Connect with us

BIG BOSS

ರಕ್ಷಿತಾ ವರ್ತನೆಗೆ ಸುದೀಪ್ ಆಕ್ರೋಶ: ‘ವಾರದ ಕಥೆ’ಯಲ್ಲಿ ಹೊರಬಂತು ಖಡಕ್ ಎಚ್ಚರಿಕೆ!

Published

on

BBK12: ಬಿಗ್‌ಬಾಸ್‌ ಮನೆಯ ಕೊನೆಯ ಪಂಚಾಯಿತಿಯ ಪ್ರೋಮೋವೊಂದನ್ನು ವಾಹಿನಿಯು ರಿಲೀಸ್‌ ಮಾಡಿದೆ. ಗಿಲ್ಲಿ, ರಘು ಜತೆ ಬೇರೆಯವರು ಕ್ಲೋಸ್‌ ಆದರೆ ನಿಮಗೆ ಆಗೋದಿಲ್ಲ ಎಂದು ಸುದೀಪ್‌ ಕೇಳಿದರು. ಆ ವೇಳೆ ರಕ್ಷಿತಾ ಶೆಟ್ಟಿ ಸುಮ್ಮನಾದರು.


ಹೌದು, ಈ ಮುಂಚೆ ರಘು ಪಕ್ಕ ರಾಶಿಕಾ ಕೂತಿರುವುದನ್ನು ಕಂಡು ರಕ್ಷಿತಾ, ‘ನೀವು ರಘು ಅಣ್ಣನ ಪಕ್ಕ ಕೂತಿದ್ದಾರೆ, ಅವರಿಗೆ ಅನ್‌ಕಂಫರ್ಟೇಬಲ್‌ ಫಿಲ್‌ ಆಗ್ತಿದೆ’ ಎಂದು ಹೇಳಿದ್ದರು. ಈ ವಿಚಾರಕ್ಕೆ ರಾಶಿಕಾ ಜತೆ ರಕ್ಷಿತಾ ಜಗಳ ಆಡಿದ್ದರು. ಅಷ್ಟೇ ಅಲ್ಲದೇ, ಗಾರ್ಡನ್‌ ಏರಿಯಾದಲ್ಲಿ ಗಿಲ್ಲಿ ನಟ ಸೋಫಾ ಮೇಲೆ ಕೂತಿದ್ದರು. ಅವರ ಜತೆ ಯಾರೂ ಕೂರಬಾರದು ಎಂಬ ಕಾರಣಕ್ಕೆ ಅಲ್ಲೇ ಇದ್ದ ಬೀನ್‌ಬ್ಯಾಗ್‌ಗಳನ್ನು ರಕ್ಷಿತಾ ತೆಗುಕೊಂಡು ಬೇರೆ ಕಡೆ ಇಟ್ಟರು. ಇದೇ ಕಾರಣವನ್ನು ನೀಡಿ ರಾಶಿಕಾ ರಕ್ಷಿತಾಗೆ ಕಳಪೆ ನೀಡಿದ್ದರು.

ರಕ್ಷಿತಾಗೆ ರಘು, ಗಿಲ್ಲಿ ಪಕ್ಕ ಬೆರೆಯವರು ಕೂತರೆ ಅಗೋದಿಲ್ಲ. ಹೀಗಾಗಿ ಕಿಚ್ಚ ಸುದೀಪ್‌ ಪ್ರಶ್ನೆ ಮಾಡಿದ್ದಾರೆ. ‘ಸಂಬಂಧ ಇಟ್ಟುಕೊಂಡು ಮನೆಯನ್ನು ನರಕ ಮಾಡುತ್ತಿದ್ದೇವೆ ಎಂದರೆ…’ ಎಂದು ಸುದೀಪ್‌ ಹೇಳಿದ್ದಾರೆ. ಜತೆಗೆ, ‘ರಘು, ಗಿಲ್ಲಿ, ಹಾಗೂ ನೀವು… ನಿಮ್ಮ ಮೂರು ಜನರಲ್ಲಿ ಯಾರೂ ಗೆಲ್ಲಬೇಕು?’ ಎಂದು ಕೇಳಿದಾಗ ರಕ್ಷಿತಾ ನಾನು ಫಸ್ಟ್‌ ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK12: ಗಿಲ್ಲಿಗಿಂತ ಒಂದು ಹೆಜ್ಜೆ ಮುಂದೆ: ‘ಟಿಕೆಟ್ ಟು ಫಿನಾಲೆ’ ಗೆದ್ದ ಧನುಷ್

ರಕ್ಷಿತಾ ಮನಸ್ಸಲ್ಲಿ ತಾನೇ ಟ್ರೋಫಿ ಗೆಲ್ಲಬೇಕು ಎಂದಿದೆ, ಆದರೆ ರಘು ಮತ್ತು ಗಿಲ್ಲಿ ವಿಷಯದಲ್ಲಿ ತುಂಬಾ ಪೊಸೆಸ್ಸಿವ್‌ ಆಗಿದ್ದಾರೆ ಎಂಬುದು ಕಂಡುಬರುತ್ತಿದೆ.

bangalore

ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಬುಜ್ಜಿ ವಿರುದ್ಧ ಎಫ್‌ಐಆರ್ ದಾಖಲು

Published

on

ಬೆಂಗಳೂರು: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ವಿರುದ್ಧ ಬೆದರಿಕೆ ಮತ್ತು ನಿಂದನೆ ಆರೋಪದಡಿ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರು ನೀಡಿದ ದೂರಿನ ಅನ್ವಯ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 351(2) ಮತ್ತು 352 ಅಡಿ ರಜತ್ (A1) ಮತ್ತು ಕಿರಣ್ (A2) ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ‘ಡಾಗ್’ ಸತೀಶ್ ಜೊತೆಗಿನ ಸ್ನೇಹವನ್ನು ಬಿಡಬೇಕು ಎಂದು ರಜತ್ ಫೋನ್ ಕರೆ ಮತ್ತು ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ದೂರುದಾರರ ಕಾರಿನ ಫೋಟೋ ಕಳಿಸಿ, ‘ಇದು ರಜತ್ ಬುಜ್ಜಿ… ವಾಪಸ್ ಕಾಲ್ ಮಾಡ್ತೀರಾ ಇಲ್ಲ ನಾವೇ ಒಳಗೆ ನುಗ್ಗಬೇಕಾ?” ಎಂದು ಸಂದೇಶ ಕಳಿಸಿರುವುದು ಮತ್ತು ಕಾನ್ಫರೆನ್ಸ್ ಕಾಲ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ದೂರಿನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದ್ವೆ ಬೆನ್ನಲ್ಲೇ ಈ ಫೋಟೋ ಪೋಸ್ಟ್ ಮಾಡಿದ ನಟ ರಕ್ಷಿತ್ ಶೆಟ್ಟಿ..!

ಸದ್ಯ ಕರೆಯಲ್ಲಿ ಮಾತನಾಡಿರೋದು ರಜತ್ ಅಥವಾ ಬೇರೆ ವ್ಯಕ್ತಿ ಎಂಬುವುದರ ಪರಿಶೀಲನೆ ನಡೆಸಲಾಗುತ್ತಿದೆ. ದೂರಿನ ಆಧಾರದ ಮೇಲೆ ರಜತ್ ಮತ್ತು ಕಿರಣ್ ಮೇಲೆ FIR ದಾಖಲು ಮಾಡಿಕೊಂಡಿರುವ ಕೆ.ಆರ್.ಪುರಂ ಪೊಲೀಸರು ಘಟನೆ ಸಂಬಂಧ ವಿಚಾರಣೆಗೆ ಬರುವಂತೆ ರಜತ್ ಹಾಗೂ ಕಿರಣ್ ಎಂಬುವವರಿಗೆ ನೋಟಿಸ್ ನೀಡಿ, ವಿಚಾರಣೆ ಕರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

Continue Reading

BIG BOSS

ಬಿಗ್‌ ಬಾಸ್‌ ವಿನ್ನರ್‌ನ ಅನ್‌ಫಾಲೋ ಮಾಡಿದ ರಘು; ಮೌನ ಮುರಿದ ಗಿಲ್ಲಿ ನಟ

Published

on

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ-ರಘು ಅವರ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. ಹೊರಗಡೆ ಬಂದ ನಂತರವೂ ಅದೇ ಗೆಳೆತನ ಕಂಟಿನ್ಯೂ ಆಗಿತ್ತು. ಇದೀಗ ಇಬ್ಬರ ಸ್ನೇಹದ ನಡುವೆ ಬಿರುಕು ಮೂಡಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣ ರಘು ಅವರು ಈಗ ಗಿಲ್ಲಿಯನ್ನ ಅನ್‌ಫಾಲೋ ಮಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮುಗಿದು ತಿಂಗಳುಗಳೇ ಕಳೆದಿವೆ. ಆದ್ರೂ ಕೂಡಾ ಬಿಗ್‌ ಸ್ಪರ್ಧಿಗಳ ಹವಾ ಮಾತ್ರಾ ಚೂರು ಕಮ್ಮಿ ಆಗಿಲ್ಲ ಎನ್ನಬಹುದು. ಅದರಲ್ಲೂ ವಿಶೇಷವಾಗಿ ಗಿಲ್ಲಿ ನಟನ ಹೆಸರು ಮಾತ್ರಾ ಕೇಳದ ದಿನಗಳೇ ಇಲ್ಲ ಎನ್ನಬಹುದು.

ಹಾಗೆಯೇ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಹಾಗೂ ಕೆಲವು ಸ್ಪರ್ಧಿಗಳ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅದ್ರಲ್ಲಿ ಮ್ಯೂಟೆಂಟ್‌ ರಘು ಹಾಗೂ ಗಿಲ್ಲಿ ನಡುವಿನ ಸ್ನೇಹ ಎಲ್ಲರ ಗಮನ ಸೆಳೆದಿತ್ತು. ಈ ಇಬ್ಬರ ಸ್ನೇಹ ಬಿಗ್‌ ಬಾಸ್‌ ಮಗಿದ ಬಳಿಕವೂ ಮುಂದುವರೆದಿತ್ತು. ಹಲವಾರು ಕಾರ್ಯಕ್ರಮದಲ್ಲಿ ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ವಾ? ಭಿನ್ನಾಭಿಪ್ರಾಯ ಮೂಡಿದ್ಯಾ? ಅಷ್ಟಕ್ಕೂ ಗಿಲ್ಲಿ ಅಕೌಂಟ್‌ ಅನ್ನು ರಘು ಅನ್‌ ಫಾಲೋ ಮಾಡಿದ್ದು ಯಾಕೆ ಎನ್ನುವ ಚರ್ಚೆ ಜೋರಾಗಿದೆ. ಈ ಬಗ್ಗೆ ಸ್ವತಃ ಗಿಲ್ಲಿ ಈಗ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದುವೆ ವಿಚಾರ; ಹೀಗಿತ್ತು ರಿಷಭ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

‘ಅವರು ಏಕೆ ಅನ್​ಫಾಲೋ ಮಾಡಿದ್ರು ಅನ್ನೋದು ನಿಜಕ್ಕೂ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲೇ ಗೊತ್ತಾಗಿದ್ದು. ನಾನು ಸೋಶಿಯಲ್ ಮೀಡಿಯಾ ಬಳಸಲ್ಲ. ಪೋಸ್ಟ್​ ಮಾಡೋದಲ್ಲ ಮಾಡಲ್ಲ. ಅವರು ಫಾಲೋ ಮಾಡಿರ್ತಾರೆ, ನಾನು ಫಾಲೋ ಬ್ಯಾಕ್ ಮಾಡಿಲ್ಲ ಎಂದು ಅನ್​​ಫಾಲೋ ಮಾಡಿರಬಹುದು’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ರಘು ಅವರು ಅವಕಾಶವಾದಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. ‘ರಘು ಅವರು ಮಗುವಿನ ರೀತಿಯ ಮನಸ್ಸು ಹೊಂದಿರುವವರು. ಅವರು ಯಾವಾಗಲೂ ಆ ರೀತಿ ಮಾಡಿದವರಲ್ಲ. ಅವರ ದೇಹಕ್ಕೂ ವೈಕ್ತಿತ್ವಕ್ಕೂ ಸಂಬಂಧವೇ ಇಲ್ಲ’ ಎಂದು ಒಳ್ಳೆಯ ಮಾತನ್ನು ಆಡಿದರು.

Continue Reading

BIG BOSS

ಮುಖವಾಡ ಹೊತ್ತು ಬಂದವರು ದೂರವಾದರು…ಪತಿ ಬಗ್ಗೆ ಚೈತ್ರಾ ಕುಂದಾಪುರ ಪೋಸ್ಟ್

Published

on

ಮಂಗಳೂರು/ಬೆಂಗಳೂರು : ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅಶ್ವಿನಿ ಗೌಡ ಹಾಗೂ ಅವರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ಕೂಡ ನಡೆಯುತ್ತಿದೆ. ಈ ನಡುವೆ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.

ಪತಿ ಬರ್ತ್‌ಡೇ … ವಿಶೇಷ ಪೋಸ್ಟ್…

ಇಂದು(ಫೆ.20) ಚೈತ್ರಾ ಕುಂದಾಪುರ  ಪತಿ ಶ್ರೀಕಾಂತ್ ಕಶ್ಯಪ್‌ರಿಗೆ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಪತಿಯೊಂದಿಗಿನ ಕೆಲವೊಂದು ಅಪೂರ್ವ ಫೋಟೋಗಳ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಜೊತೆಗೆ ತಮ್ಮ 10 ವರ್ಷಗಳ ಪ್ರೀತಿಯ ಬಗ್ಗೆ ಬರೆದುಕೊಂಡು ಪತಿಗೆ ಧನ್ಯವಾದ ತಿಳಿಸಿ, ಶುಭ ಹಾರೈಸಿದ್ದಾರೆ.

ಇದನ್ನೂ ಓದಿ : ಬಾಲಿವುಡ್‌ನ ಖ್ಯಾತ ನಿರ್ದೇಶಕನ ಶ*ವ ಕೊಳೆತ ಸ್ಥಿತಿಯಲ್ಲಿ ಪತ್ತೆ!

ಯೋಚನೆ ನಿರ್ಧಾರ ಒಂದೇ ಆಯಿತು…

ಚೈತ್ರಾ ಕುಂದಾಪುರ ತಮ್ಮ 10 ವರ್ಷಗಳ ಪ್ರೇಮಯಾನವನ್ನು ಬಣ್ಣಿಸಿ ಬರೆದಿದ್ದಾರೆ. 2016 ರಿಂದ ಇವರಿಬ್ಬರ ಒಡನಾಟ ಆರಂಭಗೊಂಡಿತ್ತು. ಅಲ್ಲಿಂದ ಇಲ್ಲಿಯ ವರೆಗಿನ ಜರ್ನಿಯನ್ನು ಅವರು ವಿವರಿಸಿದ್ದಾರೆ.

ಹೀಗೆ ಪ್ರಾರಂಭವಾದ ಸ್ನೇಹ, ಮಾತೇ ಆಡದೆ ಭರವಸೆ ಹುಟ್ಟಿಸಿತು..
ಸಿದ್ಧಾಂತಕ್ಕಾಗಿ ಬಡಿದಾಡುವ ಕೆಚ್ಚು ಕಲಿಸಿತು
ಕೆಲಸ- ಕಲಿಕೆ ಜೊತೆಗೆ ಸಾಗಿತು
ಹೊಸ ಹೆಜ್ಜೆಯನ್ನಿಡುವ ಧೈರ್ಯ ತುಂಬಿತು
ಯೋಚನೆ ನಿರ್ಧಾರ ಒಂದೇ ಆಯಿತು
ಹೋರಾಟದ ಹಾದಿಗೆ ನಮ್ಮನ್ನು ಎಳೆದು ತಂದಿತು
ಕರ್ನಾಟಕದ ಮೂಲೆ ಮೂಲೆಗೂ ಜೊತೆಯಾಗಿ ಸಾಗುವ ಶಕ್ತಿ ನೀಡಿತು
ತಡೆಯಲು ಬಂದ ಶಕ್ತಿಗಳೆಷ್ಟೋ, ಮುರಿಯಲು ನಡೆದ ಪ್ರಯತ್ನ ಗಳೆಷ್ಟೋ ಲೆಕ್ಕವಿಲ್ಲ
ನಾವು ಸಾಗಿದೆವು ಇನ್ನಷ್ಟು ಗಟ್ಟಿಯಾದ ಭರವಸೆಯ ತಳಹದಿಯ ಮೇಲೆ
ಸ್ನೇಹಿತರು, ಹಿತೈಷಿಗಳೆಂಬ ಮುಖವಾಡ ಹೊತ್ತು ಬಂದವರು ದೂರವಾದರು
ಗುರುದೇವರೆಡೆಗಿನ ನಂಬಿಕೆ, ಭಗವಂತನೆಡೆಗಿನ ಶರಣಾಗತಿ ನಮ್ಮನ್ನು ಕಾಯುತ್ತಲೇ ಬಂದಿತು
ಅಪವಾದ, ಅಪಮಾನಗಳ ಮೆಟ್ಟಿ ನಿಲ್ಲಲು ಶಕ್ತಿಯಾದವನಿಗೆ
ನನ್ನೊಳಗಿನ ಶಕ್ತಿ, ನನ್ನ ಕನಸುಗಳ ಒಡೆಯನಿಗೆ,
ಕನಸು ಕಾಣುವ ಹೆಣ್ಣುಮಕ್ಕಳಿಗೆಲ್ಲ ನಾನು ಗಂಡಸು ಎನ್ನುವ ಅಹಮಿಕೆ ಇಲ್ಲದ ನಿನ್ನಂತಹ ಜೊತೆಗಾರ ಸಿಗಲಿ
ದೇವರಂತಹ ಗಂಡನ ಕೊಡು ಎಂದು ಯಾವತ್ತೂ ಕೇಳಿಲ್ಲ, ದೇವರೇ ನನ್ನ ಜೊತೆಗಿರುವ ಖಾತರಿ ನನಗಿದೆಯಲ್ಲ..  ಹುಟ್ಟುಹಬ್ಬದ ಶುಭಾಶಯಗಳು ಮಗಾ… Thank you.. ನನ್ನ ಬದುಕನ್ನ ಆವರಿಸಿಕೊಂಡಿದ್ದಕ್ಕೆ… Thank you ನನ್ನ ಬದುಕು ನೀನೇ ಆಗಿದ್ದಕ್ಕೆ. ಭಗವಂತ ನಿನ್ನೆಲ್ಲ ಆಯುಷ್ಯ, ಸಂಭ್ರಮ, ಯಶಸ್ಸನ್ನು ನನ್ನೊಂದಿಗೆ ಕೊಟ್ಟು ಕಾಪಾಡಲಿ… ಎಂದು  ಬರೆದುಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page