Connect with us

LATEST NEWS

IND vs ZIM: ಸೂರ್ಯ ಪಡೆಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ! ಅಮೆರಿಕದ ʼಡ್ಯೂ ಕ್ಯೂರ್‌ʼ ಮೊರೆ ಹೋಗಿದ್ದೇಕೆ ಟೀಮ್‌ ಇಂಡಿಯಾ?

Published

on

ಚೆನ್ನೈ: ಟಿ20 ವಿಶ್ವಕಪ್‌ನ ಸೂಪರ್‌-8 ಪಂದ್ಯದಲ್ಲಿ ಸೌತ್‌ ಆಫ್ರಿಕಾ ಎದುರು ಸೋತಿರುವ ಭಾರತ ತಂಡಕ್ಕೆ ಇಂದು ಝಿಂಬಾಬ್ವೆ ಸವಾಲು ಎದುರಾಗಲಿದೆ. ಹೀಗಾಗಿ ಟೀಮ್‌ ಇಂಡಿಯಾಗೆ ಇಂದಿನ ಪಂದ್ಯ ಮಾಡು ಇಲ್ಲವೆ ಮಡಿ ಎಂಬಂತಾಗಿದೆ. ಇನ್ನು ಪಂದ್ಯ ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಎರಡೂ ತಂಡದ ಆಟಗಾರರು ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಇದರ ನಡುವೆ ಟೀಮ್‌ ಇಂಡಿಯಾ ಅಮೆರಿಕದ ‘ಡ್ಯೂ ಕ್ಯೂರ್‌’ ಮೋರೆ ಹೋಗಿದ್ದೇಕೆ ಎಂಬ ಪ್ರಶ್ನೆಗಳೆದ್ದಿವೆ.

ಹೌದು.. ಇಂದು ನಡೆಯಲಿರುವ ಟಿ20 ವಿಶ್ವಕಪ್‌ನ ಸೂಪರ್‌-8 ಪಂದ್ಯದಲ್ಲಿ ಭಾರತ ತಂಡ ಝಿಂಬಾಬ್ವೆ ವಿರುದ್ದ ಕಣಕ್ಕಿಳಿಯಲಿದೆ. ಚೆನ್ನೈನ ಚೆಪಾಕ್‌ ಅಂಗಳದಲ್ಲಿ ಇಂದು ನಿರ್ಣಾಯಕ ಪಂದ್ಯ ನಡೆಯಲಿದೆ. ಇಲ್ಲಿ ಸೂರ್ಯ ಪಡೆಗೆ ಕೇವಲ ಗೆಲುವಷ್ಟೇ ಸಾಲದು, ಬೃಹತ್‌ ಗೆಲುವಿನ ಅಗತ್ಯವಿದೆ.

ಪಾತಾಳಕ್ಕೆ ಕುಸಿದಿರುವ ರನ್‌ರೇಟ್‌ ಹೆಚ್ಚಿಸಿಕೊಳ್ಳಬೇಕಿರೋದು ಟೀಮ್‌ ಇಂಡಿಯಾ ಮುಂದಿರೋ ಮೊದಲ ಟಾರ್ಗೆಟ್.‌ ಅದಕ್ಕೆ ಝಿಂಬಾಬ್ವೆ ವಿರುದ್ದದ ಪಂದ್ಯಕ್ಕಿಂತ ಬೆಸ್ಟ್‌ ಅವಕಾಶ ಮತ್ತೊಂದಿಲ್ಲ. ಝಿಂಬಾಬ್ವೆ ವಿರುದ್ದ ಪಕ್ಕಾ ಪ್ಲ್ಯಾನಿಂಗ್‌ನೊಂದಿಗೆ ಕಣಕ್ಕಿಳಿದ್ರೆ ಗೆಲುವಿನ ಜೊತೆಗೆ ರನ್‌ರೇಟ್‌ ಕೂಡ ಹೆಚ್ಚಿಸಿಕೊಳ್ಳಬಹುದು.

ಭಾರತಕ್ಕೆ ಭಾರೀ ಅಂತರದ ಜಯ!
ಭಾರತಕ್ಕೆ ನೆಟ್‌ ರನ್‌ ರೇಟ್‌ ಹೆಚ್ಚಿಸಬೇಕಿರುವುದು ಮೊದಲ ತುರ್ತು ಅಗತ್ಯ. ಇದೀಗ 3.800 ಆಗಿದೆ. ಇದು ಪ್ಲಸ್‌, ಅಂದರೆ 0.001 ಆಗಬೇಕಾದರೆ ಝಿಂಬಾಬ್ವೆಯನ್ನು ಭಾರೀ ಅಂತರದಿಂದ ಮಣಿಸಬೇಕಾದುದು ಅಗತ್ಯ. ಹೀಗಾಗಿ ಭಾರತ ಝಿಂಬಾಬ್ವೆ ಎದುರು ಭಾರೀ ಅಂತರದ ಗೆಲುವು ಸಾಧಿಸಬೇಕು.

‘ಡ್ಯೂ ಕ್ಯೂರ್‌’ ಮೊರೆ ಹೋದ ಟೀಮ್‌ ಇಂಡಿಯಾ?
ಭಾರತ ಮತ್ತು ಝಿಂಬಾಬ್ವೆ ನಡುವಿನ ನಿರ್ಣಾಯಕ ಪಂದ್ಯಕ್ಕಾಗಿ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಇಬ್ಬನಿಯನ್ನು ತಡೆಗಟ್ಟಲು “ಡ್ಯೂ ಕ್ಯೂರ್”‌ ಎಂಬ ವಿಶೇಷ ರಾಸಾಯನಿಕವನ್ನು ಬಳಸಲಾಗಿದೆ. ಪಂದ್ಯದ ವೇಳೆ ಎದುರಾಗುವ ಇಬ್ಬನಿ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿ ಈ ರಾಸಾಯನಿಕವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ.

“ಡ್ಯೂ ಕ್ಯೂರ್” ಕೆಮಿಕಲ್​ ಅನ್ನು ಸಾಮಾನ್ಯವಾಗಿ ಅಮೆರಿಕದ ಮೇಜರ್ ಲೀಗ್ ಬೇಸ್‌ಬಾಲ್ ಪಂದ್ಯಗಳಲ್ಲಿ ಮೈದಾನವನ್ನು ಒಣಗಿಸಲು ಬಳಸಲಾಗುತ್ತದೆ. ಇದೀಗ ಇದೇ ವಿಶೇಷ ರಾಸಾಯನಿಕವನ್ನು ಚೆನ್ನೈನ ಚೆಪಾಕ್ ಮೈದಾನಕ್ಕೆ ಸಿಂಪಡಿಸಲಾಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ಕಿಂಗ್‌ ಕೊಹ್ಲಿ ದಾಖಲೆ ಮುರಿದ 22 ವರ್ಷದ ಯುವ ದಾಂಡಿಗ!

ಆಟದ ಸಮಯದಲ್ಲಿ ತೇವಾಂಶದ ಮಟ್ಟವು ಶೇಕಡಾ 80 ರಿಂದ 90ರ ನಡುವೆ ಇರುತ್ತದೆ ಎಂದು ಊಹಿಸಲಾಗಿದೆ. ಇದರರ್ಥ ಎರಡನೇ ಇನ್ನಿಂಗ್ಸ್‌ನ ಅರ್ಧ ದಾರಿಯ ವೇಳೆಗೆ ಔಟ್‌ಫೀಲ್ಡ್‌ ಸುಗಮವಾಗಿ ತಿರುಗಬಹುದು ಮತ್ತು ಚೆಂಡು ತೇವವಾಗಬಹುದು. ಸಾಂಪ್ರಾದಾಯಿಕವಾಗಿ, ಚೆಪಾಕ್‌ ಸ್ಪಿನ್ನರ್‌ಗಳು ಹಿಡಿತ ಸಾಧಿಸುವ ಮೇಲ್ಮೈ ಹೊಂದಿದೆ.

ಇನ್ನೊಂದೆಡೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಒಟ್ಟು 6 ಪಂದ್ಯಗಳನ್ನಾಡಲಾಗಿದೆ. ಈ ಪಂದ್ಯಗಳ ವೇಳೆ ಒಮ್ಮೆಯೂ “ಡ್ಯೂ ಕ್ಯೂರ್”‌ ಬಳಸಲಾಗಿಲ್ಲ. ಆದರೆ ಭಾರತ ತಂಡದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾಗೆ ಅನುಕೂಲವಾಗಲೆಂದೇ “ಡ್ಯೂ ಕ್ಯೂರ್”‌ ಬಳಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

LATEST NEWS

ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

Published

on

ಹುಬ್ಬಳ್ಳಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ನೀರಿನ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.


ಮೃತಪಟ್ಟ ವಿದ್ಯಾರ್ಥಿಗಳನ್ನು ಸಮರ್ಥ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಪನಕೊಪ್ಪದ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು ಎನ್ನಲಾಗಿದೆ.

ಬೇಸಿಗೆಯ ಸೆಕೆ ತಾಳಲಾರದೆ ತಂಪಾಗಲು ಇಬ್ಬರು ಸ್ನೇಹಿತರು ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ತೆರಳಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಮನೆಗೆ ಮರುಳಲಿಲ್ಲ. ಆ ವೇಳೆ ಇಬ್ಬರು ಹೊಂಡದಲ್ಲಿ ಬಿದ್ದಿರೋದನ್ನು ಗಮನಿಸಿದ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ. ಘಟನನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Continue Reading

LATEST NEWS

ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

Published

on

ಶಿವಮೊಗ್ಗ: ಮದುವೆ ಸಮಾರಂಭಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.


ಬುರ್ಖಾ ಧರಿಸಿ, ವ್ಯಾನಿಟಿ ಬ್ಯಾಗ್ ಹಿಡಿದು ಗಪ್‌ಚುಪ್ ಆಗಿ ಚಿನ್ನಾಭರಣ ಎಗರಿಸುತ್ತಿದ್ದ ರುಕ್ಸಾರ್ ಫಿರ್ದೋಸ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಪ್ರಸಿದ್ಧ ‘ಶಾದಿ ಮಹಲ್’ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕಳ್ಳತನ ವರದಿಯಾಗುತ್ತಿದ್ದು, ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್‌ನಲ್ಲಿ ಇಡುವುದನ್ನೇ ಸಂಚು ಹೂಡಿ ಕಾಯುತ್ತಿದ್ದ ಈ ಮಹಿಳೆ, ಕ್ಷಣಾರ್ಧದಲ್ಲಿ ಅವುಗಳನ್ನು ಎಗರಿಸಿ ಪರಾರಿಯಾಗುತ್ತಿದ್ದಳು.

ಕಳೆದ ಒಂದು ತಿಂಗಳ ಹಿಂದೆ ನಡೆದ ಮದುವೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಹಗಲಿರುಳು ಪರಿಶೀಲಿಸಿದಾಗ, ಆಕೆಯ ಕೈಯಲ್ಲಿದ್ದ ವಿಶಿಷ್ಟವಾದ ವ್ಯಾನಿಟಿ ಬ್ಯಾಗ್ ಕಳ್ಳಿಯನ್ನು ಪತ್ತೆಹಚ್ಚಲು ಪ್ರಮುಖ ಸುಳಿವು ನೀಡಿತು.

ಇದನ್ನೂ ಓದಿ: ಗ್ಯಾಸ್ ಟ್ರಬಲ್: ಚನ್ನಪಟ್ಟಣದ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಕಳವು!

ಇನ್ನು ಬಂಧಿತವಾಗಿರುವ ಕಳ್ಳಿ ರುಕ್ಸಾರ್ 18 ಲಕ್ಷ ರೂ ಮೌಲ್ಯದ ಒಟ್ಟು 120 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ. ಈಕೆಯ ಬಂಧನದಿಂದ 4 ಪ್ರಮುಖ ಕಳ್ಳತನ ಪ್ರಕರಣ ಪತ್ತೆಯಾಗಿವೆ. ವಿಚಾರಣೆ ವೇಳೆ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.

ಈ ಹಿಂದೆ ಕೆಲವು ಮದುವೆ ಮನೆಗಳಲ್ಲಿ ಕಳ್ಳತನ ಮಾಡುವಾಗ ಈಕೆ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಳು. ಆದರೆ, ಮಹಿಳೆಯೆಂದು ಅನುಕಂಪ ತೋರಿಸಿದ ಜನರು ವಾರ್ನಿಂಗ್ ಮಾಡಿ ಬಿಟ್ಟು ಕಳಿಸಿದ್ದರು. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ಈ ಕಿಲಾಡಿ ಕಳ್ಳಿ, ತನ್ನ ಕಳ್ಳತನದ ಕಾಯಕವನ್ನು ಮುಂದುವರಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಳು.

Continue Reading

DAKSHINA KANNADA

ರಾಜ್ಯದಲ್ಲಿ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯ; ಕುಕ್ಕೆ ಕ್ಷೇತ್ರಕ್ಕೂ ತಟ್ಟಿದ ಬಿಸಿ.. ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ

Published

on

ಸುಬ್ರಹ್ಮಣ್ಯ: ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ರಾಜ್ಯದಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಇದೀಗ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ಇದರ ಬಿಸಿ ತಟ್ಟಿದೆ.


ಸುಬ್ರಹ್ಮಣ್ಯ ದೇಗುಲದಲ್ಲಿ ಪ್ರತಿದಿನ ಬೆಳಿಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು. ಇದೀಗ ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಇಂದಿನಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಬೇಯಿಸುವ ತಿನಿಸು ಬದಲಾಗಿ ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಗ್ಯಾಸ್ ಪೊರೈಕೆ ಸಂಸ್ಥೆಯವರಿಗೆ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೊರೈಕೆ ಮಾಡಲು ದೇವಸ್ಥಾನದ ವತಿಯಿಂದ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

ಇದರ ನಡುವೆ ಪೊರೈಕೆ ಆಗದೇ ಇದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಬದಲಾವಣೆ ಮಾಡುವುದಿದ್ದಲ್ಲಿ ಈ ಬಗ್ಗೆ ದೇವಸ್ಥಾನದ ವತಿಯಿಂದ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page