Connect with us

BANTWAL

ಬಿಸಿರೋಡಿನಲ್ಲಿ ಕಳವಾದ ಬೈಕ್ ರಾಮನಗರದಲ್ಲಿ ಪತ್ತೆ..!

Published

on

ಬಂಟ್ವಾಳ: ಬಿಸಿರೋಡಿನಲ್ಲಿ ಕಳವಾದ ಬೈಕನ್ನು ಪೊಲೀಸರು ರಾಮನಗರದಲ್ಲಿ ಪತ್ತೆಹಚ್ಚಿ ಬೈಕ್ ಕಳ್ಳನ ಹೆಡೆಮುರಿ ಕಟ್ಟಿದ್ದಾರೆ. ರಾಮನಗರದ ಬಿಡದಿ ತಾಲೂಕಿನ ಬಾಣಂದೂರು ನಿವಾಸಿ ರಾಜು ಕೆ ಬಂಧಿತ ಆರೋಪಿಯಾಗಿದ್ದಾನೆ.

ಕಳೆದ ತಿಂಗಳು ಜೂ.26 ರಂದು ಪವನ್ ಎಂಬಾತ ಬಿಸಿರೋಡಿನ ಹೋಟೆಲ್‌ವೊಂದಕ್ಕೆ ನೀಡಿದ್ದು, ಬೈಕ್‌ ಕೀಯನ್ನು ಗಾಡಿಯಲ್ಲೇ ಇಟ್ಟು ಹೋಟೆಲ್‌ ಒಳಗಡೆ ತೆರಳಿದ್ದಾರೆ. ಇದೇ ವೇಳೆ ಹೋಟೆಲ್‌ ನಿಂದ ಹೊರಬರುತ್ತಿದ್ದ ಆರೋಪಿ ರಾಜು ಎಂಬಾತ ಇದನ್ನು ಗಮನಿಸಿದ್ದಾನೆ. ಬೈಕ್‌ನಲ್ಲಿದ್ದ ಕೀಯಿಂದ ಗಾಡಿ ಸ್ಟಾಟ್ ಮಾಡಿಕೊಂಡು ನೇರವಾಗಿ ತನ್ನ ಊರು ರಾಮನಗರಕ್ಕೆ ತೆರಳಿದ್ದಾನೆ.

ಸುಬ್ರಹ್ಮಣ್ಯ: ಕೆಎಸ್‌ಆರ್‌ಟಿಸಿ ಬಸ್‌ಗಳ ಮಧ್ಯೆ ಅಪಘಾ*ತ..!

ಬೈಕ್ ಕಳ್ಳ ರಾಜು ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು ಈತ ಬೈಕ್‌ ಕದ್ದಿರುವ ದೃಶ್ಯ ಸಿಸಿಕ್ಯಾಮೆರಾಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ ಪೊಲೀಸರು ಈತನ ಬೆನ್ನು ಹತ್ತಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್‌ ಅನಂತಪದ್ಮನಾಭ ಅವರ ತಂಡ ರಾಮನಗರಕ್ಕೆ ತೆರಳಿ ಬೈಕ್ ಸಹಿತ ಆರೋಪಿಯನ್ನು ಕರೆದುಕೊಂಡು ಬಂದಿದ್ದಾರೆ. ಬಳಿಕ ಬೈಕನ್ನು ಮಾಲಕ ಪವನ್‌ ಗೆ ಹಸ್ತಾಂತರಿಸಿದ್ದಾರೆ. ತನಿಖಾ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬಂದಿ ಗಣೇಶ್, ಬಸವರಾಜ್‌ ಹಾಗೂ ಸುರೇಶ್ ಅವರು ಭಾಗಿಯಾಗಿದ್ದರು.

BANTWAL

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲಕ್ಷ ಕುಂಕುಮಾರ್ಚನೆ ಸೇವೆ

Published

on

ಬಂಟ್ವಾಳ: ಗಂಜಿಮಠದ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರದ ಪುನರ್ ನಿರ್ಮಾಣದ ಸಲುವಾಗಿ ಸಾವಿರ ಸೀಮೆಯ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲಕ್ಷ ಕುಂಕುಮಾರ್ಚನೆ ಸೇವೆ ನಡೆಯಿತು.

ಶಿವ ಕ್ಷೇತ್ರ ಪುನರ್ ನಿರ್ಮಾಣದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಲಕ್ಷ ಕುಂಕುಮಾರ್ಚನೆ ಮಾಡಲಾಯಿತು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿ.ಪಂ. ಸಿಇಒ ಡಾ. ಆನಂದ್ ವರ್ಗಾವಣೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಜರಗಿದ ಕುಂಕುಮಾರ್ಚನೆಯಲ್ಲಿ ಕ್ಷೇತ್ರದ ಪ್ರದಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ಕೆ.ರಾಮ್ ಭಟ್, ಸಹ ಅರ್ಚಕರಾದ ಪದ್ಮನಾಭ ಭಟ್, ಅನಂತಪದ್ಮನಾಭ ಭಟ್ ಮೊದಲಾದವರಿದ್ದರು.

Continue Reading

BANTWAL

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Published

on

ಬಂಟ್ವಾಳ: ಪಿಯುಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ತುಂಬೆ ಬಳಿ ನಡೆದಿದೆ.

ತುಂಬೆಯ ಪರ್ಲಕ್ಕೆ ನಿವಾಸಿಗಳಾದ ಕರುಣಾಕರ ಗಟ್ಟಿ ಮತ್ತು ಶೋಭಾ ಗಟ್ಟಿ ದಂಪತಿಯ ಏಕೈಕ ಪುತ್ರ 17 ವರ್ಷದ ತೇಜಸ್ ಗಟ್ಟಿ ಮೃತ ವಿದ್ಯಾರ್ಥಿ. ತೇಜಸ್ ಗಟ್ಟಿ ಮೊಡಂಕಾಪು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ನಿನ್ನೆ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ತೇಜಸ್ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಹಾವೇರಿಯಲ್ಲಿ ಹೃದಯಾಘಾತಕ್ಕೆ ಲಾರಿ ಚಾಲಕ ಬಲಿ

ತಂದೆ ಕರುಣಾಕರ ಎಂದಿನಂತೆ ಮನೆಗೆ ಬಂದಾಗ ಬಾಗಿಲು ತೆರೆದಿದ್ದು, ಒಳಗೆ ನೋಡಿದಾಗ ತೇಜಸ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಶನಿವಾರ ಕಾಲೇಜಿನಲ್ಲಿ ತೇಜಸ್ ಮೊಬೈಲ್ ಬಳಸಿ ಉಪನ್ಯಾಸಕರಿಗೆ ಸಿಕ್ಕಿಬಿದ್ದಿದ್ದನಂತೆ. ಕಾಲೇಜು ಆಡಳಿತದವರು ಮೊಬೈಲ್ ವಶಪಡಿಸಿ ಪೋಷಕರಿಗೆ ವಿಚಾರ ತಿಳಿಸಿದ್ದರಂತೆ.

ಕಾಲೇಜು ಆಡಳಿತವು ಸೋಮವಾರವೂ ಮೊಬೈಲನ್ನು ತೇಜಸ್ ಗೆ ವಾಪಸ್ ನೀಡಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Continue Reading

BANTWAL

ಭಾರೀ ಮಳೆ: ಬಂಟ್ವಾಳ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು (ಜು.4) ರಜೆ ಘೋಷಣೆ

Published

on

ಬಂಟ್ವಾಳ: ತಾಲೂಕಿನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಶುಕ್ರವಾರ (ಜು.4) ರಜೆ ಘೋಷಣೆ ಮಾಡಲಾಗಿದೆ.

ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಕ್ರಿಸ್ಟಿಯಾನೋ ರೋನಾಲ್ಡೋ ಟೀಮ್‌ಮೇಟ್ ಕಾರು ಅಪಘಾತದಲ್ಲಿ ಸಾ*ವು

ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ. ಸಾರ್ವಜನಿಕರು ಕೂಡಾ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page