Connect with us

LATEST NEWS

ಮಂಡ್ಯ: ವಿಹೆಚ್‌ಪಿಯಿಂದ ‘ಆಂಜನೇಯ ದೇಗುಲ ಚಲೋ’- ಶ್ರೀರಂಗಪಟ್ಟಣದಲ್ಲಿ ಸೆಕ್ಷನ್‌ 144 ಜಾರಿ

Published

on

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಇಂದು ಆಂಜನೇಯಸ್ವಾಮಿ ಮೂಲ ಮಂದಿರ ಚಲೋಗೆ ಕರೆ ನೀಡಿದ್ದಾರೆ. ಈ ಮಧ್ಯೆ ಶ್ರೀರಂಗಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಗೊಳಿಸಲಾಗಿದೆ. ಈ ಮಧ್ಯೆ ಆಂಜನೇಯ ಚಲೋ ಆರಂಭವಾಗಿದೆ.


ತಹಶೀಲ್ದಾರ್ ಶ್ವೇತಾ ರವೀಂದ್ರ ಅವರು ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಸಭೆ, ಮೆರವಣಿಗೆ, ಪ್ರತಿಭಟನೆ ಅಥವಾ ರಥಯಾತ್ರೆಗಳನ್ನು ನಿರ್ಬಂಧಿಸಿದ್ದಾರೆ. ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಗಳು ಜೂನ್ 3ರ ಸಂಜೆ 6 ಗಂಟೆಯಿಂದ ಜೂನ್.5ರ ಬೆಳಿಗ್ಗೆ 6 ಗಂಟೆಯವರೆಗೆ ಸೆಕ್ಷನ್144 ಜಾರಿಯಲ್ಲಿರಲಿದೆ.
ಮಂದಿರಕ್ಕೆ ಚಲೋ ಹಿನ್ನೆಲೆಯಲ್ಲಿ ಪ್ರತೀ ಶನಿವಾರ ನಡೆಯುವ ಸಂತೆಯನ್ನು ಮುಂದೂಡಿ ಪುರಸಭಾ ಮುಖ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.


ಈ ನಡುವೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡಿರುವ ಅಧಿಕಾರಿಗಳು, ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಿದ್ದಾರೆ.

500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ನಾಲ್ಕು ಕಡೆ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಎಸ್’ಪಿ ಎನ್ ಸತೀಶ್ ಅವರ ನೇತೃತ್ವದಲ್ಲಿ ರೂಟ್ ಮಾರ್ಚ್ ಕೂಡ ನಡೆಯಲಿದೆ.

ಈ ಕುರಿತು ಜಿಲ್ಲಾಧಿಕಾರಿ ಡಾ.ಅಶ್ವಥಿಯವರು ಮಾತನಾಡಿ, ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಹಿಂದೂಪರ ಸಂಘಟನೆಗಳ ಮನವಿಯನ್ನು ಭಾರತೀಯ ಪುರಾತತ್ವ ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿಗಾಗಿ ಕಾಯುತ್ತಿದ್ದೇವೆಂದು ಹೇಳಿದ್ದಾರೆ.

DAKSHINA KANNADA

15 ಫೀಟ್ ಆಳಕ್ಕೆ ಉರು*ಳಿದ ಕಾರು; ತಪ್ಪಿದ ಭಾರೀ ದುರಂ*ತ

Published

on

ಉಳ್ಳಾಲ : ಚಾಲಕನ ನಿಯಂತ್ರಣ ತಪ್ಪಿದ ಕಾರು ನದಿಯ ತೀರಕ್ಕೆ ಉ*ರುಳಿ ಬಿದ್ದ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ನಡೆದಿದೆ. ಕಲ್ಲಾಪುವಿನ ರಾಷ್ಟ್ರೀಯ ಹೆದ್ದಾರಿಯಿಂದ ಗುಳಿಗ ಕೊರಗಜ್ಜ ಶಿಲೆಯ ಪ್ರಧಾನ ಆದಿಸ್ಥಳಕ್ಕೆ ಹೋಗುವ ದಾರಿಯಲ್ಲಿ ಈ ಘಟನೆ ನಡೆದಿದೆ.

ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಕಾರು ಚಲಿಸುತ್ತಿತ್ತು. ಅಗಲ ಕಿರಿದಾದ ರಸ್ತೆ ಇದಾಗಿದ್ದು, ಹೆದ್ದಾರಿಯಿಂದ ತಿರುವು ಪಡೆದುಕೊಂಡ ಕಾರು  15 ಫೀಟ್ ಆಳಕ್ಕೆ ಉ*ರುಳಿ ಬಿದ್ದಿದೆ. ಅದೃಷ್ಟವಶಾತ್, ನದಿಯ ನೀರಿಗೆ ಬೀಳದೆ ಕಸಕಡ್ಡಿ ತುಂಬಿದ್ದ ಜಾಗದಲ್ಲಿ ಕಾರು ಸಿ*ಲುಕಿಕೊಂಡಿದೆ. ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಅಪ*ಘಾತ ನಡೆದ ತಕ್ಷಣ ಕಾರಿನಿಂದ ಹೊರಬಂದಿದ್ದಾರೆಯಾದ್ರೂ ಸ್ಥಳದಲ್ಲಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ : ಸ್ಕೂಟರ್‌ಗೆ ಅಡ್ಡ ಬಂದ ಕಾಡುಹಂದಿ; ರಸ್ತೆಗೆಸೆಯಲ್ಪಟ್ಟು ಹಿಂಬದಿ ಸವಾರೆ ಸಾ*ವು

ಕೊರಗಜ್ಜನ ದೈವಸ್ಥಾನಕ್ಕೆ ಹೋಗುವ ದಾರಿಯ ಫಲಕಕ್ಕೆ ಡಿ*ಕ್ಕಿ ಹೊಡೆದು ಕಾರು ನದಿಪಾತ್ರಕ್ಕೆ ಉರುಳಿ ಬಿದ್ದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಾರಿನಲ್ಲಿದ್ದವರು ಗಾ*ಯಗೊಂಡ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ತೆರಳಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ.

 

Continue Reading

LATEST NEWS

ಕಲ್ಲು ಬಂಡೆ ಸ್ಪೋಟಿಸುತ್ತಿದ್ದಾಗ ಏಕಾಏಕಿ ಉರುಳಿ ಬಿದ್ದ ಕಲ್ಲು; ಓರ್ವ ಸಾವು, ಇಬ್ಬರಿಗೆ ಗಂಭೀರ

Published

on

ಕೋಲಾರ: ಬಂಡೆ ಸ್ಪೋಟಿಸುತ್ತಿದ್ದಾಗ ಏಕಾಏಕಿ ಕಲ್ಲು ಬಂಡೆ ಜಾರಿ ಬಿದ್ದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗೊಂಡ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಕಾರಹಳ್ಳಿಯಲ್ಲಿ ನಡೆದಿದೆ.

ಆಂಧ್ರಪ್ರದೇಶದ ವೆಂಕಟೇಶ್(60) ಮೃತ ಕಾರ್ಮಿಕ. ಅಲ್ಲದೇ ಹರೀಶ್ ಹಾಗೂ ಈಶ್ವರ್ ಎಂಬುವವರಿಗೆ ಗಂಭೀರವಾಗಿ ಗಾಯವಾಗಿದೆ. ಅವರನ್ನು ಕೋಲಾರ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಡೆ ಒಡೆಯಲು ಸಿದ್ದತೆ ನಡೆಸುತ್ತಿದ್ದಾಗ ಆಕಸ್ಮತ್‌ ಆಗಿ ಬಂಡೆ ಸಡಿಲಗೊಂಡು ಉರುಳಿ ಬಿದ್ದಿದೆ. ಘಟನಾ ಸ್ಥಳಕ್ಕೆ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

9 ತಿಂಗಳ ಬಳಿಕ ಮಾ.18ರಂದು ಸುನಿತಾ ಭೂಮಿಗೆ ವಾಪಸ್; ಗಗನಯಾನಿಗಳ ಸಂಬಳ ಎಷ್ಟಿರುತ್ತೆ ಗೊತ್ತಾ?

Published

on

ಮಂಗಳೂರು/ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಸಿಲುಕಿರುವ ಭಾರತೀಯ ಮೂಲದ ಅಮೆರಿಕ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್‌ಮೋರ್ ಭೂಮಿಗೆ ಬರುವ ದಿನಾಂಕ ನಿಗದಿಯಾಗಿದೆ ಎಂದು ನಾಸಾ ತಿಳಿಸಿದೆ.


ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿಯೇ ಸುನಿತಾ ವಿಲಿಯಮ್ಸ್​ ಭೂಮಿಗೆ ವಾಪಸ್ ಆಗಲಿದ್ದಾರೆ. ಈ ಮೊದಲು ಮಾರ್ಚ್​ 19ಕ್ಕೆ ಸುನಿತಾ ವಿಲಿಯಮ್ಸ್ ಭೂಮಿಗೆ ಬರುತ್ತಾರೆ ಎಂದು ನಾಸಾ ತಿಳಿಸಿತ್ತು.

ಆದರೆ ಇದೀಗ ಮತ್ತೊಂದು ಅಪ್​ಡೇಟ್ಸ್ ನೀಡಿರುವ ನಾಸಾ, ತನ್ನ ಎಕ್ಸ್ ಖಾತೆಯಲ್ಲಿ ಸಂತಸದ ವಿಚಾರವನ್ನು ಹಂಚಿಕೊಂಡಿದೆ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್‌ಮೋರ್ ಮಾರ್ಚ್​ 18 ರಂದು ಭೂಮಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿಸಿದೆ. ನಾಳೆ ಸಂಜೆ 5.57ರ ಸುಮಾರಿಗೆ ಭೂಮಿಗೆ ಲ್ಯಾಂಡ್ ಆಗುವ ನಿರೀಕ್ಷೆ ಇದೆ ಎಂದು ನಾಸಾ ತಿಳಿಸಿದೆ. ಫ್ಲೊರಿಡಾದ ಕಡಲ ತೀರಕ್ಕೆ ಲ್ಯಾಂಡ್ (Splash Down Off) ಆಗಲಿದ್ದಾರೆ.

ಬುಚ್ ವಿಲ್ಮೋರ್ ಹಾಗೂ ಸುನಿತಾ ವಿಲಿಯಮ್ಸ್ ಜೊತೆ ನಾಸಾದ ಗಗನಯಾನಿ ನಿಕ್ ಹೇಗ್, ರಷ್ಯಾದ ಗಗನಯಾನಿ ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಹಿಂತಿರುಗಲಿದ್ದಾರೆ.

ಇದನ್ನೂ ಓದಿ: ಬ್ಯಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್‌ ಈಗ ಹೇಗಿದ್ದಾರೆ ಗೊತ್ತಾ ?

ಗಗನಯಾನಿಗಳ ಸಂಬಳ ಎಷ್ಟು?
ಬಾಹ್ಯಾಕಾಶ ನಿಲ್ದಾಣದಲ್ಲಿ ತಿಂಗಳುಗಟ್ಟಲೆ ಕಳೆದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲೋರ್ ಅವರಿಗೆ NASA ಎಷ್ಟು ಹಣವನ್ನು ಪಾವತಿಸುತ್ತದೆ ಎಂಬುದರ ಕುರಿತು ಚರ್ಚೆಯೂ ನಡೆಯುತ್ತಿದೆ. ಈ ಸಮಯದಲ್ಲಿ ಗಗನಯಾತ್ರಿಗಳ ವೇತನ ಭತ್ಯೆಗಳ ಕುರಿತು ಹಲವಾರು ವರದಿಗಳು ಬೆಳಕಿಗೆ ಬಂದಿವೆ.

ಗಗನಯಾನಿಗಳ ಸಂಬಳ ಅವರು ಕಾರ್ಯನಿರ್ವಹಿಸುವ ಆಯಾ ಬಾಹ್ಯಾಕಾಶ ಸಂಸ್ಥೆಗ ಮೇಲೆ . ಅದರ ಜೊತೆಗೆ ಅವರ ಅನುಭವ ಹಾಗೂ ನೀಡಿರುವ ಜವಾಬ್ದಾರಿಗಳು ಕೂಡ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇನ್ನು ನಿವೃತ್ತ ನೌಕಾದಳದ ಕ್ಯಾಪ್ಟನ್ ಸುನೀತಾ ವಿಲಿಯಮ್ಸ್ ಗೆ ನೀಡಿದ ಸಂಬಳದ ಬಗ್ಗೆ ಹಲವು ಮಾಧ್ಯಮಗಳು ಹಲವು ರೀತಿಯ ಅಂಕಿ ಸಂಖ್ಯೆಗಳು ಕೊಟ್ಟಿವೆ.

ನಾಸಾದ ಅತ್ಯುನ್ನತ ಜಿಎಸ್‌-15 ವೇತನ ಶ್ರೇಣಿ ಹೊಂದಿರುವ ಸರಕಾರಿ ನೌಕರರಾಗಿರುವ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್‌ಮೋರ್‌ ಅವರು ವಾರ್ಷಿಕ ವೇತನವಾಗಿ 1.08 ಕೋಟಿ ರೂ.ಗಳಿಂದ 1.41 ಕೋಟಿ ರೂ.ವರೆಗೆ ಪಡೆಯುತ್ತಾರೆ. ಆದರೆ, ಸದ್ಯ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ದಲ್ಲಿ ಹೆಚ್ಚುವರಿಯಾಗಿ 9 ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಸುನಿತಾ, ಬುಚ್‌ ಅವರಿಗೆ ಹೆಚ್ಚುವರಿಯಾಗಿ ಕೇವಲ 1 ಲಕ್ಷ ರೂ.ವರೆಗೆ (1,148 ಡಾಲರ್‌) ಪಡೆಯಬಹುದು. ಅದರ ಜೊತೆಗೆ ಇನ್ಸೂರೆನ್ಸ್, ಆರೋಗ್ಯ ಸೌಲಭ್ಯ ಮತ್ತು ಪಿಂಚಣಿಗಳನ್ನು ಕೂಡ ಇವರಿಗೆ ನೀಡಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page