Connect with us

LATEST NEWS

ದಿಢೀರ್ ಹೃದಯಾಘಾತ; 35ರ ಯುವಕ ಜೀವಾಂತ್ಯ

Published

on

ಉಡುಪಿ : ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದೆ. ಯಾವುದೇ ರೋಗಳಕ್ಷಣಗಳು ಇಲ್ಲದೆಯೇ ಹೃದಯಾಘಾತದಿಂದ ಅನೇಕ ಯುವ ಸಮುದಾಯ ಸಾವನ್ನಪ್ಪುತ್ತಿದೆ. ಇದೀಗ ಅಂತಹದ್ದೇ ಘಟನೆಯೊಂದು ಉಡುಪಿಯಲ್ಲಿ ಸಂಭವಿಸಿದೆ.

ಹೃದಯ ಸಂಬಂಧಿ ಖಾಯಿಲೆಯಿಂದ ಮಾ.14ರಂದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಶಿರ್ವ ಗ್ರಾಮದ ಶೋಭರಾಜ್(35) ಎಂಬವರು ಮಾ.15 ರಂದು ರಾತ್ರಿ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಹಿಂದೆ ಶೋಭರಾಜ್‌ಗೆ ಯಾವುದೇ ರೀತಿಯಂದಲೂ ರೋಗದ ಗುಣಲಕ್ಷಣಗಳಿರಲಿಲ್ಲ.

ಈ ಘಟನೆ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS

ಶಿಕ್ಷಕನಾಗಿದ್ದ ಆದಿಲ್ ಹುಸೇನ್ ಉಗ್ರನಾಗಿದ್ದು ಹೇಗೆ?

Published

on

ಮಂಗಳೂರು/ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ‘ಮಾಸ್ಟರ್‌ಮೈಂಡ್‌’ಗಳ ಪೈಕಿ ಕಾಶ್ಮೀರದ ಸ್ಥಳೀಯ ನಿವಾಸಿ ಆದಿಲ್ ಹುಸೇನ್ ಥೋಕರ್ ಹೆಸರು ಕೂಡ ಕೇಳಿ ಬಂದಿದೆ.

ಆದಿಲ್ ಹುಸೇನ್, ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾನೆ ಎಂದು ಎನ್‌ಐಎ ಹೇಳಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಆದಿಲ್ ಅನಂತನಾಗ್ ಜಿಲ್ಲೆಯ ಗುರಿ ಗ್ರಾಮಕ್ಕೆ ಸೇರಿದವನು ಎಂದು ತಿಳಿದುಬಂದಿದೆ. ಮೃದು ಭಾಷಿಯಾಗಿದ್ದ ಆತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ. ಆದರೆ ಈತ ಇಂತಹ ದೊಡ್ಡ ಪ್ರಮಾಣದ ದಾಳಿಗೆ ಸಂಚು ರೂಪಿಸುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಶಿಕ್ಷಕನಾಗಿದ್ದ ಆದಿಲ್ ಹುಸೇನ್ ಕ್ರಮೇಣ ಮೂಲಭೂತವಾದದತ್ತ ಆಕರ್ಷಿತನಾಗಿದ್ದ. 2010ರಲ್ಲಿ, ಗುಂಡಿನ ಚಕಮಕಿಗಳಲ್ಲಿ ಹತರಾದ ಉಗ್ರರ ಅಂತ್ಯಕ್ರಿಯೆಗಳಲ್ಲಿ ಈತ ಪಾಲ್ಗೊಳ್ಳುತ್ತಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ ವಿರೋಧಿಸಿ ಪ್ರತಿಭಟನೆ; ಕುತ್ತಿಗೆ ಕತ್ತರಿಸುವುದಾಗಿ ಬೆದರಿಕೆ ಹಾಕಿದ ಪಾಕ್ ಸೇನಾ ಅಧಿಕಾರಿ

2018ರಲ್ಲಿ ಕಾನೂನುಬದ್ದವಾಗಿಯೇ ವೀಸಾ ಪಡೆದು ಆತ ಪಾಕಿಸ್ತಾನಕ್ಕೆ ತೆರಳಿದ್ದ. ವೈಯಕ್ತಿಕ ಕಾರಣಗಳಿಗಾಗಿ ಅಲ್ಲಿಗೆ ತೆರಳಿದ್ದ ಎಂದು ತೋರಿಕೆಗೆ ಕಂಡುಬಂದರೂ ನಂತರ ಆತ ಎಲ್‌ಇಟಿ ಸೇರಿದ್ದ. ಕಳೆದ ವರ್ಷ ಗುಪ್ತವಾಗಿ ಭಾರತ ಪ್ರವೇಶಿಸಿದ್ದ. ದೋಡಾ ಮತ್ತು ಕಿಶ್ತವಾಡ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದ ಎಂದು ವರದಿಯಾಗಿದೆ.

Continue Reading

LATEST NEWS

ನಾಲ್ವರು ಪಾಕ್‌ ಪ್ರಜೆಗಳು ಕರ್ನಾಟಕದಿಂದ ಗಡಿಪಾರು

Published

on

ಬೆಂಗಳೂರು: ಪಹಲ್ಗಾಮ್‌ ದಾಳಿ ಬಳಿಕ ಕರ್ನಾಟಕದಲ್ಲಿದ್ದ ನಾಲ್ವರು ಪಾಕ್‌ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ.

ದೀರ್ಘಾವಧಿ ವೀಸಾ ಹೊಂದಿರುವವರ ಗಡಿಪಾರಿಗೆ ಕೇಂದ್ರ ಸೂಚಿಸದ ಕಾರಣ ದೀರ್ಘಾವಧಿ ವೀಸಾ ಹೊಂದಿರುವ 91 ಮಂದಿ ಪಾಕ್‌ ಪ್ರಜೆಗಳು ಇನ್ನೂ ಕರ್ನಾಟಕದಲ್ಲೇ ಇದ್ದಾರೆ. ಈ ನಾಲ್ಕು ಜನ ಪ್ರಜೆಗಳು ಅಲ್ಪಾವಧಿ ವೀಸಾ ಹೊಂದಿದ್ದರು.

ವಿವಿಧ ಜಿಲ್ಲೆಗಳಲ್ಲಿ 91 ಮಂದಿ ವಾಸವಾಗಿದ್ದಾರೆ. 5 ಪಾಕಿಸ್ತಾನಿ ಪ್ರಜೆಗಳು ವೈದ್ಯಕೀಯ ವೀಸಾದಡಿ ರಾಜ್ಯದಲ್ಲಿದ್ದಾರೆ. ಇವರಿಗೆ ಏ.29ರವರೆಗೆ ಮಾತ್ರ ದೇಶದಲ್ಲಿರಲು ಕೇಂದ್ರವು ವಿನಾಯಿತಿ ನೀಡಿದೆ. ಇದಲ್ಲದೆ ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆ ಪಾಕ್‌ ಪ್ರಜೆಗಳು ನೆಲೆಸಿದ್ದಾರೆ.

ಮಾರ್ಚ್​ನಲ್ಲಿ ನಡೆದಿದ್ದ ಅಧಿವೇಶನದಲ್ಲಿ ಗೃಹ ಸಚಿವ ಪರಮೇಶ್ವರ್‌ ಅವರು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 25 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಅಧಿಕೃತವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರು.

Continue Reading

DAKSHINA KANNADA

ಯುವಕನ ಬರ್ಬರ ಹತ್ಯೆ ಬಗ್ಗೆ ಅಪಪ್ರಚಾರ ಸಲ್ಲದು : ಅನುಪಮ್ ಅಗರ್ವಾಲ್

Published

on

ಮಂಗಳೂರು : ಅಪರಿಚಿತ ಯುವಕನ ಮೃತದೇಹ ಪತ್ತೆಯಾದ ಘಟನೆಯು ಮಂಗಳೂರು ಹೊರವಲಯದ ಕುಡುಪು ಸಮೀಪ ನಿನ್ನೆ (ಏ.27) ಸಂಜೆ ನಡೆದಿದೆ. ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಯಾವುದೇ ರೀತಿಯಿಂದನೂ ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಸುಮಾರು 35 ರಿಂದ 40 ವರ್ಷ ಪ್ರಾಯದ ಹೊರ ರಾಜ್ಯದ ಈ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ.

ಕುಡುಪು ಕಟ್ಟೆ ಸಮೀಪದ ಗದ್ದೆಯಲ್ಲಿ ಯುವಕರ ಗುಂಪೊಂದು 6 ತಂಡಗಳ ಕ್ರಿಕೆಟ್ ಮ್ಯಾಚ್ ಆಯೋಜಿಸಿತ್ತು. ಸಂಜೆ ವೇಳೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಗದ್ದೆಗೆ ಅಪರಿಚಿತ ಯುವಕನೊಬ್ಬ ತೆರಳಿದ್ದು, ಯಾವುದೋ ಕಾರಣಕ್ಕೆ ಈ ಯುವಕ ಮತ್ತು ಕ್ರಿಕೆಟ್ ಆಟಗಾರರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಆಕ್ರೋಶಗೊಂಡ ಯುವಕರ ತಂಡವು ಈ ಯುವಕನಿಗೆ ಹಲ್ಲೆಗೈದಿದ್ದು, ಗಂಭೀರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತಪಟ್ಟ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಆತನ ಗುರುತು ಪತ್ತೆಗಾಗಿ ಪ್ರಯತ್ನ ಸಾಗಿಸಿದ್ದಾರೆ. ಪ್ರಾಥಮಿಕ ವರದಿಯ ಬಳಿಕ ಸಾವಿಗೆ ಕಾರಣ ಏನು ಎಂದು ತಿಳಿಯಬಹುದಾಗಿದೆ. ಈ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡದಿರಿ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಉಪ ಆಯುಕ್ತ ಸಿದ್ದಾರ್ಥ್ ಗೋಯಲ್, ನಗರ ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್, ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈತ ಕೂಲಿ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page