Connect with us

DAKSHINA KANNADA

ತುಳು ಭಾಷೆಗೆ ಸ್ಥಾನಮಾನ: ನವರಾತ್ರಿ ಮುಗಿದ ಕೂಡಲೇ ಮೀಟಿಂಗ್

Published

on

ಮಂಗಳೂರು: ಮಂಗಳೂರಿನ ಸರಕಾರಿ ಕಛೇರಿ ಹಾಗೂ ಬಸ್ಸುಗಳಲ್ಲಿ ಕನ್ನಡ ಕಡ್ಡಾಯ ಮಾಡಿ ತುಳು ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲದೆ ದ.ಕ ಜಿಲ್ಲೆ ಸೇರಿ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸಚಿವ ಸುನೀಲ್ ಕುಮಾರ್‌ರವರು ಹೇಳಿಕೆ ನೀಡಿದ ವಿರುದ್ಧ ಇಂದು ಮಂಗಳೂರಿನ ಕ್ಲಾಕ್ ಟವರ್ ಎದುರುಗಡೆ ತುಳು ಭಾಷೆ ಸಂರಕ್ಷಣಾ ಸಮಿತಿಯವರು ಪ್ರತಿಭಟನೆ ನಡೆಸಿದರು.


ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಶಾಸಕರಾದ ವೇದವ್ಯಾಸ ಕಾಮತ್‌ರವರು ಭೇಟಿ ಕೊಟ್ಟು ತುಳು ಪರವಾಗಿ ಹೋರಾಟ ಮಾಡುವವರಿಗೆ ಸಾಂತ್ವನ ಹೇಳಿ ನವರಾತ್ರಿ ಉತ್ಸವ ಮುಗಿದ ಕೂಡಲೇ ತುಳು ಅಧಿಕೃತ ಹಾಗೂ

೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ತುಳು ಸಂಘಟನೆಗಳನ್ನು ಒಟ್ಟು ಸೇರಿಸಿ ಮಹತ್ತರವಾದ ನಿರ್ಣಯವನ್ನು ತೆಗೆದು ಕೊಳ್ಳುವ ಹಾಗೆ ಸಚಿವರಾದ ಸುನೀಲ್ ಕುಮಾರ್ ಅವರಲ್ಲಿ ಮಾತನಾಡಿ, ಅವರು ಸಿಗುವ ದಿನಾಂಕವನ್ನು ನಿಗದಿ ಪಡಿಸಿ ತುರ್ತು ಮೀಟಿಂಗನ್ನು ಮಾಡುವ ಬಗೆ ಭರವಸೆ ನೀಡಿದರು.

ಮಂಗಳೂರಿನಲ್ಲಿ ತುಳುಲಿಪಿ ಬೋರ್ಡು ಹಾಕುವ ಬಗ್ಗೆ ಯಾರು ಅಡ್ಡಿ ಮಾಡುವುದಿಲ್ಲ. ಬಸ್ಸಿಗೆ ಬೇಕಾದವರು ಹಾಕ ಬಹುದು. ನನ್ನ ಕಛೇರಿಯಲ್ಲಿ ಕೂಡ ತುಳುಲಿಪಿ ಬೋರ್ಡ್ ಇದೆ ಎಂದು ಹೇಳಿ ಹೋರಾಟಗಾರರನ್ನು ಸಮದಾನ ಮಾಡಿದರು.


ಈ ಹೊತ್ತಿಗೆ ಇವರ ಜೊತೆ ರಾಜಕಾರಣಿ ಸಂತೋಷ್ ಕುಮಾರ್ ಬೋಳಿಯಾರ್ ಹಾಗೂ ಕಾರ್ಪೊರೇಟರ್ ಜಗದೀಶ್ ಅವರು ಭಾಗಿಯಾಗಿದ್ದರು.

ಅದಾದ ಮೇಲೆ ತುಳು ಸಂರಕ್ಷಣಾ ಸಮಿತಿಯವರು ”ಒರಿಪುಲೆ ಒರಿಪುಲೆ ತುಳು ಭಾಷೆ ಒರಿಪುಲೆ” ಘೋಷಣೆ ಕೂಗಿ ಬಸ್ಸಿಗೆ ತುಳು ಲಿಪಿ ಚಾರ್ಟ್ ಅಂಟಿಸಿದರು.

DAKSHINA KANNADA

ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ: ಸಚಿವ ದಿನೇಶ್ ಗುಂಡೂ ರಾವ್ ವಿರುದ್ಧ ಶಾಸಕ ಕಾಮತ್ ಗರಂ

Published

on

ಮಂಗಳೂರು: ನಗರದ ಪಚ್ಚನಾಡಿ ಎಸ್.ಟಿ.ಪಿ. ಗೆ ಅನುದಾನ ಒದಗಿಸಿದ್ದು ಕೇಂದ್ರ ಸರಕಾರ. ರಾಜ್ಯ ಸರಕಾರ ಈ ಯೋಜನೆಗೆ ಚಿಕ್ಕಾಸು ನೀಡದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ದಿನೇಶ್ ಗುಂಡೂ ರಾವ್ ಅವರು ಶಿಲಾನ್ಯಾಸ ನೆರವೇರಿಸಿದ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಗರಂ ಆಗಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಪಚ್ಚನಾಡಿ ಎಸ್.ಟಿ.ಪಿ ಆವರಣದಲ್ಲಿ ಮಂಗಳೂರು ನಗರದ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಮತ್ತು ಉನ್ನತೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಗುದ್ದಲಿ ಪೂಜೆ ನಡೆಸಿ, ಮಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ವಾಸ್ತವದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವು ಕ್ಷೇತ್ರದ ಅಭಿವೃದ್ಧಿಗೆ ಕಳೆದ ಎರಡೂ ವರ್ಷಗಳಿಂದ ನಯಾ ಪೈಸೆ ನೀಡಿಲ್ಲ. ಮೊದಲು ಆ ಅನುದಾನ ಬಿಡುಗಡೆಗೊಳಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಲಿ. ಸ್ವಚ್ಛ ಭಾರತ ಮಿಷನ್ 2.0 ಮತ್ತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಡಿ, ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಸ್.ಟಿ.ಪಿ. ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಇದು ಸಂಪೂರ್ಣ ಕೇಂದ್ರ ಸರಕಾರದ ಅನುದಾನವಾಗಿದೆ.

ಇದನ್ನೂ ಓದಿ: ಸಿದ್ಧರಾಮಯ್ಯ ದಾಖಲೆ ಬಜೆಟ್ ಬಿಟ್ಟರೆ ನ್ಯಾಯ ಸಿಕ್ಕಿಲ್ಲ: ಸಂಸದ ಕೋಟ

ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾದ ಮಂಗಳೂರು ಉತ್ತರ ಹಾಗೂ ದಕ್ಷಿಣದ ಶಾಸಕರ ಸಹಿತ ಇಲ್ಲಿನ ಸಂಸದರಿಗೆ ಸರಿಯಾಗಿ ಮಾಹಿತಿ ನೀಡದಿರುವುದು ಮಂಗಳೂರಿಗೆ ಹಾಗೂ ಇಲ್ಲಿನ ಜನತೆಗೆ ಮಾಡುವ ಅವಮಾನವಾಗಿದೆ ಎಂದರು.

Continue Reading

DAKSHINA KANNADA

ಮಾ.7 ರಿಂದ 10: ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

Published

on

ಮಂಗಳೂರು: ಮಂಗಳೂರಿನ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ಮಾರ್ಚ್ 7ರಿಂದ ಮಾ.10ರವರೆಗೆ ನಡೆಯಲಿದೆ.

ಆ ಪ್ರಯುಕ್ತ ಇಂದು ಧರ್ಮದರ್ಶಿ ಭಾಸ್ಕರ ಐತಾಳ್ ಕೊಲ್ಯ ಇವರ ಪೌರೋಹಿತ್ಯದಲ್ಲಿ ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ, ಆಶ್ಲೇಷ ಬಲಿಪೂಜೆ, ಪ್ರಸನ್ನ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭ ಕ್ಷೇತ್ರ ಸಮಿತಿಯ ಅಧ್ಯಕ್ಷ ಎಸ್. ರಾಘವೇಂದ್ರ ಮಾತನಾಡಿ ಭಂಡಾರವೇರಿದ ಬಳಿಕ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಮಾ.10ರವರೆಗೆ ದಿನಂಪ್ರತಿ ರಾಹು ಗುಳಿಗ, ಗುಳಿಗ ಪಂಜುರ್ಲಿ, ಕೊರಗಜ್ಜ, ತನ್ನಿಮಾನಿಗ ದೈವದ ನೇಮ ನಡೆಯಲಿದೆ. ನೇಮೋತ್ಸವದ ನಾಲ್ಕು ದಿನವೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಬಜೆಟ್‌ನಲ್ಲಿ ಭರ್ಜರಿ ಗಿಫ್ಟ್!

ಇನ್ನು ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್ಚಂದ್ರ ಮಾತನಾಡಿ, ಈ ಕ್ಷೇತ್ರಕ್ಕೆ 160 ವರ್ಷಗಳ ಇತಿಹಾಸವಿದೆ. ವಿಶೇಷ ಅಂದ್ರೆ ಇದು ಪಂಚ ಗುಳಿಗನ ಸಾನಿಧ್ಯವಾಗಿದೆ. ವಾರ್ಷಿಕ ನೇಮೋತ್ಸವಕ್ಕೆ ಭಕ್ತರು ಸರ್ವ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಪ್ರದಾನ ಪಾತ್ರಿ ಎಸ್. ಗಣೇಶ್, ಖಜಾಂಚಿ ಎಸ್. ನವೀನ್ ಮತ್ತು ಸಮಿತಿಯ ಸರ್ವ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ಇಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ.10ರವರೆಗೆ ನಿರಂತರವಾಗಿ ದೈವಗಳ ನೇಮ, ಕುಣಿತ ಭಜನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

Continue Reading

DAKSHINA KANNADA

ಮಾ. 8: ಪುತ್ತೂರಿನಲ್ಲಿ ‘ಮಹಿಳಾ ಸಂಭ್ರಮ’ ಕಾರ್ಯಕ್ರಮ

Published

on

ಪುತ್ತೂರು: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆ ಯಶಸ್ವಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್ 8 ರಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ವತಿಯಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ‘ಮಹಿಳಾ ಸಂಭ್ರಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಮತ್ತು ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಅನಿತಾ ಹೇಮನಾಥ ಶೆಟ್ಟಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯ 9 ಬ್ಲಾಕ್‍ಗಳ ವ್ಯಾಪ್ತಿ ಹೊಂದಿರುವ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಇದನ್ನು ಏರ್ಪಡಿಸಿದೆ.

ಕಾರ್ಯಕ್ರಮವನ್ನು ಬೆಳಿಗ್ಗೆ 9.30ಕ್ಕೆ ಕಾಂಗ್ರೆಸ್ ಮುಖಂಡರಾದ ಕಾವು ಹೇಮನಾಥ ಶೆಟ್ಟಿ ಮತ್ತು ಅನಿತಾ ಹೇಮನಾಥ ಶೆಟ್ಟಿ ದಂಪತಿಯ ಉಪಸ್ಥಿತಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸಲಿದ್ದಾರೆ. ಬಳಿಕ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. 11.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವೆ ಮೋಟಮ್ಮ ಉದ್ಘಾಟಿಸಲಿದ್ದು, ಸಾಧಕರಿಗೆ ಸನ್ಮಾನವನ್ನು ಶಾಸಕ ಅಶೋಕ್ ರೈ ನೆರವೇರಿಸಲಿದ್ದಾರೆ.

ಇದನ್ನೂ ಓದಿ: ಹತ್ತುಹಲವು ವಿಶೇಷತೆಗಳೊಂದಿಗೆ ನಡೆಯಲಿದೆ ನಾವೂರು ಕಂಬಳ; ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಸಚಿವ ರಮಾನಾಥ ರೈ

ಇದೇ ಮೊದಲ ಬಾರಿಗೆ ಮಹಿಳಾ ಕಾಂಗ್ರೆಸ್ ವತಿಯಿಂದ 8 ಮಂದಿ ಮಾಜಿ ಮಹಿಳಾ ಸೈನಿಕರಿಗೆ ‘ಪ್ರಿಯದರ್ಶಿನಿ ವೀರನಾರಿ’ ಪ್ರಶಸ್ತಿ ನೀಡಲಾಗುವುದು. ಸೈನ್ಯದಲ್ಲಿ ಕೆಲಸ ಮಾಡಿ ನಿವೃತ್ತರಾದ ಅಲ್ಫೋನ್ಸಾ ನೆಲ್ಯಾಡಿ, ಸ್ಯಾಂಡಿ ಸೆಬಾಸ್ಟಿಯನ್, ಮಿನಿ ಸಂತೋಷ್, ಲಿಸ್ಸಿ ಡೊಮಿನಿಕ್, ಸವಿತಾ ವಿಕ್ರಂ ಶೆಟ್ಟಿ, ಕಮಲಾಕ್ಷಿ, ಯಶೋಧಾ ಮತ್ತುಶಕುಂತಳಾ ನಾಯ್ಕ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದರ ಜತೆಗೆ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ಕೂಡಾ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page