Connect with us

ಕೊರೊನಾ ಮಾರಿ ಅಟ್ಟಲು 500 ವರ್ಷಗಳ ಹಿಂದಿನ ಗೆಜ್ಜೆಗಿರಿ ನಾಟಿವೈದ್ಯೆಗೆ ಶತೌಷಧಿಗಳ ಕಲಶಾಭಿಷೇಕ.!!

Published

on

ಕೊರೊನಾ ವೈರಸ್ ತಡೆಗಟ್ಟಲು ಮಾತೆ ದೇಯಿ ಬೈದೆತಿಗೆ ಶತೌಷಧಿಗಳ ಕಲಶಾಭಿಷೇಕ ನಡೆಸಿ ವಿಶೇಷ ಪ್ರಾರ್ಥನೆ

ಪುತ್ತೂರು: ಎಲ್ಲೆಡೆ ಒಬ್ಬರಿಂದೊಬ್ಬರ ಜೀವ ಹಿಂಡುತ್ತಿರುವ ಮಹಾಮಾರಿ ಕೊರೊನಾ ಹರಡುವಿಕೆಯಿಂದಾಗಿ ಇಡೀ ವಿಶ್ವವೇ ಥರಥರ ನಡುಗುತ್ತಿದೆ.

ಈ ಮಾರಿ ವೈರಸ್ ಈಗಾಗಲೇ ಭಾರತಕ್ಕೂ ವಕ್ಕರಿಸಿದ್ದು, ಈ ರೋಗ ಎಲ್ಲೆಡೆ ಹರಡದಂತೆ ತಡೆಗಟ್ಟಲು ಸರ್ಕಾರ ತಮ್ಮ ಕೈಲಾದ ಕೆಲಸ ಮಾಡುತ್ತಲೇ ಇದೆ.

ಈ ಮಹಾಮಾರಿ ವೈರಸ್ ಗೆ ಇಲ್ಲಿಯವರೆಗೆ ಲಸಿಕೆ ಎಲ್ಲಿಯೂ, ಯಾರೂ ಕಂಡುಹಿಡಿದಿಲ್ಲ. ಆದ್ರೂ ರೋಗಕ್ಕೆ ಚಿಕಿತ್ಸೆ ನೀಡಲು ವೈದ್ಯರ ಅವಶ್ಯಕತೆಯಂತೂ ಇದ್ದೇ ಇದೆ.

ಇದೀಗ ನಾಟಿ ಮದ್ದಿನ ಮೂಲಕ ಸಾವಿರಾರು ಜನರ ರೋಗಗಳನ್ನು ವಾಸಿಗೊಳಿಸಿದ ನಾಟಿ ವೈದ್ಯೆಯೊಬ್ಬರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶತೌಷಧಿಗಳ ಕಲಶಾಭಿಷೇಕ ಮಾಡಿದ ಅಪರೂಪದ ಘಟನೆ ನಡೆದಿದೆ.

ತನ್ನ ಜೀವಿತಾವಧಿಯಲ್ಲಿ ಸಾವಿರಾರು ಜನರ ರೋಗ ರುಜಿನಗಳನ್ನ ತನ್ನ ಔಷಧಿಗಳ ಮೂಲಕ ಗುಣಮುಖಗೊಳಿಸಿದ ಈ ವೈದ್ಯೆಗೆ ಅಭಿಷೇಕ ನೆರವೇರಿಸುವ ಮೂಲಕ ಕೊರೊನಾ ಎಂಬ ಮಾರಿಯ ನಾಶಕ್ಕೆ ಹರಕೆ ಹೊರಲಾಗಿದೆ.

ಹೌದು ಈ ನಾಟಿ ವೈದ್ಯೆ ಬೇರಾರು ಅಲ್ಲ ಸಾಕ್ಷಾತ್ ದೇವಿ, ಗೆಜ್ಜೆಗಿರಿಯ ಮಹಾಮಾತೆ ದೇಯಿ ಬೈದೆತಿ.

 

ಸರಿಸುಮಾರು ಐನೂರು ವರ್ಷಗಳ ಹಿಂದೆ ತುಳುನಾಡಿನಲ್ಲಿ ನಾಟಿ ವೈದ್ಯ ಪರಂಪರೆಯಲ್ಲಿ ಜನಮಾನಸದಲ್ಲಿ ಹೆಸರು ಗಳಿಸಿದ್ದ ನಾಟಿ ವೈದ್ಯೆ ದೇಯಿ ಬೈದಿತಿಯಾಗಿದ್ದರು.

ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ತಾಯಿಯಾಗಿರುವ ಈಕೆ ತನ್ನ ಅಪೂರ್ವ ನಾಟಿ ವೈದ್ಯೆ ವೃತ್ತಿಯ ಮೂಲಕ ಆ ಕಾಲದಲ್ಲಿ ಖ್ಯಾತಿವೆತ್ತವಳಾಗಿದ್ದರು.

ಸಾವಿರಾರು ಜನರ ರೋಗ-ರುಜಿನಗಳನ್ನಲ್ಲದೆ, ಊರಿನ ರಾಜನ ರೋಗವನ್ನೂ ದೂರಮಾಡಿದ ಈಕೆಯನ್ನು ತುಳುನಾಡಿನ ಜನ ದೈವದ ರೂಪದಲ್ಲಿ ಇಂದು ಆರಾಧಿಸುತ್ತಿದ್ದಾರೆ.

ದೇಶವನ್ನು ಕಾಡುತ್ತಿರುವ ಕೊರೊನಾ ಮಾರಿಯನ್ನು ದೂರ ಮಾಡುವ ಶಕ್ತಿ ಈ ದೇಯಿ ಬೈದೆದಿಗಿದೆ ಎನ್ನುವ ಅಪಾರ ನಂಬಿಕೆಯಿಂದಾಗಿ,

ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಗೆಜ್ಜೆಗಿರಿಯಲ್ಲಿರುವ ಈಕೆಯ ಮೂರ್ತಿಗೆ ನೂರು ಔಷಧೀಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ತಯಾರಿಸಲಾದ ದ್ರವ್ಯಗಳ ವಿಶೇಷ ಕಲಶಾಭಿಷೇಕ ಮಾಡಲಾಯಿತು.

ಸಾಂಪ್ರಾದಾಯಿಕ ನಾಟಿ ವೈದ್ಯ ಪರಂಪರೆಗೆ ತನ್ನದೇ ಆದ ಮಹತ್ವವಿದ್ದು, ಪ್ರಸ್ತುತ ಸನ್ನಿವೇಶದಲ್ಲೂ ಇದು ಅತ್ಯಂತ ಪ್ರಭಾವಶಾಲಿ ಚಿಕಿತ್ಸೆಯಾಗಿಯೂ ಪ್ರಸಿದ್ಧಿಯಲ್ಲಿದೆ.

ಇದೇ ಕಾರಣಕ್ಕಾಗಿಯೇ ಈ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಗಿಡ ಮೂಲಿಕೆಗಳನ್ನೇ ಇಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದೆ.

ನಾಟಿ ಔಷಧಿಯಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿರುವಂತಹ ಅಮೃತಬಳ್ಳಿಯನ್ನು ಇಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಮೂಲಕ ಎಲ್ಲಾ ಭಕ್ತರ ಆರೋಗ್ಯವನ್ನು ಇಲ್ಲಿನ ದೈವಗಳು ಕಾಪಾಡುತ್ತದೆ ಎನ್ನುವ ಅಪಾರ ನಂಬಿಕೆಯೂ ಇಲ್ಲಿದೆ.

ಕೊರೊನಾ ರೋಗ ದೇಶದಲ್ಲೂ ಇದೀಗ ಹರಡುತ್ತಿರುವುದು ಎಲ್ಲರ ಆತಂಕಕ್ಕೂ ಕಾರಣವಾಗಿದೆ.

ಈ ನಿಟ್ಟಿನಲ್ಲಿ ಸರಕಾರಗಳು ತಮ್ಮದೇ ಆದ ನೆಲೆಗಟ್ಟಿನಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಆದರೆ ಸಂಪ್ರದಾಯವಾದಿಗಳಲ್ಲಿ ದೈವಗಳಲ್ಲಿ ಈ ಮಾರಿಯನ್ನು ತಡೆಗಟ್ಟುವ ಶಕ್ತಿಯಿದೆ ಎನ್ನುವ ಅಚಲ ನಂಬಿಕೆಯೂ ಅಡಗಿದೆ.

ಇದೇ ಕಾರಣಕ್ಕಾಗಿ ಕೊರೊನಾ ವಕ್ಕರಿಸಿದ ಸಂಕಷ್ಟದ ಈ ಸಮಯದಲ್ಲಿ ಕರಾವಳಿಯಾದ್ಯಂತ ದೈವ-ದೇವರುಗಳಿಗೆ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿದೆ.

ಇದೇ ರೀತಿ ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರದಲ್ಲೂ ದೇಯಿ ಬೈದೆತಿ ಕ್ಷೇತ್ರದಲ್ಲಿ ವಿಶೇಷ ಹೋಮ-ಹವನಗಳನ್ನೂ ನಡೆಸಲಾಯಿತು.

ಬಳಿಕ ಕ್ಷೇತ್ರಕ್ಕೆ ಬಂದ ಎಲ್ಲಾ ಭಕ್ತಾಧಿಗಳಿಗೂ ದೈವದ ಮೂರ್ತಿಗೆ ಕಲಶಾಭಿಷೇಕ ಮಾಡಿದ ಔಷಧೀಯ ಗುಣಗಳ ದ್ರವ್ಯವನ್ನು ಸಿಂಪಡಿಸಲಾಯಿತು.

ಸ್ವರಕ್ಷಣೆಯ ಜೊತೆ-ಜೊತೆಗೆ ದೈವ-ದೇವರುಗಳ ಅಭಯವೂ ಇದ್ದಲ್ಲಿ ಕೊರೊನಾದಂತಹ ಮಹಾಮಾರಿ ರೋಗ ಹುಲುಮಾನವರನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಸಂಪ್ರದಾಯವಾದಿಗಳದ್ದಾಗಿದೆ.

ಹಾಗಾಗಿ ವಿಜ್ಞಾನದ ಜೊತೆಗೆ ದೈವಿಕ ಶಕ್ತಿಗೂ ಭಾರತದಲ್ಲಿ ಹೆಚ್ಚಿನ ಮಹತ್ವವೂವಿದೆ.

 

Advertisement
Click to comment

Leave a Reply

Your email address will not be published. Required fields are marked *

BELTHANGADY

ಕಾಲೇಜು ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ರಾಜ್ಯ ಗೃಹ ಇಲಾಖೆ ವೈಫಲ್ಯ ಕಾರಣ-ಶಾಸಕ ಪೂಂಜಾ

Published

on

ಬೆಳ್ತಂಗಡಿ: ಕೇವಲ ಬೆಳ್ತಂಗಡಿ ಮಾತ್ರವಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಸೋತಿದೆ. ಈ ಘಟನೆ ಸಣ್ಣ ಘಟನೆಯೇನಲ್ಲ. ಇದರಿಂದ ಜನ ಆತಂಕಕ್ಕೊಳಗಾಗಿದ್ದಾರೆ. ಇದರ ಹಿಂದಿರುವವರನ್ನು ಪತ್ತೆ ಹಚ್ಚಿ ಜನರ ಆತಂಕವನ್ನು ನಿವಾರಿಸುವ ಕೆಲಸವನ್ನು ಗೃಹ ಇಲಾಖೆ ಮಾಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.

ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪೊಲೀಸ್ ಇಲಾಖೆಯ ನಿಷ್ಟ್ರಿಯತೆಯನ್ನು ಗೃಹ ಇಲಾಖೆ ಸರಿಪಡಿಸದೇ ಇದ್ದಲ್ಲಿ ಇಂತಹ ಕಾನೂನು ಉಲ್ಲಂಘಿತ ದುಷ್ಕೃತ್ಯಗಳು ಹೆಚ್ಚಾಗುತ್ತಲೇ ಹೋಗುತ್ತದೆ.

ಅಶಾಂತಿ ನಿರ್ಮಾಣವಾಗುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಈ ಪ್ರಕರಣದ ಬಗ್ಗೆ ಮಾತನಾಡಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.

Continue Reading

BELTHANGADY

ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಕಿಡ್ನ್ಯಾಪ್ ತಪ್ಪಿಸಿ ಬಾಲಕಿಯನ್ನು ರಕ್ಷಿಸಿದ ಅಬ್ಬುಸಾಲಿ !

Published

on

ಬೆಳ್ತಂಗಡಿ: ಸ್ಕೂಟರ್ ನಲ್ಲಿ ಕಾಲೇಜಿಗೆ ಹೋಗುತ್ತಿದ್ದ 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಇಕೋ ಕಾರಿನಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು, ಸಿನಿಮೀಯ ಶೈಲಿಯಲ್ಲಿ ಅಪಹರಣಕ್ಕೆ ಯತ್ನಿಸಿದ ಆತಂಕಕಾರಿ ಘಟನೆ ಇಂದು ಬೆಳ್ತಂಗಡಿಯಲ್ಲಿ  ನಡೆದಿದೆ. ಈ ಘಟನೆ ಊರಿನ ಜನತೆಯನ್ನು ತಲ್ಲಣಗೊಳಿಸಿದೆ.

ಆಕೆಯನ್ನು ಕಾರಿಗೆ ತಳ್ಳಿ ಅಪಹರಣ ಮಾಡಲು ಸಾಧ್ಯವಾಗದೇ ಇದ್ದಾಗ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಇದೇ ವೇಳೆ ಅದೇ ದಾರಿಯಾಗಿ ಬರುತ್ತಿದ್ದ ಅಬ್ಬುಸಾಲಿ ಎಂಬವರು ಬಾಲಕಿಯ ಪಾಲಿಗೆ ಆಪತ್ಭಾಂದವರಾಗಿದ್ದಾರೆ.

ಅಬ್ಬುಸಾಲಿಯನ್ನು ಕಂಡ ಮೂವರು ದುಷ್ಕರ್ಮಿಗಳು ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಕೂಡಲೇ ಅಬ್ಬುಸಾಲಿ  ಭಯಭೀತಗೊಂಡಿದ್ದ ಮತ್ತು ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸಮಯ ಪ್ರಜ್ಞೆ ಮೆರೆದ ಅಬ್ಬುಸಾಲಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಬೆಳ್ತಂಗಡಿ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಇದು ಪೂರ್ವನಿಯೋಜಿತ ಕೃತ್ಯವೇ ಅಥವಾ ದರೋಡೆ ಉದ್ದೇಶವಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

 

Continue Reading

kerala

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!

Published

on

ಕಾಸರಗೋಡು: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ಕಾಸರಗೋಡಿನ ಯುವತಿ ಅಡೂರು ಮೂಲದ ಚಿನ್ನು ಪಾಪು ಎಂಬಾಕೆ ಸಾವನ್ನಪ್ಪಿದ್ದಾರೆ.

ಅವರ ಬಾಡಿಗೆ ಮನೆಯಲ್ಲಿ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page