Connect with us

LATEST NEWS

ರಸ್ತೆ ವಿಭಜಕಕ್ಕೆ ಎಸ್ ಯುವಿ ಡಿ*ಕ್ಕಿ; 5 ಮಂದಿ ಸಾ*ವು

Published

on

ಮಂಗಳೂರು/ಪಂಜಾಬ್ : ರಸ್ತೆ ವಿಭಜಕಕ್ಕೆ ಎಸ್‌ ಯುವಿ  ಡಿ*ಕ್ಕಿಯಾದ ಪರಿಣಾಮ 5 ಮಂದಿ ಸಾ*ವನ್ನಪ್ಪಿರುವ ಘಟನೆ ಪಂಜಾಬ್‌ ನ ಬಟಿಂಡಾದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯ ಗುರ್ತಾರಿ ಗ್ರಾಮದ ಬಳಿ ಈ ದುರಂ*ತ ಸಂಭವಿಸಿದ್ದು, ಮೃ*ತರಲ್ಲಿ ಒಬ್ಬ ಮಹಿಳಾ ಕಾನ್‌ ಸ್ಟೇಬಲ್ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಎಲಿಮಿನೇಷನ್ ಬೆನ್ನಲ್ಲೇ ಹೊಸ ಪ್ಲ್ಯಾನ್ ರಿವೀಲ್ ಮಾಡಿದ ಧ್ರುವಂತ್

ಮೃ*ತರೆಲ್ಲರೂ ಗುಜರಾತ್ ನಿವಾಸಿಗಳಾಗಿದ್ದು, ಪಂಜಾಬ್‌ಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಅಪ*ಘಾತದ ತೀವ್ರತೆಗೆ ಎಸ್ ಯು ವಿಗೆ ಸಂಪೂರ್ಣ ಹಾ*ನಿಯಾಗಿದೆ. ದಟ್ಟವಾದ ಮಂಜು ಅಪ*ಘಾತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.

DAKSHINA KANNADA

ಬಂಟ್ವಾಳ : ಹುಲ್ಲಿನಿಂದಾವೃತ ಜಾಗದಲ್ಲಿ ಆಕಸ್ಮಿಕ ಬೆಂ*ಕಿ

Published

on

ಬಂಟ್ವಾಳ : ಹುಲ್ಲಿನಿಂದಾವೃತವಾದ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಖಾಸಗಿ  ಜಾಗವೊಂದರಲ್ಲಿ ಅ*ಗ್ನಿ ಆಕಸ್ಮಿಕ ಸಂಭವಿಸಿದ್ದು, ಸಮೀಪದ ಸಂಚಯಗಿರಿಯವರೆಗೂ ವ್ಯಾಪಿಸಿತು.

ಹುಲ್ಲಿನಿಂದಾವೃತ ಜಾಗದಲ್ಲಿ ಬೆಂ*ಕಿ ಕಾಣಿಸಿಕೊಂಡಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಕೂಡಲೇ ಸ್ಥಳೀಯರು ಬಂಟ್ವಾಳದ ಅ*ಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ಈ ವೇಳೆ ಬಂಟ್ವಾಳದಲ್ಲಿದ್ದ ಏಕೈಕ ಅ*ಗ್ನಿಶಾಮಕ ವಾಹನ ಮಂಚಿಗೆ ಕರೆಯೊಂದರ ಮೇಲೆ ತೆರಳಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ವಾಹನ ಆಗಮಿಸಿದ್ದು, ಅಷ್ಟರಲ್ಲಾಗಲೇ ಸ್ಥಳೀಯರು ನಂದಿಸುವ ಕಾರ್ಯ ಆರಂಭಿಸಿದ್ದರು.

ಈ ಜಾಗದ ಹಿಂಭಾಗ ಸಂಚಯಗಿರಿ ಬಡಾವಣೆ ಇದ್ದು, ಇಲ್ಲಿಯೂ ಕೆಲ ಭಾಗಕ್ಕೆ ಬೆಂ*ಕಿ ವ್ಯಾಪಿಸಿತ್ತು. ಗ್ರಾಮ ಆಡಳಿತಾಧಿಕಾರಿ ಯಶ್ವಿತಾ, ಸಿಬ್ಬಂದಿ ಸದಾಶಿವ ಕೈಕಂಬ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಜಾಗ ಖರೀದಿಸಿ ಖಾಲಿ ಬಿಟ್ಟುಬಿಡುವವರು ಜಾಗದಲ್ಲಿ ಹುಲ್ಲು ಬೆಳೆದು ಸಮೀಪದವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ, ಅಗ್ನಿ ಆಕಸ್ಮಿಕದ ಸಂದರ್ಭ ಸ್ಥಳೀಯರು ಹರಸಾಹಸಪಡಬೇಕಾಗುತ್ತದೆ. ಈ ಕುರಿತು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಈ ಸಂದರ್ಭ ಒತ್ತಾಯಿಸಿದರು.

Continue Reading

LATEST NEWS

ಮಗನೇ ಹೋದ ಮೇಲೆ ಕಾರು ಯಾಕೆ? 6 ಕೋಟಿಯ BMW ಸಮಾಧಿ ಮಾಡಿದ ತಂದೆ!

Published

on

ಮಾಸ್ಕೋ: ಮಗನ ಅಗಲಿಕೆಯ ದುಃಖವನ್ನು ತಾಳಲಾರದೆ, ಅಹಮದಾಬಾದ್‌ನ ತಂದೆಯೊಬ್ಬರು ಮಗನ ನೆನಪಿಗಾಗಿ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ BMW ಕಾರನ್ನು ಸಮಾಧಿ ಮಾಡಿದ್ದಾರೆ.


ತಂದೆಯು ಮಗನ ಹುಟ್ಟುಹಬ್ಬದ ಅಂಗವಾಗಿ ಈ ಐಷಾರಾಮಿ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಕಾರು ಖರೀದಿಸಿದ ಕೆಲವೇ ದಿನಗಳಲ್ಲಿ ಮಗ ಅಕಾಲಿಕ ಮರಣಕ್ಕೀಡಾದನು. ಇದರ ಪರಿಣಾಮ ಮಗ ಸಮಾಧಿ ಪಕ್ಕದಲ್ಲೇ ಹೊಸ BMW ಕಾರನ್ನು ಸಮಾಧಿ ಮಾಡಿದ ವೀಡಿಯೋ ವೈರಲ್‌ ಆಗುತ್ತಿದೆ.

ಮಗನೇ ಇಲ್ಲದ ಮೇಲೆ ಈ ಕಾರು ಏಕೆ ಎಂದು ನೊಂದ ತಂದೆ, ಅದನ್ನು ಗುಂಡಿ ತೋಡಿ ಸಮಾಧಿ ಮಾಡುವ ನಿರ್ಧಾರ ಮಾಡಿದರು. ಜೆಸಿಬಿ ಮೂಲಕ ಗುಂಡಿ ತೋಡಿ, ಬೆಲೆಬಾಳುವ ಕಾರನ್ನು ಮಗನ ಸಮಾಧಿಯ ಪಕ್ಕದಲ್ಲೇ ಹೂಳುತ್ತಿರುವ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಪತ್ನಿ ತವರು ಮನೆಯಿಂದ ಬಂದಿಲ್ಲ ಎಂದು ಮಾವನನ್ನೇ ಕೊಂದ ಅಳಿಯ!

ಈ ಘಟನೆಗೆ ಸಂಬಂಧಿಸಿದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಇದು ತಂದೆಯ ಪ್ರೀತಿಯ ಸಂಕೇತ ಎಂದರೆ, ಮತ್ತೆ ಕೆಲವರು ಹಣವನ್ನು ದಾನ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Continue Reading

LATEST NEWS

ಕಾರಿನಲ್ಲಿ ಪತ್ತೆಯಾಯ್ತು ಪ್ರೇಮಿಗಳ ಶ*ವ!

Published

on

ಉತ್ತರ ಪ್ರದೇಶ/ಮಂಗಳೂರು : ಪ್ರೇಮಿಗಳ ದಿನದಂದೇ ದುರಂ*ತವೊಂದು ನಡೆದಿದೆ. ಕಾರಿನಲ್ಲಿ ಪ್ರೇಮಿಗಳ ಶ*ವ ಪತ್ತೆಯಾಗಿದೆ. ಈ ಘಟನೆ ನಡೆದಿರೋದು  ಉತ್ತರ ಪ್ರದೇಶದ ನೋಯ್ಡಾದಲ್ಲಿ. ಶೂಟ್ ಮಾಡಿಕೊಂಡು ಪ್ರೇಮಿಗಳು ಕಾರಿನಲ್ಲೇ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಿಲ್ಲಿಸಿದ್ದ ಕಾರಿನಲ್ಲಿ ಇಬ್ಬರ ಮೃ*ತದೇಹಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದು, ಇಬ್ಬರೂ ಗುಂಡು ಹಾ*ರಿಸಿಕೊಂಡು ಮೃ*ತಪಟ್ಟಿರುವುದು ದೃಢವಾಗಿದೆ.

ಇಬ್ಬರಿಗೂ ಗುಂ*ಡೇಟಿನ ಗಾ*ಯಗಳಾಗಿದ್ದು, ಮೃ*ತ ಯುವಕನ ಕೈಯಲ್ಲಿ ಪಿಸ್ತೂಲ್ ಪತ್ತೆಯಾಗಿದೆ. ಯುವಕ ಮೊದಲು ಯುವತಿಗೆ ಗುಂ* ಡು ಹಾ*ರಿಸಿ, ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page