Connect with us

BANTWAL

ಬಂಟ್ವಾಳದಲ್ಲಿ ಟ್ಯಾಂಕರ್-ಪಿಕಪ್ ನಡುವೆ ಮುಖಾಮುಖಿ ಢಿಕ್ಕಿ

Published

on

ಬಂಟ್ವಾಳ: ಟ್ಯಾಂಕರ್ ಹಾಗೂ ಪಿಕಪ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಬಂಟ್ವಾಳದ ಪುಂಜಾಲಕಟ್ಟೆಯಲ್ಲಿ ನಡೆದಿದೆ.


ಪುಂಜಾಲ್ ಕಟ್ಟೆ ಯ ಪ್ರಗತಿ ಹಾರ್ಡ್ವೇರ್ ನ ಎದುರು ಬೆಳ್ತಂಗಡಿಯ ಉಜಿರೆಯಿಂದ ಬಿ.ಸಿರೋಡ್‌ಗೆ ತೆರಳುತ್ತಿದ್ದ ಟ್ಯಾಂಕರ್ ಹಾಗೂ ಮುರ್ಜೆಯಿಂದ ಪುಂಜಾಲಕಟ್ಟೆಗೆ ಬರುತಿದ್ದ ಪಿಕಪ್ ಪರಸ್ಪರ ಢಿಕ್ಕಿ ಹೊಡೆದಿದ್ದು ಈ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಂಜಾಲಕಟ್ಟೆ ಎಸ್ ಐ ಸುತೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಪಿಕಪ್‌ ಚಾಲಕ ರಾಘವೇಂದ್ರ ಮದ್ದಡ್ಕ ಪ್ರಾಣಾಪಾಯದಿಂದ ಪಾರಾಗಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಚಾರಿ ಪೊಲೀಸರು ವಾಹನಗಳನ್ನು ತೆರವುಗೊಳಿಸಿದರು.

Advertisement
Click to comment

Leave a Reply

Your email address will not be published. Required fields are marked *

BANTWAL

ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಶ್ರದ್ಧಾಂಜಲಿ ಅರ್ಪಣೆ-ಕಲ್ಲಡ್ಕದಲ್ಲಿ ಬ್ಯಾನರ್ ಕಂಡು ಶಾಕ್ ಆದ ಜನತೆ

Published

on

ಬಂಟ್ವಾಳ: ಇಲ್ಲಿ ಕಸ ತಂದು ಹಾಕುವ ದಿವ್ಯ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ, ಈ ಕಸದಂತೆಯೇ ನಿಮ್ಮ ಜೀವನವೂ ಆದಷ್ಟು ಬೇಗನೇ ಕೊಳೆತು ಹೋಗಲಿ…..ಹೀಗೊಂದು ಬ್ಯಾನರ್ ರಾರಾಜಿಸುತ್ತಿರುವುದು ಕಲ್ಲಡ್ಕ ಪೇಟೆಯಲ್ಲಿ. ಕಲ್ಲಡ್ಕ ಜಂಕ್ಷನ್ ನ ಕಮಲಾ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಇರುವ ವಿದ್ಯುತ್ ಕಂಬಕ್ಕೆ ಇಂಥದ್ದೊಂದು ಬ್ಯಾನರನ್ನು ಕಟ್ಟಿ ಹಾಕಲಾಗಿದೆ.

ಜನನಿಬಿಡ ಪ್ರದೇಶವಾಗಿರುವ ಕಲ್ಲಡ್ಕ ಕಮಲಾ ಕಾಂಪ್ಲೆಕ್ಸ್ ನಲ್ಲಿರುವ ಕೆ.ಟಿ.ಹೋಟೆಲ್ ನ ಮುಂಭಾಗದಲ್ಲಿ ಕಸವನ್ನು ತಂದು ಹಾಕಿ ಹೋಗುತ್ತಿದ್ದರು. ಕಮಲಾ ಕಾಂಪ್ಲೆಕ್ಸ್ ‌ನಲ್ಲಿ ಚಿಕಿತ್ಸಾಲಯ, ಹೋಟೆಲ್, ಬ್ಯಾಂಕ್ ಹಾಗೂ ಹತ್ತಿರದಲ್ಲಿ ಶ್ರೀರಾಮಮಂದಿರ ಇದ್ದು  ನಿತ್ಯ ಬೆಳಿಗ್ಗೆ ಇಲ್ಲಿ ಕಸದ ರಾಶಿ ಕೊಳೆತು ವಾಸನೆ ಬರುತ್ತಿತ್ತು.

ಜನರು ನಿತ್ಯ ಓಡಾಡುವ ಜಾಗದಲ್ಲಿ ಕಸವನ್ನು ಹಾಕಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದನ್ನು ಕಂಡು ಸಾರ್ವಜನಿಕರೇ ಬ್ಯಾನರ್ ಅಳವಡಿಸಿದ್ದಾರೆ. ಕಸ ತಂದು ಹಾಕುವವರನ್ನು ತಡೆಯಲು ಸಾಧ್ಯವಾಗದೆ ಅತ್ಯಂತ ನೋವಿನಿಂದ ಇಲ್ಲಿ‌ನ‌ ಸಾರ್ವಜನಿಕರು ನೋವು ತರುವ ಬರಹವನ್ನು ಬ್ಯಾನರ್ ನಲ್ಲಿ ಮುದ್ರಿಸಿ ಹಾಕಿದ್ದಾರೆ. ಬ್ಯಾನರ್ ಬರಹ ನೋಡಿದ ಜನರು  ಒಂದು ಕ್ಷಣ ನಿಬ್ಬೆಗೆರಗಾಗುವುದು ಮಾತ್ರ ಅಷ್ಟೇ ಸತ್ಯ.

Continue Reading

BANTWAL

ಬ್ರಹ್ಮರಕೊಟ್ಲು ಟೋಲ್ ಗೇಟ್ ಗೆ ಹಾನಿ ಮಾಡಿ ಸಿಬಂದಿ ಮೇಲೆ ಹಲ್ಲೆ; ಲಾರಿ ಚಾಲಕ, ಕ್ಲೀನರ್ ಬಂಧನ

Published

on

ಬಂಟ್ವಾಳ: ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಸೇರಿಕೊಂಡು ಟೋಲ್ ಗೇಟ್ ಗೆ ಹಾನಿ ಮಾಡಿ ಸಿಬಂದಿಗೆ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದ್ದು, ಘಟನೆಗೆ ಸಂಬಂಧಿಸಿ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಮೂಲದ ಲಾರಿ ಚಾಲಕ ಭರತ್ (23) ಮತ್ತು ಕ್ಲೀನರ್ ತೇಜಸ್ (26) ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಟೋಲ್ ಮೇಲ್ವಿಚಾರಕ ಕಾಸರಗೋಡಿನ ಮುಳ್ಳೇರಿಯಾ ನಿವಾಸಿ ಪ್ರಶಾಂತ್ ಬಿ. ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳು ಸೋಮವಾರ ಮುಂಜಾನೆ ಟಾಟಾ ಲಾರಿಯಲ್ಲಿ ಟೋಲ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದಿದ್ದು, ಟೋಲ್ ಸಿಬಂದಿ ಹಣ ಕೇಳಿದಾಗ ಲಾರಿಯನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಟೋಲ್ ಗೇಟ್ ಗೆ ಹಾನಿ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡು| ಕಾರ್ಮಿಕನ ಮೇಲೆ ಭೀಕರವಾಗಿ ಹಲ್ಲೆ ಗೈದ ಅಪ್ರಾಪ್ತ ವಯಸ್ಕರು

ಬಳಿಕ ಚಾಲಕ ಹಾಗೂ ಕ್ಲೀನರ್ ಟೋಲ್ ಸಿಬಂದಿ ಅಂಕಿತ್ ಮತ್ತು ರೋಹಿತ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಬಳಿಕ ಇನ್ನೊಂದು ಪಿಕ್ ಅಪ್ ವಾಹನದಲ್ಲಿದ್ದ ಇಬ್ಬರನ್ನು ಕರೆದುಕೊಂಡು ಟೋಲ್ ಬೂತ್ ಗೆ ಅಕ್ರಮವಾಗಿ ಪ್ರವೇಶಿಸಿ ಮತ್ತೆ ಸಿಬಂದಿಗೆ ಹಲ್ಲೆ ನಡೆಸಿರುತ್ತಾರೆ.

ಈ ಕುರಿತ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Continue Reading

BANTWAL

ಬಂಟ್ವಾಳ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯೊಳಗೆ ಪತ್ತೆ

Published

on

ಬಂಟ್ವಾಳ: ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕಲ್ಲಮಜಲು-ಸೆರ್ಕಳ ರಸ್ತೆಯ ವಾಸವ್ಯವಿಲ್ಲದ ದಿ.ಬಟ್ಯ ನಾಯ್ಕರ ಮನೆಯ ಬಾವಿಯೊಳಗೆ ಪುರುಷನ ಮೃತದೇಹ ಪತ್ತೆಯಾಗಿತ್ತು. ಇದು ಹಲವು ಸಮಯಗಳ ಹಿಂದೆ ನಾಪತ್ತೆಯಾಗಿದ್ದ ಕೊಳ್ನಾಡು ನಿವಾಸಿ ಪೂವಪ್ಪ ಪೂಜಾರಿ ಅವರ ಶವ ಎಂದು ಗುರುತು ಪತ್ತೆಹಚ್ಚಲಾಗಿದೆ.

ಸ್ಥಳೀಯರಿಗೆ ದುರ್ವಾಸನೆ ಬಂದ ಕಾರಣ ಹುಡುಕಾಡಿದಾಗ ವಾಸ್ತವ್ಯವಿಲ್ಲದ ಪಾಳು ಬಿದ್ದ ಮನೆಯಂಗಳದ ಬಾವಿಯಲ್ಲಿ ಶವ ಕಂಡುಬಂದಿತ್ತು. ತಕ್ಷಣವೇ ಸ್ಥಳೀಯರು ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಮುರಳೀಧರ ವಿಟ್ಲ ನೇತೃತ್ವದ “ಫ್ರೆಂಡ್ಸ್ ವಿಟ್ಲ” ತಂಡದವರು ಸ್ಥಳಕ್ಕಾಗಮಿಸಿ 57 ಅಡಿ ಆಳದ ಬಾವಿಯೊಳಗೆ ಇದ್ದ ಶವ ಮೇಲಕ್ಕೆತ್ತಿದ್ದಾರೆ.

ಇದನ್ನೂ ಓದಿ: ಮದ್ವೆಯಾಗು ಅಂದಿದಕ್ಕೆ ಪ್ರೇಯಸಿಯ ಕತ್ತು ಕೊಯ್ದು ಹತ್ಯೆ ಮಾಡಿದ ಪ್ರಿಯಕರ!

ಫ್ರೆಂಡ್ಸ್ ವಿಟ್ಲ ತಂಡದ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದು ಸ್ಥಳೀಯರು ಸಹಕಾರ ನೀಡಿದ್ದಾರೆ. ಪೂವಪ್ಪ ಪೂಜಾರಿ ಆತ್ಮಹತ್ಯೆ ಬಗ್ಗೆ ಪತ್ನಿ ಸುಶೀಲಾ ಎಂಬವರು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page