ಮಂಗಳೂರು: ಬಿರುವ ಜವನೆರ್ ಮಸ್ಕತ್ ಮತ್ತು ಇನ್ಸ್ಟಿರೇಷನ್ ಡಿಪೈನ್ ಇವರ ಸಹ ಪ್ರಯೋಜಕತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಕಲಾ ಮಂಡಳಿಯ ಆರು ಮೇಳಗಳ ಆಯ್ದ 33 ಕಲಾವಿದರು ಮೇ 31 ರಂದು ಮಸ್ಕತ್ ನಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಬಿರುವ ಜವನೆರ್ ಸಂಘಟನೆಯ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಒಮಾನ್ ದೇಶದ ಮನ್ಮತ್ ನ ರುವಿ ಯಲ್ಲಿರುವ ಅಫಾಲಾಜ್ ಹೋಟೆಲ್ ನಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 9ರ ತನಕ ಪುಷ್ಪಾಲಂಕಾರದಿಂದ ಶೋಭಿಸುವ ಸಂಪ್ರದಾಯಕ ರಂಗಸ್ಥಳದಲ್ಲಿ ವಿಜೃಂಭಣೆಯ ಬಯಲಾಟ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಭಾಗವಹಿಸುವ ಕಲಾವಿದರು:
ಬಲಿಪ ಶಿವಶಂಕರ್ ಭಟ್, ದೇವಿಪ್ರಸಾದ್ ಆಳ್ವ ಅವರು ಭಾಗವತರಾಗಿ, ದಯಾನಂದ ಶೆಟ್ಟಿಗಾರ, ಭಾಸ್ಕರ್ ಭಟ್ ಕಟೀಲು, ರಾಮಪ್ರಕಾಶ ಕಲ್ಲೂರಾಯ ಚೆಂಡೆ ಮದ್ದಳೆ ವಾದಕರಾಗಿ ಮತ್ತು ಮುಮ್ಮೇಳದಲ್ಲಿ ವೇಷಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಿಷ್ಣು ಶರ್ಮ ವಾಟೆ ಪಡ್ಪು, ಡಾ। ವಾದಿರಾಜ್ ಕಲ್ಲೂರಾಯ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಡಾ। ಮಹೇಶ್ ಕುಮಾರ್, ಬಾಲಕೃಷ್ಣ ಗೌಡ ಮಿಜಾರು, ಮೋಹನ್ ಕುಮಾರ್ ಅಮ್ಮುಂಜೆ, ಅರುಣ್ ಕೋಟ್ಯಾನ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಗಣೇಶ್ ಚಂದ್ರಮಂಡಲ, ರವಿರಾಜ ಪೆಣೆಯಾಲೆ, ಹರಿನಾರಾಯಣ ಭಟ್, ಕೃಷ್ಣ ಪ್ರಸಾದ್, ಅರಳ ಗಣೇಶ, ಡಾ। ಶ್ರುತಕೀರ್ತಿರಾಜ, ಸಂಜೀವ ಶೇರಂಕಲ್ಲು, ಮೋನಪ್ಪ ದೇವಾಡಿಗ, ಉಮೇಶ ಕುಪ್ಪೆಪದವು, ರವಿ ಪೂಜಾರಿ, ಪ್ರೇಮರಾಜ್ ಕೊಯಿಲ, ರಾಜೇಶ್ ಆಚಾರ್ಯ, ಅಕ್ಷಯ್ ಭಟ್, ರಕ್ಷಿತ್ ಪೂಜಾರಿ, ನಿಖಿಲ್ ಶೆಟ್ಟಿ ಹಾಗೂ ಮಸ್ಕತ್ ನಲ್ಲಿರುವ ಹವ್ಯಾಸಿ ಕಲಾವಿದೆ ವಿದೂಷಿ ಶ್ರೀಮತಿ ತೀರ್ಥ ಕಟೀಲ್ ಭಾಗವಹಿಸಲಿದ್ದಾರೆ. ರಮೇಶ್ ಕುಲಶೇಖರ ವೇಷ ಭೂಷಣದ ವ್ಯವಸ್ಥೆ ಮಾಡಲಿದ್ದಾರೆ.
ಬಿರುದು ಗೌರವ:
ಹಿರಿಯ ಅರ್ಥಧಾರಿ, ವೇಷ ಧಾರಿ, ಪ್ರಭಂದಕ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ “ಯಕ್ಷ ಸಿರಿ” ಹಾಗೂ ವೇಷಧಾರಿ, ಅರ್ಥಧಾರಿ, ಉಪನ್ಯಾಸಕ, ನಿರೂಪಕ ಡಾ. ವಾದಿರಾಜ ಕಲ್ಲೂರಾಯರಿಗೆ “ಯುವ ಸಿರಿ” ಬಿರುದು ನೀಡಿ ಗೌರವಿಸಲಾಗುವುದು.
ವಿಶೇಷ ಅತಿಥಿಗಳು:
ಈ ಕಾರ್ಯಕ್ರಮದಲ್ಲಿ ಕರಾವಳಿಯ ಶಾಂತಾ ರಾಮ ಅಮೀನ್ ನಾನಿಲ್ ಹಳೆಯಂಗಡಿ, ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ, ಸುಚೇತನಾ ಕೆ ಅಂಚನ್, ಸೂರ್ಯ ಕಾಂತ್ ಜಯ ಸುವರ್ಣ, ಮಿತ್ರ ಹೆರಾಜೆ, ಮೋಹನ್ ದಾಸ್ ಸಾಲಿಯಾನ್ ಪಚ್ಚನಾಡಿ, ಆನಂದ ಸನಿಲ್, ಗಂಗಾಧರ್ ಪೂಜಾರಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವ ಬಿರುವ ಜವನೆರ್ ಸಂಘಟನೆ ಈ ಪೂರ್ವದಲ್ಲಿ ಎರಡು ಬಾರಿ ಶ್ರೀ ಶನೀಶ್ವರ ಮಹಾತ್ಮೆ ಹಾಗೂ ಒಂದು ಬಾರಿ ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆಯನ್ನು ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ, ಮಂಗಳೂರು ತಂಡದ ಮೂಲಕ ನಡೆಸಿದೆ. ಕಳೆದ ವರ್ಷ ನಡೆದ ಸ್ವಾಮಿ ಕೊರಗಜ್ಜ ತಾಳಮದ್ದಳೆಯೂ ಜನ ಮೆಚ್ಚುಗೆ ಪಡೆದಿತ್ತು. ಕಲ್ಲಡ್ಕ ವಿಠಲ್ ನಾಯ್ಕ ಅವರ ಗೀತಾ ಸಾಹಿತ್ಯ ಸಂಭ್ರಮವನ್ನೂ ಮಸ್ಕತ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಆಯೋಜಿಸಿ ಕರಾವಳಿಯ ಕಲಾವಿದರಿಗೆ ಪ್ರೋತ್ಸಾಹ ನೀಡಿದೆ.
ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನಕ್ಕೆ ಉಚಿತ ಪ್ರವೇಶ ಇದ್ದು ಬೆಳಿಗ್ಗೆ 11 ರಿಂದ ಪ್ರಸಾದ ಭೋಜನ ಇದೆ ಸಂಜೆ ಉಪಹಾರ ಹಾಗೂ ರಾತ್ರಿ ಭೋಜನ ಪೊಟ್ಟಣ ವ್ಯವಸ್ಥೆಯನ್ನೂ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ , ಡಾ. ವಾದಿರಾಜ ಕಲ್ಲೂರಾಯ, ಸುಹಾನ್ ಹೇಮಚಂದ್ರ, ಗಂಗಾಧರ್ ಪೂಜಾರಿ, ಕದ್ರಿ ನವನೀತ ಶೆಟ್ಟಿ, ಮೋಹನ್ ದಾಸ್ ಉಪಸ್ಥಿತರಿದ್ದರು.