Connect with us

STATE

4 ಮನೆಗಳಲ್ಲಿ ದಿಢೀರ್ ಭೂ ಕುಸಿತ; ಸ್ಥಳೀಯರಲ್ಲಿ ಆತಂಕ

Published

on

ರಾಯಚೂರು : ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ ಭೂ ಕುಸಿತದಿಂದ ನಾಲ್ಕು ಮನೆಗಳು ದಿಢೀರ್ ಎಂದು ಕುಸಿದಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಮನೆಯ ಒಳಗೆಯೇ ನೆಲದಿಂದ ನೀರು ಹೊರಗೆ ಬಂದಿರುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿಬೀಳಿದ್ದಾರೆ.


ನಿರಂತರವಾಗಿ ಸಮಸ್ಯೆ ಎದುರಾಗುತ್ತಿರುವ ಈ ಗ್ರಾಮದಲ್ಲಿ ಕಳೆದ ತಿಂಗಳಲ್ಲಿ ನಾಲ್ಕು ಮನೆಗಳಲ್ಲಿ ನೆಲದಡಿಯಲ್ಲಿ ದೊಡ್ಡ ಗುಂಡಿಗಳು ಬಿದ್ದು, ಭೂ ಕುಸಿತ ಸಂಭವಿಸಿತ್ತು. ಅದೃಷ್ಟವಶಾತ್ ಓರ್ವ ಮಹಿಳೆ ಅಪಾಯದಿಂದ ಪಾರಾಗಿದ್ದರು.

ಇದೀಗ ಮತ್ತೊಂದು ಮನೆಯಲ್ಲಿ ಅದೇ ಘಟನೆ ನಡೆದಿದೆ. ಯದ್ದಲದೊಡ್ಡಿ ಗ್ರಾಮದ ನಿವಾಸಿಗಳಾದ ರಾಜಶೇಖರೆಡ್ಡಿ, ಗುರಪ್ಪ ಮೂಡಲಗಿರಿ, ಡಾ.ಕರಿಬಸಪ್ಪ, ರಮೇಶ್ ಮತ್ತು ಚನ್ನಬಸವ ಅವರ ಮನೆಗಳಲ್ಲಿ 20 ಅಡಿ ಆಳದವರೆಗೆ ಮಣ್ಣು ಕುಸಿದು ನೆಲಹಾಸು ಹಾಳಾಗಿದ್ದು, ಮನೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಗೋಡೆಗಳಿಗೂ ಹಾನಿಯಾಗಿದ್ದು, ಕುಟುಂಬಗಳು ಆತಂಕದಲ್ಲಿವೆ.

ಇದನ್ನೂ ಓದಿ: ಬಂಟ್ವಾಳ: ಅಪರಿಚಿತ ಮಹಿಳೆ ಶವ ನೇತ್ರಾವತಿ ನದಿಯಲ್ಲಿ ಪತ್ತೆ

ತಕ್ಷಣ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

STATE

ಬೆಳಗಾವಿ ಅಧಿವೇಶನದಲ್ಲಿ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ 50 ಲಕ್ಷ ರೂ. ನೀಡಲು ಶಾಸಕರ ಮನವಿ

Published

on

ಬೆಳಗಾವಿ: ಢಾಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಗೆದ್ದ ಕಾರ್ಕಳ್ ಮಿಯ್ಯಾರಿನ ಧನಲಕ್ಷ್ಮಿ ಪೂಜಾರಿ ಅವರು ಇಂದು ತನ್ನ ಕೋಚ್‌ ತೇಜಸ್ವಿನಿ ಪೈ ಅವರ ಜತೆಗೆ ಬೆಳವಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದಅಧಿವೇಶನದ ಕಲಾಪ ವೀಕ್ಷಿಸಿದರು.

 

ಈ ಸಂದರ್ಭದಲ್ಲಿ ಧನ ಲಕ್ಷ್ಮಿ ಅವರನ್ನು ಸರಕಾರದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಧನಲಕ್ಷ್ಮಿ ಅದರ ಸಾಧನೆಯನ್ನು ಗುರುತಿಸಿ ಸರಕಾರದ ವತಿಯಿಂದ ಈಗಾಗಲೇ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.

ಧನಲಕ್ಷ್ಮಿ ಮತ್ತು ಆಕೆಯ ತರಬೇತುದಾರರಾದ ತೇಜಸ್ವಿನಿ ಪೈ ಅವರನ್ನು ಅಭಿನಂದಿಸುತ್ತೇನೆ ಎಂದರು. ಧನಲಕ್ಞ್ಮಿ ಅವರಿಗೆ  ಕನಿಷ್ಟ 50 ಲಕ್ಷ ರೂಪಾಯಿ ಬಹುಮಾನ ನೀಡ ಬೇಕೆಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದರು.ಆಕೆಗೆ ಸರಕಾರಿ ಉದ್ಯೋಗ ಕೊಡಿಸಬೇಕೆಂದು ವಿ ಸುನಿಲ್ ಕುಮಾರ್ ಮನವಿ ಮಾಡಿದರು.

Continue Reading

LATEST NEWS

ಸಾರಿಗೆ ಬಸ್ ಪ*ಲ್ಟಿಯಾಗಿ ಕಂಡಕ್ಟರ್ ಸಾ*ವು; ಹಲವು ಪ್ರಯಾಣಿಕರಿಗೆ ಗಾ*ಯ

Published

on

ಮಂಗಳೂರು/ರಾಯಚೂರು : ಸಾರಿಗೆ ಬಸ್ ಪ*ಲ್ಟಿಯಾಗಿ ನಿರ್ವಾಹಕ ಮೃ*ತಪಟ್ಟ ಘಟನೆ ಇಂದು(ಡಿ.09) ಬೆಳಗ್ಗೆ ರಾಯಚೂರಿನ ದೇವದುರ್ಗ ತಾಲೂಕಿನ ಅಂಚೇಸುಗೂರು ಕಾಲುವೆಯ ಸೇತುವೆ ಬಳಿ ನಡೆದಿದೆ. ಬಸವರಾಜ್  ಮೃತ ಕಂಡಕ್ಟರ್.

ಕೆಎಸ್‌ಆರ್‌ಟಿಸಿ ಬಸ್ ಅಂಜಳ ಗ್ರಾಮದಿಂದ ದೇವದುರ್ಗಕ್ಕೆ ಸಾಗುತ್ತಿತ್ತು. ಈ ವೇಳೆ ಅಂಚೇಸುಗೂರು ಕಾಲುವೆಯ ಸೇತುವೆ ದಾಟುವಾಗ ಈ ದುರಂ*ತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪ*ಲ್ಟಿಯಾಗಿದ್ದು, ಪರಿಣಾಮ ಬಸ್‌ ನಲ್ಲಿದ್ದ 40 ಜನರ ಪೈಕಿ 38 ಪ್ರಯಾಣಿಕರು ಗಾ*ಯಗೊಂಡಿದ್ದಾರೆ.

ಇದನ್ನೂ ಓದಿ : ಬಾರ್ಡರ್ 2 : ಅಹಾನ್ ಶೆಟ್ಟಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಡಲೇ ಧಾವಿಸಿ, ಸಲಾಕೆಗಳಿಂದ ಬಸ್‌ ನ ಗಾಜು ಒಡೆದು, ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಎಷ್ಟು ಹೊತ್ತಾದರೂ ಆಂಬ್ಯುಲೆನ್ಸ್ ಬಾರದ ಕಾರಣ ಟಂಟಂ, ಬೈಕ್‌ ಗಳಲ್ಲಿ ಗಾಯಾಳುಗಳನ್ನ ರವಾನೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾ*ಯಗೊಂಡಿದ್ದ ಕಂಡಕ್ಟರ್ ಚಿಕಿತ್ಸೆ ಫಲಕಾರಿಯಾಗದೇ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾ*ವನ್ನಪ್ಪಿದ್ದಾರೆ. ಅಪಘಾ*ತದ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಗ್ಯಾಸ್ ಗೀಸರ್ ಸೋರಿಕೆ; ತಾಯಿ, ಮಗು ಸಾ*ವು

Published

on

ಮಂಗಳೂರು/ಬೆಂಗಳೂರು : ಇತ್ತೀಚಿಗೆ ಗ್ಯಾಸ್ ಗೀಸರ್‌ ದುರಂ*ತಗಳು ಹೆಚ್ಚಾಗಿದ್ದು, ಇದೀಗ ತಾಯಿ ಹಾಗೂ ಪುಟ್ಟ ಕಂದಮ್ಮ ಪ್ರಾ*ಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಗೋವಿಂದರಾಜ ನಗರದಲ್ಲಿ  ಈ ದುರ್ಘ*ಟನೆ ನಡೆದಿದೆ. 26 ವರ್ಷದ ಚಾಂದಿನಿ,  4 ವರ್ಷದ ಯುವಿ ಮೃ*ತಪಟ್ಟವರು.

ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾ*ವನ್ನಪ್ಪಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ…

ಪ್ರತಿದಿನ ದೊಡ್ಡ ಮಗಳನ್ನು ಶಾಲೆಯಿಂದ 4 ಗಂಟೆಗೆ ಕರೆದುಕೊಂಡು ಬರಲು ಚಾಂದಿನಿ ಹೋಗುತ್ತಿದ್ದರು. ಆದರೆ ಸೋಮವಾರ ಮಗಳನ್ನು  ಕರೆದುಕೊಂಡು ಬರಲು ಶಾಲೆಗೆ ಹೋಗದ ಕಾರಣ ಶಾಲೆಯವರು ಚಾಂದಿನಿ ಪತಿ ಕಿರಣ್‌ಗೆ ಫೋನ್ ಮಾಡಿದ್ದರು. ಬಳಿಕ ಚಾಂದಿನಿಗೆ ಕರೆ ಮಾಡಿದರೆ ರಿಸೀವ್ ಮಾಡಿರಲಿಲ್ಲ. ಇದರಿಂದ ಕಿರಣ್ ತಮ್ಮನಿಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು.

ಇದನ್ನೂ ಓದಿ : ಲಾರಿ ಡಿ*ಕ್ಕಿಯಾಗಿ ಮೊಟ್ಟೆ ಸಾಗಾಟದ ವಾಹನ ಪ*ಲ್ಟಿ

ಕಿರಣ್ ತಮ್ಮ ಪ್ರವೀಣ್ ಮನೆಗೆ ಬಂದು ನೋಡಿದಾಗ ಬಾತ್ ರೂಮ್‌ನಲ್ಲಿ ತಾಯಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಗ್ಯಾಸ್ ಗೀಸರ್ ಸೋರಿಕೆಯಿಂದ ದು*ರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page