Connect with us

FILM

ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್ ಅದ್ಧೂರಿ ಗೃಹ ಪ್ರವೇಶ

Published

on

ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ಸ್ಟಾರ್ ನಟ ಶಿವರಾಜ್ ಕುಮಾರ್. ಇದೀಗ ‘ಭೈರತಿ ರಣಗಲ್’ ಸಿನಿಮಾದ ಬಿಡುಗಡೆ ಹೊಸ್ತಿಲಲ್ಲಿದ್ದಾರೆ. ಇದರ ನಡುವೆಯೇ ಶಿವರಾಜ್ ಕುಮಾರ್ ಮನೆಯಲ್ಲಿ ಶುಭಕಾರ್ಯವೊಂದು ನಡೆದಿದೆ. ಶಿವರಾಜ್ ಕುಮಾರ್ ಅವರು ನೂತನ ಫಾರ್ಮ್ ಹೌಸ್ ನಿರ್ಮಿಸಿದ್ದು ಅದರ ಗೃಹ ಪ್ರವೇಶ ಇತ್ತೀಚೆಗಷ್ಟೆ ನಡೆದಿದೆ. ಕುಟುಂಬಸ್ಥರು ಕೆಲವೇ ಆತ್ಮೀಯರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಗೃಹ ಪ್ರವೇಶ ನಡೆದಿದೆ.

ಕೆಲ ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರುಗಳು ನೆಲಮಂಗಲದ ಬಳಿ ಜಮೀನು ಖರೀದಿ ಮಾಡಿದ್ದರು. ಅಲ್ಲಿ ಈಗ ಬೃಹತ್ ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದಾರೆ. ಈ ಫಾರ್ಮ್ ಹೌಸ್​ ಗೃಹಪ್ರವೇಶವನ್ನು ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಮಾಡಿದ್ದಾರೆ. ಪೂಜೆ ಮಾಡಿ, ತಮ್ಮ ಮನೆ ದೇವರ ಫೋಟೊ ಹಿಡಿದುಕೊಂಡು ಶಿವರಾಜ್ ಕುಮಾರ್ ಫಾರ್ಮ್ ಹೌಸ್ ಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗೋ ಪೂಜೆಯನ್ನು ಸಹ ಶಿವರಾಜ್ ಕುಮಾರ್ ದಂಪತಿ ಮಾಡಿದ್ದಾರೆ. ಆತ್ಮೀಯರು ಮತ್ತು ಕುಟುಂಬದ ಸದಸ್ಯರುಗಳು ಈ ಪೂಜೆಯಲ್ಲಿ ಭಾಗಿಯಾಗಿದ್ದರು.

ಶಿವರಾಜ್ ಕುಮಾರ್ ಫಾರ್ಮ್ ಹೌಸ್ ವಿಶಾಲವಾಗಿದ್ದು, ಭಿನ್ನವಾದ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಮನೆಯ ಮುಂದೆ ವಿಶಾಲ ಜಾಗವಿದ್ದು, ಅಲ್ಲಿ ಉದ್ಯಾನ, ತೋಟಗಳನ್ನು ಬೆಳೆಸುವ ಯೋಜನೆ ಶಿವಣ್ಣ ದಂಪತಿಗೆ ಇದ್ದಂತಿದೆ. ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿಗೆ ಭೇಟಿ ನೀಡಿದ್ದರು. ತಮ್ಮ ನೂತನ ಫಾರ್ಮ್​ ಹೌಸ್ ಗೃಹ ಪ್ರವೇಶಕ್ಕೆ ಮುಂಚೆ ತಮ್ಮ ಗ್ರಾಮ ದೇವರಿಗೆ ನಮಿಸಿ ಬಂದಿದ್ದರು. ಅಲ್ಲಿನ ಕುಟುಂಬ ಸದಸ್ಯರಿಗೆ ಆಹ್ವಾನವನ್ನೂ ಸಹ ನೀಡಿದ್ದರು.

ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರಿಗೆ ಸಾಕಷ್ಟು ಕಡೆ ಜಮೀನು ಇದೆ. ಈ ಹಿಂದೆ ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಸಲ್ಲಿಸಿದ್ದ ನಾಮಪತ್ರದಲ್ಲಿ ಈ ವಿಷಯಗಳು ಬಹಿರಂಗಗೊಂಡಿದ್ದವು. ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಶಿವರಾಜ್ ಕುಮಾರ್ ಅದನ್ನು ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ, ಆಭರಣ ಇನ್ನಿತರೆಗಳಲ್ಲಿ ಹೂಡಿಕೆ ಮಾಡುತ್ತಾರೆ.

FILM

ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದು ಕನ್ನಡದ ನಿರ್ದೇಶಕ ಸಾವು

Published

on

ಶಿವಮೊಗ್ಗ: ಸಾವು ಅನ್ನೋದು ಯಾವಾಗ ಹೇಗೆ ಬರುತ್ತದೆ ಎಂದು ಊಹಿಸೋದು ತುಂಬಾನೇ ಕಷ್ಟ. ಅದೆಷ್ಟೋ ಕಲಾವಿದರು ಅಭಿನಯ ಮಾಡುತ್ತಿರುವಾಗಲೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದೀಗ ಕನ್ನಡದ ನಿರ್ದೇಶಕರೊಬ್ಬರು ಸಿನಿಮಾ ಚಿತ್ರೀಕರಣದ ವೇಳೆಯೇ ಕುಸಿದು ಬಿದ್ದ ಪರಿಣಾಮ ಬುಧವಾರ (ಡಿ.03) ಮೃತಪಟ್ಟಿದ್ದಾರೆ. ಸಂಗೀತ್ ಸಾಗರ್ ಮೃತಪಟ್ಟ ನಿರ್ದೇಶಕ.


ಸಂಗೀತ್ ಸಾಗರ್ ಶಿವಮೊಗ್ಗ ಕೊಪ್ಪದಲ್ಲಿ ಪಾತ್ರಧಾರಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಆ ವೇಳೆ ನಿರ್ದೇಶಕ ಸಾಗರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಏನೂ ಪ್ರಯೋಜನ ಆಗಿಲ್ಲ.

ಇದನ್ನೂ ಓದಿ: ಮದುವೆ ಮನೆಯಲ್ಲಿ ರಾದ್ಧಾಂತ ಮಾಡಿದ ವರನ ಕುಟುಂಬ; ಕಾರಣ ಏನು ಗೊತ್ತಾ?

ಮೃತ ನಿರ್ದೇಶಕ ಸಂಗೀತ್ ಸಾಗರ್ ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

Continue Reading

FILM

ಡೆವಿಲ್ ಸಿನಿಮಾ ಸೆಟ್‌ನಲ್ಲಿ ಮರೆಯಲಾಗದ ಕ್ಷಣಗಳು ಇವು : ಚಂದು ಗೌಡ ಪೋಸ್ಟ್

Published

on

ಮಂಗಳೂರು/ಬೆಂಗಳೂರು : ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ದಿ ಡೆವಿಲ್.  ಡಿಸೆಂಬರ್ 11 ರಂದು ಚಿತ್ರ ತೆರೆಗಪ್ಪಳಿಸಲಿದೆ.  ನಾಳೆ(ಡಿ.05) ಡೆವಿಲ್‌ ಚಿತ್ರದ ಟ್ರೇಲರ್ ಬಿಡುಗಡೆ  ಮಾಡಲಾಗುವುದೆಂದು ಚಿತ್ರತಂಡ ಈಗಾಗಲೇ ತಿಳಿಸಿದೆ.

ಈ ಚಿತ್ರದಲ್ಲಿ ಹಿರಿತೆರೆ – ಕಿರುತೆರೆಯ ತಾರೆಯರು ಅಭಿನಯಿಸಿದ್ದಾರೆ.  ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದು ಗೌಡ ಕೂಡ ಡೆವಿಲ್ ಸಿನಿಮಾದಲ್ಲಿ ಪಾತ್ರವಾಗಿದ್ದಾರೆ. ಇದೀಗ ಅವರು ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ನಟ ದರ್ಶನ್ ಜೊತೆ ಭಾಗಿಯಾಗಿದ್ದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ದಿ ಡೆವಿಲ್ ಸಿನಿಮಾ ಸೆಟ್‌ನಲ್ಲಿ ಮರೆಯಲಾಗದ ಕ್ಷಣಗಳು ಇವು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಕೆಲಸ ಮಾಡಿದ್ದು ಜೀವಮಾನ ನೆನಪಿನಲ್ಲಿ ಉಳಿಯುತ್ತದೆ. ಡಿಸೆಂಬರ್ 11ರಂದು ಚಿತ್ರಮಂದಿರಗಳಲ್ಲಿ ‘ದಿ ಡೆವಿಲ್’ ಸಿನಿಮಾ ನೋಡುವುದನ್ನು ತಪ್ಪಿಸಿಕೊಳ್ಳಬೇಡಿ’ ಎಂದು ಬರೆದುಕೊಂಡಿದ್ದಾರೆ.

‘ಲಕ್ಷ್ಮೀ ಬಾರಮ್ಮ’, ‘ತ್ರಿನಯನಿ’ ಧಾರಾವಾಹಿ ಮೂಲಕ ನಟ ಚಂದು ಗೌಡ ಜನಪ್ರಿಯರಾಗಿದ್ದಾರೆ. ಅಟೆಂಪ್ಟ್ ಟು ಮರ್ಡರ್ , ಕೃಷ್ಣ ಗಾರ್ಮೆಂಟ್ಸ್  ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ.

ಇದನ್ನೂ ಓದಿ : ಈ ವಾರ ಕಿಚ್ಚನ ಚಪ್ಪಾಳೆ ಧ್ರುವಂತ್‌ಗೆ ಫಿಕ್ಸ್!? ಯಾಕೆ ಗೊತ್ತಾ?

ದಿ ಡೆವಿಲ್‌ ಸಿನಿಮಾಕ್ಕೆ ಮಿಲನಾ ಪ್ರಕಾಶ್  ನಿರ್ದೇಶನವಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮೊದಲಾದವರು ನಟಿಸಿದ್ದಾರೆ.

Continue Reading

FILM

ಜೈ ಚಿತ್ರತಂಡದಿಂದ ಗುಡ್ ನ್ಯೂಸ್; ಮುಂಬೈನಲ್ಲಿ ನಡೆಯಲಿದೆ ಅತಿದೊಡ್ಡ ಪ್ರೀಮಿಯರ್ ಶೋ

Published

on

ಮಂಗಳೂರು : ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ತುಳು ಚಲನಚಿತ್ರ ‘ಜೈ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತುಳು ಚಿತ್ರರಂಗದಲ್ಲೇ ಹೊಸ ರೆಕಾರ್ಡ್ ಕೂಡ ಮಾಡಿದೆ. ಇದೀಗ ಚಿತ್ರತಂಡದ ಕಡೆಯಿಂದ ಗುಡ್ ನ್ಯೂಸ್ ಒಂದಿದೆ. ಹೌದು, ಜೈ ಸಿನಿಮಾ ಮುಂಬೈನಲ್ಲಿ ಪ್ರೀಮಿಯರ್ ಶೋ ಕಾಣಲಿದೆ.

ವಿಶ್ವದಾದ್ಯಂತ ನವೆಂಬರ್ 14 ರಂದು ತೆರೆಗೆ ಬಂದಿರುವ ಜೈ ಸಿನಿಮಾ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರೂಪೇಶ್ ಶೆಟ್ಟಿ ನಟನೆ, ನಿರ್ದೇಶನ ಎರಡರಲ್ಲೂ ಗೆದ್ದಿದ್ದಾರೆ. ಇದೀಗ ಡಿ.14 ರಂದು ದುಬೈನಲ್ಲಿ ಅತಿ ದೊಡ್ಡ ಪ್ರೀಮಿಯರ್ ಶೋ ನಡೆಯಲಿದೆ.

ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್ ಹಾಗೂ ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಆ್ಯಕ್ಷನ್, ಡ್ರಾಮಾ ಮತ್ತು ಎಮೋಷನ್ಗಳ ಸಮನ್ವಯವಿದೆ. ಚಿತ್ರದ ಕಥೆ ಹಾಗೂ ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಕ್ಯಾಮೆರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ್ಹಾ, ಸಂಕಲನ ರಾಹುಲ್ ವಸಿಷ್ಠ ಅವರದ್ದು.

ಇದನ್ನೂ ಓದಿ : BBK12: ಗಿಲ್ಲಿಗೆ ಖಡಕ್‌ ಎಚ್ಚರಿಕೆ ನೀಡಿದ ಕಾವ್ಯ! ಕಾರಣ ಏನು?

ರೂಪೇಶ್ಗೆ ಜೋಡಿಯಾಗಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಚಿತ್ರದ ಪ್ರಮುಖ ಆಕರ್ಷಣೆ. ಅರವಿಂದ್ ಬೋಳಾರ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್ ಮುಂತಾದವರು ನಟಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page