Connect with us

LATEST NEWS

ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಕಾಮುಕ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ..!

Published

on

ವಿದ್ಯಾರ್ಥಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಶಿಕ್ಷಕನಿಗೆ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ಜೊತೆಗೆ 30 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.

ಚಂಡೀಗಢ: ವಿದ್ಯಾರ್ಥಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಶಿಕ್ಷಕನಿಗೆ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ಜೊತೆಗೆ 30 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.

2019ರಲ್ಲಿ ನಡೆದ ಘಟನೆ ಇದಾಗಿದ್ದು, ಶಿಕ್ಷಕ 9ನೇ ತರಗತಿ ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿದ್ದ.

ಕೋರ್ಟ್​ ಈಗ ತಪ್ಪಿತಸ್ಥನಿಗೆ 20 ವರ್ಷಗಳ ಕಾಲ ಶಿಕ್ಷೆ ವಿಧಿಸಿದೆ.2019ರ ಏಪ್ರಿಲ್​ನಲ್ಲಿ ತರಗತಿಯ ಕೋಣೆಯಲ್ಲಿ ಯಾರು ಇಲ್ಲದ ವೇಳೆ ವಿದ್ಯಾರ್ಥಿನಿ ಮೇಲೆ ಅನುಚಿತವಾಗಿ ಶಿಕ್ಷಕ ವರ್ತಿಸಿದ್ದಾನೆ.

ಆಕೆ ಜೋರಾಗಿ ಚೀರಾಡಿದಾಗ ಆಕೆಯ ಬಾಯಿ ಬಿಗಿದು ಅತ್ಯಾಚಾರ ಮಾಡಿದ್ದನು. ಬಳಿಕ ಯಾರಿಗಾದರು ಹೇಳಿದರೆ ಥಳಿಸುವುದಾಗಿ ಹೇಳಿದ್ದನು.

ಭಯದಿಂದಾಗಿ ಈ ಸಂಗತಿಯನ್ನು ಬಾಲಕಿ ಮನೆಯಲ್ಲಿ ಹೇಳಿಕೊಂಡಿರಲಿಲ್ಲ. ಆದರೆ ನಂತರ ದಿನಗಳಲ್ಲಿ ಆಕೆಗೆ ಅನಾರೋಗ್ಯ ಕಾಣಿಸಿತು.

ಹೀಗಾಗಿ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ. ವಿದ್ಯಾರ್ಥಿ ಗರ್ಭಿಣಿ ಎಂದು ತಿಳಿದು ಬಂದಿದೆ.

ಶಿಕ್ಷಕನೇ ತನ್ನನ್ನು ಅತ್ಯಾಚಾರ ಮಾಡಿರುವುದಾಗಿ ಪೋಷಕರಿಗೆ ತಿಳಿಸಿದ್ದಳು.

ಆರೋಪಿಗೆ ಭಾರತ ದಂಡ ಸಂಹಿತೆ ಐಪಿಸಿ ಸೆಕ್ಷನ್​ 376 (3) ಅಡಿಯಲ್ಲಿ 20 ವರ್ಷಗಳ ಕಠಿಣಜೈಲು ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಲಾಗಿದೆ.

ಲೈಂಗಿಕ ಅಪರಾಧ ಮಕ್ಕಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್​ 33(8)ರ ನಿಬಂಧನೆಯ ಪ್ರಕಾರ 4 ಲಕ್ಷ ಪರಿಹಾರವನ್ನು ನೀಡುವಂತೆ ನ್ಯಾಯಾಲವು ಶಿಫಾರಸ್ಸು ಮಾಡಿದೆ.

ಈ ಮಧ್ಯೆ ಆರೋಪಿ ಶಿಕ್ಷಕ ಆಕೆಯನ್ನು ವಿವಾಹವಾಗುವುದಾಗಿ ತಿಳಿಸಿದ್ದಾನೆ..

INTERNATIONAL

ದಾವೋಸ್ ನಲ್ಲಿ ಫ್ರೆಂಚ್‌ ಅಧ್ಯಕ್ಷರ ಭಾಷಣ; ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ಭಾರೀ ಏರಿಕೆ!

Published

on

ದಾವೋಸ್:‌ ವಿಶ್ವ ನಾಯಕರು ಸೇರಿದ್ದ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಸನ್‌ ಗ್ಲಾಸ್‌ ಧರಿಸಿದ್ದರು. ಇದೀಗ ಈ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಬದಲಾದಂತಾಗಿದೆ.


ಹೌದು, ಜಾಗತೀಕವಾಗಿರುವ ಅತ್ಯಂತ ಸಂಕೀರ್ಣ ಮತ್ತು ಆತಂಕಕಾರಿ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಸೇರಿ ಇತರ ವಿಚಾರಗಳ ಬಗ್ಗೆ ಚರ್ಚಿಸಲು ವಿಶ್ವ ನಾಯಕರು ಸೇರಿರುವ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಮಹತ್ವದ ವಿಚಾರಗಳ ಬದಲಾಗಿ, ಎಲ್ಲರ ಕಣ್ಣುಗಳು ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಧರಿಸಿದ್ದ ಸನ್‌ ಗ್ಲಾಸ್‌ ಮೇಲೆ ಬಿದ್ದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ತಮ್ಮ ಕಣ್ಣು ಊದಿಕೊಂಡು ಕೆಂಪಾಗಿ ಕಾಣುತ್ತಿವೆ. ಹೀಗಾಗಿ ಸನ್‌ ಗ್ಲಾಸ್‌ ಧರಿಸುವ ಅನಿವಾರ್ಯತೆ ಇದೆ ಎಂದು ಹೇಳಿಕೊಂಡಿದ್ದರು.

“ದಯವಿಟ್ಟು ಸನ್ ಗ್ಲಾಸ್ ಧರಿಸಿರುವ ನನ್ನ ಕಣ್ಣಿನ ನೋಟಕ್ಕಾಗಿ ಕ್ಷಮಿಸಿ, ಇದು ಸಂಪೂರ್ಣವಾಗಿ ನಿರುಪದ್ರವ” ಎಂದು ಹೇಳಿದ್ದರು.

ಇದನ್ನೂ ಓದಿ: ಮದುವೆ ಮನೆಯಲ್ಲಿ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್..!‌?

ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ದಿಢೀರ್‌ ಏರಿಕೆ!
ಅಧ್ಯಕ್ಷರು ನೀಡಿದ ಹೇಳಿಕೆಯಿಂದ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಖಲಾಯಿಸಿದೆ. ಅದರ ತಯಾರಕ ಐವಿಷನ್ ಟೆಕ್‌ನ ಷೇರುಗಳು ಗುರುವಾರ ಸುಮಾರು 28% ರಷ್ಟು ಏರಿಕೆ ಕಂಡಿವೆ. ಫ್ರೆಂಚ್ ಐಷಾರಾಮಿ ಕನ್ನಡಕ ಬ್ಯಾಂಡ್ ಹೆನ್ರಿ ಜೂಲಿಯನ್ ಅನ್ನು ಹೊಂದಿರುತ ಐವಿಷನ್ ಟೆಕ್, ಮ್ಯಾಕ್ರನ್ ಧರಿಸಿದ್ದ ಸನ್ ಗ್ಲಾಸ್ ಪೆಸಿಫಿಕ್ S 01 ಮಾದರಿಯಾಗಿದ್ದು, ಕಂಪನಿಯ ವೆಬ್‌ಸೈಟ್‌ನಲ್ಲಿ ಇದರ ಬೆಲೆ 659 ಯುರೋಗಳ ಎಂದು ಬುಧವಾರ ಹೇಳಿದೆ ಎಂದು ವರದಿಯಾಗಿದೆ.

Continue Reading

LATEST NEWS

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

Published

on

ಚಾಮರಾಜನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಇಂದು(ಜ.24) ಬೆಳಗ್ಗೆ ನಡೆದಿದೆ.


ಬಂಡಳ್ಳಿ ಗ್ರಾಮದ ಜಯಲಕ್ಷ್ಮಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.


ಇದನ್ನೂ ಓದಿ: ಕೆಲಸಕ್ಕೆ ಗೈರಾಗಿದ್ದಕ್ಕೆ ಯುವತಿಗೆ ಸಾರ್ವಜನಿಕವಾಗಿ ಅವಮಾನ: ಮಾಲೀಕ ಪೊಲೀಸರ ವಶ

ಅದೃಷ್ಟವಶಾತ್‌, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಆದರೆ ಮನೆ ಸಂಪೂರ್ಣ ಹಾನಿಗೊಳಗಾಗಿದೆ.

Continue Reading

LATEST NEWS

ಜನ್ಮದಿನದ ಪಾರ್ಟಿಗೆ ಕರೆಸಿ ಯುವಕನ ಹ*ತ್ಯೆ

Published

on

ಮಂಗಳೂರು/ರಾಯಚೂರು :  ಜನ್ಮದಿನದ ಪಾರ್ಟಿಗೆ ಕರೆಸಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಯುವಕನ ಕೊ*ಲೆ ಮಾಡಿರುವ ಘಟನೆ ರಾಯಚೂರಿನ ಮಾವಿನಕೆರೆ ದಂಡೆಯ ಮೇಲೆ  ನಡೆದಿದೆ.

ಜಹೀರಾಬಾದ್ ಬಡಾವಣೆ ನಿವಾಸಿ, 22 ವರ್ಷದ ವಿಶಾಲ್ ಕೊ*ಲೆಯಾದ ಯುವಕ. 19 ವರ್ಷದ ರಾಜು ಅಲಿಯಾಸ್ ಯೇಸು ಮತ್ತು ಬಸವರಾಜ  ಕೊ*ಲೆಗೈದ ಆರೋಪಿಗಳು.

ಇದನ್ನೂ ಓದಿ : ವಸತಿ ಕಟ್ಟಡದ ಮೇಲೆ ಫೈ*ರಿಂಗ್ ; ಬಾಲಿವುಡ್ ನಟನ ಬಂಧನ

ಬಸವರಾಜ ಜನ್ಮದಿನದ ಪಾರ್ಟಿ ಕೊಡಿಸುವುದಾಗಿ ವಿಶಾಲ್ ನನ್ನು ಕರೆಸಿಕೊಂಡಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಬಳಿಕ ಕೊ*ಲೆಯಲ್ಲಿ ಅಂತ್ಯ ಕಂಡಿದೆ. ಕೊ*ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page