Connect with us

LATEST NEWS

ಮಂಗಳೂರು: ಸಮಾಜ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರ

Published

on

ಮಂಗಳೂರು: ಜಿಲ್ಲಾ ಪಂಚಾಯತ್‍ನಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ, ಉಪನಿರ್ದೇಶಕರ ಕಚೇರಿಯು ಜ.24 2022 ರಂದು ಜಿಲ್ಲಾಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನ, ಅಂಗಡಿಗುಡ್ಡೆ, ಉರ್ವಸ್ಟೋರ್, ಮಂಗಳೂರು ಇಲ್ಲಿಗೆ ಸ್ಥಳಾಂತರಿಸಲಾಗಿದೆ.

ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ಕಚೇರಿಯ ದೂರವಾಣಿ: 0824-2451237 ಅನ್ನು ಸಂರ್ಪಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

bangalore

ರಕ್ಷಕನೇ ಭಕ್ಷಕ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್‌

Published

on

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಕಾನ್ಸ್‌ಟೇಬಲ್‌ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕಳ ನೀಡಿದ ಆರೋಪ ಬೆಳಕಿಗೆ ಬಂದಿದೆ. ಈ ರೀತಿಯ ಘಟನೆಯಿಂದ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಪೊಲೀಸರೇ ಈ ರೀತಿ ಅನ್ಯಾಯ ಮಾಡಿದರೆ ನ್ಯಾಯ ಎಲ್ಲಿದೆ ಎಂಬ ಪ್ರಶ್ನೆಗಳು ಉದ್ಭವಿಸಿದೆ.


ಯಮುನಾ ನಾಯಕ್‌ ಲೈಂಗಿಕ ಕಿರಿಕುಳ ನೀಡಿದ ಆರ್‌.ಟಿ. ನಗರ ಠಾಣೆಯ ಪೊಲೀಸ್‌ ಕಾನ್ಸ್‌ಟೇಬಲ್‌. ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ವೇಳೆ ಯಮುನಾ ನಾಯಕ್‌, ಪ್ರಥಮ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುತ್ತಾನೆ.

ಇದನ್ನೂ ಓದಿ: ಆಳಸಮುದ್ರ ಮೀನುಗಾರರ ಬಲೆಗೆ ಬಿದ್ದ ಲಕ್ಷಾಂತರ ಮೌಲ್ಯದ ತೊರಕೆ ಮೀನು

ಈ ಕುರಿತು ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಉಪ್ಪಾರಪೇಟೆ ಪೊಲೀಸ್‌ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಯಮುನಾ ನಾಯಕ್‌ನನ್ನು ಬಂಧಿಸಿದ್ದಾರೆ.

Continue Reading

LATEST NEWS

ನಿಧಿ ಪತ್ತೆಯಾದ ಬೆನ್ನಲ್ಲೆ ಸಿಕ್ತು 7 ಹೆಡೆಯ ಘಟಸರ್ಪ ಶಿಲೆ!

Published

on

ಮಂಗಳೂರು/ಗದಗ: ಸದ್ಯ ಎಲ್ಲರ ಚಿತ್ತ ಲಕ್ಕುಂಡಿ ಗ್ರಾಮದತ್ತ. ದಿನನಿತ್ಯ ಅಪರೂಪದ ಐತಿಹಾಸಿಕ ಕುರುಹುಗಳು ಪತ್ತೆಯಾಗುತ್ತಿವೆ. ಇದೀಗ ನಾಗಶಿಲೆ ಪತ್ತೆಯಾಗಿದೆ.

ರವದಿ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಸುಮಾರು ನೂರಾರು ವರ್ಷಗಳಷ್ಟು ಹಳೆಯದಾದ, ಏಳು ಹೆಡೆಗಳನ್ನು ಹೊಂದಿರುವ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಅಮೂಲ್ಯ ಕೆತ್ತನೆಯಿರುವ ನಾಗಶಿಲೆ ಪತ್ತೆಯಾಗಿರೋದು ಕುತೂಹಲ ಹುಟ್ಟಿಸಿದೆ.

ಹೇಗಿದೆ ರಚನೆ?

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ರವದಿ ಕುಟುಂಬದ ಜಮೀನಿನ ಬಾವಿಯ ಪಕ್ಕದಲ್ಲಿ ಈ ಶಿಲೆ ಸಿಕ್ಕಿದೆ. ಈ ಶಿಲೆಯಲ್ಲಿ ಹಾವಿನ ಏಳು ಹೆಡೆಗಳನ್ನು ಅತ್ಯಂತ ನೈಪುಣ್ಯತೆಯಿಂದ ಕೆತ್ತಲಾಗಿದೆ. ಇದು ಉಬ್ಬು ಚಿತ್ರದ ಮಾದರಿಯಲ್ಲಿದೆ. ವಿಶೇಷ ಅಂದ್ರೆ, ಹಾವಿನ ಹಣೆಯ ಭಾಗದಲ್ಲಿ ವಜ್ರ ಅಥವಾ ನಾಗಮಣಿಯ ಆಕಾರದ ಕೆತ್ತನೆಯಿದೆ.

ಇದನ್ನೂ ಓದಿ : ಉತ್ತರಕನ್ನಡ: ಕಾರು ಅಪಘಾತದಿಂದ ಇಬ್ಬರು ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್; ಇದು ಅಪಘಾತವಲ್ಲ ಕೊಲೆ!

ವಿಜಯನಗರ ಸಾಮ್ರಾಜ್ಯದ ಕಾಲದ ಕೆತ್ತನೆಯ ಶೈಲಿಯನ್ನು ಈ ಶಿಲೆ ಹೋಲುತ್ತದೆ ಎನ್ನಲಾಗಿದೆ. ಹನ್ನೆರಡನೇ ಶತಮಾನದ ಅನೇಕ ಕಲ್ಲುಗಳು ಮತ್ತು ವಿಗ್ರಹಗಳು ಈಗಾಗಲೇ ಇಲ್ಲಿ ಪತ್ತೆಯಾಗಿವೆ. ಅಲ್ಲದೆ, ಹಳೆಯ ಮನೆಗಳು ಮತ್ತು ತೋಟದ ಮನೆಗಳ ಗೋಡೆಗಳಲ್ಲಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ಶಿಲೆಗಳು ಗೋಚರಿಸಿವೆ.ಇದು ಲಕ್ಕುಂಡಿಯ ಇತಿಹಾಸದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲಿದೆ.

Continue Reading

LATEST NEWS

ಆಳಸಮುದ್ರ ಮೀನುಗಾರರ ಬಲೆಗೆ ಬಿದ್ದ ಲಕ್ಷಾಂತರ ಮೌಲ್ಯದ ತೊರಕೆ ಮೀನು

Published

on

ಉಡುಪಿ: ಆಳಸಮುದ್ರ ಮೀನುಗಾರರಿಗೆ ಬಂಪರ್ ಲಾಟರಿ ಎದ್ದಿದ್ದು ಭರ್ಜರಿ ಬೇಟೆ ಸಿಕ್ಕಿದೆ. ಲಕ್ಷಾಂತರ ಬೆಲೆಯ ತೊರಕೆ ಮೀನು ಬಲೆಗೆ ಬಿದ್ದಿದೆ.


ಲಕ್ಷಾಂತರ ರೂ. ಖರ್ಚು ಮಾಡಿ ತುಂಬ ದೂರದ ತನಕ ಮೀನುಗಾರಿಕೆಗೆ ಹೋದಾಗ ಕೆಲವೊಮ್ಮೆ ಮೀನೇ ಸಿಗದೆ ನಿರಾಶೆ ಅಗುತ್ತೆ. ಆದರೆ ದಿಢೀರ್ ಲಕ್ಷಾಂತರ ಮೌಲ್ಯದ ಮೀನುಗಳು ಬಲೆಗೆ ಬಿದ್ದಿದೆ.

ಇದನ್ನೂ ಓದಿ: ಫೆ.14ರಂದು 16ನೇ ವರ್ಷದ ಜಯ-ವಿಜಯ ಜೋಡುಕರೆ ಕಂಬಳ; ಆಮಂತ್ರಣ ಪತ್ರಿಕೆ ಬಿಡುಗಡೆ

ಕರಾವಳಿಯಲ್ಲಿ ಬೋಟ್ ನಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದವರಿಗೆ ರಾಶಿ ರಾಶಿ ತೊರಕೆ ಮೀನು ಸಿಕ್ಕಿದ್ದು ಫುಲ್ ಖುಷ್ ಆಗಿದ್ದಾರೆ. ಇದನ್ನು ಇಂಗ್ಲೀಷಿನಲ್ಲಿ ಸ್ಟಿಂಗ್ ರೇ ಎಂದು ಕರೆಯಲಾಗುತ್ತದೆ. ಇದನ್ನೇ ಒಣಗಿಸಿ ಮಾರಾಟ ಮಾಡುವ ಉದ್ಯಮವೂ ಇದೆ. ಇದೀಗ ಅರಬ್ಬೀ ಸಮುದ್ರದಲ್ಲಿ‌ ಮೀನುಗಾರರ ಬಲೆಗೆ ಬಿದ್ದ ತೊರಕೆ ಮೀನಿನ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page