Connect with us

International news

SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ : ಅಬುಧಾಬಿಯಲ್ಲಿ 3 ನೇ ಯಶಸ್ವಿ ರಕ್ತದಾನ ಶಿಬಿರ

Published

on

ಅಬುಧಾಬಿ (ಯು.ಎ.ಇ) : SKSSF ಕರ್ನಾಟಕ ಅಬುಧಾಬಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಬೃಹತ್ ಮೀಲಾದ್ ಕಾನ್ಫೆರೆನ್ಸ್ ಪ್ರಚಾರಾರ್ಥ ಸಾರ್ವಜನಿಕ ರಕ್ತದಾನ ಶಿಬಿರ ಶುಕ್ರವಾರ(ಜು.26) ಯುನೈಟೆಡ್ ಅರಬ್ ಎಮಿರೇಟ್ಸ್‌‌ನ ಅಬುಧಾಬಿ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ನಡೆಯಿತು.


ರಕ್ತದಾನ ಶಿಬಿರದಲ್ಲಿ ಒಟ್ಟು 74 ಮಂದಿ ರಕ್ತದಾನ ಮಾಡಿದರು. ಇದರಲ್ಲಿ 7 ಮಂದಿ ಸಿಂಗಲ್ ಡೋನರ್ ಪ್ಲೇಟ್ಲೆಟ್ಸ್ ದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಅಬುಧಾಬಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಸಭಾ ಕಾರ್ಯಕ್ರಮ :

ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಸ್ತಾದ್ ಶಹೀರ್ ಹುದವಿ, ಪ್ರಸಿದ್ದ ಉರ್ದು ಕವಿ ಅಲ್ಲಾಮ ಇಕ್ಬಾಲರ “ಮೌಜ್ ಹೆ ನಾಮ್ ಮೇರಾ, ಬೆಹರ್ ಹೆ ಪಾಯಬ್ ಮುಜೆ, ಹೋ ನಾ ಝಂಜೀ‌ರ್ ಕಭಿ ಹಲ್ಕಾ ಯೆ ಗರ್ದಬ್ ಮುಜೆ, ಮೌಜ್ ಹೆ ದರ್ಯಾಮೆ ಬೆದ್ರೂನೆ ದರಿಯಾ ಕುಚ್ ನಹೀ” ಎಂಬ ಶಾಯರಿ ಮೂಲಕ ಕಾರುಣ್ಯ ಸೇವೆಯನ್ನು ಬಣ್ಣಿಸಿದರು. ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ “ನಾವು ರಕ್ತ ಸಂಬಂಧಿಗಳಾಗೋಣ” ಎಂಬ ಧ್ಯೇಯ ವಾಕ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾರೀಸ್ ವೆಲ್ಫೇರ್ ಅಸೋಷಿಯೇಶನ್ ಅಬುಧಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, “ಕರ್ಮ ಭೂಮಿಯಲ್ಲಿ ಸೇವೆಗೈಯ್ಯಲು ಅವಕಾಶ ಮಾಡಿ ಕೊಟ್ಟಂತಹ ಆಡಳಿತಾಧಿಕಾರಿ ಶೇಕ್ ಮುಹಮ್ಮದ್ ಬಿನ್ ಝಾಯೆದ್ ಅವರಿಗೆ ಕೃತಜ್ಞತೆ ಹೇಳುತ್ತಾ ಸಂಸ್ಥೆಯು ಹಮ್ಮಿಕೊಂಡತಹ ರಕ್ತದಾನವನ್ನು ಪ್ರಶಂಸಿಸಿ, ದಾನಗಳಲ್ಲೇ ಶ್ರೇಷ್ಠವಾದ ರಕ್ತದಾನ ಮಾಡುವುದು ಮತ್ತು ಅದಕ್ಕಾಗಿ ಪರಿಶ್ರಮಿಸುವ ಕಾರ್ಯಕರ್ತರ ಸೇವೆಯನ್ನು ಅಭಿನಂದಿಸಿದರು.


ಅಬುಧಾಬಿ ಸುನ್ನಿ ಸೆಂಟರ್ ಅಧ್ಯಕ್ಷ ಅಸ್ಸಯ್ಯದ್ ಅಬ್ದಲ್ ರಹ್ಮಾನ್ ತಂಙಳ್ ಪ್ರಾಸ್ತವಿಕ ಮಾತುಗಳನ್ನಾಡಿ, ‘ತನ್ನ ಸ್ವ ಶರೀರದಿಂದ ನೀಡುವ ದಾನವಾದ ರಕ್ತದಾನವನ್ನು ಮಾಡುತ್ತಿರುವ ನಿಮ್ಮ ಈ ಉತ್ತಮವಾದ ಕಾರುಣ್ಯ ಸೇವೆಯನ್ನು ಸೃಷ್ಟಿಕರ್ತನು ಸ್ವೀಕರಿಸಲಿ’ ಎಂದರು.

ಬ್ಲಡ್ ಹೆಲ್ಪ್‌‌ಲೈನ್ ಕರ್ನಾಟಕದ ವ್ಯವಸ್ಥಾಪಕರಾದ ಸಿರಾಜುದ್ದೀನ್ ಪರ್ಲಡ್ಕ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಕರ್ನಾಟಕದ ಗೌರವಾಧ್ಯಕ್ಷರಾದ ಹನೀಫ್ ಅರಿಯಮೂಲೆ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ನೇತಾರ ಮೊಯ್ದೀನ್ ಕುಟ್ಟಿ ಹಾಜಿ ದಿಬ್ಬ, ಅನಿವಾಸಿ ಉದ್ಯಮಿ ಒಮೇಗಾ ಗ್ರೂಪ್ ಆಫ್ ಕಂಪನೀಸ್ ಮಾಲಕ ಮುಹಮ್ಮದ್ ಹಾಜಿ, ಅಯಾನ್ ರಿಯಲ್ ಎಸ್ಟೇಟ್ MD ಅನ್ಸಾರ್ ಬೆಳ್ಳಾರೆ ಭಾಗವಹಿಸಿ ಶುಭಹಾರೈಸಿದರು.
ಶಿಬಿರದಲ್ಲಿ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕ ಮೆಹತಾಬ್ ಕೈಕಂಬ, ಯಾಕೂಬ್ ಫೈರೋಝ್, ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಕರ್ನಾಟಕದ ಪ್ರಮುಖರಾದ ಶಾಫಿ ಹಾಜಿ ಪೆರುವಾಯಿ, ಅಬೂಬಕ್ಕರ್ ಸಕಲೇಶಪುರ ಮತ್ತು ದಾರುಲ್ ಹಸನಿಯ್ಯ ಅಬುಧಾಬಿ ಸಮಿತಿ ಅಧ್ಯಕ್ಷ ಶಾಕಿರ್ ಕೂರ್ನಡ್ಕ, ರಕ್ತದಾನ ಶಿಬಿರದ ಉಸ್ತುವಾರಿಗಳಾದ ಹಮೀದ್ ಸವಣೂರು, ಹಂಝ ನಾಳ, ತಸ್ಲೀಮ್, SKSSF ಕಾರ್ಯಕರ್ತರಾದ ಹಿದಾಯತ್ ರಹ್ಮಾನ್ ಮರ್ವೆಲ್, ತ್ವಾಹ ಉಪ್ಪಿನಂಗಡಿ, ಜೌಹರ್ ಕನ್ನಡಿಕಟ್ಟೆ, ಹಫೀಝ್, ಶಾಫಿ ಕಿನ್ಯಾ, ಸಫ್ವಾನ್ ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ಓದಿ : ಅರ್ಜುನ್ ಮನೆಯವರಿಗೆ ವಿಶ್ವಾಸ ಮೂಡಿಸಿದ ಈಶ್ವರ್ ಮಲ್ಪೆ..!
ಯಹ್ಯಾ ಕೊಡ್ಲಿಪೇಟೆ ಸ್ವಾಗತಿಸಿದರು. SKSSF ಅಬುಧಾಬಿ ಕರ್ನಾಟಕ ಸಮಿತಿಯ ಉಪಾಧ್ಯಕ್ಷ ಹಾಫಿಳ್ ಝೈನ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು. ಹಸನ್ ದಾರಿಮಿ ಉಸ್ತಾದ್ ವಂದಿಸಿದರು.

INTERNATIONAL

VIDEO: ಚಿನ್ನದ ಸರ ಕದ್ದು ಎಸ್ಕೇಪ್‌ ಆಗುತ್ತಿದ್ದ ಕಳ್ಳನಿಗೆ ಕೈಕೊಟ್ಟ ಬೈಕ್!

Published

on

ವೆಣ್ಣಪ್ಪುವಾ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವತಿಯನ್ನು ತಡೆದು, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಘಟನೆಯೊಂದು ಶ್ರೀಲಂಕಾದ ವೆಣ್ಣಪ್ಪುವಾದ ತಂಬರವಿಲ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಯನ್ನು ಹಿಂದಿನಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿ ಆಕೆಯ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಯುವತಿಯ ಸ್ಕೂಟಿ ನಿಯಂತ್ರಣ ತಪ್ಪಿ ಬಿದ್ದಿದೆ. ಬಿದ್ದ ಅವಕಾಶವನ್ನು ಬಳಸಿಕೊಂಡ ಆರೋಪಿಯು ಯುವತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.

ಇದನ್ನೂ ಓದಿ: ಶ್ರೀಮಂತರೇ ಈಕೆಯ ಟಾರ್ಗೆಟ್…ಕೊನೆಗೂ ಖತರ್ನಾಕ್ ಲೇಡಿ ಅಂದರ್…ಅಷ್ಟಕ್ಕೂ ಈಕೆ ಮಾಡಿದ್ದೇನು?

ಆದರೆ, ಈ ವೇಳೆ ಆತನ ಬೈಕ್ ಸ್ಟಾರ್ಟ್ ಆಗದ ಕಾರಣ, ಸ್ಥಳದಲ್ಲಿದ್ದವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Continue Reading

INTERNATIONAL

ಏನಿದು ಎಪ್ಸ್ಟೀನ್‌ ಫೈಲ್ಸ್‌..! ಜಗತ್ತಿನ ಖ್ಯಾತ ನಾಮರ ಹೆಸರೇಕೆ ತಳುಕು ಹಾಕಿಕೊಂಡಿದೆ?

Published

on

ಜಗತ್ತಿನಲ್ಲಿ ಇದೀಗ ಎಪ್‌ಸ್ಟೀನ್‌ ಫೈಲ್ಸ್‌ ಬಿರುಗಾಳಿ ಎದ್ದಿದೆ. ಈ ದಂಧೆಯಲ್ಲಿ ದೊಡ್ಡ ದೊಡ್ಡವರ ಬಂಡವಾಳ ಬಯಳಾಗುತ್ತಿದೆ. ಹಾಗಾದರೆ ಏನಿದು ಎಫ್‌ಸ್ಟೀನ್‌ ಫೈಲ್ಸ್‌ ರಾಜಕೀಯ ಬಿರುಗಾಳಿ…?

ಹೌದು.. ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳು (ಫೈಲ್ಸ್‌) ಜನವರಿ 30 ರಂದು ಬಹಿರಂಗವಾಗಿತ್ತು. ನಂತರ ಜಾಗತಿಕ ಮಟ್ಟದಲ್ಲಿ ತಲ್ಲಣ ಉಂಟಾಗಿದೆ. ಇದರಲ್ಲಿ ರಾಜಕಾರಣ, ಉದ್ದಿಮೆ, ಮನರಂಜನೆ ಮತ್ತು ಶೈಕ್ಷಣಿಕ ವಲಯದ ಘಟಾನುಘಟಿಗಳ ಹೆಸರುಗಳು ಎಪ್‌ಸ್ಟೀನ್‌ ಫೈಲ್ಸ್‌ನಲ್ಲಿ ಸ್ಥಾನ ಪಡೆದಿವೆ.

ಎಪ್ಸ್ಟೀನ್‌ ಫೈಲ್ಸ್‌ ಅಂದ್ರೆ ಏನು?
ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ದಾಖಲೆಗಳ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ ಸಂಬಂಧಿಸಿದ 35 ಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಅಮೆರಿದ ನ್ಯಾಯಾಂಗ ಇಲಾಖೆ ಸಾರ್ವಜನಿಕಗೊಳಿಸಿದೆ. ಜಗತ್ತಿನ ಶ್ರೀಮಂತ ವ್ಯಕ್ತಿಗಳಿಗಾಗಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಕೂಪಕ್ಕೆ ತಳ್ಳಿದ ಆರೋಪ ಜೆಫ್ರಿ ಎಪ್ಸ್ಟೀನ್‌ ಮೇಲಿದೆ.

ತನಿಖಾ ವರದಿಯಲ್ಲೇನಿದೆ?
ಎಪ್ಸ್ಟೀನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಬಿಐ ಸಂಗ್ರಹಿಸಿದ ದೂರುಗಳ ಪಟ್ಟಿಯಲ್ಲಿ ಟ್ರಂಪ್‌ ಹೆಸರು ಕಂಡುಬಂದಿದೆ. ಇದರಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಗಂಭೀರ ಆರೋಪಗಳನ್ನು ಸಾರ್ವಜನಿಕರು ಮತ್ತು ಸಂತ್ರಸ್ತರು ನೀಡಿದ್ದಾರೆ ಎಂದು ದಾಖಲೆಗಳಾಗಿವೆ.

ಎಪ್ಸ್ಟೀನ್‌ ಹೇಯ ಕೃತ್ಯಗಳು
ಮಹಿಳೆಯರ ಕಳ್ಳಸಾಗಣೆ ಮತ್ತು ಬಾಲಕಿಯರ ಮೇಲೆ ಅತ್ಯಾಚಾರದಂಥ ಅನೇಕ ಹೇಯ ಕೃತ್ಯಗಳನ್ನು ಎಸಗಿದ್ದ ಎಪ್ಸ್ಟೀನ್‌, ಇಂಥ ಸರಣಿ ಅಪರಾಧಗಳಲ್ಲಿ ತೊಡಗಿದ್ದ. ತನ್ನ ಐಷಾರಾಮಿ ಮನೆಗಳಲ್ಲಿ ಬಾಲಕಿಯರನ್ನು ಕೂಡಿಹಾಕಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯಲು ಕಾರಣನಾಗಿದ್ದ. ವಿವಿಧ ದೇಶಗಳ ಜನಪ್ರತಿನಿಧಿಗಳು, ಪ್ರಭಾವಶಾಲಿಗಳು, ಉದ್ಯಮಿಗಳು ಎಪ್ಸ್ಟೀನ್‌ ಜತೆಗೆ ನಂಟು ಹೊಂದಿದ್ದರು. ಈ ಪೈಕಿ ಅನೇಕರು ಅವನ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸಿದ್ದರು. ತನ್ನ ವಿರುದ್ದದ ಪ್ರಕರಣಗಳ ಕಾರಣದಿಂದ ಜೈಲು ಸೇರಿದ್ದ ಎಪ್ಸ್ಟೀನ್‌, 2019ರಲ್ಲಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿದ್ದಾನೆ.

ಆನಂತರ ತನಿಖೆಯ ವೇಳೆ ಪತ್ತೆಯಾಗಿದ್ದ ಇಮೇಲ್‌ಗಳು, ವೀಡಿಯೋಗಳು ಮತ್ತಿತರ ದಾಖಲೆಗಳನ್ನು ಬಹಿರಂಗ ಮಾಡುವಂತೆ ಜನ ಒತ್ತಾಯ ಹೇರತೊಡಗಿದರು. ಡೊನಾಲ್ಡ್‌ ಟ್ರಂಪ್‌ ಸರ್ಕಾರವು ಅವುಗಳನ್ನು ಹಂತಹಂತವಾಗಿ ಬಹಿರಂಗ ಮಾಡುತ್ತಿದೆ.

ಟ್ರಂಪ್‌ ಮೇಲಿರುವ ಆರೋಪವೇನು?
ಈ ಫೈಲ್‌ಗಳಲ್ಲಿ ಟ್ರಂಪ್ ಹೆಸರು ಹಲವು ಕಡೆ ಪ್ರಸ್ತಾಪವಾಗಿದೆ. ಹಾಗಾದರೆ ಟ್ರಂಪ್ ಲೈಂಗಿಕ ದಂಧೆಯಲ್ಲಿ ಭಾಗಿಯಾಗಿದ್ದರಾ? ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ, ಟ್ರಂಪ್ ಅವರು ಎಪ್‌ಸ್ಟೀನ್‌ನ ಖಾಸಗಿ ವಿಮಾನದಲ್ಲಿ ಹಲವು ಬಾರಿ ಪ್ರಯಾಣಿಸಿದ್ದಾರೆ. ಕೆಲವು ಸಾಕ್ಷಿಗಳ ಪ್ರಕಾರ, ಟ್ರಂಪ್ ಅವರು ಎಪ್‌ಸ್ಟೀನ್‌ನ ಕ್ಲಬ್‌ಗಳಿಗೆ ಭೇಟಿ ನೀಡುತ್ತಿದ್ದರು. ಜೊತೆಗೆ ಎಪ್‌ಸ್ಟೀನ್ ಒಮ್ಮೆ ಟ್ರಂಪ್ ಬಗ್ಗೆ ಹೀಯಾಳಿಸಿ ಮಾತನಾಡಿದ ಉಲ್ಲೇಖಗಳೂ ಇಲ್ಲಿವೆ. ಆದರೆ, ಟ್ರಂಪ್ ಈ ದಂಧೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಈ ಫೈಲ್‌ಗಳಲ್ಲಿ ಸ್ಪಷ್ಟವಾದ ಕ್ರಿಮಿನಲ್ ಪುರಾವೆಗಳು ಇನ್ನೂ ಸಿಕ್ಕಿಲ್ಲ. ಆದರೆ ಎಪ್‌ಸ್ಟೀನ್‌ನೊಂದಿಗೆ ಅವರಿಗಿದ್ದ ನಿಕಟ ಸ್ನೇಹ ಈಗ ರಾಜಕೀಯವಾಗಿ ಅವರಿಗೆ ಮುಳ್ಳಾಗಿ ಪರಿಣಮಿಸಿದೆ.

ಟ್ರಂಪ್‌ ಸ್ಪಷ್ಟನೆ
ಟ್ರಂಪ್ ಈ ಮೊದಲೇ ಸ್ಪಷ್ಟಪಡಿಸಿದಂತೆ, ಎಪ್‌ಸ್ಟೀನ್‌ನೊಂದಿಗೆ ತಮಗೆ ಕೇವಲ ಪರಿಚಯವಿತ್ತೇ ಹೊರತು, ಆತನ ವೈಯಕ್ತಿಕ ದಂಧೆಗಳ ಬಗ್ಗೆ ಏನೂ ತಿಳಿದಿರಲಿಲ್ಲ ಎಂದಿದ್ದಾರೆ. ಆದರೆ ಈ ಫೈಲ್‌ಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಟ್ರಂಪ್‌ರನ್ನು ಕಟ್ಟಿಹಾಕಲು ಯತ್ನಿಸುತ್ತಿವೆ. ಅದರಂತೆ, ಇದು ಬರಿ ಫೈಲ್ ಅಲ್ಲ, ಟ್ರಂಪ್ ವ್ಯಕ್ತಿತ್ವಕ್ಕೆ ತಗುಲಿದ ಕಳಂಕ ಎನ್ನುತ್ತಿವೆ ವಿರೋಧಿ ಬಣಗಳು.

ಹಲವು ಗಣ್ಯರ ಹೆಸರುಗಳು
ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಜಗತ್ತಿನ ಖ್ಯಾತನಾಮರ ಹೆಸರುಗಳು ಮುನ್ನಲೆಗೆ ಬಂದಿವೆ. ಮೈಕ್ರೋಸಾಫ್ಟ್‌ ನ ಬಿಲ್‌ ಗೇಟ್ಸ್‌, ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಅವರ ಮಾಜಿ ಖಜಾನೆ ಕಾರ್ಯದರ್ಶಿ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯ ಮಾಜಿ ಅಧ್ಯಕ್ಷ ಲ್ಯಾರಿ ಸಮರ್ಸ್, ಟ್ರಂಪ್ ಸರ್ಕಾರದ ಹಣಕಾಸು ಕಾರ್ಯದರ್ಶಿ ಹೊವಾರ್ಡ್ ಲುಟ್ಟಿಕ್, ಟ್ರಂಪ್‌ ಅವರ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಸೇರಿದಂತೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಮತ್ತು ಈಗಲೂ ಸಕ್ರಿಯವಾಗಿರುವ ಅನೇಕರು ಎಪ್‌ಸ್ಟೈನ್ ಜತೆಗೆ ನಂಟು ಹೊಂದಿರುವುದು ಪತ್ತೆಯಾಗಿದೆ. ಈ ಪೈಕಿ ಬಹುತೇಕರು, ಎಪ್ಸ್ಟೀನ್‌ ಜತೆಗೆ ನಂಟು ಹೊಂದಿರುವುದು ಪತ್ತೆಯಾಗಿದೆ.

Continue Reading

INTERNATIONAL

ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕದ ಮೇಲೆ ಇಸ್ರೇಲ್ ದಾ*ಳಿ

Published

on

ಮಂಗಳೂರು/ಟೆಹ್ರಾನ್ : ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯು*ದ್ಧ ಮುಂದುವರಿದಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಪರಸ್ಪರ ದಾ*ಳಿಗಳು ತೀವ್ರವಾಗಿದೆ. ಇದೀಗ ಅಮೆರಿಕ ಮತ್ತು ಇಸ್ರೇಲ್ ಇರಾನ್‌ನ ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ದಾ*ಳಿ ನಡೆಸಿವೆ.

ದಕ್ಷಿಣ ಟೆಹ್ರಾನ್‌ನಲ್ಲಿರುವ ತೈಲ ಸಂಗ್ರಹಣಾ ವ್ಯವಸ್ಥೆ ಗುರಿಯಾಗಿಸಿಕೊಂಡು ದಾ*ಳಿ ನಡೆಸಲಾಗಿದ್ದು, ಸಮೀಪದ ಸಂಸ್ಮರಣಾಗಾರಕ್ಕೆ ಯಾವುದೇ ಹಾ*ನಿಯಾಗಿಲ್ಲ ಎಂದು ತಿಳಿದುಬಂದಿದೆ. ಅಲ್ಬೋರ್ಜ್ ಪ್ರಾಂತ್ಯದ ಕರಾಜ್ ನಗರದಲ್ಲೂ ಸ್ಫೋ*ಟಗಳ ಸದ್ದು ಕೇಳಿ ಬಂದಿದೆ ಎಂದು ವರದಿಯಾಗಿದೆ.

ಮತ್ತಷ್ಟು ದಾ*ಳಿಯ ಎಚ್ಚರಿಕೆ :

ಇರಾನ್ ಮೇಲೆ ಇನ್ನಷ್ಟು ದಾ*ಳಿ ನಡೆಸುವ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮುನ್ಸೂಚನೆ ನೀಡಿದ್ದಾರೆ. ಇರಾನ್ ಅಧಿಕಾರಿಗಳು ಇನ್ನಷ್ಟು ದಾಳಿಗೆ ಗು*ರಿಯಾಗಲಿದ್ದಾರೆ ಎಂಬುದಾಗಿ ಟ್ರೂತ್ ಸೋಷಿಯಲ್‌ನಲ್ಲಿ ಟ್ರಂಪ್ ಪೋಸ್ಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇರಾನ್ ಮೇಲೆ ಭಾರೀ ದಾ*ಳಿ ನಡೆಯಲಿದೆ ಎಂದಿದ್ದಾರೆ.

ಇರಾನ್ ಇನ್ಮುಂದೆ ಮಧ್ಯಪ್ರಾಚ್ಯದ ಬೆ*ದರಿಸುವ ರಾಷ್ಟ್ರವಲ್ಲ. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾ*ಳಿ ನಂತರ ಸಂಪೂರ್ಣ ಸೋತ ದೇಶವಾಗಿದೆ. ಮಧ್ಯಪ್ರಾಚ್ಯದಲ್ಲಿ ಯು*ದ್ಧವು ಎರಡನೇ ವಾರಕ್ಕೆ ಕಾಲಿಟ್ಟಿರುವುದರಿಂದ ಇರಾನ್ ತುಂಬಾ ಹೊ*ಡೆತ ಪಡೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :   ಟಿ20 ವಿಶ್ವಕಪ್‌ ನಂತರ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ನಿವೃತ್ತಿ ಘೋಷಣೆ?

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ನೆರೆ ರಾಷ್ಟ್ರಗಳಿಗೆ ಟೆಹ್ರಾನ್ ನಡೆಸಿದ ದಾ*ಳಿಗಳ ಬಗ್ಗೆ ಕ್ಷಮೆ ಕೇಳಿರುವುದನ್ನು ಇದೇ ವೇಳೆ ಟ್ರಂಪ್ ಉಲ್ಲೇಖಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page