Connect with us

FILM

ಕೊರೊನಾದ ಮಾನಸಿಕ ದೈಹಿಕ ಒತ್ತಡ ನಿವಾರಣೆಗೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಯೋಗ ಟಿಪ್ಸ್..!

Published

on

ಮುಂಬೈ : ಕೊವಿಡ್​ ಸಾಂಕ್ರಾಮಿಕ ರೋಗ ಎಲ್ಲರ ಮನಸ್ಥಿತಿಯನ್ನು ಕೆಡಿಸಿಬಿಟ್ಟಿದೆ. ಮಾನಸಿಕ ಹಾಗೂ ದೈಹಿಕ ಒತ್ತಡ ಜನರಿಗೆ   ಕಾಡತೊಡಗಿದೆ. ಹೀಗಿರುವಾಗ ಜನರು ಅನಗತ್ಯ ಚಿಂತೆಯನ್ನು ಬಿಟ್ಟು, ಧೈರ್ಯದಿಂದ ಸಮಸ್ಯೆಯನ್ನು ಎದುರಿಸಬೇಕು.

ಜತೆಗೆ ಮಾನಸಿಕ ಒತ್ತಡದಿಂದ ಪರಿಹಾರ ಕಂಡುಕೊಳ್ಳಲು ಯೋಗದ ಮೂಲಕ ಈಗಾಗಲೇ ಖ್ಯಾತಿ ಪಡೆದಿರುವ ಬಾಲಿವುಡ್ ತಾರೆ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮಾನಸಿಕ ಒತ್ತಡವನ್ನು ನಿವಾರಿಸುವ  ಯೋಗದ ಭಂಗಿಯನ್ನು ಹಂಚಿಕೊಂಡಿದ್ದು ನಿಮ್ಮ ಮಾನಸಿಕ ಒತ್ತಡವನ್ನು ಸುಧಾರಿಸುತ್ತದೆ ಎಂದಿದ್ದಾರೆ.

ನಮ್ಮ ಮನಸ್ಸು ಶಾಂತಿಯಿಂದಿರಲು ಯೋಗಾಸನವು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಜತೆಗೆ ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಯೋಗಾಸನ ಸಹಾಯಕವಾಗಿದೆ.

ದೈಹಿಕ ಒತ್ತಡ ಮತ್ತು ಮಾನಸಿಕ ಆತಂಕವನ್ನು ನಿವಾರಿಸಲು ಈ ಆಸನ ಸಹಾಯ ಮಾಡುತ್ತದೆ. ಈ ಯೋಗಾಸನದ ಹೆಸರು ಪಾರ್ಶ್ವ ಸುಖಾಸನ. ದೈಹಿಕವಾಗಿ ನಿಮ್ಮ ಕುತ್ತಿಗೆ, ಭುಜಗಳು, ಬೆನ್ನಿನ ಭಾಗವನ್ನು ಹಿಗ್ಗಿಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸುವ ಮೂಲಕ ಪೋಸ್ಟ್​ ಹಂಚಿಕೊಂಡಿದ್ದಾರೆ.

https://youtu.be/faH1yiRjA9Y

FILM

ಬಾಲಿವುಡ್ ಬಾದ್ ಶಾಗೆ ಸಂಕಷ್ಟ; ಶಾರುಖ್ ಮನೆಗೆ ಬಿಎಂಸಿ, ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ

Published

on

ಮಂಗಳೂರು/ಮುಂಬೈ : ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಿನಿಮಾಗಳ ಮೂಲಕ ಎಷ್ಟು ಫೇಮಸ್ ಆಗಿದ್ದಾರೋ ಹಾಗೇ ಅವರ ಮನೆ ಕೂಡ ಫೇಮಸ್. ಅವರ ನಿವಾಸ ‘ಮನ್ನತ್’  ಮುಂಬೈನ ಬಾಂದ್ರಾ ಕಡಲ ತೀರದಲ್ಲಿದೆ. ಈ ಐಷಾರಾಮಿ ಬಂಗಲೆಯನ್ನು 2001 ರಲ್ಲಿ 13.01 ಕೋಟಿ ರೂಪಾಯಿಗಳಿಗೆ ಶಾರುಖ್ ಖಾನ್ ಖರೀದಿಸಿದ್ದರು. ಮನೆಯ ನವೀಕರಣ ಕಾರ್ಯ ಮಾಡುವ ಸಲುವಾಗಿ ಶಾರುಖ್ ಖಾನ್, ಪತ್ನಿ ಗೌರಿ ಖಾನ್ ಹಾಗೂ ಮಕ್ಕಳು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.  ಈ ನಡುವೆ ಶಾರುಖ್ ಮನೆ ‘ಮನ್ನತ್‌’ಗೆ ಬಿಎಂಸಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಉಲ್ಲಂಘನೆ ಆರೋಪದ ಮೇರೆಗೆ ಮುಂಬೈನ ನಾಗರಿಕ ಸಂಸ್ಥೆ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ನಟ ಶಾರುಖ್ ಖಾನ್ ವಾಸಿಸುತ್ತಿದ್ದ ಮನ್ನತ್ ಮನೆಯಲ್ಲಿ ಅಕ್ರಮ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಂತೋಷ್ ದೌಂಡ್ಕರ್ ಎಂಬವರು ದೂರು ನೀಡಿದ್ದಾರೆ. ಹೀಗಾಗಿ ಮನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬಿಎಂಸಿ ಸದಸ್ಯರು ತನಿಖಾ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನೂ ಓದಿ : Watch Video: ಮಂಗಳೂರಿನಲ್ಲಿ ಜಲಯೋಗದ ಮೂಲಕ ಮೋದಿಗೆ ಪತ್ರ ಬರೆದ ಈಜುಪಟು

ಮ್ಯಾನೇಜರ್ ಹೇಳಿದ್ದೇನು?

ಶಾರುಖ್ ಖಾನ್ ನಿವಾಸ ನವೀಕರಣ ಕಾರ್ಯದ ಬಗ್ಗೆ ಬಂದಿರುವ ಆರೋಪಗಳ ಬಗ್ಗೆ ಮ್ಯಾನೇಜರ್ ಪೂಜಾ ದದ್ಲಾನಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿಲ್ಲ. ಎಲ್ಲಾ ಕೆಲಸಗಳು ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

Continue Reading

FILM

ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದಕ್ಕೆ ಮನನೊಂದು ನಟ ಆತ್ಮಹತ್ಯೆ

Published

on

ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದಕ್ಕೆ ಮನನೊಂದು ಮರಾಠಿ ಚಲನಚಿತ್ರದ ನಟ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತುಷಾರ್ ಘಡಿಗಾಂವ್ಕರ್(32) ಆತ್ಮಹತ್ಯೆ ಮಾಡಿಕೊಂಡ ನಟ. ಜೂನ್ 20, ಶುಕ್ರವಾರದಂದು ಇವರು ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಮತ್ತು ವೃತ್ತಿಪರ ಅವಕಾಶಗಳ ಕೊರತೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ಹಸುವಿನ ಕೆಚ್ಚಲಿಗೆ ಮಚ್ಚಿನಿಂದ ಹೊಡೆದು ಹತ್ಯೆ..!

ನಟ ಅಂಕುರ್ ವಿಠಲರಾವ್ ವಾಧವ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ. ಏಕೆ ಸ್ನೇಹಿತ..? ಯಾವುದಕ್ಕಾಗಿ..? ಕೆಲಸಗಳು ಬರುತ್ತದೆ ಮತ್ತು ಹೋಗುತ್ತದೆ! ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಆದರೆ ಆತ್ಮಹತ್ಯೆ ದಾರಿಯಲ್ಲ! ಪ್ರಸ್ತುತ ಪರಿಸ್ಥಿತಿ ವಿಚಿತ್ರವಾಗಿದೆ ಎಂದು ಒಪ್ಪುತ್ತೇನೆ. ಆದರೆ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬಾರದು ತುಷಾರ್ ಘಡಿಗಾಂವ್ಕರ್. ನೀವು ಸೋತರ ನಾವೆಲ್ಲರೂ ಸೋಲುತ್ತೇವೆ” ಎಂದು ಬರೆದಿದ್ದಾರೆ.

Continue Reading

FILM

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರ ನಡೆದ ನಟಿ ಶ್ವೇತಾ; ಕಾರಣವೇನು?

Published

on

ಬೆಂಗಳೂರು/ಮಂಗಳೂರು : ಕೌಟುಂಬಿಕ ಕಥಾಹಂದರ ಹೊಂದಿರುವ ಧಾರಾವಾಹಿ ‘ಲಕ್ಷ್ಮೀ ನಿವಾಸ’. ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿಯಿಂದ ಇತ್ತೀಚೆಗಷ್ಟೇ ತನು ಪಾತ್ರಧಾರಿ ಯುಕ್ತಾ ಹೊರ ನಡೆದಿದ್ದರು. ಇದೀಗ ಹಿರಿಯ ನಟಿ ಶ್ವೇತಾ ಧಾರಾವಾಹಿ ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಶ್ವೇತಾ ಈ ಧಾರಾವಾಹಿಯಲ್ಲಿ ಲಕ್ಷ್ಮೀಯಾಗಿ ಕಾಣಿಸಿಕೊಂಡಿದ್ದರು. ಗಂಡನಿಗೆ ಸದಾ ಜೊತೆಯಾಗಿ ನಿಲ್ಲುವ ಪತ್ನಿಯಾಗಿ, ಮಕ್ಕಳ ಹಿತ ಬಯಸುವ ತಾಯಿಯಾಗಿ ಮನೋಜ್ಞ ಅಭಿನಯ ನೀಡುತ್ತಿದ್ದರು. ಆದರೆ, ಇದೀಗ ದಿಢೀರಾಗಿ ಧಾರಾವಾಹಿಯಿಂದ ಹೊರ ಬಂದಿರುವುದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

ಕಾರಣವೇನು ?

ಧಾರಾವಾಹಿಯಿಂದ ಹೊರಬಂದಿರುವ ವಿಚಾರದ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವೈಯಕ್ತಿಕ ಕಾರಣ ಹಾಗೂ ತಾಯಿಯ ಅನಾರೋಗ್ಯದಿಂದ ಲಕ್ಷ್ಮೀ ನಿವಾಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ.  ಬಹಳ ದಯೆಯಿಂದ ವರ್ತಿಸಿ ಮತ್ತು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು.  ಸೆಟ್‌ನ ಕೆಲವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಮತ್ತೆ ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಿದಕ್ಕಾಗಿ ಝೀ ಕನ್ನಡ ವಾಹಿನಿಗೆ ಧನ್ಯವಾದಗಳು. ನೀವೆಲ್ಲ  ಅದ್ಭುತ ಮಂದಿ. ಶೀಘ್ರದಲ್ಲೇ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಒಂದೇ ಧಾರಾವಾಹಿಯಲ್ಲಿ ತಾಯಿ, ಮಗ, ಮಗಳು; ಲಕ್ಷ್ಮೀ ನಿವಾಸಕ್ಕೆ ಬಂದ ಹೊಸ ನಟಿ ಯಾರು ಗೊತ್ತಾ?

ಲಕ್ಷ್ಮೀಯಾಗಿ ಮಾಧುರಿ ಎಂಟ್ರಿ :

ಶ್ವೇತಾ ಜಾಗಕ್ಕೆ ಮತ್ತೊಬ್ಬ ಹಿರಿಯ ನಟಿಯ ಪ್ರವೇಶವಾಗಿದೆ. ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ ಜನಮನಸೂರೆಗೊಳಿಸಿದ್ದ ಮಾಧುರಿ, ಲಕ್ಷ್ಮೀಯಾಗಿ ಎಂಟ್ರಿ ಕೊಟ್ಟಿದ್ದಾರೆ . ಜಗ್ಗೇಶ್, ಪ್ರಭಾಕರ್, ದೇವರಾಜ್ ಮೊದಲಾದವರ ಜೊತೆ ನಟಿಸಿರುವ ಮಾಧುರಿ ಕನ್ನಡ ಮಾತ್ರವಲ್ಲದೇ ಹಿಂದಿ ಧಾರಾವಾಹಿಗಳಿಗೂ ಬಣ್ಣ ಹಚ್ಚಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page