Connect with us

LATEST NEWS

ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ : ‘ರೌಡಿ ಭಾಟಿ’ ಖ್ಯಾತಿಯ ರೋಹಿತ್ ಭಾಟಿ ಸಾವು..!

Published

on

ಲಕ್ನೋ : ಸೋಷಿಯಲ್ ಮೀಡಿಯಾದಲ್ಲಿ ‘ರೌಡಿ ಭಾಟಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ರೋಹಿತ್ ಭಾಟಿ ಗ್ರೇಟರ್ ನೋಯ್ಡಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಘಟನೆಯಲ್ಲಿ ಅವರ ಇಬ್ಬರು ಸ್ನೇಹಿತರು ಗಂಭೀರ ಗಾಯಗೊಂಡಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಭಾಟಿ ಪ್ರಯಾಣಿಸುತ್ತಿದ್ದ ಕಾರು ಮುಂಜಾನೆ 3 ಗಂಟೆ ಸುಮಾರಿಗೆ ಚುಹಾದ್ಪುರ್ ಅಂಡರ್ ಪಾಸ್ ಬಳಿ ಅಪಘಾತಕ್ಕೀಡಾಗಿದೆ.

ಅತೀ ವೇಗದ ಚಾಲನೆ ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಪೊಲೀಸರ ಪ್ರಕಾರ, ರೋಹಿತ್ ವಾಹನವನ್ನು ಚಲಾಯಿಸುತ್ತಿದ್ದನು.

ಆತನ ಜೊತೆಗಿದ್ದ ಮನೋಜ್ ಮತ್ತು ಅತಿಶ್ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಗುಜ್ಜರ್ ಸಮುದಾಯಕ್ಕೆ ಸೇರಿದ ರೋಹಿತ್ ಭಾಟಿ ಬುಲಂದ್ ಶಹರ್ ಮೂಲದವರು.

ಅವರು ಗ್ರೇಟರ್ ನೋಯ್ಡಾದ ಚಿ ಸೆಕ್ಟರ್ ನಲ್ಲಿ ವಾಸಿಸುತ್ತಿದ್ದರು. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ರೋಹಿತ್ ಅವರನ್ನು ಅನೇಕ ಜನರು ಅನುಸರಿಸುತ್ತಾರೆ.

 

bangalore

ಡೆಲ್ಲಿ ವಿರುದ್ಧ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ; ಅಂಕಪಟ್ಟಿಯಲ್ಲಿ ನಂ.1

Published

on

IPL 2025 : ಬಹು ನಿರೀಕ್ಷಿತ ಪಂದ್ಯವಾದ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವಿನ ಹೈವೋಲ್ಟೇಜ್ ಕದನವು ನಿನ್ನೆ (ಏ.27) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿತ್ತು. ರಜತ್ ಪಡೆ ಡೆಲ್ಲಿ ತಂಡವನ್ನು ಅವರ ನೆಲದಲ್ಲೇ ಮಣಿಸುವ ಯತ್ನದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 162 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ (RCB) ಕೇವಲ 4 ವಿಕೆಟ್ ಕಳೆದುಕೊಂಡು ಇನ್ನು 9 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು. ಈ ಗೆಲುವಿನೊಂದಿಗೆ ಆರ್​ಸಿಬಿ,  ಡೆಲ್ಲಿ ವಿರುದ್ಧ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿದಲ್ಲದೆ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತು. ಆರ್​ಸಿಬಿ ಈಗ 10 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿದ್ದು, ಪ್ಲೇಆಫ್ ಅರ್ಹತೆಗೆ ಬಹಳ ಹತ್ತಿರದಲ್ಲಿದೆ.

ಈ ಬಾರಿಯ ಐಪಿಎಲ್ ನಲ್ಲಿ ಪ್ರತಿಯೊಂದು ತಂಡವೂ ತಲಾ 14 ಪಂದ್ಯಗಳನ್ನು ಆಡುತ್ತಿದೆ. ಅದರಲ್ಲಿ ಗುಜರಾತ್ ಜೈಂಟ್ಸ್ 8 ಪಂದ್ಯ ಆಡಿರುವುದನ್ನು ಹೊರತುಪಡಿಸಿದರೆ ಎಲ್ಲಾ ಪಂದ್ಯಗಳು 9 ಪಂದ್ಯಗಳನ್ನು ಆಡಿವೆ. ರಾಯಲ್ ಚಾಲೆಂಡರ್ಸ್ , ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ 10 ಪಂದ್ಯಗಳನ್ನು ಪೂರ್ತಿಗೊಳಿಸಿವೆ. ಇವುಗಳಲ್ಲಿ ಪ್ರಸ್ತುತ ಅಂಕಗಳ ಆಧಾರದಲ್ಲಿ ನೋಡುವುದಾದರೆ ನಿನ್ನೆ ನಡೆದ ಪಂದ್ಯದ ಗೆಲುವಿನ ಬಳಿಕ ಆರ್‌ಸಿಬಿ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಅನ್ನು 2ನೇ ಸ್ಥಾನಕ್ಕೆ ತಳ್ಳಿ ಅಗ್ರಸ್ಥಾನದಲ್ಲಿದೆ.

ಆರ್ ಸಿಬಿಗೆ ಬಾಕಿ ಇರುವ ಪಂದ್ಯ :

ಮೇ 3ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ಮೇ 9ರಂದು ಲಖನೌ ಸೂಪರ್ ಜೈಂಟ್ಸ್, ಮೇ 13ರಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಮೇ 17ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿಬಿ ಸೆಣೆಸಬೇಕಿದೆ. ಇದರಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಹೊರತುಪಡಿಸಿದರೆ ಉಳಿದ ಮೂರು ಪಂದ್ಯಗಳು ಸಹ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಆರ್ ಸಿಬಿಯ ಪ್ಲಸ್ ಪಾಯಿಂಟ್.

Continue Reading

LATEST NEWS

ಕೊಹ್ಲಿಯ 30 ರನ್‌ನಲ್ಲಿದೆ ಆರ್‌ಸಿಬಿಯ ಇಂದಿನ ಭವಿಷ್ಯ..!?

Published

on

ಮಂಗಳೂರು/ನವದೆಹಲಿ: ಐಪಿಎಲ್‌ನ 2025ರ 46ನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇಂದಿನ ಮ್ಯಾಚ್‌ನಲ್ಲಿ ಕೊಹ್ಲಿಯ 30 ರನ್‌ನಲ್ಲಿ ಆರ್‌ಸಿಬಿಯ ಭವಿಷ್ಯ ನಿಂತಿದೆ ಎಂದು ಹೇಳಿದರೆ ತಪ್ಪಗಲಾರದು.

ಹೌದು.. ಇಂದಿನ ಪಂದ್ಯವು ಪಾಟೀದರ್ ಪಡೆಗೆ ಇದು ಪ್ರತಿಕಾರದ ಪಂದ್ಯ. ಬೆಂಗಳೂರಿನ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಡೆಲ್ಲಿ 6 ವಿಕೆಟ್‌ಗಳಿಂದ ಆರ್‌ಸಿಬಿಯನ್ನು ಮಣಿಸಿತ್ತು.

ಈಗಿನ ಲೆಕ್ಕಾಚಾರದಂತೆ ಆರ್‌ಸಿಬಿ, ಡೆಲ್ಲಿ ಎರಡೂ ಪ್ಲೇ ಆಫ್‌ನತ್ತ ಮುಖ ಮಾಡಿರುವ ತಂಡಗಳು. ಡೆಲ್ಲಿ 8ರಲ್ಲಿ 6 ಪಂದ್ಯ ಗೆದ್ದು 2ನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ 9ರಲ್ಲಿ 6 ಪಂದ್ಯ ಗೆದ್ದು 3ನೇ ಸ್ಥಾನದಲ್ಲಿದೆ. ಎರಡೂ ತಂಡಗಳು 12 ಅಂಕಗಳನ್ನು ಹೊಂದಿವೆ. ರನ್‌ರೇಟ್‌ನಲ್ಲಿ ಮುಂದಿರುವ ಕಾರಣ ಡೆಲ್ಲಿ ಒಂದು ಮೆಟ್ಟಿಲು ಮೇಲಿದೆ.

ಇಂದು ಕೋಟ್ಲಾದ ಕದನವನ್ನು ಗೆಲ್ಲುವವರು ಅಗ್ರಸ್ಥಾನಕ್ಕೆ ನೆಗೆಯುತ್ತಾರಷ್ಟೇ ಅಲ್ಲ, ಇವರ ಮುಂದಿನ ಸುತ್ತಿನ ಪ್ರವೇಶವೂ ಬಹುತೇಕ ಖಾತ್ರಿಗೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಗಮನಿಸಬಹುದು.

ಇದನ್ನೂ ಓದಿ: ಗೌತಮ್ ಗಂಭೀರ್‌ಗೆ ಕೊ*ಲೆ ಬೆದರಿಕೆ ಹಾಕಿದ್ದು ಯಾರು ಗೊತ್ತಾ..!?

ಕೊಹ್ಲಿಯ 30 ರನ್‌ನಲ್ಲಿದೆ, ಆರ್‌ಸಿಬಿಯ ಇಂದಿನ ಭವಿಷ್ಯ..!
ಈ ಸೀಸನ್‌ನಲ್ಲಿ ಆರ್‌ಸಿಬಿಯ ಯಶಸ್ಸಿನ ಪಯಣಕ್ಕೆ ಸ್ಟಾರ್‌ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆಡಿದ ಎಲ್ಲಾ ಪಂದ್ಯಗಳಲ್ಲೂ ವಿರಾಟ್ 30ಕ್ಕಿಂತ ಹೆಚ್ಚು ರನ್ ಗಳಿಸಿದ ಪ್ರತಿಯೊಂದು ಪಂದ್ಯವನ್ನು ಆರ್‌ಸಿಬಿ ಗೆದ್ದಿದೆ. ಅದಕ್ಕಿಂತ ಕಡಿಮೆ ರನ್ ಗಳಿಸಿದ ಪಂದ್ಯಗಳೆಲ್ಲವೂ ಸೋತಿದೆ (ಗುಜರಾತ್ ವಿರುದ್ದ 7, ದೆಹಲಿ ವಿರುದ್ದ 22, ಪಂಜಾಬ್ ವಿರುದ್ದ 1). ಇದರ ಆಧಾರದ ಮೇಲೆ, ಇಂದು ದೆಹಲಿ ವಿರುದ್ದದ ಪಂದ್ಯದಲ್ಲಿ ವಿರಾಟ್ 30ಕ್ಕಿಂತ ಹೆಚ್ಚು ರನ್ ಗಳಿಸಿದರೆ ಆರ್‌ಸಿಬಿ ಖಂಂಡಿತವಾಗಿಯೂ ಗೆಲ್ಲುತ್ತದೆ ಎಂಬುದು ಅಭಿಮಾನಿಗಳ ನಂಬಿಕೆಯಾಗಿದೆ.

Continue Reading

LATEST NEWS

ಐವರು ಮಡದಿಯರ ಮುದ್ದಿನ ಗಂಡ.. ಇಂದು 11 ಮಕ್ಕಳ ತಂದೆ..! ಈತನ ಐದು ಮದುವೆಗೆ ಕಾರಣ ಏನು ಗೊತ್ತಾ?

Published

on

ಮಂಗಳೂರು/ಲಾಸ್ ಏಂಜಲೀಸ್: ಒಬ್ಬ ವ್ಯಕ್ತಿಗೆ ಒಂದು ಮದುವೆಯಾದರೇ ಸಾಕು ಸಂಸಾರದ ಜಂಜಾಟದಲ್ಲಿ ಬೇಸರ ಮೂಡಿಸುತ್ತದೆ. ಆದರೆ ಲಾಸ್‌ ಏಂಜಲೀಸ್‌ನ ವ್ಯಕ್ತಿಯೊಬ್ಬ ಐದು ಮದುವೆಯಾಗಿದ್ದಾನೆ. ಈಗ ಅವನಿಗೆ 11 ಮಕ್ಕಳಿದ್ದಾರೆ. ಅವನು ಏಕಪತ್ನಿತ್ವ ತ್ಯಜಿಸಿ ಬಹುಪತ್ನಿತ್ವ ಹೊಂದಲು ಕಾರಣ ಕೂಡ ಹೇಳಿದ್ದಾನೆ.

ಹೌದು.. ಲಾಸ್ ಏಂಜಲೀಸ್ ಜೇಮ್ಸ್ ಬ್ಯಾರೆಟ್ ತನ್ನ ಗೆಳತಿಯೊಬ್ಬಳಿಗೆ ಮೋಸ ಮಾಡಿದನು. ಅವನಿಗೆ ಬೇರೆ ಮಹಿಳೆಯರೊಂದಿಗೆ ಸಂಬಂಧವಿತ್ತು. ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕೆಂದು, ಅವನು ಏಕಪತ್ನಿತ್ವವನ್ನು ತ್ಯಜಿಸಿ ಬಹುಪತ್ನಿತ್ವವನ್ನು ಸ್ವೀಕರಿಸಿದನು.

ಅಂದರೆ ಆತ ಒಂದೇ ಬಾರಿಗೆ ಹಲವಾರು ಮಹಿಳೆಯರನ್ನು ಪ್ರೀತಿಸೋಕೆ ಶುರು ಮಾಡಿದನು. ಅವರಲ್ಲಿ ಒಬ್ಬರಿಗೆ ತಿಳಿಯದೆ ಮತ್ತೊಬ್ಬರೊಂದಿಗೆ ಸಂಬಂಧವಿತ್ತು. ಇನ್ನು ಮುಂದೆ ಯಾರನ್ನೂ ಮೋಸಗೊಳಿಸಬಾರದು ಎಂಬ ಉದ್ದೇಶದಿಂದ ತಾನೂ ಸಂಬಂಧದಲ್ಲಿದ್ದ ಎಲ್ಲರನ್ನು ಒಟ್ಟಿಗೆ ಮದುವೆಯಾದನು.

ಇದನ್ನೂ ಓದಿ: ನಾನು ಅಷ್ಟೊಂದು ಫೇಮಸ್ ಕೂಡ ಆಗಿರಲಿಲ್ಲ, ಆದರೆ ಕನ್ನಡದ ಸ್ಟಾರ್ ನಟ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿದ್ರು..! ಗಗನಾ ಭಾರಿ

ಜೇಮ್ಸ್ ಹೇಳುವಂತೆ, ತಾನು ಒಬ್ಬಳೇ ಗೆಳತಿಯೊಂದಿಗೆ ಇದ್ದಾಗ, ತನ್ನೊಳಗೆ ನಿರಂತರವಾಗಿ ಸಂಘರ್ಷಕ್ಕೊಳಗಾಗುತ್ತಿದೆ ಮತ್ತು ತಾನು ತನ್ನೊಂದಿಗೆ ಪ್ರಾಮಾಣಿಕವಾಗಿಲ್ಲ ಎಂದು ಭಾವಿಸುತ್ತಿದೆ. ಆದರೆ ಈಗ ನಾನು ಐವರ ಜತೆ ಮದುವೆಯಾಗಿದ್ದೇನೆ. ಇದು ನನ್ನ ಪತ್ನಿಯರಿಗೂ ಗೊತ್ತು. ನನಗೆ 11 ಮಕ್ಕಳು ಇದ್ದಾರೆ. ಐದು ಜನ ಪತ್ನಿಯರೊಂದಿಗೆ ಸಂತೋಷವಾಗಿದ್ದರೂ, ಇಷ್ಟು ದೊಡ್ಡ ಕುಟುಂಬವನ್ನು ಆರ್ಥಿಕವಾಗಿ ನಿರ್ವಹಿಸುವುದು ತನಗೆ ದೊಡ್ಡ ಸವಾಲಾಗಿದೆ. ಇಡೀ ಕುಟುಂಬವು ಒಟ್ಟಿಗೆ ವಾಸಿಸುತ್ತದೆ, ಪರಸ್ಪರ ಬೆಂಬಲಿಸುತ್ತಾರೆ ಎಂದಿದ್ದಾನೆ.

ಜೇಮ್ಸ್ ಬ್ಯಾರೆಟ್ ಉದ್ದೇಶವೆನೆಂದರೆ, ತನ್ನನ್ನು ತಾನು ಸುಧಾರಿಸಿಕೊಳ್ಳುವ ಉದ್ದೇಶದಿಂದ, ಆತ ಬೇರೆಯವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಅಗತ್ಯವನ್ನು ತಪ್ಪಿಸಲು ಐದು ಮದುವೆಯಾಗಿದ್ದಾನೆಯಂತೆ.

Continue Reading
Advertisement

Trending

Copyright © 2025 Namma Kudla News

You cannot copy content of this page