Connect with us

DAKSHINA KANNADA

ಕುಲಾಲ ಫ್ಯಾಮಿಲಿ ಯುಎಇ ಆಯೋಜನೆಯಲ್ಲಿ ಶ್ರೀಸತ್ಯನಾರಾಯಣ ಪೂಜೆ

Published

on

ಮಂಗಳೂರು/ದುಬೈ : ದುಬೈನ ಗ್ಲೆಂಡೆಲ್ ಅಂತಾರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್  ಹಾಗೂ ಕೆ.ವಿ.ಅಡಿಗರ ಪೌರೋಹಿತ್ಯದಲ್ಲಿ, ಕುಲಾಲ ಫ್ಯಾಮಿಲಿ ಯುಎಇ ಆಯೋಜನೆಯ ಶ್ರೀಸತ್ಯನಾರಾಯಣ ದೇವರ ಪೂಜೆ ಸಂಪನ್ನಗೊಂಡಿತು.

ಪದ್ಮರಾಜ್ ಕುಲಾಲ್ ಎಕ್ಕಾರ್ ನೇತೃತ್ವದಲ್ಲಿ ಹಾಗೂ ಅವರ ಜೊತೆಗೆ ಕೈ ಜೋಡಿಸಿದ ಕುಲಾಲ ಪ್ಯಾಮಿಲಿ ಅಡ್ಮಿನ್ ಬಳಗ ಆಯೋಜಿಸಿದ ಪೂಜಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು.

ಕುಲಾಲ ಪ್ಯಾಮಿಲಿಯ ಸುಮಂಗಲಿಯರು, ದೀಪ ಪ್ರಜ್ವಲನೆ ಮಾಡುವ ಮೂಲಕ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿತು. ಸುಜಾತ ಹಾಗೂ ಕಿರಣ್ ಕುಲಾಲ್ ದಂಪತಿ ಪೂಜೆಯ ಸಂಕಲ್ಪದಲ್ಲಿ ಪಾಲುಗೊಂಡರು.  ಪದ್ಮರಾಜ್ ಎಕ್ಕಾರ್, ರಾಜೇಶ್ ಶೆಣೈ ಹಾಗೂ  ಸಚಿನ್ ಕುಲಾಲ್ ಶ್ರೀವಿಷ್ಣು ಸಹಸ್ರನಾಮಾವಳಿ ಪಠಣ ಮಾಡಿದರು.

ಶ್ರೀ ಓಂ ಶ್ರೀ ಭಕ್ತ ವೃಂದ ಶಾರ್ಜಾ ಇವರಿಂದ ಭಜನೆ ಸಂಕೀರ್ತನೆ ನಡೆಯಿತು. ಕುಲಾಲ ಸಮಾಜದ ಬಾಂಧವರು ನಡೆಸಿಕೊಟ್ಟ ಕುಣಿತ ಭಜನೆ ಸೇರಿದ ಭಕ್ತ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿದುಷಿ ಮಧುರಾ ವಿಶ್ವನಾಥ್ ಗಾಯನದ ಮುಖೇನ ನಡೆಸಿಕೊಟ್ಟ ಸತ್ಯನಾರಾಯಣ ದೇವರ ಕಥಾ ಕಾಲಕ್ಷೇಪಕ್ಕೆ ಸೇರಿದ ಭಕ್ತ ಸಮೂಹ ಭಾವಪರವಶರಾದರು.

ಇದನ್ನೂ ಓದಿ : ಓಮನ್‌ನಲ್ಲಿ ಭೀಕರ ಅಪಘಾತ; ಕಾಪು ಯುವಕ ಸಹಿತ ಮೂವರು ಸಾವು

ಮಹಾಮಂಗಳಾರತಿ ಬಳಿಕ ದಾನಿಗಳನ್ನು ಗೌರವಿಸಿ, ಶ್ರೀ ದೇವರ ಪ್ರಸಾದ ನೀಡಲಾಯಿತು. ಹಾಗೂ ಭಕ್ತಾದಿಗಳು ಎಲ್ಲರೂ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಿ ಸಂತುಷ್ಟರಾದರು. ದುಬೈಯ ಹಲವು ಸಮಾಜದ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.

 

DAKSHINA KANNADA

ಭಾ.ಜ.ಪ ಜಿಲ್ಲಾ ಓಬಿಸಿ ಮೋರ್ಚಾ ಸಮಿತಿ : ಉಪಾಧ್ಯಕ್ಷರಾಗಿ ಪುರುಷೋತ್ತಮ ಸಾಲ್ಯಾನ್ ಆಯ್ಕೆ

Published

on

ಬಂಟ್ವಾಳ:  ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಓಬಿಸಿ ಮೋರ್ಚಾ ಸಮಿತಿ ಉಪಾಧ್ಯಕ್ಷರಾಗಿ ಪುರುಷೋತ್ತಮ ಸಾಲ್ಯಾನ್ ಆಯ್ಕೆಯಾಗಿದ್ದಾರೆ.

ಪುರುಷೋತ್ತಮ ಸಾಲ್ಯಾನ್  ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ : ಶಂಭೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘ : ಪುರುಷೋತ್ತಮ ಸಾಲ್ಯಾನ್ ಅಧ್ಯಕ್ಷರಾಗಿ ಪುನರಾಯ್ಕೆ

ಅಷ್ಟೇ ಅಲ್ಲದೆ, ಧಾರ್ಮಿಕ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ.

Continue Reading

DAKSHINA KANNADA

ಶಂಭೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘ : ಪುರುಷೋತ್ತಮ ಸಾಲ್ಯಾನ್ ಅಧ್ಯಕ್ಷರಾಗಿ ಪುನರಾಯ್ಕೆ

Published

on

ಬಂಟ್ವಾಳ: ಮೂರ್ತೆದಾರರ ಸೇವಾ ಸಹಕಾರ ಸಂಘ ನಿ. ಶಂಭೂರು ಇದರ 2026-2031ನೇ ಸಾಲಿಗೆ ಅಧ್ಯಕ್ಷರಾಗಿ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಹಾಗೂ ಉಪಾಧ್ಯಕ್ಷರಾಗಿ ಮಾಧವ ಪೂಜಾರಿ ಕರ್ಬೆಟ್ಟು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಈ ಆಯ್ಕೆ ಪ್ರಕಿಯೆ ನಡೆದಿದ್ದು, ನಿರ್ದೇಶಕರಾಗಿ ಮೋನಪ್ಪ ಪೂಜಾರಿ ಬೊಂಡಾಲ, ಗೋಪಾಲ ಸುವರ್ಣ ಬಿ.ಸಿ.ರೋಡು, ಕೃಷ್ಣಪ್ಪ ಪೂಜಾರಿ ಬಾಳ್ತಿಲ, ಶ್ರೀಶ ಆರ್. ರಾಯಸ ನರಿಕೊಂಬು, ಅಶೋಕ್ ಆರ್. ಶಂಭೂರು, ರಾಜೇಶ್ ಶೇಡಿಗುರಿ, ನಾರಾಯಣ ಪೂಜಾರಿ ಕೇದಿಗೆ, ಸುಮತಿ ಮೋನಪ್ಪ ಪೂಜಾರಿ,  ವೇದಾವತಿ ಸುರೇಶ್ ಪೂಜಾರಿ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.

Continue Reading

DAKSHINA KANNADA

ಪುತ್ತೂರು: ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ; ಆರೋಪಿ ಬಂಧನ

Published

on

ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಮುಕೈ ನಿವಾಸಿ ಮಹಮ್ಮದ್ ಶಫೀಕ್ (19) ಬಂಧಿತ ಆರೋಪಿಯಾಗಿದ್ದಾನೆ.

ಮಾರ್ಚ್ 2 ರಂದು ಕೂರ್ನಡ್ಕ ನಿವಾಸಿ ಅಬ್ದುಲ್ ಹಕೀಂ ಎಂಬವರಿಗೆ ದರ್ಬೆ ರಿಲಾಯನ್ಸ್ ಬಳಿ ದ್ವಿಚಕ್ರ ವಾಹನದಲ್ಲಿ ಹೆಲ್ಮಟ್ ಧರಿಸದೆ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಪಿಸ್ತೂಲ್ ತೋರಿಸಿ ಗುಂಡು ಹೊಡೆಯಲು ಪ್ರಯತ್ನಿಸಿದ್ದರು ಎಂಬ ದೂರಿಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್‌ಗಳು ಪತ್ತೆ; ಪುದು ಗ್ರಾಮಸ್ಥರಲ್ಲಿ ಆತಂಕ!

ಈ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರು ಪೇಟೆಯಾದ್ಯಂತ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿದಾಗ ದರ್ಬೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಆರೋಪಿ ಮಹಮ್ಮದ್ ಶಫೀಕ್ ಪತ್ತೆಯಾಗಿದ್ದಾನೆ. ಆತ ದರ್ಬೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದು ಅಲ್ಲಿಂದ ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page