Connect with us

LATEST NEWS

ಹಿಂದೂಗಳಿಗೆ ಅಪಮಾನ ಮಾಡುವ ಶಾರುಖ್‌, ಅಮೀರ್‌ಖಾನ್‌ನ ಚಿತ್ರಗಳನ್ನು ಬಹಿಷ್ಕರಿಸಲು ಮುತಾಲಿಕ್ ಕರೆ

Published

on

ಧಾರವಾಡ: ‘ಶಾರುಖ್, ಅಮೀರ್, ಸಲ್ಮಾನ್ ಖಾನ್ ದೇಶದ್ರೋಹಿಗಳು. ಅವರು ಹಿಂದೂಗಳಿಂದಲೇ ಹೀರೋ ಆಗಿದ್ದು. ಈಗ ಹಿಂದೂ ಧರ್ಮದ ಬಗ್ಗೆಯೇ ಅಪಪ್ರಚಾರ ಮಾಡುತ್ತಿದ್ದಾರೆ. ಪಠಾಣ್ ಸಿನಿಮಾ ಬಹಿಷ್ಕಾರ ಆಗಬೇಕು’ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ನಟಿಸಿರುವ ಹೊಸ ಚಿತ್ರ ಪಠಾಣ್ ವಿವಾದಕ್ಕೆ ಕಾರಣವಾಗಿದೆ. ಚಿತ್ರದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಅಶ್ಲೀಲವಾಗಿ ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರು ಸಿಟ್ಟಿಗೆದ್ದಿದ್ದಾರೆ.


ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ “ಬೇಷರಂ ರಂಗ್ ಅಂತಾ ಹಾಡಿನಲ್ಲಿ ಕೇಸರಿ ಬಣ್ಣದ ಬಟ್ಟೆ ಇದೆ.

ಕೇಸರಿ ಬಣ್ಣ ಹಿಂದೂಗಳದ್ದು, ಆ ಬಣ್ಣದ ಬಟ್ಟೆಯನ್ನು ನಟಿ ದೀಪಿಕಾ ಅವರಿಗೆ ಬಿಕಿನಿಯಂತೆ ಬಳಸಲಾಗಿದೆ. ಬೇಕಂತಲೇ ಅದನ್ನು ಮಾಡಿದ್ದಾರೆ.

ಅಶ್ಲೀಲ, ಅಸಭ್ಯವಾಗಿ ಬಟ್ಟೆ ಹಾಕಿದ ಹಾಡು ಇದು. ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿದ್ದಾರೆ. ಶಾರುಖ್, ಅಮೀರ್, ಸಲ್ಮಾನ್ ಖಾನ್ ದೇಶದ್ರೋಹಿಗಳು. ಅವರು ಹಿಂದೂಗಳಿಂದಲೇ ಹೀರೋ ಆಗಿದ್ದು. ಈಗಲೂ ಹಿಂದೂಗಳಿಗೆ ಅಪಚಾರ ಮಾಡಿದ್ದಾರೆ. ಪಠಾಣ್ ಸಿನಿಮಾ ಬಹಿಷ್ಕಾರ ಆಗಬೇಕು’’ ಎಂದು ಕಿಡಿಕಾರಿದ್ದಾರೆ.

ಪಠಾಣ್ ಸಿನಿಮಾ ಬಹಿಷ್ಕರಿಸಬೇಕೆಂದು ಧಾರವಾಡದಲ್ಲಿ ಅವರು ಒತ್ತಾಯಿಸಿದ್ದಾರೆ.
ಹಾಡನ್ನು ಚಿತ್ರಿಸಿರುವ ರೀತಿ ನೋಡಿದರೆ, ಹಲವು ಅನುಮಾನಗಳು ಎದ್ದು ಕಾಣುತ್ತವೆ.

ಕೇಸರಿ ಬಣ್ಣವನ್ನು ನಟಿಯ ಬಿಕಿನಿಯನ್ನಾಗಿ ಬಳಸಿರುವುದು, ಆಕೆಯನ್ನು ಕೇಸರಿ ದಿರಿಸಿನಲ್ಲಿ ಅಶ್ಲೀಲವಾಗಿ ಚಿತ್ರಿಸಿರುವುದನ್ನು ಗಮನಿಸಿದಾಗ ಹಿಂದುತ್ವವನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿದ್ದಾರೆ ಎಂದೆನಿಸುತ್ತದೆ ಎಂದು ಅವರು ಆರೋಪಿಸಿದರು.

DAKSHINA KANNADA

ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಆರೋಪ; ಆರೋಪಿಯ ಬಂಧನ

Published

on

ಮಂಗಳೂರು : ವಿದ್ಯಾರ್ಥಿಗಳಿಗೆ ಮಾ*ದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಮಂಗಳೂರಿನ ಕದ್ರಿ ಠಾಣೆಯ ಪೊಲೀಸರು ಶನಿವಾರ(ಜ.17) ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಮುತೊಲಪುರಂ ನಿವಾಸಿ 20 ವರ್ಷದ ಜೂಡ್ ಮಾಥ್ಯೂ ಬಂಧಿತ ಆರೋಪಿ. ಆತನಿಂದ 5.20 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಕೃ*ತ್ಯಕ್ಕೆ ಬಳಸಿದ  ಬೈಕ್ ಸಮೇತ ಒಟ್ಟು 70 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

ಮಂಗಳೂರಿನ ಪದವು ಗ್ರಾಮದ ಕೈಲಾಸ ಕಾಲನಿ ಸಮೀಪ ಯುವಕನೋರ್ವ ಮಾ*ದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಕದ್ರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

 

Continue Reading

LATEST NEWS

ವಿದ್ಯುತ್ ಕಂಬಕ್ಕೆ ಕಾರು ಡಿ*ಕ್ಕಿ; ಇಬ್ಬರು ಸಾ*ವು

Published

on

ಮಂಗಳೂರು/ಭಟ್ಕಳ :  ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿ*ಕ್ಕಿಯಾದ  ಪರಿಣಾಮ ಇಬ್ಬರು ಸಾ*ವನ್ನಪ್ಪಿದ ಘಟನೆ ಭಟ್ಕಳದ ವೆಂಕಟಾಪುರದ ಬಳಿ ನಡೆದಿದೆ.

ಭಟ್ಕಳದ ಆಜಾದ್ ನಗರ ನಿವಾಸಿ 15 ವರ್ಷದ ಬಿಲಾಲ್  ಹಾಗೂ 20 ವರ್ಷದ ಆಯಾನ್ ಮೃ*ತ ದುರ್ದೈ*ವಿಗಳು.

ಬಿಲಾಲ್ ಸ್ಥಳದಲ್ಲೇ ಸಾ*ವನ್ನಪ್ಪಿದ್ದು, ಚಾಲನೆ ಮಾಡುತ್ತಿದ್ದ ಆಯಾನ್ ಗಾ*ಯಗೊಂಡಿದ್ದ. ಆತನನ್ನು ಉಡುಪಿಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.‌

ಇದನ್ನೂ ಓದಿ : BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪ*ಘಾತ ನಡೆದಿದೆ. ಅಪ*ಘಾತ ಸಂಬಂಧ ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BIG BOSS

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

Published

on

BBk12 :  ಕನ್ನಡ ಬಿಗ್ ಬಾಸ್ ಸೀಸನ್ 12 ಕೊನೆಯ ಹಂತದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಹೊರ ಬೀಳಲಿದೆ. ಬಿಗ್ ಬಾಸ್ ಫಿನಾಲೆ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸತತ 12 ಸೀಸನ್‌ಗಳನ್ನು ಕಿಚ್ಚ ಸುದೀಪ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಸೀಸನ್ 12 ಮುಕ್ತಾಯಗೊಳ್ಳುವ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಸೋಸಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಸ್ಪರ್ಧಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಕಿಚ್ಚ ಪೋಸ್ಟ್ ಏನು?

ಕಿಚ್ಚ ತನ್ನಫೋಟೋವೊಂದನ್ನು ಹಂಚಿಕೊಂಡಿದ್ದಾರೆ.  ಇಂದು ಸೂರ್ಯ ಮುಳುಗುವ ವೇಳೆಗೆ ಬಿಗ್‌ಬಾಸ್ ಸೀಸನ್ – 12 ಮುಕ್ತಾಯಗೊಳ್ಳಲಿದೆ. ಈ ಸೀಸನ್‌ನ ಬೆಳವಣಿಗೆ ಮತ್ತು ಅದ್ಭುತ ಪ್ರಯಾಣ ಮುಂದಿನ ಪೀಳಿಗೆಗೆ ಸಾಕ್ಷಿಯಾಗಿದೆ. ಅಚಲ ಬೆಂಬಲಕ್ಕಾಗಿ ಪ್ರತಿಯೊಬ್ಬ ವೀಕ್ಷಕರಿಗೂ ನನ್ನ ಹೃತ್ತೂರ್ವಕ ಕೃತಜ್ಞತೆಗಳು.

ಇದನ್ನೂ ಓದಿ :  ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

ಎಲ್ಲಾ ಸ್ಪರ್ಧಿಗಳಿಗೆ ಮತ್ತು ಸೀಸನ್‌ನ ವಿಜೇತರಿಗೆ ಹೃತ್ತೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಇಡೀ ಬಿಗ್‌ಬಾಸ್ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಗ್‌ಬಾಸ್ ಕಾರ್ಯಕ್ರಮವಿಲ್ಲ. ಹೊಸ ಸೀಸನ್ – 13 ಪ್ರಾರಂಭವಾಗುವವರೆಗೆ ಬಿಗ್‌ ಬಾಸ್ ವಿಶ್ರಾಂತಿ ಪಡೆಯಲು ಗೌರವಯುತವಾಗಿ ಮುಖ್ಯದ್ವಾರವನ್ನು ಮುಚ್ಚುತ್ತೇವೆ ಎಂದು ಬರೆದುಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page