Connect with us

LATEST NEWS

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ರಥೋತ್ಸವ ಸೇವೆಯಲ್ಲಿ ಭಾಗಿಯಾದ ತೇಜಸ್ವಿ ಸೂರ್ಯ ದಂಪತಿ

Published

on

ಉಡುಪಿ: ಮಾರ್ಚ್‌ 6 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ ಹಾಗೂ ಶೀವಶ್ರೀ ಇದೀಗ ಉಡುಪಿಯ ಶ್ರೀ ಕೃಷ್ಣನ ರಥೋತ್ಸವ ಸೇವೆಯಲ್ಲಿ ಭಾಗಿಯಾಗಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ನವದಂಪತಿಗಳು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ.

ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ ದಂಪತಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಶ್ರೀಗಳು ಅಶೀರ್ವಚನ ನೀಡಿದ್ದು, ಎಲ್ಲಾ ದಂಪತಿಗಳು ಮದುವೆ ಆದ ಕೂಡಲೇ ಪ್ರವಾಸಿ ತಾಣಗಳಿಗೆ ಹೋಗುತ್ತಾರೆ. ಆದರೆ ಈ ದಂಪತಿಗಳು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ಶ್ರೀ ಕೃಷ್ಣನ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದರು.

ಒಬ್ಬರು ಸಂಸತ್ತಿನಲ್ಲಿ ವೇದಘೋಷ ಮೊಳಗಿಸಿದರೆ ಇನ್ನೊಬ್ಬರು ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿದವರು. ನಿವೀಬ್ಬರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ದಂಪತಿಯಾಗಿದ್ದೀರ ಎಂದು ಶ್ರೀಗಳು ಹರಸಿ ಹಾರೈಸಿದರು.

ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಇವರ ಎರಡೂ ಕುಟುಂಬಗಳ ಸದಸ್ಯರು ಶ್ರಿ ಕೃಷ್ಣನ ದರ್ಶನ ಪಡೆದರು. ಬಳಿಕ ಶ್ರೀ ಕೃಷ್ಣನ ರಾತ್ರಿಯ ಮಹಾಪೂಜೆ ಮತ್ತು ಪ್ರತಿದಿನ ನಡೆಯುವ ರಥೋತ್ಸವ ಸೇವೆಯಲ್ಲಿ ನವದಂಪತಿ ಭಾಗಿಯಾಗಿದ್ದಾರೆ.

DAKSHINA KANNADA

ಡಿ. 13, 14 ರಂದು ಮಂಗಳೂರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ

Published

on

ಮಂಗಳೂರು: ಮಂಗಳೂರಿನ ಮದರ್ ತೆರೆಸಾ ವಿಚಾರ ವೇದಿಕೆ ಮತ್ತು ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13 ಮತ್ತು 14 ರಂದು ಕದ್ರಿ ಪಾರ್ಕ್‌ ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವವನ್ನು ಆಯೋಜಿಸಲಾಗಿದೆ.

ಎರಡು ದಿನಗಳ ಈ ಉತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಮಧ್ಯಾಹ್ನ 2.30 ರಿಂದ ರಾತ್ರಿ 9.30 ರ ತನಕ ನಡೆಯಲಿವೆ ಎಂದು ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್ಮಸ್‌ ಖೇಲ್‌ ಸ್ಪರ್ಧೆಗಳು, ಕ್ರಿಸ್ಮಸ್ ಕ್ಯಾರಲ್‌ಗಳ ಗಾಯನ ಸ್ಪರ್ಧೆ, ಕೇಕ್ ಸ್ಪರ್ಧೆ, ಸ್ಟಾರ್ ಸ್ಪರ್ಧೆ, ವೈನ್‌ ಮೇಳ, ಆಹಾರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದನ್ನೂ ಓದಿ: ‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಕ್ಯಾಥೊಲಿಕದ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೊ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Continue Reading

LATEST NEWS

ಪತಿಯನ್ನು ನಂಬಿ ಪ್ರಾ*ಣ ಕಳೆದುಕೊಂಡ ಕಬಡ್ಡಿ ಆಟಗಾರ್ತಿ

Published

on

ಮಂಗಳೂರು/ನಾಗ್ಪುರ : ಪ್ರತಿಭಾವಂತ ಕಬಡ್ಡಿ ಆಟಗಾರ್ತಿಯೊಬ್ಬರು ಮನೆಯಲ್ಲೇ ಕೀಟನಾಶಕ ಸೇವಿಸಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಕಿರಣ್ ಸೂರಜ್ ದಾಧೆ (29) ಆ*ತ್ಮಹ*ತ್ಯೆಗೆ ಶರಣಾದ ಆಟಗಾರ್ತಿ.

ಕಿರಣ್ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಬಿ.ಎ ಪದವೀಧರೆಯಾದ ಕಿರಣ್, ಸೇನೆ, ಪೊಲೀಸ್, ಹೋಮ್ ಗಾರ್ಡ್ ಮತ್ತು ಇತರ ಸರ್ಕಾರಿ ಉದ್ಯೋಗಗಳಿಗಾಗಿ ನಿರಂತರವಾಗಿ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

ಇದೇ ಸಂದರ್ಭ ಸ್ವಪ್ನಿಲ್ ಜಯದೇವ್ ಎಂಬ ಯುವಕನ ಪರಿಚಯವಾಗಿದೆ. ತನ್ನನ್ನು ಮದ್ವೆಯಾದ್ರೆ ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಹೇಳಿದ್ದ. ಅದನ್ನು ನಂಬಿ ಮದುವೆಯಾದ ಬಳಿಕ ಆತನ ನಿಜರೂಪ ಬಯಲಾಗಿದೆ. ಸ್ವಲ್ಪ ಸಮಯದ ಬಳಿಕ ಆತ ನಿರಂತರ ಕಿರುಕು*ಳ ನೀಡಲು ಆರಂಭಿಸಿದ್ದಾನೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೂ ಈತನ ಕಿರುಕು*ಳ ಹೆಚ್ಚಾಗುತ್ತಲೇ ಇತ್ತು ಎನ್ನಲಾಗಿದೆ.

ಇದನ್ನೂ ಓದಿ : ಸನ್ನಿ ಲಿಯೋನ್ ಫೋಟೋ ಪೋಸ್ಟ್ ಮಾಡಿದ ಆರ್‌ ಅಶ್ವಿನಿ; ನೆಟ್ಟಿಗರು ಶಾಕ್!

ಗಂಡ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಬೆ*ದರಿಸಿ ಮಾನಸಿಕವಾಗಿ ಹಿಂ*ಸೆ ನೀಡುತ್ತಿದ್ದ. ಇದರಿಂದ ಮನನೊಂದು ಕೀಟನಾಶಕ ಸೇವಿಸಿ ಪ್ರತಿಭಾವಂತ ಆಟಗಾರ್ತಿ ಜೀವಾಂ*ತ್ಯಗೊಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

 

 

Continue Reading

DAKSHINA KANNADA

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ: ವಾರ್ಷಿಕ ಮಹೋತ್ಸವ

Published

on

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ ಇದರ ವಾರ್ಷಿಕ ಮಹೋತ್ಸವ ನಡೆಯಿತು. ದಿವ್ಯ ಬಲಿ ಪೂಜೆಯ ಪ್ರಧಾನ ಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ, ವ್ಯಕ್ತಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಪ್ರೀತಿ, ತ್ಯಾಗ ಮತ್ತು ಏಕತೆಯೊಂದಿಗೆ ದೇವರ ಅನುಗ್ರಹವು ಬೇಕು. ಇದಕ್ಕಾಗಿ ಪ್ರತಿದಿನ ಮಾತೆ ಮರಿಯಮ್ಮನ ಜಪಮಾಲೆಯನ್ನು ಪಠಿಸುವುದರಿಂದ  ಇದನ್ನು ಗಳಿಸಬಹುದು ಎಂದರು.

ಬಂಟ್ವಾಳ ವಲಯದ ಹಾಗೂ ಪಾಲಟಾಯ್ನ್ ಸಭೆಯ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ : ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

ಫರ್ಲಾ ಧರ್ಮಕೇಂದ್ರದ ಧರ್ಮಗುರು ವಂದನೀಯ  ಮಾರ್ಕ್ ಅರುಣ್ ಡಿಸೋಜ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಹಾಗೂ ಹಾಗೂ ಗೌರವಾರ್ಥವಾಗಿ ಆಶೀರ್ವದಿಸಿದ ಮೇಣದ ಬತ್ತಿಯನ್ನು ವಿತರಿಸಲಾಯಿತು. ಊರ, ಪರವೂರ  ಅನೇಕ ಭಕ್ತರು ಭಾಗವಹಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page