Connect with us

LATEST NEWS

ಶಿಕ್ಷಕಿಯರ ಶೌಚಾಲಯದೊಳಗೆ ಸ್ಪೈ ಕ್ಯಾಮರಾ; ಶಾಲಾ ನಿರ್ದೇಶಕ ಅರೆಸ್ಟ್

Published

on

ಮಂಗಳೂರು/ನೋಯ್ಡಾ: ಶಿಕ್ಷಕಿಯರ ಶೌಚಾಲಯದಲ್ಲಿ ಸ್ಪೈ ಕ್ಯಾಮರಾ ಇಟ್ಟಿದ್ದ ಶಾಲೆಯ ನಿರ್ದೇಶಕನನ್ನು ಪೊಲೀಸರು ಬಂಧಿಸಿರುವ ಘಟನೆ ನೋಯ್ಡಾದ ನೋಯ್ಡಾದ ಸೆಕ್ಟರ್ 70 ರ ಪ್ಲೇ ಸ್ಕೂಲ್ ಆದ ಲರ್ನ್ ವಿತ್ ಫನ್‌ನಲ್ಲಿ ನಡೆದಿದೆ.

ಶಿಕ್ಷಕಿಯರ ವಾಶ್​ರೂಮನ್​ ಬಲ್ಬ್​ ಸಾಕೆಟ್​ನಲ್ಲಿ ಸ್ಪೈ ಕ್ಯಾಮರಾವನ್ನು ಇಟ್ಟಿದ್ದ ಆರೋಪಿ ತನ್ನ ಕಂಪ್ಯೂಟರ್​ ಹಾಗೂ ಮೊಬೈಲ್ ಮೂಲಕ ವಾಶ್​ರೂಂನ ವಿಡಿಯೋವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ. ಈ ಕುರಿತು ಶಿಕ್ಷಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಡಿಸೆಂಬರ್ 10 ರಂದು ಶಿಕ್ಷಕಿಯೊಬ್ಬರು ವಾಶ್‌ರೂಮ್‌ನ ಬಲ್ಬ್ ಹೋಲ್ಡರ್‌ನಲ್ಲಿ ಅಸಹಜವಾದದ್ದನ್ನು ಗಮನಿಸಿದರು. ಹೋಲ್ಡರ್​ನಲ್ಲಿ ಮಸುಕಾದ ಬೆಳಕಿರುವುದನ್ನು ಗಮನಿಸಿದರು. ಅದು ಅನುಮಾನವನ್ನು ಹುಟ್ಟುಹಾಕಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಸ್ಪೈ ಕ್ಯಾಮರಾ ಇರುವುದು ಕಂಡುಬಂದಿತ್ತು. ಶಿಕ್ಷಕಿಯು ಶಾಲೆಯ ನಿರ್ದೇಶಕ ನವನಿಷ್ ಸಹಾಯ್ ಮತ್ತು ಶಾಲೆಯ ಸಂಯೋಜಕರಾದ ಪಾರುಲ್ ಅವರಿಗೆ ವಿಷಯ ತಿಳಿಸಿದ್ದಾರೆ. ಅವರು ಆರೋಪಗಳನ್ನು ನಿರಾಕರಿಸಿದರು. ಸಹಾಯ್ ಅಥವಾ ಪಾರುಲ್ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕಿ ಆರೋಪಿಸಿದ್ದಾರೆ.

ಶಿಕ್ಷಕಿಯ ದೂರಿನ ಮೇರೆಗೆ ನೋಯ್ಡಾದ ಕೇಂದ್ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಕ್ತಿ ಮೋಹನ್ ಅವಸ್ತಿ ಅವರು ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೆಕಾರ್ಡ್​ ಮಾಡದೆಯೇ ಲೈವ್​ ಸ್ಟ್ರೀಮಿಂಗ್ ಮಾಡುವ ಸಾಮರ್ಥ್ಯವನ್ನು ಅದು ಹೊಂದಿದೆ. ವಿಚಾರಣೆಯ ಸಮಯದಲ್ಲಿ ಸಹಾಯ್ ತಾನು ಆನ್‌ಲೈನ್‌ನಲ್ಲಿ 22,000 ರೂ. ಕ್ಕೆ ಸ್ಪೈ ಕ್ಯಾಮೆರಾವನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಸಾಧನವನ್ನು ನಿರ್ದಿಷ್ಟವಾಗಿ ಬಲ್ಬ್ ಹೋಲ್ಡರ್‌ನೊಳಗೆ ಮರೆಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಸಾಮಾನ್ಯವಾಗಿ ಯಾರ ಕಣ್ಣಿಗೂ ಕಾಣಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಈ ಹಿಂದೆ ಶಾಲೆಯ ಶೌಚಾಲಯದಲ್ಲಿ ಇದೇ ರೀತಿಯ ಪತ್ತೇದಾರಿ ಕ್ಯಾಮೆರಾ ಸಿಕ್ಕಿತ್ತು ಇದು ಮೊದಲಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ. ಅದನ್ನು ಪಾರುಲ್​ಗೆ ಹಸ್ತಾಂತರಿಸಲಾಗಿತ್ತು ಆದರೆ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದರು.

LATEST NEWS

ಉಡುಪಿಯಲ್ಲಿ ಬಂದ್‌ಗೆ ಬೆಂಬಲವಿಲ್ಲ; ಜನಜೀವನ ಯಥಾಸ್ಥಿತಿ

Published

on

ಉಡುಪಿ : ಇಂದು (ಮಾ.22) ಕರ್ನಾಟಕ ಬಂದ್ ಎಂದು ಘೋಷಣೆಯಾಗಿದೆ. ಆದರೆ ರಾಜ್ಯದ ಕರಾವಳಿ ಭಾಗವಾದ ಉಡುಪಿಯಲ್ಲಿ ಯಾವುದೇ ರೀತಿಯಿಂದಲೂ ಬಂದ್‌ಗೆ ಬೆಂಬಲ ಇಲ್ಲದ ಕಾರಣ ಎಂದಿನಂತೆ ಯಥಾಸ್ಥಿತಿಯಲ್ಲಿದೆ.

ಉಡುಪಿಯಲ್ಲಿ ಬಂದ್ ಇಲ್ಲ, ಎಂದಿನಂತೆ ಜನಜೀವನ ಓಡಾಟ ಇದೆ. ಖಾಸಗಿ ಬಸ್‌ಗಳು ಎಂದಿನಂತೆ ಇದೆ. ಅಂತೆಯೃ ಸರ್ಕಾರಿ ಬಸ್‌ಗಳು ಸಹ ಪ್ರತಿನಿತ್ಯದಂತೆ ಓಡಾಟ ನಡೆಸುತ್ತಿದೆ. ಆಟೋ ಕ್ಯಾಬ್ ಸಂಚಾರದಲ್ಲೂ ಯಾವುದೇ ಬದಲಾವಣೆಗಳಿಲ್ಲ.

ಉಎಉಪಿಯಲ್ಲಿ ಬಂದ್‌ಗೆ ಬೆಂಬಲವಿಲ್ಲ ಹಾಗೂ ಯಾವುದೇ ಪ್ರತಿಭಟನೆಗಳು ನಡೆಯುವ ಮುನ್ಸೂಚನೆಯೂ ಇಲ್ಲ. ನಗರದಾದ್ಯಂತ ಅಂಗಡಿಗಳು ತೆರೆದಿದ್ದು, ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆಯುತ್ತಿದೆ.

Continue Reading

LATEST NEWS

ಬೆಂಕಿಯಲ್ಲ … ಬಾಹ್ಯಾಕಾಶದಲ್ಲಿ ಅರಳಿದ ಈ ಹೂವಿನ ಬಗ್ಗೆ ನಿಮಗೆಷ್ಟುಗೊತ್ತು ..?

Published

on

ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಿದ್ದ ಕೆಲಸಗಳನ್ನು ಪ್ರಸ್ತುತ ಮಾಡಲು ಸಾಧ್ಯವಾಗುತ್ತಿದೆ. ಅಂದರೆ ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿದೆ ಎಂದರ್ಥ. ಹೀಗಿರುವಾಗ ಜಗತ್ತಿಗೆ ಹೊಸ ಸಂಶೋಧನೆ ಪರಿಚಯಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ನಾಸಾ, ಬಾಹ್ಯಾಕಾಶದಲ್ಲಿ ಹೂ ಅರಳಿದ್ದ ಚಿತ್ರವನ್ನು ಪ್ರಕಟಿಸಿತ್ತು. ಆ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದವು. ನೀವೂ ಒಮ್ಮೆ ನೋಡಿ…

ಈ ಒಂದು ಚಿತ್ರ ಇಡೀ ವಿಶ್ವವನ್ನೇ ಅಚ್ಚರಿಗೆ ನೂಕಿತ್ತು. ಯಾಕೆಂದರೆ, ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಹೂವೊಂದು ಅರಳಿತ್ತು. ಈ ಫೋಟೋ ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಹೂವಿನಾದ ಆರೆಂಜ್ ಜಿನ್ನಿಯಾದ ಕ್ಲೋಸ್‌ಅಪ್‌ ಫೋಟೋ ಆಗಿತ್ತು. ಹೂವಿನ ಹಿನ್ನಲೆಯಲ್ಲಿ ಭೂಮಿಯನ್ನು ಕಾಣಬಹುದಾಗಿತ್ತು. ವಿಜ್ಞಾನಿಗಳು 1970 ರ ದಶಕದಿಂದಲೂ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಆದರೆ ಈ ನಿರ್ದಿಷ್ಟ ಪ್ರಯೋಗವನ್ನು 2015 ರಲ್ಲಿ ನಾಸಾ ಗಗನಯಾತ್ರಿ ಕೆಜೆಲ್ ಲಿಂಡ್‌ಗ್ರೆನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಾರಂಭಿಸಿದರು.

ಈ ಹೂವಿನ ಬೆಳವಣಿಗೆಯು VEG-01 ಪ್ರಯೋಗದ ಒಂದು ಭಾಗವಾಗಿದೆ ಎಂದು ನಾಸಾ ತಿಳಿಸಿತ್ತು. ನಾಸಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರವನ್ನು 2016ರಲ್ಲಿ ಪ್ರಕಟ ಮಾಡಿತ್ತು. ಈ ಹೂವು ಬೆಳೆಸಿದ್ದರ ಹಿಂದೆ ಕಾರಣವೂ ಇತ್ತು. ಐಎಸ್‌ಎಸ್‌ನಲ್ಲಿನ ವೆಗ್ಗ-01 ಸೌಲಭ್ಯದ ಕಕ್ಷೆಯ ಮೇಲಿನ ಕಾರ್ಯಾಚರಣೆ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿ ಮಾಡಲಾಗಿತ್ತು. ಬಾಹ್ಯಾಕಾಶದಲ್ಲಿ ಮೊಳಕೆ ಬೆಳವಣಿಗೆ ಹೇಗಾಗುತ್ತದೆ, ಜೊತೆಗೆ ಸಸ್ಯಗಳು ಮತ್ತು ಸೌಲಭ್ಯದ ಮೇಲಿನ ಸೂಕ್ಷ್ಮಜೀವಿಯ ಸಸ್ಯವರ್ಗದ ಸಂಯೋಜನೆಯನ್ನು ಕೇಂದ್ರೀಕರಿಸಿತ್ತು. ಜಿನ್ನಿಯಾಗಳನ್ನು 60 ದಿನಗಳವರೆಗೆ ಬೆಳೆಸಲಾಯಿತು ಮತ್ತು ಈ ಅವಧಿಯಲ್ಲಿ ಹಲವು ಹೂವುಗಳು ಅರಳಿದ್ದವು.

“ಈ ಜಿನ್ನಿಯಾವನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ವೆಗ್ಗಿ ಸೌಲಭ್ಯದ ಭಾಗವಾಗಿ ಕಕ್ಷೆಯಲ್ಲಿ ಬೆಳೆಸಲಾಯಿತು” ಎಂದು ನಾಸಾ ತಿಳಿಸಿತ್ತು. “ನಮ್ಮ ಬಾಹ್ಯಾಕಾಶ ಉದ್ಯಾನವು ಕೇವಲ ಪ್ರದರ್ಶನಕ್ಕಾಗಿ ಅಲ್ಲ: ಸಸ್ಯಗಳು ಕಕ್ಷೆಯಲ್ಲಿ ಹೇಗೆ ಬೆಳೆಯುತ್ತವೆ ಎಂಬುದನ್ನು ಕಲಿಯುವುದು ಭೂಮಿಯಿಂದ ಹೊರಗೆ ಬೆಳೆಗಳನ್ನು ಹೇಗೆ ಬೆಳೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ, ಚಂದ್ರ, ಮಂಗಳ ಮತ್ತು ಅದರಾಚೆಗೆ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ತಾಜಾ ಆಹಾರದ ಅಮೂಲ್ಯ ಮೂಲವನ್ನು ಒದಗಿಸುತ್ತದೆ.” ಎಂದು ನಾಸಾ ತಿಳಿಸಿತ್ತು.

Continue Reading

LATEST NEWS

ಪತ್ನಿಗೆ ವಿಡಿಯೋ ಕಾಲ್ ಮಾಡಿ ಖ್ಯಾತ ಪತ್ರಕರ್ತ ಆತ್ಮಹತ್ಯೆ; ಕಾರಣ ನಿಗೂಢ ..!

Published

on

ಮಂಗಳೂರು/ಗದಗ : ನ್ಯೂಸ್‌ಗೆ ಬೇಕಾಗುವ ದೃಶ್ಯಾವಳಿಗಳನ್ನ ಸೆರೆ ಹಿಡಿಯುವಲ್ಲಿ ಪರಿಣತರಾಗಿದ್ದು, ಒಂದೇ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದ ರವಿ ಗಿರಣಿ ನಿನ್ನೆ (ಮಾ.21) ಸಂಜೆ ಸಾವನ್ನಪ್ಪಿದ್ದಾರೆ. ಈ ಸುದ್ಧಿ ಪತ್ರಕರ್ತ ವಲಯಕ್ಕೆ ನೋವುಂಟು ಮಾಡಿದೆ.

ಟಿವಿ9 ಪ್ರಾರಂಭವಾದ ಮೊದಲ ದಿನದಿಂದಲೇ ಹುಬ್ಬಳ್ಳಿ ಕ್ಯಾಮೆರಾಮೆನ್ ಆಗಿ ಸೇರಿಕೊಂಡಿದ್ದರು. ಬಳಿಕ ದಾವಣಗೆರೆ , ಮಂಗಳೂರು ಬಳಿಕ ಪ್ರಸ್ತುತ ಗದಗದಲ್ಲಿ ಕೆಲಸ ಮಾಡಿದ್ದರು. ಮಂಗಳೂರಿನಲ್ಲಿ ಅನೇಕ ವರ್ಷ ಕೆಲಸ ಮಾಡಿರುವ ರವಿ ಗಿರಣಿ ಜಿಲ್ಲೆಯಲ್ಲಿ ಅನೇಖ ಸ್ನೇಹಿತರನ್ನು ಪಡೆದುಕೊಂಡಿದ್ದರು.

ಶುಕ್ರವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೋಗಿದ್ದ ಅವರು ಪತ್ನಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದು ಕಾರಣ ಏನು ಎಂದು ತಿಳಿಸಿರಲಿಲ್ಲ. ರವಿ ಅವರ ಪತ್ನಿ ಗಂಗಾವತಿಯಲ್ಲಿ ಶಿಶು ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ತಕ್ಷಣ ಮನೆ ಸಮೀಪದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಜನರು ಬಂದು ನೋಡುವಷ್ಟರಲ್ಲಿಯೇ ರವಿ ಇಹಲೋಕ ತ್ಯಜಿಸಿದ್ದರು.

ರವಿ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page