Connect with us

ಲಾಕ್ ಡೌನ್ ಎಫೆಕ್ಟ್: ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಸರಳವಾಗಿ ಈದ್ ಉಲ್ ಫಿತ್ರ್ ಆಚರಿಸಿದ ಮುಸ್ಲಿಂ ಬಾಂಧವರು

Published

on

ಲಾಕ್ ಡೌನ್ ಎಫೆಕ್ಟ್: ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಸರಳವಾಗಿ ಈದ್ ಉಲ್ ಫಿತ್ರ್ ಆಚರಿಸಿದ ಮುಸ್ಲಿಂ ಬಾಂಧವರು…

ಮಂಗಳೂರು: ಕೊರೊನಾ ಲಾಕ್‌ ಡೌನ್ ಹಿನ್ನಲೆ ಹಾಗೂ ಸರಕಾರದ ಆದೇಶದ ಮೇರೆಗೆ ಭಾನುವಾರ (ಮೇ 24) ಕರಾವಳಿಯ ಸಮಸ್ತ ಮುಸ್ಲಿಂ ಬಾಂಧವರು,

ಅತ್ಯಂತ ಸರಳವಾಗಿ ತಮ್ಮ-ತಮ್ಮ ಮನೆಗಳಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡುವ ಮೂಲಕ ಈದುಲ್ ಫಿತ್ರ್ ಹಬ್ಬವನ್ನ ಆಚರಿಸಿದರು.

ಜೊತೆಗೆ ಮುಸ್ಲಿಂ ಬಾಂಧವರು ಕೊರೊನಾ ವಿರುದ್ಧ ಕೂಡ ಪ್ರಾರ್ಥನೆ ಸಲ್ಲಿಸಿದರು.

ಕಳೆದ ಒಂದು ತಿಂಗಳ ಉಪವಾಸ ವೃತದ ನಂತರ ಮುಸ್ಲಿಂ ಬಾಂಧವರು ಇಂದು ಕರಾವಳಿಯಾದ್ಯಂತ ರಂಜಾನ್ ಹಬ್ಬವನ್ನ ಆಚರಿಸುತ್ತಿದ್ದಾರೆ.

ಆದರೆ ಸರಳ ರೀತಿಯ ಈದ್ ಗೆ ಮೊರೆ ಹೋಗಿರುವ ಕರಾವಳಿಯ ಮುಸ್ಲಿಮರು ಈ ಬಾರಿ ಸಡಗರದ ಹಬ್ಬದಿಂದ ದೂರವುಳಿದಿದ್ದು, ಹಬ್ಬದ ಶಾಪಿಂಗ್ ನಿಂದವೂ ಅಂತರ ಕಾಯ್ದುಕೊಂಡಿದ್ದರು.

 

ಸಾಮಾನ್ಯ ದಿನಗಳಲ್ಲಾದರೆ, ಮುಂಜಾನೆಯೇ ಎದ್ದು ಸ್ನಾನ ಮಾಡಿ, ಸಡಗರದಿಂದ ಹೊಸ ಬಟ್ಟೆ ಧರಿಸಿ, ಅತ್ತರ್ ಪೂಸಿ,

ಸಿಹಿತಿಂಡಿ ತಿಂದು ಸಾಲಾಗಿ ಮಸೀದಿ ಅಥವಾ ಈದ್ಗಾಗಳಿಗೆ ತೆರಳಿ ಸಾಮೂಹಿಕ ‘ಈದ್ ನಮಾಝ್’ ಮಾಡುವುದು, ಪರಸ್ಪರ ಆಲಿಂಗಿಸುವುದು,

ಕ್ಷೇಮ ಸಮಾಚಾರ ಕೇಳಿಕೊಳ್ಳುವುದು, ಮಾತು ಬಿಟ್ಟವರನ್ನು ಹುಡುಕಿಕೊಂಡು ಹೋಗಿ ಮಾತನಾಡಿಸುವುದು, ಸಾಮೂಹಿಕ ಝಿಯಾರತ್ ಮಾಡುವುದು, ಖಬರಸ್ಥಾನ ಸಂದರ್ಶಿಸುವುದು,

ನೆರೆಮನೆ, ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡಿ, ಸಿಹಿ ತಿಂಡಿ ಹಂಚುವುದು, ಈದ್ ಹಣ ವಿತರಿಸುವುದು, ವಿಶೇಷ ಅಡುಗೆ ತಯಾರಿಸಿ ರುಚಿ ಸವಿಯುವುದು ಸರ್ವೇ-ಸಾಮಾನ್ಯವಾಗಿರುತ್ತಿತ್ತು.

ಆದರೆ ಈ ಬಾರಿ ಲಾಕ್ ಡೌನ್‌ ನಿಂದಾಗಿ ಯಾರೂ ಮಸೀದಿಯತ್ತ ತೆರಳಲಿಲ್ಲ, ಕೆಲವರು ಲಾಕ್‌ ಡೌನ್ ಮುಂಚೆಯೇ ಖರೀದಿಸಿದ್ದ ಹೊಸ ಬಟ್ಟೆಯನ್ನು ಧರಿಸಿದ್ದರೆ, ಇನ್ನೂ ಕೆಲವರು ಸಾದಾ ಬಟ್ಟೆ ಧರಿಸಿ ಸರಳತೆ ಮೆರೆದರು.

ಈದ್ ಬಟ್ಟೆ ಬರೆಗಾಗಿ ಮೀಸಲಿಟ್ಟ ಹಣವನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವ ವಸ್ತುಗಳ ಖರೀದಿಗೆ ಹಸ್ತಾಂತರಿಸಿದರು.

ಅರ್ಹರ ಮನೆಗೆ ಫಿತ್‌ ರ್ ಝಕಾತನ್ನು ತಲುಪಿಸಿದರು. ಒಟ್ಟಿನಲ್ಲಿ ಖಾಝಿಗಳ ಕರೆಯಂತೆ ಎಲ್ಲರೂ ಮನೆಯಲ್ಲೇ ಇದ್ದುಕೊಂಡು ಈದ್ ನಮಾಝ್ ಮಾಡಿ ಅತ್ಯಂತ ಸರಳವಾಗಿ ಹಬ್ಬ ಆಚರಿಸಿದ್ದು ವಿಶೇಷವಾಗಿತ್ತು.

ಇನ್ನು ಕರಾವಳಿಯಲ್ಲಿ ರಂಜಾನ್ ಇದ್ದರೂ ಮುಸ್ಲೀಮರು ಮಾತ್ರ ನೀರವ ಮೌನವಹಿಸಿದ್ದಾರೆ. ಪ್ರತೀ ವರ್ಷ ಜನಜಂಗುಳಿ ಇರುತ್ತಿದ್ದ ಮಸೀದಿಗಳು ಇಂದು ಖಾಲಿ ಖಾಲಿ ಹೊಡೆಯುತ್ತಿವೆ.

ರಂಜಾನೆ ವೇಳೆ ಪ್ರಾರ್ಥನೆಗಾಗಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಸೇರುತ್ತಿದ್ದ ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಜುಮ್ಮಾ ಮಸೀದಿಯಲ್ಲಿ ನೀರವ ಮೌನ ಆವರಿಸಿದೆ.

ಮಸೀದಿ ಸುತ್ತಮುತ್ತಲಿನ ರಸ್ತೆ, ಆವರಣ ಎಲ್ಲವೂ ಖಾಲಿಯಾಗಿದೆ. ವಾಹನ ಸಂಚಾರ, ಜನ ಸಂಚಾರ ಎಲ್ಲವೂ ಸಂಪೂರ್ಣ ಸ್ತಬ್ಧವಾಗಿದೆ.

ಮಸೀದಿ ಧರ್ಮಗುರುಗಳು, ಪೊಲೀಸರನ್ನು ಬಿಟ್ಟರೆ ಯಾರೂ ಅತ್ತ ಸುಳಿದಾಡಲಿಲ್ಲ. ಲಾಕ್ ​ಡೌನ್ ಹಾಗೂ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಜನರು ಗುಂಪುಗೂಡುವಂತಿಲ್ಲ.

ಜೊತೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದನ್ನೂ ನಿರ್ಬಂಧಿಸಲಾಗಿದೆ. ಈ ಹಿನ್ನಲೆಯಲ್ಲಿ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲಿದ್ದುಕೊಂಡೇ ರಂಜಾನ್ ಆಚರಿಸಿದ್ದಾರೆ.

ಅಂದಹಾಗೆ ಉಡುಪಿ ಜಿಲ್ಲೆಯಲ್ಲೂ ಈದ್ ಉಲ್ ಫಿತರ್ ಹಬ್ಬವನ್ನು ಮುಸ್ಲಿಮರು ತಮ್ಮ ಮನೆಗಳಲ್ಲಿ ಸರಳವಾಗಿ ಆಚರಿಸಿದರು.

ಕುಟುಂಬದವರೆಲ್ಲ ಒಟ್ಟುಸೇರಿ ಮನೆಯಲ್ಲಿಯೇ ಹಬ್ಬದ ವಿಶೇಷ ನಮಾಜನ್ನು ನಿರ್ವಹಿಸಿ ಬಳಿಕ ಪರಸ್ಪರ ಶುಭಾಶಯ ಕೋರಿದರು.

ಮಸೀದಿಯಲ್ಲಿ ಈದ್ ನಮಾಜ್ ನಿರ್ವಹಿಸಲು ಅವಕಾಶ ಇಲ್ಲದ ಕಾರಣ ಉಡುಪಿ ಜಾಮಿಯಾ ಮಸೀದಿಯಿಂದ ಈದ್ ಸಂದೇಶವನ್ನು ಸ್ಥಳೀಯ ಚಾನೆಲ್ ಹಾಗೂ ಯೂಟ್ಯೂಬ್ ಮೂಲಕ ನೇರಪ್ರಸಾರದ ಮೂಲಕ ನೀಡಲಾಯಿತು.

ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಸುಳ್ಯ: ಲೋ ಬಿಪಿ, ಕುಸಿದು ಬಿದ್ದು ಕಾಲೇಜು ಉಪನ್ಯಾಸಕ ನಿಧನ

Published

on

ಸುಳ್ಯ: ಎಂದಿನಂತೆ ಕಾಲೇಜಿಗೆ ಹಾಜರಾಗಿ ಮಧ್ಯಾಹ್ನದವರೆಗೆ ತರಗತಿಗಳನ್ನುನಡೆಸಿದ ಉಪನ್ಯಾಸಕರೋರ್ವರು ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದು ಸುಳ್ಯದಲ್ಲಿ ನಡೆದಿದೆ. ಡಿಗ್ರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಮಂಜು ಪಿ. (42) ಮೃತ ಉಪನ್ಯಾಸಕ. ಲೋ ಬಿಪಿ ಅಥವಾ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಮೃತರು ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಬೇರ್ಯ ನಿವಾಸಿಯಾಗಿದ್ದರು. ಗುರುವಾರ ಎಂದಿನಂತೆ ಕಾಲೇಜಿಗೆ ಹಾಜರಾಗಿ ಮಧ್ಯಾಹ್ನದವರೆಗೆ ತರಗತಿಗಳನ್ನು ನಡೆಸಿದ್ದರು. ನಂತರ ಅಸೌಖ್ಯ ಕಾಣಿಸಿಕೊಂಡಿತ್ತು. ವಿದ್ಯಾರ್ಥಿಯೊಬ್ಬರ ಸಹಾಯದಿಂದ ತಮ್ಮ ಕೊಠಡಿಗೆ ತೆರಳಿ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಔಷಧ ಪಡೆಯಲು ಮೆಡಿಕಲ್ ಶಾಪ್‌ಗೆ ಬಂದಾಗ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಂಜು ಅವರು ಇವರು ಕಳೆದ 10 ವರ್ಷಗಳ ಕಾಲ ಕೆ.ಆರ್. ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2024ರಲ್ಲಿ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರಾಗಿ ನೇಮಕಗೊಂಡು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

 

Continue Reading

LATEST NEWS

ಕಡಬ: ತೋಟಕ್ಕೆ ಬಂದ ಜಾನುವಾರುಗಳನ್ನು ಓಡಿಸಲು ಹೋಗಿ ಬಿದ್ದು ಮಹಿಳೆ ಸಾವು

Published

on

ಕಡಬ: ತೋಟಕ್ಕೆ ಮೇಯಲು ಬಂದ ಜಾನುವಾರುಗಳನ್ನು ಓಡಿಸಲು ಹೋದಾಗ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾತೃವಾಡಿಯಲ್ಲಿ ನಡೆದಿದೆ. ಕೊಣಾಲು ಗ್ರಾಮದ ನಿವಾಸಿ ಲೀಲಾವತಿ ಶೆಟ್ಟಿ (64) ಮೃತಪಟ್ಟ ದುರ್ದೈವಿ.

ಮಗನೊಂದಿಗೆ ವಾಸವಿದ್ದ ಮೃತ ಲೀಲಾವತಿ ಅವರು ಜಾನುವಾರುಗಳನ್ನು ಓಡಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ಇವರ ಮಗ ಹರೀಶ್ ಲಾರಿ ಚಾಲಕರಾಗಿದ್ದು, ರಾತ್ರಿ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಆದರೆ ತಾಯಿ ಮನೆಯಲ್ಲಿ ಇರಲಿಲ್ಲ. ಗಾಬರಿಗೊಂಡ ಹರೀಶ್ ಅವರು ನೆರೆಮನೆಯವರ ಸಹಾಯದೊಂದಿಗೆ ಹುಡುಕಾಟ ನಡೆಸಿದಾಗ, ತೋಟದಲ್ಲಿ ಲೀಲಾವತಿ ಅವರು ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೃತದೇಹ ಪತ್ತೆಯಾದಾಗ ಅವರ ಒಂದು ಕೈಯಲ್ಲಿ ಕಲ್ಲು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಇತ್ತು ಎಂದು ತಿಳಿದುಬಂದಿದೆ. ತೋಟಕ್ಕೆ ನುಗ್ಗಿದ ಜಾನುವಾರುಗಳನ್ನು ಓಡಿಸಲು ಹೋದ ಸಂದರ್ಭದಲ್ಲಿ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ. ಈ ವೇಳೆ ಕೈಯಲ್ಲಿದ್ದ ಕಲ್ಲೇ ಅವರ ಹಣೆಗೆ ಬಲವಾಗಿ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಅವರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕೊಣಾಲು ಗ್ರಾಮದ ತಿರ್ಲೆ ಪರಿಸರದಲ್ಲಿ ಜಾನುವಾರುಗಳ ಹಾವಳಿ ಮಿತಿಮೀರಿದೆ ಎಂಬ ಆರೋಪ ಕೇಳಿಬಂದಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಾನುವಾರುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

Continue Reading

LATEST NEWS

ಕೃಷ್ಣ ಮಠಕ್ಕಿಲ್ಲ ಗ್ಯಾಸ್ ಸಿಲಿಂಡರ್ ಟೆನ್ಶನ್; ದಿವಾನರು ಹೇಳಿದ್ದೇನು?

Published

on

ಉಡುಪಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣದಿಂದ ರಾಜ್ಯದಲ್ಲಿ ಎಲ್ ಪಿಜಿ ಸಿಲಿಂಡರ್ ಕೊರತೆ ಕಾಡುತ್ತಿದೆ ಎನ್ನಲಾಗ್ತಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪ್ರತಿದಿನ ಸಾವಿರಾರು ಜನ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಅಡುಗೆ ಅನಿಲ ಬಳಸಿಕೊಂಡು ಇಲ್ಲಿ ಊಟಕ್ಕೆ ತಯಾರಿ ಮಾಡಲಾಗುತ್ತೆ. ಆದರೆ ಕಟ್ಟಿಗೆ ಬಳಸಿ ಅಡುಗೆ ಮಾಡುವುದು ಇಲ್ಲಿನ ಸಂಪ್ರದಾಯ.

ಸದ್ಯಕ್ಕೆ ಯಾವುದೇ ಅಡ್ಡಿ ಆಗಿಲ್ಲ ಆದರೂ, ಎಷ್ಟೇ ಸಾವಿರ ಜನ ಬಂದರೂ ಕಟ್ಟಿಗೆ ಬಳಕೆ ಮಾಡಿ ಅಡುಗೆ ತಯಾರಿಸಲಾಗುವುದು. ಉಡುಪಿ ಮಠದಲ್ಲಿ ಅಡುಗೆಗೆ ಕಟ್ಟಿಗೆ ಬಳಕೆಗೆಂದೇ ಕಾಡು ಬೆಳೆಸಲಾಗುತ್ತಿದೆ. 36 ವರ್ಷಕ್ಕೊಮ್ಮೆ ಕಾಡಿನಿಂದ ಕಟ್ಟಿಗೆ ಲಭ್ಯವಾಗುತ್ತದೆ. ಭಕ್ತರು ನಿರಾತಂಕವಾಗಿ ಕೃಷ್ಣ ದರ್ಶನ ಮಾಡಿ ಊಟಕ್ಕೆ ಬರಬಹುದು ಎಂದು ದಿವಾನರಾದ ಡಾ.ಉದಯ್ ಕುಮಾರ್ ಸರಳತ್ತಾಯ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page