Connect with us

LATEST NEWS

ಬೆಂಗಳೂರಿನಲ್ಲಿ ಭಾರತ​ ತಂಡದ ಮಾಜಿ ಕ್ರಿಕೆಟರ್ ಆತ್ಮಹ*ತ್ಯೆ; ಕಂಬನಿ ಮಿಡಿದ ಅನಿಲ್ ಕುಂಬ್ಳೆ

Published

on

ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೆಟರ್ ಡೇವಿಡ್ ಜಾನ್ಸನ್​(52) ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಇಂದು (ಜೂನ್ 20) ಬೆಂಗಳೂರಿನ ಕೊತ್ತನೂರು ಬಳಿ ಇರುವ ಅಪಾರ್ಟ್​ಮೆಂಟ್​ ಮೇಲಿಂದ ಹಾರಿ ಆತ್ಮಹತ್ಯೆ*ಗೆ ಶರಣಾಗಿದ್ದಾರೆ.

ಡೇವಿಡ್ ಜಾನ್ಸನ್ ಅವರು ಅನಾರೋಗ್ಯ ನಿಮಿತ್ತ ಖಿನ್ನತೆಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 1996ರಲ್ಲಿ ಭಾರತ​ ತಂಡದ ಪರ ಟೆಸ್ಟ್​ ಪಂದ್ಯ ಆಡಿದ್ದ ಡೇವಿಡ್ ಜಾನ್ಸನ್. ಕೆಪಿಎಲ್​ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರ ಆಡಿದ್ದರು.

ಸದ್ಯ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಘಟನೆಯ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇನ್ನು ಡೇವಿಡ್ ಜಾನ್ಸನ್ ನಿಧನಕ್ಕೆ ಕ್ರಿಕೆಟ್ ವಲಯದಿಂದ ಸಂತಾಪಗಳು ವ್ಯಕ್ತವಾಗಿವೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಹಿರಿಯ ಕ್ರಿಕೆಟಿಗ ಜಾನ್ಸನ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ್ದ ಡೇವಿಡ್ ಜಾನ್ಸನ್, ಟೀಂ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನಾಡಿ ಮೂರು ವಿಕೆಟ್ ಕಬಳಿಸಿದ್ದರು. ಆ ಕಾಲಘಟ್ಟದಲ್ಲಿ ಟೀಂ ಇಂಡಿಯಾ ಪರ ಅತಿವೇಗದ ಬೌಲಿಂಗ್ ಮಾಡಿದ ದಾಖಲೆ ಡೇವಿಡ್ ಜಾನ್ಸನ್ ಅವರ ಹೆಸರಿನಲ್ಲಿತ್ತು.

1996ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಡೇವಿಡ್ ಜಾನ್ಸನ್, ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸ ಮಾಡಿದ್ದಾಗ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆ ಸರಣಿಯಲ್ಲಿ ಡೇವಿಡ್ ಜಾನ್ಸನ್ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರನ್ನು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಡೇವಿಡ್ ಜಾನ್ಸನ್‌ ಒಟ್ಟು 39 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿ ಒಟ್ಟು 125 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಕೆಳಕ್ರಮಾಂಕದಲ್ಲಿ ಬ್ಯಾಟರ್ ಆಗಿದ್ದ ಜಾನ್ಸನ್ 437 ರನ್ ಪೇರಿಸಿದ್ದರು.

LATEST NEWS

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ನಾಲ್ಕು ಜನ ಸಾ*ವು

Published

on

ನವದೆಹಲಿ:  ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ನಾಲ್ಕು ಜನ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಸ್ಥಳದಿಂದ ಕನಿಷ್ಠ ನಾಲ್ಕು ಸುಟ್ಟ ಶವಗಳನ್ನ ವಶಪಡಿಸಿಕೊಂಡಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತದೇಹಗಳು ಮತ್ತು ಗಾಯಗೊಂಡ ವ್ಯಕ್ತಿಯನ್ನು ಕಲ್ಯಾಣಿಯ ಜೆಎನ್ಎಂ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗ್ತಿದೆ.

ಈ ಸ್ಫೋಟದಿಂದ ಇಡೀ ಕಾರ್ಖಾನೆಗೆ ಹಾನಿಯಾಗಿದೆ. ಆರಂಭದಲ್ಲಿ, ನಾವು ನಾಲ್ಕು ಸುಟ್ಟ ಶವಗಳನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಜ್ವಾಲೆಗಳನ್ನ ನಂದಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಲ್ಯಾಣಿಯ ರಥಾಲಾ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ಬಲಿಯಾದವರು ಕಾರ್ಖಾನೆಯ ಉದ್ಯೋಗಿಗಳು ಎಂದು ನಿವಾಸಿಗಳು ಹೇಳಿದ್ದಾರೆ.

Continue Reading

LATEST NEWS

ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಅ*ಟ್ಟಹಾಸ; 7 ವರ್ಷದ ಬಾಲಕ ಬ*ಲಿ

Published

on

ಮಂಗಳೂರು/ತುಮಕೂರು : ಕರ್ನಾಟಕದಲ್ಲಿ  ಜ್ವರದ ಹಾವಳಿ ಜೋರಾಗಿದೆ. ಮತ್ತೊಂದೆಡೆ ಮಹಾಮಾರಿ ಡೆಂಗ್ಯೂ ಒಕ್ಕರಿಸಿದೆ. ತುಮಕೂರಿನಲ್ಲಿ ಬಾಲಕನೋರ್ವ ಡೆಂಗ್ಯೂಗೆ ಬಲಿಯಾಗಿದ್ದಾನೆ. ಪಾವಗಡ ಪಟ್ಟಣದಲ್ಲಿ ನಡೆದಿದೆ.

ಕರುಣಾಕರ್(7) ಮೃತ ಬಾಲಕ. ಪಾವಗಡದ ಕ್ಲಿನಿಕೊಂದರಲ್ಲಿ ಬಾಲಕ ಕಳೆದ 8 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕೊನೆಯ ಕ್ಷಣದ ವರೆಗೂ ಡೆಂಗ್ಯೂ ಜ್ವರ ಎಂದು ವೈದ್ಯರು ಬಾಲಕನ ಮನೆಯವರಿಗೆ ತಿಳಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

ಪಾವಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ಲಿನಿಕ್ ಮುಂದೆ ಪ್ರತಿಭಟನೆ ನಡೆಸಿದರು.

Continue Reading

BELTHANGADY

ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

Published

on

ಬೆಳ್ತಂಗಡಿ: ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಬೆಳ್ತಂಗಡಿಯ ಮಾಲಾಡಿ ಗ್ರಾಮದ ಭೂತದ ಮನೆಯಲ್ಲಿ ಸದ್ಯ ನೀರವ ಮೌನ ಆವರಿಸಿದೆ. ಕಳೆದ ಮೂರು ತಿಂಗಳಿನಿಂದ ಭೂತದ ಉಪಟಳದಿಂದ ಬಳಲಿ ಬೆಂಡಾಗಿರುವ ಕುಟುಂಬ ಮನೆಯನ್ನೇ ಖಾಲಿ ಮಾಡಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಸಲಿಗೆ ಕಳೆದೆರಡು ದಿನಗಳಿಂದ ಈ ಮನೆಯಲ್ಲಿನ ಭೂತದ ಉಪಟಳ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಈ ಮನೆಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ನೂರಾರು ಜನ ಬಂದು ಭೂತದ ಹುಡುಕಾಟ ನಡೆಸಿದ್ದರು. ಭೂತದ ಇರುವಿಕೆಯ ವಿಚಾರವಾಗಿ ಪರ ವಿರೋಧದ ಚರ್ಚೆಗಳು ಆರಂಭವಾಗಿ ಹಲವರು ಮನೆಯವರ ಕಥೆಯೇ ಸುಳ್ಳು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ನಮ್ಮ ಕುಡ್ಲ ವಾಹಿನಿ ಈ ಬಗ್ಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿದಾಗಲೂ ಇದು ಭೂತದ ಕಾಟ ಇರಲಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಖ್ಯಾತ ಮನೋರೋಗ ತಜ್ಞರು ಹಾಗೂ ಪವಾಡ ರಹಸ್ಯ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಅವರೂ ಕೂಡಾ ಮನೆಯವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದರು.

ಇದೀಗ ಉಮೇಶ್ ಶೆಟ್ಟಿ ಅವರ ಇಡೀ ಕುಟುಂಬ ಭೂತದ ಭಯದಿಂದ ಮನೆಯನ್ನು ಬಿಟ್ಟು ಹೋಗಿದ್ದು, ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page