೆಯು ಈಗ ಜಾಗತಿಕವಾಗಿ ಹೊರಹೊಮ್ಮಿದೆ. ಇದೀಗ ಭೂತ ಕೋಲವು ಗಡಿಗಳನ್ನು ಮೀರಿ, ಜಾಗತಿಕವಾಗಿ ಪರಿಚಿತವಾಗಿದೆ. ಅಸ್ಕರ್‌ನ ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಕಾಂತಾರ ಅರ್ಹತೆ ಪಡೆದಿದ್ದಕ್ಕೆ ನನ್ನ ಸಹೋದರ ರಿಷಬ್ ಶೆಟ್ಟಿ ಅವರಿಗೆ ಹೃತ್ತೂರ್ವಕ ಅಭಿನಂದನೆಗಳು. ಇದು ಕೇವಲ ನಾಮನಿರ್ದೇಶನವಲ್ಲ. ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರತಿಧ್ವನಿಸಿದ ನಮ್ಮ ಪೂರ್ವಜರ ಘರ್ಜನೆಯಾಗಿದೆ. ಈ ಸಿನಿಮಾ ಇತಿಹಾಸದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಭಾರತೀಯರಿಗೆ ಗುಡ್ ನ್ಯೂಸ್ : ವೀಸಾ ಮುಕ್ತ ಪ್ರಯಾಣ ಘೋಷಿಸಿದ ಜರ್ಮನಿ

ಇದೇನೋ ಸರಿ ಆದ್ರೆ, ಅವರು ಪೋಸ್ಟ್‌ನ ಕೊನೆಯಲ್ಲಿ, ಆಸ್ಕರ್ ಪ್ರಶಸ್ತಿಯನ್ನು ಮನೆಗೆ ತೆಗೆದುಕೊಂಡು ಬರುತ್ತೀವಿ ಎಂದು ತೆಲುಗಿನಲ್ಲಿ ಬರೆದಿರೋದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಕಾಂತಾರ 1 ಯಾವ ಭಾಷೆಯ ಸಿನಿಮಾ ಎಂಬುದು ವಿವೇಕ್ ಒಬೆರಾಯ್‌ಗೆ ಗೊತ್ತಿಲ್ವಾ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಕಾಂತಾರ 1 ಯಾವ ಭಾಷೆಯ ಸಿನಿಮಾ ಅನ್ನೋದು ಗೊತ್ತಿಲ್ಲದೇ ಇಷ್ಟುದ್ದ ಟ್ವೀಟ್ ಮಾಡಿದ್ರಾ? ಎಂದು ಅಸಮಾಧಾನ ಹೊರಹಾಕಿದ್ದಾರೆ.

Continue Reading

BIG BOSS

ರಣ ಹದ್ದು ತಂದ ಸಂಕಷ್ಟ; ಬಿಗ್ ಬಾಸ್ ಫಿನಾಲೆ ವೇಳೆಯೇ ಬಿತ್ತು ಕೇಸ್!

Published

on

BBK12 : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 12. ಇದೀಗ ಕೊನೆಯ ಹಂತಕ್ಕೆ ಬಂದಿದೆ. ಮುಂದಿನ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇಂತಹ ಸಂದರ್ಭದಲ್ಲೇ ಬಿಗ್ ಬಾಸ್‌ಗೆ ಸಂಕಷ್ಟ ಎದುರಾಗಿದೆ.

ಏನು ಕೇಸ್?

ಬಿಗ್ ಬಾಸ್‌ ನಿರೂಪಕ ಕಿಚ್ಚ ಸುದೀಪ್ ಮೇಲೆ ಕೇಸ್ ದಾಖಲಾಗಿದೆ. ರಾಮನಗರದ ಅರಣ್ಯಾಧಿಕಾರಿಗಳಿಗೆ  ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ವತಿಯಿಂದ ದೂರು ನೀಡಲಾಗಿದೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ರಣಹದ್ದು ಬಗ್ಗೆ ಕಿಚ್ಚ ಸುದೀಪ್ ತಪ್ಪಾದ ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಲಾಗಿದೆ.

ಶೋನಲ್ಲಿ ಕಿಚ್ಚ, ಹೊಂಚುಹಾಕಿ ಸಂಚು ಮಾಡಿ ಕರೆಕ್ಟ್ ಟೈಂ ಲಬಕ್ ಅಂತ ಹಿಡಿಯುವವರು ಯಾರು? ಎಂದು ಕೇಳಿದ್ದರು‌. ಈ ಮಾತು ಈಗ ಸಂ*ಕಷ್ಟಕ್ಕೆ ಕಾರಣವಾಗಿದೆ.

ರಣಹದ್ದು ಯಾವುದೇ ಜೀವಿಗೆ ಹಾ*ನಿ‌ ಮಾಡುವ ಪಕ್ಷಿ ಅಲ್ಲ. ಅದು ಸತ್ತ ಪ್ರಾಣಿಗಳನ್ನ ಮಾತ್ರ ತಿಂದು ಪರಿಸರದ ಸಮತೋಲನ ಕಾಪಾಡುವ ಪಕ್ಷಿ. ಇದು ಯಾವುದೇ ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ. ಇಂತಹ ಪಕ್ಷಿ ಬಗ್ಗೆ ಜನಪ್ರಿಯ ನಟ ಸುದೀಪ್ ಅವರು ತಪ್ಪು ಮಾಹಿತಿ ನೀಡೋದು ಸರಿಯಲ್ಲ ಎಂದು ದೂರಲಾಗಿದೆ.

ಇದನ್ನೂ ಓದಿ : ಬಿಗ್ ಬಾಸ್ ಕನ್ನಡ: ವೋಟ್ ಮಾಡಲು ಮಂಗಳವಾರ ಸಂಜೆವರೆಗೆ ಮಾತ್ರ ಅವಕಾಶ!

ಅಳಿವಿನಂಚಿನಲ್ಲಿರೋ ರಣಹದ್ದು ಬಗ್ಗೆ ತಪ್ಪಾದ ಮಾಹಿತಿ ಹರಡಿರುವ ಬಿಗ್ ಬಾಸ್ ಸಂಸ್ಥೆ ಹಾಗೂ ನಟ ಸುದೀಪ್‌ರಿಗೆ ರಣಹದ್ದು ಬಗ್ಗೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡುವಂತೆ ರಾಮನಗರ ಡಿಸಿಎಫ್ ಹಾಗೂ ಆರ್‌ಎಫ್‌ಓ ಮನ್ಸೂರ್‌ ಅವರಿಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದೆ. ಮುಂದಿನ ಸಂಚಿಕೆಯಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.

 

 

Continue Reading

FILM

ಟಾಕ್ಸಿಕ್ ಟೀಸರ್ ಮೆಚ್ಚಿದ ಕಿಚ್ಚ; ಯಶ್ ಏನಂದ್ರು ಗೊತ್ತಾ!?

Published

on

ಮಂಗಳೂರು/ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವ್ಯೂಸ್ ಗಿಟ್ಟಿಸಿಕೊಂಡಿದೆ. ಟೀಸರ್ ನೋಡಿದವರು ಐಶ್ ಬೋಲ್ಡ್‌ನೆಸ್‌ಗೆ ಶಾ*ಕ್ ಆಗಿದ್ದಾರೆ. ಚಿತ್ರರಂಗದ ಬಹುತೇಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಶುಭ ಹಾರೈಸಿದ್ದ ಯಶ್ :

ರಾಯ ಪಾತ್ರದಲ್ಲಿ ಯಶ್ ನಟಿಸುತ್ತಿದ್ದು, ಮಾಸ್ ಲುಕ್‌ನಲ್ಲಿ ಮಿಂಚಿದ್ದಾರೆ. ಟೀಸರ್‌ ನೋಡಿ ಕಿಚ್ಚ ಸುದೀಪ್ ಪೋಸ್ಟ್ ಮಾಡಿದ್ದರು. ಗುರಿಯತ್ತ ಸಾಗಲು ಯಾವಾಗಲೂ ಬಹಳಷ್ಟು ಸಮಯ ಬೇಕಾಗುತ್ತದೆ. ನಿಮ್ಮ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಹತ್ತಿರಕ್ಕೆ ಕೊಂಡೊಯ್ಯಲಿ, ಗುರಿಯಡೆಗೆ ನಿಮ್ಮ ಗಮನ ಇಟ್ಟಿದ್ದೀರಿ, ಶುಭವಾಗಲಿ ಎಂದು ಬರೆದುಕೊಂಡಿದ್ದರು.

ಈ ಪೋಸ್ಟ್‌ಗೆ  ಕಿಚ್ಚ ಸುದೀಪ್ ಅಭಿಮಾನಿಗಳು ಹಾಗೂ ಯಶ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಮೆಚ್ಚುಗೆ ಸೂಚಿಸಿದ್ದರು. ಇದೀಗ ಕಿಚ್ಚಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

ಯಶ್ ಏನಂದ್ರು?

ಕಿಚ್ಚ ಸುದೀಪ್  ಮೆಚ್ಚುಗೆಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಧನ್ಯವಾದಗಳು ಸರ್, ನಾನು ನಿಮ್ಮಂತಹ ಹಿರಿಯರಿಂದಲೇ ಕಲಿತೆ, ಗಮನ, ಪ್ರಾಮಾಣಿಕತೆ ಮತ್ತು ಧೈರ್ಯದಿಂದಲೇ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಉನ್ನತೀಕರಿಸಲು ಸಾಧ್ಯವಾಗುತ್ತದೆ ಎಂದು ರಿಪ್ಲೈ ಮಾಡಿದ್ದಾರೆ.

ಇದನ್ನೂ ಓದಿ : BBK12: ಗಿಲ್ಲಿ ತಾಯಿಯ ಮೇಲಿನ ಪ್ರೀತಿಗೆ ಅಮೂಲ್ಯ ಉಡುಗೊರೆ ಕೊಟ್ಟ ಅಶ್ವಿನಿ ಗೌಡ

‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ಕರೀನಾ ಕಪೂರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಅಂದಹಾಗೆ, ಮಾರ್ಚ್ 19 ರಂದು ಚಿತ್ರ ತೆರೆಗಪ್ಪಳಿಸಲಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page