Connect with us

FILM

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಶ್ರೀಲೀಲಾ…ಫೋಟೋ, ವೀಡಿಯೋ ವೈರಲ್!

Published

on

ಮಂಗಳೂರು/ಬೆಂಗಳೂರು : ಶ್ರೀಲೀಲಾ  ಸಿನಿರಸಿಕರ ಮನಗೆದ್ದಿರುವ ಚೆಲುವೆ. ತನ್ನ ನಟನೆ, ನೃತ್ಯ ಎಲ್ಲದರ ಮೂಲಕ ಗಮನ ಸೆಳೆದಿರುವ ನಟಿ. ಇದೀಗ ಕಿಸ್ ಬೆಡಗಿ ಡಾಕ್ಟರ್ ಆಗಿದ್ದಾರೆ.

ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಶ್ರೀಲೀಲಾ ಸಿನಿಮಾಗಳಲ್ಲಿ ಬಿಝಿ ಆಗಿದ್ದರೂ, ಮತ್ತೊಂದೆಡೆ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಡಾಕ್ಟರ್ ಶ್ರೀಲೀಲಾ ಆಗಿದ್ದಾರೆ.

ಒಂದೆಡೆ ಸಿನಿಮಾ, ಮತ್ತೊಂದೆಡೆ ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು  ಬಂದಿರುವ ಶ್ರೀಲೀಲಾ, ಎಂಬಿಬಿಎಸ್ ಮಾಡಿದ್ದಾರೆ. ಘಟಿಕೋತ್ಸವದಲ್ಲಿ ಅವರು ಕಾಣಿಸಿಕೊಂಡ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.

ಇದನ್ನೂ ಓದಿ : ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕ

ಕನ್ನಡದ ಕಿಸ್ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಶ್ರೀಲೀಲಾ ಬಳಿಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪೆಲ್ಲಿ ಸಂದಡಿ ಚಿತ್ರದ ಮೂಲಕ ಗಮನ ಸೆಳೆದರು. ಪುಷ್ಪ 2 ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದರು. ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಶ್ರೀಲೀಲಾ ಸದ್ಯ ಧನುಷ್ ಜೊತೆ D55ನಲ್ಲಿ ನಟಿಸುತ್ತಿದ್ದಾರೆ.

FILM

ಸಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ರಶ್ಮಿಕಾ-ವಿಜಯ್; ಆರತಕ್ಷತೆಯಲ್ಲಿ ಭಾಗಿಯಾಗಿ ಹರಸಿದ ಡಿ.ಕೆ.ಶಿ.

Published

on

‘ನ್ಯಾಷನಲ್ ಕ್ರಷ್’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಅದ್ಧೂರಿ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ ನವಜೋಡಿಗಳಿಗೆ ಶುಭ ಹಾರೈಸಿದ್ದಾರೆ.


ರಶ್ಮಿಕಾ ಮಂದಣ್ಣ ಅವರು ಕರ್ನಾಟಕದ ಸಾಂಪ್ರದಾಯಿಕ ಮತ್ತು ಹೆಮ್ಮೆಯ ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಧರಿಸಿ ಎಲ್ಲರ ಗಮನ ಸೆಳೆದರು. ಈ ಸೀರೆಯ ಪಲ್ಲುವಿನಲ್ಲಿ ಕರ್ನಾಟಕದ ರಾಜ್ಯ ಲಾಂಛನವಾದ ‘ಗಂಡಭೇರುಂಡ’ ಪಕ್ಷಿಯ ವಿನ್ಯಾಸವನ್ನು ಬಂಗಾರ ಮತ್ತು ಬೆಳ್ಳಿಯ ಎಳೆಗಳಿಂದ ನೆಯ್ಯಲಾಗಿತ್ತು.

ರಶ್ಮಿಕಾ ನಮ್ಮ ಕರ್ನಾಟಕದ ಹೆಮ್ಮೆಯಾದ ‘ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ’ಯುಟ್ಟು ಮಿರಮಿರನೆ ಮಿಂಚಿದ್ದಾರೆ. ಇತ್ತ ವಿಜಯ್ ಅವರು ಬಿಳಿ ಬಣ್ಣದ ಸಿಲ್ಕ್ ಕುರ್ತಾ ಮತ್ತು ಸಾಂಪ್ರದಾಯಿಕ ಪಂಚೆ ಹಾಗೂ ಶಲ್ಯ ಧರಿಸಿ ಅಪ್ಪಟ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲೂ ಅಭಿಮಾನಿಗಳನ್ನ ಮರೆಯದ ರಶ್ಮಿಕಾ-ವಿಜಯ್: ಸೌಹಾರ್ದತೆಗೆ ಸಾಕ್ಷಿಯಾದ ಸ್ಟಾರ್ ದಂಪತಿ!

ಹೈದರಾಬಾದ್‌ನ ಐಷಾರಾಮಿ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಲ್ಲದೆ, ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಹಾಗೂ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು.

Continue Reading

FILM

ಮದುವೆ ಸಂಭ್ರಮದಲ್ಲೂ ಅಭಿಮಾನಿಗಳನ್ನ ಮರೆಯದ ರಶ್ಮಿಕಾ-ವಿಜಯ್: ಸೌಹಾರ್ದತೆಗೆ ಸಾಕ್ಷಿಯಾದ ಸ್ಟಾರ್ ದಂಪತಿ!

Published

on

ಹೌದು, ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ತಮ್ಮ ಮದುವೆಯ ಸಂಭ್ರಮದ ನಡುವೆಯೂ ಅಭಿಮಾನಿಗಳ ಮೇಲಿರುವ ಪ್ರೀತಿಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ, ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಮಾದರಿಯಾಗಿದ್ದಾರೆ.


ಮದುವೆಯ ಸವಿನೆನಪಿಗಾಗಿ ಮಾರ್ಚ್ 1 ರಂದು ಭಾರತದಾದ್ಯಂತ ಲಕ್ಷಾಂತರ ಅಭಿಮಾನಿಗಳಿಗೆ ಲಡ್ಡು ಮತ್ತು ಸಿಹಿ ತಿಂಡಿಗಳನ್ನು ವಿತರಿಸುವ ವ್ಯವಸ್ಥೆ ಮಾಡಿದ್ದರು. ವಿವಿಧ ನಗರಗಳಲ್ಲಿ ಟ್ರಕ್‌ಗಳ ಮೂಲಕ ಆಹಾರ ಮತ್ತು ಸಿಹಿಯನ್ನು ಕಳುಹಿಸಿಕೊಡುವ ಮೂಲಕ ಹಸಿದವರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.

ಮದುವೆಯ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಈ ಜೋಡಿ, ಅಭಿಮಾನಿಗಳಿಗಾಗಿ ವಿಶೇಷ ಔತಣಕೂಟ ಏರ್ಪಡಿಸಿದ್ದರು. ಅಲ್ಲಿ ತಾವೇ ಖುದ್ದಾಗಿ ನಿಂತು ಅಭಿಮಾನಿಗಳಿಗೆ ಊಟ ಬಡಿಸಿ, ಅವರೊಂದಿಗೆ ಸಮಯ ಕಳೆದರು. ಅಭಿಮಾನಿಗಳ ಜೊತೆ ಕೈಕುಲುಕಿ, ಆಟೋಗ್ರಾಫ್ ನೀಡಿ ಮತ್ತು ಫೋಟೋಗಳಿಗೆ ಪೋಸ್ ನೀಡುವ ಮೂಲಕ ಸರಳತೆ ಮೆರೆದರು. ಒಂದು ವಿಡಿಯೋದಲ್ಲಿ ರಶ್ಮಿಕಾ ಅವರು ವಿಜಯ್‌ಗೆ ತುತ್ತು ನೀಡುವ ದೃಶ್ಯ ವೈರಲ್ ಆಗಿದ್ದು, ಅಭಿಮಾನಿಗಳು ಈ ಜೋಡಿಯ ನೈಜ ಪ್ರೀತಿಯನ್ನು ಕಂಡು ಸಂತಸಪಟ್ಟಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ; 32 ಪ್ರಯಾಣಿಕರು ಪಾರು

ಅಭಿಮಾನಿಗಳನ್ನು “ದೇಶದ ಸುಂದರ ಜನರು” ಎಂದು ಕರೆದಿರುವ ರಶ್ಮಿಕಾ, ತಮ್ಮ ಪ್ರೇಮ ಕಥೆಯಲ್ಲಿ ಬೆಂಬಲಿಗರು ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಮದುವೆಯಂತಹ ವೈಯಕ್ತಿಕ ಸಂಭ್ರಮದಲ್ಲಿಯೂ ಸಾರ್ವಜನಿಕ ಸೇವೆಯ ಮೂಲಕ ಈ ದಂಪತಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

Continue Reading

FILM

ವಿರೋಶ್ ಮದುವೆಯ ಸಂಭ್ರಮ; 44 ಶಾಲೆಗಳ ಮಕ್ಕಳ ಬಾಳಿಗೆ ಬೆಳಕಾದ ವಿಜಯ್-ರಶ್ಮಿಕಾ ಜೋಡಿ!

Published

on

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ನಂತರ ಮೊದಲ ಬಾರಿಗೆ ವಿಜಯ್ ಅವರ ಹುಟ್ಟೂರಾದ ತೆಲಂಗಾಣದ ತುಮ್ಮನ್‌ಪೇಟೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದ್ದಾರೆ.


ರಶ್ಮಿಕಾ ಅವರು ಗೃಹಪ್ರವೇಶ ಮಾಡಿ ಮನೆಯ ಮಹಾಲಕ್ಷ್ಮಿಯಾದ ಸಂಭ್ರಮದಲ್ಲಿ, ವಿಜಯ್ ಅವರು ತಮ್ಮ ದೇವರಕೊಂಡ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿಕ್ಷಣಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಅಚ್ಚಂಪೇಟೆ ವಿಭಾಗದ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವುದಾಗಿ ಘೋಷಿಸಿದ್ದಾರೆ. ದಂಪತಿಗಳು ತಮ್ಮ ಹೊಸ ಮನೆಯಲ್ಲಿ ನಡೆಸಿದ ಗೃಹಪ್ರವೇಶ ಮತ್ತು ಸತ್ಯನಾರಾಯಣ ವ್ರತ ಪೂಜೆಯ ನಂತರ ಈ ಘೋಷಣೆ ಹೊರಬಿದ್ದಿದೆ ಎನ್ನಲಾಗಿದೆ.

ಮದುವೆಯ ನಂತರ ಮೊದಲ ಬಾರಿಗೆ ಹುಟ್ಟೂರಿಗೆ ಭೇಟಿ ನೀಡಿದ ಈ ಜೋಡಿ, ಗ್ರಾಮಸ್ಥರೊಂದಿಗೆ ಔತಣಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವುದು ಮತ್ತು ಅವರ ಭವಿಷ್ಯಕ್ಕೆ ಉತ್ತಮ ಅವಕಾಶಗಳನ್ನು ಕಲ್ಪಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಇದನ್ನೂ ಓದಿ: ಬೋನ್ ಬಳಿ ನಿಂತಿದ್ದ ಬಾಲಕಿ ಮೇಲೆ ಸಿಂಹದ ಭೀಕರ ದಾಳಿ: ಕೂದಲೆಳೆ ಅಂತರದಲ್ಲಿ ಬಚಾವ್!

ಈ ಮಾನವೀಯ ಕಾರ್ಯವನ್ನು ರಶ್ಮಿಕಾ ಮಂದಣ್ಣ ಅವರು ಶ್ಲಾಘಿಸಿದ್ದು, ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಅವರು ಹೆಮ್ಮೆಯಿಂದ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page