Connect with us

LATEST NEWS

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಲೆವೂರು ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗಿ

Published

on

ಉಡುಪಿ: ಗಣೇಶ ಹಬ್ಬಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಲೆವೂರು ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಗುಡ್ಡೆಯಂಗಡಿ ಜಂಕ್ಷನ್ ನಲ್ಲಿ ಕಳೆದ 37 ವರ್ಷಗಳಿಂದ ಗಣಪತಿ ವಿಗ್ರಹ ಇಟ್ಟು ಪೂಜಿಸಲಾಗುತ್ತದೆ. ರಕ್ಷಿತ್ ಶೆಟ್ಟಿಯ ತಂದೆ,ತಾಯಿ, ಅಣ್ಣ ,ಅತ್ತಿಗೆ ಮತ್ತು ಮಕ್ಕಳ ಜೊತೆ ಆಗಮಿಸಿ ದೇವರ ದರ್ಶನ ಮಾಡಿದರು.

ಶೆಟ್ಟಿ ಕುಟುಂಬದ ವತಿಯಿಂದ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ ವೈಯಕ್ತಿಕ ಮತ್ತು ವೃತ್ತಿ ಜೀವನ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು.

ರಕ್ಷಿತ್ ಕುಟುಂಬ ಅಲೆವೂರು ಕಟ್ಟೆ ಗಣಪತಿಯ ಪ್ರಸಾದ ಸ್ವೀಕರಿಸಿದರು.ತಮ್ಮ ಮೊದಲ ಕಿರುಚಿತ್ರ ಲೆಟ್ಸ್ ಕಿಲ್ ಗಾಂಧಿ ಮೂಲಕ ರಕ್ಷಿತ್ ಬಣ್ಣದ ಬದುಕನ್ನು ಆರಂಭ ಮಾಡಿದ್ದರು.

ಆ ಸಂದರ್ಭಯೂ ಅಲೆವೂರು ಕಟ್ಟೆ ಗಣಪತಿ ಗುಡಿಯಲ್ಲೇ ಮೊದಲ ಪೂಜೆ ಸಲ್ಲಿಕೆ ಮಾಡಿದ್ದರು.

LATEST NEWS

ನವಮಂಗಳೂರು ಬಂದರು ಪ್ರಾಧಿಕಾರಕ್ಕೆ 50 ನೇ ವರ್ಷದ ಸಂಭ್ರಮ; ಇಂದು ಕೇಂದ್ರ ಸಚಿವರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಸುವರ್ಣ ಮಹೋತ್ಸವ

Published

on

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರವು 50 ನೇ ವರ್ಷದ ಸಂಭ್ರಮದಲ್ಲಿದ್ದು, ಸುವರ್ಣ ಮಹೋತ್ಸವ ಸಮಾರಂಭವು ಇಂದು ಅದ್ದೂರಿಯಾಗಿ ಪಣಂಬೂರಿನ ಡಾ. ಬಿ.ಆರ್. ಅಂಬೇಡ್ಕರ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಅಪರಾಹ್ನ 3 ಗಂಟೆಗೆ ಸಮಾರಂಭ ಆರಂಭವಾಗಲಿದ್ದು, ಕೇಂದ್ರ ಬಂದರು ಮತ್ತು ನೌಕಾಯಾನ ಸಚಿವ ಸರ್ಬಾನಂದ ಸೋನೋವಾಲ್, ನವೀಕರಿಸ ಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕದ ಮೀನುಗಾರಿಕಾ ಮತ್ತು ಬಂದರು ಸಚಿವ ಮಾಂಕಾಳ ವೈದ್ಯ, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಬಂದರಿನ 50 ವರ್ಷಗಳ ಪಯಣ, ಸೇವೆ, ಅಭಿವೃದ್ಧಿ ಕಾರ್ಯಕ್ರಮಗಳ ಪ್ರಾತ್ಯಕ್ಷಿಕೆಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬಂದರು ವತಿಯಿಂದ ಕೈಗೆತ್ತಿಕೊಂಡಿರುವ 1,507 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಉದ್ಘಾಟನೆಯೂ ಇದೇ ವೇಳೆ ನೆರವೇರಲಿದೆ. 150 ಹಾಸಿಗೆಗಳ ಮಲ್ಟಿ ಸ್ಪೆಷ್ಯಾಲಿಟಿ ಪಿಪಿಪಿ ಆಸ್ಪತ್ರೆಯ ಲೋಕಾರ್ಪಣೆ ಆಗಲಿದೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದೆ.

Continue Reading

DAKSHINA KANNADA

ಪುತ್ತೂರು: ಕೀಟ ನಾಶಕ ಸೇವಿಸಿ 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

Published

on

ಪುತ್ತೂರು: 10ನೇ ತರಗತಿ ವಿದ್ಯಾರ್ಥಿನಿಯೋರ್ವಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದಲ್ಲಿ ನಡೆದಿದೆ.

ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ 15 ವರ್ಷ ಪ್ರಾಯದ ಹರ್ಷಿತಾ (15) ಮೃತ ಪಟ್ಟ ವಿದ್ಯಾರ್ಥಿನಿ. ವಿದ್ಯಾರ್ಥಿನಿ ಹರ್ಷಿತಾ ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಓದುತ್ತಿದ್ದು, ನವೆಂಬರ್ 4ರಂದು ತಲೆನೋವು ಇದೆ ಎಂದು ಹೇಳಿ ಶಾಲೆಗೆ ತೆರಳಿರಲಿಲ್ಲ.

ಈ ಸಂದರ್ಭ ಮನೆಯಲ್ಲಿ ಇದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಆಕೆ ಅಸ್ವಸ್ಥಗೊಂಡಿದ್ದಳು. ವಿಷಯ ತಿಳಿದ ತಕ್ಷಣ ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಗೀತಾ ಮನೆಗೆ ಬಂದು, ಆಕೆಯನ್ನು ಆಟೋರಿಕ್ಷಾದಲ್ಲಿ ಕರೆದೊಯ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಆರೈಕೆಗಾಗಿ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹರ್ಷಿತಾ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 12 ರಂದು ಮುಂಜಾನೆ ವೇಳೆಗೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಇದನ್ನೂ ಓದಿ: 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ, ಲುಕ್ ಔಟ್ ನೋಟಿಸ್ ಹೊರಡಿಸಿದ ಕೊಣಾಜೆ ಪೊಲೀಸರು

ಕಡಬದ ರಾಜೇಶ್ ಎಂಬಾತ ಫೋನ್ ಮೂಲಕ ಆಕೆಗೆ ಕಿರುಕುಳ ನೀಡುತ್ತಿದ್ದ ಎಂಬ ಶಂಕೆ ಇದ್ದು, ಇದೇ ಕಾರಣದಿಂದ ತನ್ನ ಪುತ್ರಿ ಆತ್ಮಹತ್ಯೆಗೆ ಮುಂದಾಗಿರ ಬಹುದು ಎಂಬ ಅನುಮಾನ ವ್ಯಕ್ತಪಡಿಸಿ ಆಕೆಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಹೊರತಾಗಿ ಆಕೆಯ ಸಾವಿಗೆ ಬೇರೆ ಕಾರಣದ ಬಗ್ಗೆ ಮಾಹಿತಿ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.

Continue Reading

LATEST NEWS

ದೆಹಲಿ ಸ್ಪೋಟ; ಭಯೋತ್ಪಾದಕ ದಾಳಿ ಎಂದು ಘೋಷಿಸಿದ ಕೇಂದ್ರ ಸರ್ಕಾರ

Published

on

ನವದೆಹಲಿ: ದೆಹಲಿಯ ಕೆಂಪು ಕೋಟೆಯ ಬಳಿ ನಡೆದಿದ್ದ ಭೀಕರ ಕಾರು ಬಾಂಬ್ ಸ್ಪೋಟವನ್ನು ಭಯೋತ್ಪಾದಕ ದಾಳಿ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.


ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಈ ಕಾರು ಸ್ಫೋಟ ಸೇರಿದಂತೆ ಭಯೋತ್ಪಾದಕ ಘಟನೆಯಲ್ಲಿ ಸಂಭವಿಸಿದ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದೆ. ಅಮಾಯಕ ಜೀವಗಳನ್ನು ಕಳೆದುಕೊಂಡವರಿಗೆ ಗೌರವ ಸಲ್ಲಿಸಲು ಸಚಿವ ಸಂಪುಟ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.

ದೆಹಲಿ ಸ್ಫೋಟವನ್ನು ಖಂಡಿಸಿದ ಕೇಂದ್ರ ಸಚಿವ ಸಂಪುಟವು ಅಪರಾಧಿಗಳನ್ನು ಶಿಕ್ಷಿಸಲು ತ್ವರಿತ ತನಿಖೆಗೆ ಕರೆ ನೀಡಿದೆ. ಭಯೋತ್ಪಾದನೆಯ ಕೃತ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ದೆಹಲಿ ಸ್ಫೋಟ : ಇಲ್ಲಿದೆ ಪ್ರಾ*ಣ ಕಳೆದುಕೊಂಡವರ ಮನೆಯ ದಾರುಣ ಕಥೆ

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ನವೆಂಬರ್ 10ರಂದು ಕೆಂಪು ಕೋಟೆ ಬಳಿ ಕಾರು ಸ್ಪೋಟದ ಮೂಲಕ ರಾಷ್ಟ್ರವಿರೋಧಿ ಶಕ್ತಿಗಳು ನಡೆಸಿದ ಘೋರ ಭಯೋತ್ಪಾದಕ ದಾಳಿಯನ್ನು ದೇಶ ಕಂಡಿದೆ” ಎಂದು ಸಭೆಯ ಬಳಿಕ ಹೇಳಿದ್ದಾರೆ.

ಕೆಂಪು ಕೋಟೆಯ ಹೊರಗೆ ನಡೆದ ಕಾರು ಸ್ಫೋಟವನ್ನು “ಭಯೋತ್ಪಾದಕ ಘಟನೆ” ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರ, ಅಪರಾಧಿಗಳು ಮತ್ತು ಅವರ ಪ್ರಾಯೋಜಕರನ್ನು ವಿಳಂಬವಿಲ್ಲದೆ ನ್ಯಾಯಕ್ಕೆ ತರಲು ಪ್ರಕರಣವನ್ನು ಅತ್ಯಂತ ತುರ್ತಾಗಿ ಮತ್ತು ವೃತ್ತಿಪರತೆಯಿಂದ ನಿಭಾಯಿಸುವಂತೆ ತನಿಖಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page