Connect with us

DAKSHINA KANNADA

ಎಂ ಆರ್ ಎಫ್ ಘಟಕ ಸ್ಥಾಪನೆಗೆ ರಾಜ್ಯ ಸರಕಾರದ ಅನುಮೋದನೆ

Published

on

ಮಂಗಳೂರು ; ಮಂಗಳೂರಿನ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯಗಳೆಲ್ಲವನ್ನು ಸಂಸ್ಕರಿಸಿ ವಿಲೇವಾರಿ ಮಾಡಲು ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂ ಆರ್ ಎಫ್) ಘಟಕವ ಸ್ಥಾಪಿಸುವ ಸಲುವಾಗಿ ಮಹಾನಗರ ಪಾಲಿಕೆಯಿಂದ ಕಳುಹಿಸಲಾಗಿದ್ದ ಯೋಜನಾ ವರದಿಗೆ ರಾಜ್ಯ ಸರ್ಕಾರದಿಂದ ತಾಂತ್ರಿಕ ಅನುಮೋದನೆ ಲಭಿಸಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್ ಗಳಲ್ಲಿ ವದಿನಂಪ್ರತಿ 330 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು ಅದರಲ್ಲಿ 300 ಟನ್ ಗಳಷ್ಟು ಹಸಿ ಕಸ ಪ್ರತಿನಿತ್ಯ ಡಂಪಿಂಗ್ ಯಾರ್ಡ್ ಗೆ ಸೇರುತ್ತಿದೆ. ಶೇ.70 ರಷ್ಟು ಹಸಿ ಕಸ – ಶೇ, 30 ರಷ್ಟು ಒಣ ಕಸ ಎನ್ನುವುದಾಗಿ ವಿಭಜಿಸಲಾಯಿತು. ಒಣ ತ್ಯಾಜ್ಯವನ್ನು ಮಾತ್ರ ಸದ್ಯ ವಿಲೇವಾರಿ ಮಾಡಲಾಗುತ್ತಿದೆ. ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಅದರ ಮರು ಬಳಕೆ ಮಾಡಲಾಗುತ್ತಿದೆ.

ಯೋಜನೆಗೆ ತಗುಲುವ ವೆಚ್ಚ 11.04 ಕೋ.ರೂ.

                      ತ್ಯಾಜ್ಯ ವಿಲೇವಾರಿಯು ಒಂದು ದೊಡ್ಡ ಸಮಸ್ಯೆಯಾಗಿ ನಮ್ಮ ಕಣ್ಣೆದುರು ಬಂದು ನಿಂತಿದೆ. ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು ಒಂದು ವೇಳೆ ಸದಿಯಾದ  ಇದ್ದಲ್ಲಿ ರಾಜ್ಯ ಸರ್ಕಾರದ ಮೆಲೆ ಕಠಿಣ ಕ್ರಮದೊಡನೆ ದಂಢ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಘಟಕ ನಿರ್ಮಾಣದ ಉದ್ದೇಶ ಮಂಗಳೂರಿನಲ್ಲಿ 11.04 ಕೋ.ರೂ. ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲಿನ ಅನುದಾನ 5.10 ಕೋ. ಆಗಿದ್ದು ಬಾಕಿ ಉಳಿದ 5.94 ಕೋ. ಮಹಾನಗರ ಪಾಲಿಕೆ ಒದಗಿಸಬೇಕು. ಶೇ.30 ಹೊಂದಿಕೊಳ್ಳಲು ಅವಕಾಶವಿದೆ ಎನ್ನುತ್ತಾರೆ ಸುಧೀರ್ ಶೆಟ್ಟಿ ಕಣ್ಣೂರು.

ಘಟಕ ನಿರ್ಮಾಣಕದ ಸಮಯ 6 ತಿಂಗಳು

                   ರಾಜ್ಯ ಸರ್ಕಾರ ಎಂ ಆರ್ ಎ‍ಫ್ ಘಟಕಗಳ ನಿರ್ಮಾಣಕ್ಕೆ ಈಗಾಗಲೇ ಸೂಚನೆಯನ್ನು ನೀಡಿದೆ. ಟೆಂಡರ್ ಬರಬೇಕಂದರೆ ಮೊದಲೇ ಮಂಜೂರಾತಿ ನೀಡಬೇಕು. ದೊಡ್ಡ ಮೊತ್ತದ ಯೋಜನೆಯಾಗಿರುವುದರಂದ ಇದರ ಪ್ರಕ್ರಿಯೆಯು  ರಾಜ್ಯ ಮಟ್ಟದಲ್ಲಿ ನಡೆಯಬೇಕು. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಪಕ್ಷ 6 ತಿಂಗಳಾದರು ಬೆಕಾಗಬಹುದು ಎಂಬ ನಿರೀಕ್ಷೆ ಇದೆ. 109 ಟನ್ ತ್ಯಾಜ್ಯ ನಿರ್ವಹಣೆ ಸಾಮರ್ಥ್ಯ ಪಚ್ಚನಾಡಿಯಲ್ಲಿ ನಿರ್ಮಾಣವಾಗಲಿರುವ ಎಂ ಆರ್ ಎಫ್ ಘಟಕ ಹೊಂದಿದೆ. 11.04 ಕೋ.ರೂ ವೆಚ್ಚದಲ್ಲಿ 8.55 ಕೋ ಘಟಕದ ರಚನೆ ಹಾಗು ಸಿವಿಲ್ ಕೆಲಸಗಳಿಗೆ ಮೀಸಲಿಡಲಾಗಿದೆ. 2.49 ಕೋ. ಮೊತ್ತವನ್ನು ಘಟಕದಲ್ಲಿ ಕಾರ್ಯಾಚರಿಸುವ ವೇ ಬ್ರಿಡ್ಜ್, ಟ್ರೋಮೆಲ್ ಯಂತ್ರ, ಕನ್ವೇಯರ್, ಮ್ಯಾಗ್ನೇಟಿಕ್ ಸಪರೇಟರ್, ಏರ್ ಬ್ಲೋಮರ್, ಅಟೋಮ್ಯಾಟಿಕ್ ಹೊರಿಝಾಂಟಲ್ ಬೈಲಿಂಗ್ ಮಿಷನ್, ಶ್ರೇಡ್ಡರ್, ಸ್ಟೋರೇಜ್ ಬಿನ್, ವೀಲ್ ಬ್ಯಾರೋ, ಬೇಲರ್ ಯಂತ್ರ, ಅಗ್ನಿಶಮನ ಯಂತ್ರಗಳು, ಎಲೆಕ್ಟ್ರಿಕಲ್ ಉಪಕರಣ, ಲೋಡರ್ ಹೊಂದಿರುವ ಟ್ರ್ಯಾಕ್ಟರ್ ಮೊದಲಾದ ಯಂತ್ರಗಳ ಖರೀದಿಗೆ ಮೀಸಲಿರಿಸಲಾಗಿದೆ

DAKSHINA KANNADA

ಆನ್ಲೈನ್ ವಂಚನೆ ; ಕೊನೆಗೂ ಪೊಲೀಸರ ಕೈವಶವಾದ ಖದೀಮ

Published

on

ಮಂಗಳೂರು : ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಗಳು ಕೇರಳ ಮೂಲದ ಜುನೈದ ಎ.ಕೆ. ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಡಿಸಲಾಗಿದೆ.

ಜುನೈದ್ ಎ.ಕೆ. (32) ಆರೋಪಿ ಎಂದು ಗುರುತಿಸಲಾಗಿದೆ.ಅಪಚಿರಿತ ವ್ಯಕ್ತಿ ವಾಟ್ಸ್ ಆಫ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು ರೂ 46,00,000/- ಹಣವನ್ನು ಪಡೆದು ವಂಚನೆ ಮಾಡಿದ್ದಾನೆ.

ಆನ್ಲೈನ್ ವಂಚನೆಯ ಕುರಿತು 133/2024 ಕಲಂ 66(ಸಿ) 66(ಡಿ) ಐಟಿ ಆಕ್ಟ್ ಮತ್ತು 308(2), 318(2), 336(3),112 ಬಿ.ಎನ್.ಎಸ್ ಎಂದು ಮಂಗಳೂರಿನ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂದಿಸಿದಂತೆ ಪಿರ್ಯಾದಿದಾರರಿಂದ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿ ನೋಡಿದಾಗ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಗೆ ರೂ 10,00,000/- ಹಣ ವರ್ಗಾವಣೆಯಾಗಿದ್ದು, ನಂತರದಲ್ಲಿ ಸದ್ರಿ ಬ್ಯಾಂಕ್ ಖಾತೆಯಿಂದ ಕೇರಳ ಮೂಲದ ಆಯಿಷಾ ಹಾದಿಯಾ ಎಂಬುವವಳ ತಂದೆ ಆಶ್ರಫ್ ಪಿ.ಟಿ ಎಂಬಾತನ ಬ್ಯಾಂಕ್ ಖಾತೆಗೆ ರೂ,5,00,000/- ರೂ ಹಣ ಬಂದಿದ್ದು, ಈ ಬಗ್ಗೆ ತನಿಖೆ ಕೈಗೊಂಡಾಗ ಆಯಿಷಾ ಹಾದಿಯಾ ರವರ ಗಂಡ ಜುನೈದ ಎ ಕೆ (32) ಮಾವನ ಜೊತೆ ಸೇರಿಕೊಂಡು ವಿಥ್ ಡ್ರಾ ಮಾಡಿ ಆ ಹಣವನ್ನು ದುಬೈನಲ್ಲಿರುವ ಬಾಬು ಎಂಬಾಯನ ನಿರ್ದೇಶನದಂತೆ ಮನೀಬ್ ಎಂಬಾತನಿಗೆ ನೀಡಿ, ಪ್ರತಿಯಾಗಿ ರೂ 5,000 ರೂಗಳನ್ನು ಕಮಿಷನ್ ಪಡೆದಿರುವದಾಗಿದೆ, ಸದ್ರಿ ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಜುನೈದ ಎ ಕೆ ಎಂಬ ಪ್ರಮುಖ ಎಂಬಾತನನ್ನು ಪತ್ತೆ ಮಾಡಿ ದಸ್ತಗಿರಿ ಕ್ರಮ ಜರುಗಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ : 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣ; ಆರೋಪಿ ಅಂದರ್

ಸದ್ರಿ ಕಾರ್ಯಾಚರಣೆಯು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್ ಐಪಿಎಸ್, ಡಿಸಿಪಿ (ಕಾಮತ್ತುಸು) ಶ್ರೀ ಸಿದ್ದಾರ್ಥ ಗೋಯಲ್, ಡಿಸಿಪಿ (ಅ&ಸಂ) ಶ್ರೀ ರವಿಶಂಕರ್ ರವರ ಮಾರ್ಗದರ್ಶನದಂತೆ, ಸೆನ್ ಠಾಣಾಧಿಕಾರಿಯಾದ ಎಸಿಪಿ ಶ್ರೀ ರವೀಶ್ ನಾಯಕ, ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸತೀಶ್ ಎಂ ಪಿ ಮತ್ತು ಪೊಲೀಸ್ ಉಪ ನಿರೀಕ್ಷಕರಾದ ಮೋಹನ್ ರವರ ನೇತೃತ್ವದಲ್ಲಿ ಒಂದು ಹಂತದ ಯಶಸ್ಸು ಕಂಡಿದೆ.

Continue Reading

DAKSHINA KANNADA

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣ; ಆರೋಪಿ ಅಂದರ್

Published

on

ಮಂಗಳೂರು : 12 ವರ್ಷಗಳಿಂದ ನಡೆದ 3 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಬಿಡುಗಡೆಗೊಂಡು ಪ್ರಕರಣದ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಕಡಬ ತಾಲೂಕಿನ ಕೋನಲು ನಿವಾಸಿ ಅಬ್ದುಲ್ ಹಮೀದ್ (50) ಆರೋಪಿ ಎಂದು ಗುರುತಿಸಲಾಗಿದೆ.

1999 ನೇ ಇಸವಿಯಲ್ಲಿ ಮಂಗಳೂರು ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಹಾಗೂ 2012 ನೇ ಇಸವಿಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾರ್ಕ್ ಮಾಡಿದ್ದ ಕಾರಿನ ಡೋರ್ ತೆರೆದು ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಿದ ಒಟ್ಟು 3 ಪ್ರಕರಣಗಳಲ್ಲಿ ಭಾಗಿಯಾಗಿ ದಸ್ತಗಿರಿಯಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ನಂತರ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಧರ್ಮಸ್ಥಳ ಬಳಿ ಅಬ್ದುಲ್‌ನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಇದನ್ನೂ ಓದಿ : ಎಚ್ಚರ ಎಚ್ಚರ..! ಯಾವುದೇ ಲಿಂಕ್ಗಳನ್ನು ತೆರೆಯದಿದ್ದರೂ ಹ್ಯಾಕ್ ಆಗುತ್ತೆ ವಾಟ್ಸ್ಆ್ಯಪ್ ಖಾತೆ

ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿಶ್ರೀ ಮನೋಜ್ ಕುಮಾರ್ ನಾಯ್ಕ್, ಪೊಲೀಸ್ ಇನ್ಸ್ ಪೆಕ್ಟರ್ ರಫೀಕ್ ಕೆ ಎಂ, ಪಿಎಸ್ಐ ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 12 ವರ್ಷಗಳ ಹಳೆಯ ಪ್ರಕರಣದ ಆರೋಪಿ ಅಬ್ದುಲ್ ಹಮೀದ್ ಎಂಬಾತನನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತ ಅನುಮಪ್ ಅಗ್ರವಾಲ್, ಐಪಿಎಸ್ ರವರು ಶ್ಲಾಘಿಸಿದ್ದಾರೆ.

Continue Reading

BELTHANGADY

ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

Published

on

ಬೆಳ್ತಂಗಡಿ: ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಬೆಳ್ತಂಗಡಿಯ ಮಾಲಾಡಿ ಗ್ರಾಮದ ಭೂತದ ಮನೆಯಲ್ಲಿ ಸದ್ಯ ನೀರವ ಮೌನ ಆವರಿಸಿದೆ. ಕಳೆದ ಮೂರು ತಿಂಗಳಿನಿಂದ ಭೂತದ ಉಪಟಳದಿಂದ ಬಳಲಿ ಬೆಂಡಾಗಿರುವ ಕುಟುಂಬ ಮನೆಯನ್ನೇ ಖಾಲಿ ಮಾಡಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಸಲಿಗೆ ಕಳೆದೆರಡು ದಿನಗಳಿಂದ ಈ ಮನೆಯಲ್ಲಿನ ಭೂತದ ಉಪಟಳ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಈ ಮನೆಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ನೂರಾರು ಜನ ಬಂದು ಭೂತದ ಹುಡುಕಾಟ ನಡೆಸಿದ್ದರು. ಭೂತದ ಇರುವಿಕೆಯ ವಿಚಾರವಾಗಿ ಪರ ವಿರೋಧದ ಚರ್ಚೆಗಳು ಆರಂಭವಾಗಿ ಹಲವರು ಮನೆಯವರ ಕಥೆಯೇ ಸುಳ್ಳು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ನಮ್ಮ ಕುಡ್ಲ ವಾಹಿನಿ ಈ ಬಗ್ಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿದಾಗಲೂ ಇದು ಭೂತದ ಕಾಟ ಇರಲಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಖ್ಯಾತ ಮನೋರೋಗ ತಜ್ಞರು ಹಾಗೂ ಪವಾಡ ರಹಸ್ಯ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಅವರೂ ಕೂಡಾ ಮನೆಯವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದರು.

ಇದೀಗ ಉಮೇಶ್ ಶೆಟ್ಟಿ ಅವರ ಇಡೀ ಕುಟುಂಬ ಭೂತದ ಭಯದಿಂದ ಮನೆಯನ್ನು ಬಿಟ್ಟು ಹೋಗಿದ್ದು, ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page