Connect with us

FILM

ಪತ್ರ ಬರೆದು ಶಾಕ್ ಕೊಟ್ಟ ಸ್ವೀಟಿ; ಏನಾಯ್ತು ಅನುಷ್ಕಾ ಶೆಟ್ಟಿಗೆ?

Published

on

ಮಂಗಳೂರು/ಹೈದರಾಬಾದ್ : ಖ್ಯಾತ ನಟಿ ಅನುಷ್ಕಾ ಶೆಟ್ಟಿ  ತನ್ನ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೈ ಬರಹದ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಯಾಕೆ ಇಂತಹ ನಿರ್ಧಾರ ತಳೆದರು ಎಂಬುದಾಗಿ  ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಪತ್ರದಲ್ಲಿ ಏನಿದೆ?

ಸಾಮಾನ್ಯವಾಗಿ ಬಹಳಷ್ಟು ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ.  ಆದರೆ, ಅನುಷ್ಕಾ ಶೆಟ್ಟಿ  ಸೋಶಿಯಲ್ ಮೀಡಿಯಾಗಳಿಂದ ಸ್ವಲ್ಪ ದೂರ. ಸಿನಿಮಾ ವಿಚಾರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರಷ್ಟೇ. ಇದೀಗ ಸೋಶಿಯಲ್ ಮೀಡಿಯಾದಿಂದ ದೂರವಾಗುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕೈ ಬರಹದಲ್ಲಿರುವ ಪತ್ರವನ್ನು ಹಂಚಿಕೊಂಡಿರುವ ನಟಿ, ತನ್ನ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.

ನೀಲಿ ಬೆಳಕಿನಿಂದ ಮೇಣದಬತ್ತಿಯ ಬೆಳಕಿಗೆ….ಸಾಮಾಜಿಕ ಮಾಧ್ಯಮದಿಂದ ಸ್ವಲ್ಪ ದೂರ ಸರಿಯುತ್ತಿದ್ದೇನೆ. ಸ್ಕ್ರೋಲಿಂಗ್ ಅನ್ನು ಮೀರಿ. ನಾವೆಲ್ಲರೂ ನಿಜವಾಗಿಯೂ ಪ್ರಾರಂಭಿಸಿದ ಸ್ಥಳಕ್ಕೆ…ಜಗತ್ತಿಗೆ ಮತ್ತು ಕೆಲಸಕ್ಕೆ ಮತ್ತೆ ಸಂಪರ್ಕ ಸಾಧಿಸಲು. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಇನ್ನಷ್ಟು ಕಥೆಗಳು ಮತ್ತು ಹೆಚ್ಚಿನ ಪ್ರೀತಿಯೊಂದಿಗೆ ಭೇಟಿಯಾಗುತ್ತೇನೆ.. ಯಾವಾಗಲೂ ನಗುತ್ತಿರಿ. ಅನುಷ್ಕಾ ಶೆಟ್ಟಿ ಎಂದು ಬರೆದಿದ್ದಾರೆ.

ಅನುಷ್ಕಾ ಪೋಸ್ಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹಲವರು ಅನುಷ್ಕಾ ಆರೋಗ್ಯ ವಿಚಾರಿಸುತ್ತಿದ್ದಾರೆ. ಆದ್ರೆ, ಅನುಷ್ಕಾ ದಿಢೀರ್ ಅಂತ ಈ ನಿರ್ಧಾರ ಯಾಕೆ ತಳೆದರು ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ : ತವರಿಗೆ ಮರಳಿದ ಅನುಶ್ರೀಗೆ ಭರ್ಜರಿ ಸ್ವಾಗತ ನೀಡಿದ ಮಹಾಸಂಗಮ ವೇದಿಕೆ

ಸದ್ಯ ಅನುಷ್ಕಾ ಶೆಟ್ಟಿ ನಟನೆಯ ಘಾಟಿ ಸಿನಿಮಾ ಬಿಡುಗಡೆಗೊಂಡಿದೆ. ವಿಕ್ರಮ್ ಪ್ರಭು ಹಾಗೂ ಅನುಷ್ಕಾ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕ್ರಿಶ್ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಿತ್ತು. ಈ ಚಿತ್ರದ ಪ್ರಮೋಷನ್ ವೇಳೆ ಅನುಷ್ಕಾ ಸೋಶಿಯಲ್  ಮೀಡಿಯಾದಲ್ಲಿ ಸಕ್ರಿಯರಾಗಿದ್ದರು.

FILM

ತೆರೆಗೆ ಬರಲು ಸಿದ್ಧವಾಯ್ತು ‘ಪಿಲಿಪಂಜ’; ಇಂದು ನಡೆಯಲಿದೆ ಪ್ರಥಮ ಪ್ರೀಮಿಯರ್ ಶೋ!

Published

on

ಮಂಗಳೂರು : ಬಹುನಿರೀಕ್ಷಿತ ‘ಪಿಲಿ ಪಂಜ’ ತುಳು ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಪ್ರಥಮ ಪ್ರೀಮಿಯರ್ ಶೋ ಇಂದು(ಡಿ.6) ಸಂಜೆ 7 ಗಂಟೆಗೆ ಪುತ್ತೂರಿನ ಭಾರತ್ ಸಿನೆಮಾದಲ್ಲಿ ನಡೆಯಲಿದೆ.

ಪ್ರತೀಕ್ ಯು. ಪೂಜಾರಿ ಕಾವೂರು ನಿರ್ಮಾಣದ ಪಿಲಿಪಂಜ ಚಿತ್ರಕ್ಕೆ ಭರತ್ ಶೆಟ್ಟಿ ನಿರ್ದೇಶನವಿದೆ. ರಮೇಶ್‌ ರೈ ಕುಕ್ಕುವಳ್ಳಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಎಸ್.ಬಿ. ಗ್ರೂಪ್‌ ಪ್ರಸ್ತುತ ಪಡಿಸುವ ಶಿಯಾನಾ ಪ್ರೊಡಕ್ಷನ್ ಹೌಸ್ ನಿರ್ಮಾಣದ ಈ ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವ ಪ್ರಕಾಶ್ ಪೂಂಜಾ ಹರೇಕಳ,  ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು, ಭಾಸ್ಕರ ಮಣಿಪಾಲ, ರೂಪಾ ವರ್ಕಾಡಿ, ಜಯಶೀಲ ಮೊದಲಾದವರು ಪಾತ್ರವಾಗಿದ್ದಾರೆ.

ಇದನ್ನೂ ಓದಿ : ಆ ಐಷಾರಾಮಿ ಮನೆಯಲ್ಲಿ ನಾಲ್ಕು ಸಾ*ವು…ಒಂದೂವರೆ ವರ್ಷದಲ್ಲಿ ಸರಣಿ ಆ*ತ್ಮಹ*ತ್ಯೆ!

ಉದಯ್ ಬಳ್ಳಾಲ್ ಕ್ಯಾಮರಾ ವರ್ಕ್, ಎಲ್ ವಿ ಯಸ್ ಸಂಗೀತ, ಶ್ರೀನಾಥ್ ಪವಾರ್ ಸಂಕಲನ ಚಿತ್ರಕ್ಕಿದೆ. ಅಂದಹಾಗೆ,  ಡಿ. 12 ರಂದು ಚಿತ್ರ ತೆರೆಗಪ್ಪಳಿಸಲಿದೆ.

Continue Reading

FILM

ರಾಜ್ಯದಾದ್ಯಂತ ಡೆವಿಲ್ ಚಿತ್ರದ ಟ್ರೇಲರ್‌ ಔಟ್‌; ಗಿಲ್ಲಿ ಖಡಕ್‌ ಡೈಲಾಗ್‌

Published

on

ಮಿಲನ ಪ್ರಕಾಶ್‌ ನಿರ್ದೇಶನದ, ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಟ್ರೇಲರ್‌ ಇಂದು (ಡಿ.5)ಬೆಳಿಗ್ಗೆ 10.05 ಕ್ಕೆ ರಿಲೀಸ್‌ ಆಗಿದ್ದು, ಭಾರೀ ಮೆಚ್ಚುಗೆಯನ್ನು ಪಡೆದಿದೆ. ಈ ಟ್ರೇಲರ್‌ನಲ್ಲಿ ದರ್ಶನ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

ಬಿಗ್‌ಬಾಸ್‌ನಲ್ಲಿರೋ ಗಿಲ್ಲಿ ನಟ ಕೂಡ ಡೆವಿಲ್‌ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್‌ನಲ್ಲಿ ಗಿಲ್ಲಿ ಅವರ ಪಾತ್ರದ ಝಲಕ್‌ ತೋರಿಸಲಾಗಿದೆ. ಟ್ರೇಲರ್‌ನಲ್ಲಿ ತೋರಿಸಲಾದ ಒಂದು ಡೈಲಾಗ್‌ಗೆ ಮತ್ತು ಅವರ ಗೆಟಪ್ ನೋಡಿ ಫ್ಯಾನ್ಸ್‌ ಫುಲ್‌ ಖುಷಿಪಟ್ಟಿದ್ದಾರೆ.


ಖಡಕ್‌ ಲುಕ್‌ನಲ್ಲಿ ಪೊಲೀಸ್‌ ಠಾಣೆಗೆ ಬಂದು ಪೊಲೀಸ್‌ ಅಧಿಕಾರಿ ಮುಂದೆ ಕಾಲ್ಮೇಲೆ ಕಾಲಾಕಿ ಕೂತು, ‘ಎಕ್ಸ್‌ಕ್ಯೂಸ್‌ ಮೀ ಪಿಸಿ, ಎಸಿ ಹಾಕಮ್ಮ. ಲಾಟ್ಸ್‌ ಆಫ್‌ ಸೆಖೆ’ ಎಂದು ಡೈಲಾಗ್‌ ಹೊಡೆಯುತ್ತಾರೆ. ಸಿನಿಮಾದಲ್ಲಿ ಅವರ ಪಾತ್ರ ಎಷ್ಟು ಹೊತ್ತು ಇರುತ್ತದೆ ಎಂಬ ಕುತೂಹಲ ಇದೆ.

 

ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ಗೆ ಜತೆಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಮಹೇಶ್‌ ಮಂಜ್ರೇಕರ್‌, ಅಚ್ಯುತ್‌ ಕುಮಾರ್‌, ಶರ್ಮಿಳಾ ಮಾಂಡ್ರೆ ಮೊದಲಾದವರಿದ್ದಾರೆ. ಶೋಭರಾಜ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಡಿದ್ದಾರೆ. ಬಿಗ್‌ಬಾಸ್‌ ಖ್ಯಾತಿಯ ವಿನಯ್‌ ಗೌಡ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

 

ಇದನ್ನೂ ಓದಿ: ಡೆವಿಲ್ ಸಿನಿಮಾ ಸೆಟ್‌ನಲ್ಲಿ ಮರೆಯಲಾಗದ ಕ್ಷಣಗಳು ಇವು : ಚಂದು ಗೌಡ ಪೋಸ್ಟ್

 

ಡಿಸೆಂಬರ್ 11ರಂದು ಡೆವಿಲ್‌ ಸಿನಿಮಾ ರಾಜ್ಯಾದಾದ್ಯಂತ ಬಿಡುಗಡೆ ಆಗಲಿದೆ. ದರ್ಶನ್‌ ಜೈಲಿನಲ್ಲಿ ಇರುವಾಗಲೇ ಡೆವಿಲ್‌ ಸಿನಿಮಾ ತೆರೆಗೆ ಬರುತ್ತಿದೆ. ಎಲ್ಲರೂ ಪ್ಯಾನ್‌ ಇಂಡಿಯಾ ಹಿಂದೆ ಓಡುತ್ತಿರುವಾಗ ಡೆವಿಲ್‌ ಕನ್ನಡದಲ್ಲಿ ಮಾತ್ರ ರಿಲೀಸ್‌ ಆಗುತ್ತಿದೆ.

Continue Reading

FILM

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ ವತಿಯಿಂದ ಬಾರೆಬೈಲ್‌ನಲ್ಲಿ ಹರಕೆ ನೇಮೋತ್ಸವ

Published

on

ಮಂಗಳೂರು: ಕಾಂತಾರ-1 ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡದಿಂದ ಗುರುವಾರ ರಾತ್ರಿ ಹರಕೆಯ ಕೋಲ ಸಮರ್ಪಿಸಲಾಯಿತು.

ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನೆರವೇರಿತು. ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ ವತಿಯಿಂದ ಹರಕೆ ನೇಮೋತ್ಸವ ಆಯೋಜನೆಗೊಂಡಿತ್ತು.

 

ಪತ್ನಿ ಮಕ್ಕಳ ಜತೆಗೆ ರಿಷಬ್ ಶೆಟ್ಟಿ ಭಾಗವಹಿಸಿದರು. ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸಿದ್ದರು.

 

ಕಳೆದ ಏಪ್ರಿಲ್ ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬ ಭಾಗವಹಿಸಿತ್ತು. ಗುರುವಾರ ಅದೇ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ಸಲ್ಲಿಸಲಾಯಿತು.

Continue Reading
Advertisement

Trending

Copyright © 2025 Namma Kudla News

You cannot copy content of this page