Connect with us

LATEST NEWS

ಬಿಎಂಟಿಸಿ ಬಸ್ ಡಿಕ್ಕಿಗೆ ಗಂಭೀರ ಗಾಯಗೊಂಡಿದ್ದ ಯೋಧ ಚೇತನ್ ಸಾವು..!

Published

on

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೋಲಾರ ಮೂಲದ ಯೋಧ 22 ವರ್ಷದ ಚೇತನ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

ಕೋಲಾರ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೋಲಾರ ಮೂಲದ ಯೋಧ 22 ವರ್ಷದ ಚೇತನ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ಚೇತನ್ ತಂದೆ ಸುರೇಶ್ ಕೂಡ ನಿವೃತ್ತ ಯೋಧರಾಗಿದ್ದಾರೆ.

ತಂದೆಯಂತೇ ತಾನೂ ಕೂಡ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕೆಂದು ಮಹತ್ತರ ಆಸೆಯೊಂದಿಗೆ ಸೇನೆಗೆ ಸೇರಿದ್ದ ಚೇತನ್​, ಮದ್ರಾಸ್ ರೆಜಿಮೆಂಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೂರು ವರ್ಷ ಪೂರೈಸಿದ್ದ ಚೇತನ್, ರಜೆ ಮೇಲೆ ಊರಿಗೆ ಆಗಮಿಸಿದ್ದರು.

ಅಕ್ಟೋಬರ್ 7ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯ ಬಳಿ ಚೇತನ್​ಗೆ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದಿದ್ದು. ಅಪಘಾತದಲ್ಲಿ ಗಂಭಿರ ಗಾಯಗೊಂಡ ಚೇತನ್​ರನ್ನು ಯಲಹಂಕದ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಿಸದೆ ಇಂದು ಗುರುವಾರ ಮೃತಪಟ್ಟಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದರೆ ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

DAKSHINA KANNADA

ಸದನದಲ್ಲಿ ಗದ್ದಲ; 18 ಬಿಜೆಪಿ ಶಾಸಕರು 6 ತಿಂಗಳು ಅಮಾನತು!

Published

on

ಮಂಗಳೂರು/ ಬೆಂಗಳೂರು :  ಇಂದು ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಿರುವ  ಬಜೆಟ್ ಅಂಗೀಕಾರಗೊಂಡಿದೆ. ಈ ವೇಳೆ ವಿಪಕ್ಷ ಸದಸ್ಯರು ಬಜೆಟ್ ನಲ್ಲಿ ಸೇರಿಸಿರುವ ಕೆಲವೊಂದು ವಿಚಾರಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಸದನದಲ್ಲಿ ಹನಿಟ್ರ್ಯಾಪ್ ವಿಚಾರವೂ ಸದ್ದು ಮಾಡಿದ್ದು, ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟ ನಾಲ್ಕು ಶೇಕಡ ಮೀಸಲಾತಿ ರದ್ದು ಮಾಡುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಅಲ್ಲದೇ, ಸ್ಪೀಕರ್ ಪೀಠಕ್ಕೇರಿದ ವಿಪಕ್ಷ ಸದಸ್ಯರು
ಖಾದರ್ ಮೇಲೆ ಪೇಪರ್‌ಗಳನ್ನು ಹರಿದು ಹಾಕಿ ಗಲಾಟೆ ಮಾಡಿದ್ದರು. ಮಧ್ಯಾಹ್ನ ಭೋಜನ ವಿರಾಮದ ಬಳಿಕವೂ ಇದು ಮುಂದುವರಿದಿತ್ತು.

ಹೀಗಾಗಿ ವಿಧಾನಸಭೆಯ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆ ಕರಾವಳಿಯ ಮೂವರು ಸೇರಿದಂತೆ ಒಟ್ಟು 18 ಬಿಜೆಪಿ ಶಾಸಕರನ್ನು 6 ತಿಂಗಳ ವರೆಗೆ ಅಮಾನತುಗೊಳಿಸಿ ಸ್ಪೀಕರ್ ಖಾದರ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಗದ್ದಲದ ನಡುವೆ ಅಂಗೀಕಾರವಾದ ಬಜೆಟ್; ಮುಸ್ಲಿಂ ಮೀಸಲಾತಿ ರದ್ಧಿಗೆ ಆಗ್ರಹಿಸಿ ಸ್ಪೀಕರ್ ಪೀಠಕ್ಕೇರಿದ ವಿಪಕ್ಷ ಸದಸ್ಯರು

ಯಾರೆಲ್ಲ ಅಮಾನತು?

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಮೂಡುಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ದೊಡ್ಡಣ್ಣ ಗೌಡ ಪಾಟೀಲ್, ಸಿ ಕೆ ರಾಮಮೂರ್ತಿ, ಅಶ್ವತ್ಥ ನಾರಾಯಣ, ಎಸ್ ಆರ್ ವಿಶ್ವನಾಥ್, ಬೈರತಿ ಬಸವರಾಜ, ಎಂ ಆರ್ ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಹರೀಶ್ ಬಿಪಿ, ಮುನಿರತ್ನ, ಬಸವರಾಜ ಮತ್ತಿಮೋಡ್, ಧೀರಜ್ ಮುನಿರಾಜು, ಡಾ. ಚಂದ್ರು ಲಮಾಣಿ.

Continue Reading

LATEST NEWS

ನಾಯಿಯನ್ನು ಬೈಕ್‌ಗೆ ಕಟ್ಟಿಹಾಕಿ ರಸ್ತೆಯಲ್ಲಿ ಎಳೆದೊಯ್ದ ಕ್ರೂರಿ

Published

on

ರಾಜಸ್ಥಾನ: ನಾಯಿಯನ್ನು ಬೈಕ್‌ಗೆ ಕಟ್ಟಿಹಾಕಿ ಕ್ರೂರಿಯೊಬ್ಬ ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ಘಟನೆ ರಾಜಸ್ಥಾನದ ಉದಯಪುರದ ಬಲಿಚಾ ಪ್ರದೇಶದಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರೂರಿಯ ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ರಕ್ತದ ಕಲೆಗಳು ಇದ್ದರಿಂದ ಅದು ಎಷ್ಟು ನೋವನ್ನು ಅನುಭವಿಸುತ್ತಿತ್ತು ಎಂದು ಸೂಚಿಸುತ್ತಿತ್ತು. ಗಾಯಗೊಂಡ ನಾಯಿ ಕಷ್ಟಪಟ್ಟು ನಡೆಯಲು ಪಯತ್ನಿಸುತ್ತಿದ್ದರೂ, ಅದನ್ನು ಬಲವಂತವಾಗಿ ರಸ್ತೆಯ ಮೇಲೆ ಎಳೆಯಲಾಗುತ್ತಿತ್ತು.

ಸ್ಥಳೀಯರು ಈ ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಾರ್ವಜನಿಕರ ಆಕ್ರೋಶ ಹೆಚ್ಚಾದಂತ, ಆರೋಪಿ ಕ್ಷಮೆ ಕೇಳಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Continue Reading

LATEST NEWS

ಹೋಟೆಲ್ ಸಪ್ಲೇಯರ್ ಬಳಿ ಇತ್ತು ಹ್ಯಾಂಡ್ ಗ್ರೆನೇಡ್! ಸ್ಫೋ*ಟಕ್ಕೆ ಸಂಚು!?

Published

on

ಪಾಕಿಸ್ತಾನಕ್ಕೆ ಮಿಲಿಟರಿ ಸೋರಿಕೆ ಮಾಡಿದ ಆರೋಪದಡಿ ಬೆಂಗಳೂರಿನಲ್ಲಿ ಓರ್ವನನ್ನು ನಿನ್ನೆ(ಮಾ.20) ವಶಕ್ಕೆ ಪಡೆಯಲಾಗಿತ್ತು. ಇದೀಗ ಮತ್ತೊಂದು ಆತಂ*ಕಕಾರಿ ಘಟನೆ ನಡೆದಿದೆ. ಹ್ಯಾಂಡ್ ಗ್ರೆನೇಡ್ ಹೊಂದಿದ್ದ ಹೋಟೆಲ್ ಸಪ್ಲೇಯರ್‌ ಓರ್ವನನ್ನು ಬಂಧಿಸಲಾಗಿದೆ.

ಮಂಗಳೂರು/ಬೆಂಗಳೂರು : ಹ್ಯಾಂಡ್ ಗ್ರೆನೇಡ್ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಸಂಪಿಗೆ ಹಳ್ಳಿ ಪೊಲೀಸರು ಆತನಿಂದ ಬಾಂಬ್ ಮಾದರಿಯ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಅಬ್ದುಲ್ ರೆಹಮಾನ್ ಬಂಧಿತ ಆರೋಪಿ. ಎರಡು ದಿನಗಳ  ಹಿಂದೆ ಆತ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿ ತಾನು ಬೆಳ್ಳಹಳ್ಳಿಯ ನಿವಾಸಿ ಎಂದು ಹೇಳಿದ್ದ. ಹೋಟೆಲ್‌ನವರು ಆಧಾರ್ ಕಾರ್ಡ್ ಕೇಳಿದ್ದು, ಆತ ಕೆಲಸಕ್ಕೆ ಸೇರಿ ಎರಡು ದಿನಗಳಾದರೂ ನೀಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಸಾಕು ನಾಯಿಯ ಹ*ತ್ಯೆ; ಮಹಿಳೆ ಅರೆಸ್ಟ್

ಹೋಟೆಲ್ ಸಿಬ್ಬಂದಿಯೊಬ್ಬರು ವಾಸವಿದ್ದ ಶೆಡ್‌ನಲ್ಲಿ ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್‌ನಲ್ಲಿ ಹ್ಯಾಂಡ್ ಗ್ರೆನೇಡ್ ಸಿಕ್ಕಿದೆ.  ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಆತ ಗ್ರೆನೇಡ್ ಬಗ್ಗೆ ತನಗೇನೂ ಗೊತ್ತಿಲ್ಲ, ರಸ್ತೆ ಬದಿ ಸಿಕ್ಕಿದ್ದು ಎಂದು ಹೇಳಿದ್ದಾನೆ ಎನ್ನಲಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page