Connect with us

LATEST NEWS

ಸ್ಮಾರ್ಟ್ ಸಿಟಿ ಅನುದಾನದಿಂದ ಸ್ಮಾರ್ಟ್ ಆದ ಮಂಗಳೂರು ಕಾವೂರು ಕೆರೆ..!

Published

on

ಮಂಗಳೂರು : ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ವತಿಯಿಂದ 8 ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಂಡಿರುವ ಕಾವೂರು ಕೆರೆಯನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಲೋಕಾರ್ಪಣೆಗೊಳಿಸಿದರು.

ಕೆರೆ ಹಾಗೂ ವಾಕಿಂಗ್ ಪಾಥ್ ಉದ್ಘಾಟನೆ ನೆರವೇರಿಸಿ ಮಾತಾಡಿದ ಅವರು, ಪುರಾತನ ಕಾವೂರು ಕೆರೆಯನ್ನು ಬಹಳ ಸುಂದರವಾಗಿ ಅಭಿವೃದ್ಧಿ ಪಡಿಸಲಾಗಿದೆ.

ಈ ಮೂಲಕ ಪರಿಸರದ ಜನತೆಗೆ ಒಳ್ಳೆಯ ವಿಹಾರ ತಾಣವನ್ನು ಕೊಡುಗೆಯಾಗಿ ಬಿಜೆಪಿ ನೀಡಿದೆ ಎಂಧರು.

ಕೆರೆ, ವಾಕಿಂಗ್ ಟ್ರ್ಯಾಕ್, ನೀರು ಶೇಖರಣೆ ವ್ಯವಸ್ಥೆ, ದೇವರ ವಿಸರ್ಜನಾ ಕುಂಡ, ಗಾರ್ಡನ್, ದೇವಸ್ಥಾನದ ಪುರಾತನ ಬಾವಿ ಪುನರ್ ನಿರ್ಮಾಣ ಮಾಡಲಾಗಿದೆ.

ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸುವುದಾಗಿ ನುಡಿದರು. ಅಭಿವೃದ್ಧಿ ವಿಚಾರ ಬಂದಾಗ ನಾವು ಆ ಪಕ್ಷ ಈ ಪಕ್ಷ ಎಂದು ನೋಡುವುದಿಲ್ಲ.

ಇದು ಮಂಗಳೂರಿನ ವಿಶೇಷತೆಯಾಗಿದೆ ಎಂದರು.

ನಗರದ ಅಭಿವೃದ್ಧಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತ” ಎಂದರು.

ವೇದಿಕೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ., ಮಂಗಳೂರು ಮೇಯರ್ ಜಯಾನಂದ ಅಂಚನ್, ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್, ಕಾವೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಭು, ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಕಾವೂರು ಕೆರೆ ಅಭಿವೃದ್ಧಿ ಅಧ್ಯಕ್ಷ ದೀಪಕ್ ಪೂಜಾರಿ, ಸ್ಮಾರ್ಟ್ ಸಿಟಿ ನಿರ್ದೇಶಕ ಅರುಣ್ ಪ್ರಭಾ ಮತ್ತಿತರರು ಉಪಸ್ಥಿತರಿದ್ದರು.

Advertisement
Click to comment

Leave a Reply

Your email address will not be published. Required fields are marked *

INTERNATIONAL

ದಾವೋಸ್ ನಲ್ಲಿ ಫ್ರೆಂಚ್‌ ಅಧ್ಯಕ್ಷರ ಭಾಷಣ; ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ಭಾರೀ ಏರಿಕೆ!

Published

on

ದಾವೋಸ್:‌ ವಿಶ್ವ ನಾಯಕರು ಸೇರಿದ್ದ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಸನ್‌ ಗ್ಲಾಸ್‌ ಧರಿಸಿದ್ದರು. ಇದೀಗ ಈ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಬದಲಾದಂತಾಗಿದೆ.


ಹೌದು, ಜಾಗತೀಕವಾಗಿರುವ ಅತ್ಯಂತ ಸಂಕೀರ್ಣ ಮತ್ತು ಆತಂಕಕಾರಿ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಸೇರಿ ಇತರ ವಿಚಾರಗಳ ಬಗ್ಗೆ ಚರ್ಚಿಸಲು ವಿಶ್ವ ನಾಯಕರು ಸೇರಿರುವ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಮಹತ್ವದ ವಿಚಾರಗಳ ಬದಲಾಗಿ, ಎಲ್ಲರ ಕಣ್ಣುಗಳು ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಧರಿಸಿದ್ದ ಸನ್‌ ಗ್ಲಾಸ್‌ ಮೇಲೆ ಬಿದ್ದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ತಮ್ಮ ಕಣ್ಣು ಊದಿಕೊಂಡು ಕೆಂಪಾಗಿ ಕಾಣುತ್ತಿವೆ. ಹೀಗಾಗಿ ಸನ್‌ ಗ್ಲಾಸ್‌ ಧರಿಸುವ ಅನಿವಾರ್ಯತೆ ಇದೆ ಎಂದು ಹೇಳಿಕೊಂಡಿದ್ದರು.

“ದಯವಿಟ್ಟು ಸನ್ ಗ್ಲಾಸ್ ಧರಿಸಿರುವ ನನ್ನ ಕಣ್ಣಿನ ನೋಟಕ್ಕಾಗಿ ಕ್ಷಮಿಸಿ, ಇದು ಸಂಪೂರ್ಣವಾಗಿ ನಿರುಪದ್ರವ” ಎಂದು ಹೇಳಿದ್ದರು.

ಇದನ್ನೂ ಓದಿ: ಮದುವೆ ಮನೆಯಲ್ಲಿ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್..!‌?

ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ದಿಢೀರ್‌ ಏರಿಕೆ!
ಅಧ್ಯಕ್ಷರು ನೀಡಿದ ಹೇಳಿಕೆಯಿಂದ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಖಲಾಯಿಸಿದೆ. ಅದರ ತಯಾರಕ ಐವಿಷನ್ ಟೆಕ್‌ನ ಷೇರುಗಳು ಗುರುವಾರ ಸುಮಾರು 28% ರಷ್ಟು ಏರಿಕೆ ಕಂಡಿವೆ. ಫ್ರೆಂಚ್ ಐಷಾರಾಮಿ ಕನ್ನಡಕ ಬ್ಯಾಂಡ್ ಹೆನ್ರಿ ಜೂಲಿಯನ್ ಅನ್ನು ಹೊಂದಿರುತ ಐವಿಷನ್ ಟೆಕ್, ಮ್ಯಾಕ್ರನ್ ಧರಿಸಿದ್ದ ಸನ್ ಗ್ಲಾಸ್ ಪೆಸಿಫಿಕ್ S 01 ಮಾದರಿಯಾಗಿದ್ದು, ಕಂಪನಿಯ ವೆಬ್‌ಸೈಟ್‌ನಲ್ಲಿ ಇದರ ಬೆಲೆ 659 ಯುರೋಗಳ ಎಂದು ಬುಧವಾರ ಹೇಳಿದೆ ಎಂದು ವರದಿಯಾಗಿದೆ.

Continue Reading

LATEST NEWS

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

Published

on

ಚಾಮರಾಜನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಇಂದು(ಜ.24) ಬೆಳಗ್ಗೆ ನಡೆದಿದೆ.


ಬಂಡಳ್ಳಿ ಗ್ರಾಮದ ಜಯಲಕ್ಷ್ಮಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.


ಇದನ್ನೂ ಓದಿ: ಕೆಲಸಕ್ಕೆ ಗೈರಾಗಿದ್ದಕ್ಕೆ ಯುವತಿಗೆ ಸಾರ್ವಜನಿಕವಾಗಿ ಅವಮಾನ: ಮಾಲೀಕ ಪೊಲೀಸರ ವಶ

ಅದೃಷ್ಟವಶಾತ್‌, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಆದರೆ ಮನೆ ಸಂಪೂರ್ಣ ಹಾನಿಗೊಳಗಾಗಿದೆ.

Continue Reading

LATEST NEWS

ಜನ್ಮದಿನದ ಪಾರ್ಟಿಗೆ ಕರೆಸಿ ಯುವಕನ ಹ*ತ್ಯೆ

Published

on

ಮಂಗಳೂರು/ರಾಯಚೂರು :  ಜನ್ಮದಿನದ ಪಾರ್ಟಿಗೆ ಕರೆಸಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಯುವಕನ ಕೊ*ಲೆ ಮಾಡಿರುವ ಘಟನೆ ರಾಯಚೂರಿನ ಮಾವಿನಕೆರೆ ದಂಡೆಯ ಮೇಲೆ  ನಡೆದಿದೆ.

ಜಹೀರಾಬಾದ್ ಬಡಾವಣೆ ನಿವಾಸಿ, 22 ವರ್ಷದ ವಿಶಾಲ್ ಕೊ*ಲೆಯಾದ ಯುವಕ. 19 ವರ್ಷದ ರಾಜು ಅಲಿಯಾಸ್ ಯೇಸು ಮತ್ತು ಬಸವರಾಜ  ಕೊ*ಲೆಗೈದ ಆರೋಪಿಗಳು.

ಇದನ್ನೂ ಓದಿ : ವಸತಿ ಕಟ್ಟಡದ ಮೇಲೆ ಫೈ*ರಿಂಗ್ ; ಬಾಲಿವುಡ್ ನಟನ ಬಂಧನ

ಬಸವರಾಜ ಜನ್ಮದಿನದ ಪಾರ್ಟಿ ಕೊಡಿಸುವುದಾಗಿ ವಿಶಾಲ್ ನನ್ನು ಕರೆಸಿಕೊಂಡಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಬಳಿಕ ಕೊ*ಲೆಯಲ್ಲಿ ಅಂತ್ಯ ಕಂಡಿದೆ. ಕೊ*ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page