Connect with us

DAKSHINA KANNADA

ಶಿವಮೊಗ್ಗದ ಈದ್ ಮಿಲಾದ್‌ ಗಲಭೆ ಘಟನೆ ಪೂರ್ವಯೋಚಿತ ಕೃತ್ಯ : ಶರಣ್ ಪಂಪ್ವೆಲ್

Published

on

ಮಂಗಳೂರು: ಈದ್ ಮಿಲಾದ್ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಮುಸ್ಲಿಮರ ಪೂರ್ವಯೋಜಿತ ಕೃತ್ಯವೇ ಕಾರಣವೆಂದು ವಿಶ್ವಹಿಂದು ಪರಿಷತ್‌ ಮುಖಂಡ ಶರಣ್‌ ಪಂಪ್ವೆಲ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಘಟನೆಗಳೆಲ್ಲವೂ ಹಿಂದೂ ಸಮಾಜವನ್ನು ಗುರಿಯಾಗಿರಿಸಿಕೊಂಡು ಮಾಡುವ ಕೃತ್ಯಗಳಾಗಿವೆ. ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ. ಈದ್ ಮಿಲಾದ್ ಮೆರವಣಿಗೆ ಶನೀಶ್ವರ ದೇವಸ್ಥಾನಕ್ಕೆ ತಲುಪಿದಾಗ ಅಲ್ಲಿದ್ದ ನಾಲ್ಕೈದು ಮಂದಿ ಮುಸ್ಲಿಂ ಮಹಿಳೆಯರು ಕಲ್ಲು ತೂರಾಟವಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಇದರಿಂದಾಗಿ ಪ್ರಚೋದನೆಗೊಂಡ ಮುಸ್ಲಿಮರ ಗುಂಪು ಸುಮಾರು 25ಕ್ಕಿಂತಲೂ ಅಧಿಕ ಹಿಂದುಗಳ ಮನೆಗಳಿಗೆ ದಾಳಿ ಮಾಡಿದ್ದಾರೆ. ಇದರ ಹಿಂದೆ ಮುಸ್ಲಿಂ ಮಹಿಳೆಯರು ಕೂಡಾ ಇರುವುದು ಗಂಭೀರವಾದ ವಿಚಾರವಾಗಿದೆ ಎಂದರು.

ಈ ಘಟನೆಯನ್ನು ಕೂಡಲೇ ಎನ್‌ಐಎ ಮೂಲಕ ತನಿಖೆ ಮಾಡಿಸಬೇಕು. ಸತ್ಯಾಸತ್ಯತೆ ಹೊರಗೆ ಬರಬೇಕು. ಇವತ್ತು ಶಿವಮೊಗ್ಗದಲ್ಲಿ ಹಿಂದುಗಳ ಮೇಲೆ ನಡೆಯುವ ದಾಳಿ ಖಂಡನೀಯವಾದುದು. ಹಿಂದುಗಳು ಇಂದು ಭಯಭೀತರಾಗಿದ್ದಾರೆ. ಮಹಿಳೆಯರು ಕಣ್ಣೀರು ಇಡುವ ವಿಡಿಯೋಗಳು ಕಂಡು ಬರುತ್ತಿದೆ. ಇಂತಹ ಘಟನೆಯನ್ನು ವಿಶ್ವಹಿಂದು ಪರಿಷತ್‌ ಗಂಭೀರವಾಗಿ ತೆಗೆದುಕೊಂಡಿದೆ. ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸಬೇಕಾದರೆ ಮಹಾಪಂಚಾಯತ್‌ ಕರೆದು ಎಲ್ಲಾ ಸಮುದಾಯದವರನ್ನು ಸೇರಿಸಿ, ಗಂಭೀರವಾದ ಚರ್ಚೆಯನ್ನು ವಿಶ್ವಹಿಂದು ಪರಿಷತ್ ಮುಂದಿನ ದಿನಗಳಲ್ಲಿ ಮಾಡಲಿದೆ. ಈ ಮೂಲಕ ಯಾರು ಮುಸಲ್ಮಾನ ದಂಗೆಕೋರರಿದ್ದಾರೋ ಅವರಿಗೆ ಸರಿಯಾದ ಉತ್ತರವನ್ನು ಮುಂದಿನ ದಿನಗಳಲ್ಲಿ ಶಿವಮೊಗ್ಗದ ಜನತೆ ನೀಡಲಿದ್ದಾರೆ ಎಂದರು.
ಮೈಸೂರಿನಲ್ಲಿ ನಡೆಯುವ ಮಹಿಷಾ ದಸರಾ ಚರ್ಚೆ ಆಗುತ್ತಿದೆ. ಅಲ್ಲಿ ವಿರೋಧ ವ್ಯಕ್ತವಾಗಿದೆ. ಉಡುಪಿಯಲ್ಲೂ ಮಾಡುತ್ತಿರುವುದು ಸಮಂಜಸವಲ್ಲ. ವಿಶ್ವಹಿಂದು ಪರಿಷತ್ ಇದನ್ನು ವಿರೋಧಿಸುತ್ತದೆ. ಉಡುಪಿಯಲ್ಲಿ ಯಾರಾದರೂ ಮಾಡಲು ಮುಂದಾದರೆ ನಾವು ಅದನ್ನು ಮಾಡಲು ಬಿಡುವುದಿಲ್ಲ ಎಂದರು.

BELTHANGADY

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; ಮೂವರು ಗಂಭೀರ

Published

on

ಬೆಳ್ತಂಗಡಿ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ಸಮಿಪದ ಗುರುವಾಯನಕೆರೆ-ಕಾರ್ಕಳ ರಸ್ತೆಯ ಅಳದಂಗಡಿಯ ಕೆದ್ದುವಿನಲ್ಲಿ ನಿನ್ನೆ (ಏ.21) ಸಂಜೆ ನಡೆದಿದೆ.

ಅಳದಂಗಡಿಯಿಂದ ಗುರುವಾಯನಕೆರೆ ಕಡೆ ಹೋಗುತ್ತಿದ್ದ ಕಾರು ಹಾಗೂ ಗುರುವಾಯನಕೆರೆಯಿಂದ ಕಾರ್ಕಳದತ್ತ ಪ್ರಯಾಣ ಮಾಡುತ್ತಿದ್ದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಗೇರುಕಟ್ಟೆಯ ಕುಸುಮಾವತಿ (75), ಭಾಗ್ಯವತಿ (50), ವೈಭವ್‌ (23) ಎಂಬುವವರು ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಉಡುಪಿ : ಪತ್ರಕರ್ತ ರಾಮ್ ಅಜೆಕಾರ್ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ

Published

on

ಉಡುಪಿ : ಕನ್ನಡ ರಿಪೋರ್ಟರ್ ರಾಮ್ ಅಜೆಕಾರ್‌ ಕಾಸರಗೋಡು ಜಿಲ್ಲೆಯ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಆಯಕೆಯಾಗಿದ್ದಾರೆ.

ಹಿರಿಯ ಉದ್ಯಮಿ ಅಶ್ರಫ್ ಷಾ ಮಂತೂರು ಅವರ ದತ್ತಿನಿಧಿಯಿಂದ ನೀಡಲಾಗುವ ಪ್ರಶಸ್ತಿಗೆ ಪತ್ರಕರ್ತ ರಾಮ್ ಅಜೆಕಾರ್ ವರ ‘ಭಗೀರಥ ಅಪ್ಪಿಯಣ್ಣನ ಹೋರಾಟಕ್ಕೆ ಜಯ ಸಿಕ್ಕೀತೇ?’ ಶೀರ್ಷಿಕೆಯಡಿಯ ಸುದ್ಧಿ ಆಯ್ಕೆಯಾಗಿದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಈ ಸುದ್ಧಿ ಬಿಡುಗಡೆಯಾಗಿತ್ತು.

ದತ್ತಿನಿಧಿಯಿಂದ ನೀಡಲಾಗುವ ಈ ಪ್ರಶಸ್ತಿಯು ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ ೩ರಂದು ಸೀತಾಂಗೋಳಿಯ ಎಲೈನ್ಸ್ ಸಭಾಂಗಣದಲ್ಲಿ ನಡೆಯಲಿದೆ.

Continue Reading

DAKSHINA KANNADA

ಮಂಗಳೂರು : ವಕ್ಫ್ ಕಾಯ್ದೆ ವಿರುದ್ಧ ನಡೆಯಬೇಕಿದ್ದ ಪ್ರತಿಭಟನೆ ಮುಂದೂಡಿಕೆ

Published

on

ಮಂಗಳೂರು :ಈಗಾಗಲೇ ವಕ್ಫ್ ತಿದ್ದುಪಡಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದ್ದು, ಈ ಮಸೂದೆಯ ವಿರುದ್ಧ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ಎ.29ರಂದು ಕೂಳೂರು ಡೆಲ್ಟಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿತ್ತು. ಆದರೆ ಈಗ ಅಚಾನಕ್‌ ಆಗಿ ಆ ಪ್ರತಿಭಟನೆಯನ್ನು ಮುಂದೂಡಲಾಗಿದೆ.

ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್‌ರ ನಿವಾಸದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮೇ 16ರ ಶುಕ್ರವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಸಲಾಗಿದೆ ಎಂದು ಉಪಾಧ್ಯಕ್ಷ ಕೆ.ಅಶ್ರಫ್ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಲಹೆಗಾರರು ಪಾಲ್ಗೊಂಡಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page