Connect with us

FILM

ರಾಜ್‌ ಕುಂದ್ರಾಗೆ ಶಿಲ್ಪಾ ಶೆಟ್ಟಿಯಿಂದ ಡೈವೋರ್ಸ್‌? ಕುಂದ್ರಾನ ಒಂದು ಪೈಸೆ ಮುಟ್ಟದಿರಲು ನಿರ್ಧಾರ

Published

on

ಮುಂಬೈ: ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಬಂಧನ ಒಳಗಾಗಿರುವ ಪತಿ ರಾಜ್ ಕುಂದ್ರಾ ಅವರನ್ನು ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿಯಿಂದ ಬೇರೆ ಆಗಲು ಅವರು ಚಿಂತನೆ ನಡೆಸಿದ್ದಾರೆ ಎನ್ನುವ ವರದಿ ಬಿತ್ತರವಾಗಿದೆ. ಈ ಮೂಲಕ ತನ್ನ ಮಕ್ಕಳ ಭವಿಷ್ಯ ರೂಪಿಸಲು ಚಿಂತಿಸಿದ್ದಾರೆ.

ಮಗ ವಿಯಾನ್ ರಾಜ್ ಕುಂದ್ರಾ ಮತ್ತು ಮಗಳು ಶಮೀಶಾ ಕುಂದ್ರಾ ಜೊತೆ ಇರಲು ಸುರಕ್ಷಿತ ವಾತಾವರಣ ಕಂಡುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಕಳೆದ ತಿಂಗಳು ವಿಚಾರಣೆ ವೇಳೆ ಆ ಮೊಬೈಲ್ ಆ್ಯಪ್​ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮುಂಬೈ ಕ್ರೈಂ ಬ್ರಾಂಚ್ ಬಳಿ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ರು.ಆದರೆ, ಈಗ ಕುಂದ್ರಾರ ಒಂದು ಪೈಸೆಯನ್ನೂ ಮುಟ್ಟದೇ ಇರಲು ನಿರ್ಧರಿಸಿದ್ದಾರೆ.


ರಾಜ್​ ಕುಂದ್ರಾ ಸದ್ಯ ಜೈಲಿನಲ್ಲಿದ್ದಾರೆ. ಅವರು ಎಲ್ಲಾ ರೀತಿಯ ಪ್ರಯತ್ನ ನಡೆಸಿದರೂ ಜಾಮೀನು ಸಿಗುತ್ತಿಲ್ಲ. ಎಲ್ಲಾ ಸಾಕ್ಷ್ಯಗಳು ಅವರ ವಿರುದ್ಧವಾಗಿಯೇ ಇವೆ.

ಇನ್ನು ಸಾಕ್ಷ್ಯ ನಾಶದ ಭಯ ಕೂಡ ಕಾಡುತ್ತಿದೆ. ಈ ಎಲ್ಲಾ ಕಾರಣಕ್ಕೆ ಅವರಿಗೆ ಬೇಲ್​ ಸಿಗುತ್ತಿಲ್ಲ.

ಅವರು ಜೈಲಿನಿಂದ ಹೊರ ಬಂದ ಕೂಡಲೇ ಶಿಲ್ಪಾ ವಿಚ್ಛೇದನ ವಿಚಾರ ಮಾತನಾಡಲಿದ್ದಾರೆ ಎನ್ನಲಾಗಿದೆ.
ಇನ್ನು 14 ವರ್ಷಗಳ ಬಳಿಕ ಹಂಗಾಮ-2 ಸಿನಿಮಾದಲ್ಲಿ ನಟಿಸುವ ಮೂಲಕ ಶಿಲ್ಪಾ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ಆದ್ರೆ, ಚಿತ್ರ ಬಿಡುಗಡೆಗೆ ಕೆಲ ದಿನಗಳಿರುವಾಗಲೇ ಪತಿಯನ್ನು ಬಂಧಿಸಲಾಗಿತ್ತು.

ಇವರ ನಟನೆಯ ‘ನಿಕಮ್ಮಾ’ ಸಿನಿಮಾ ಬಿಡುಗಡೆಯಾಗಬೇಕಿದೆ.

ಹಂಗಾಮ-2 ಮತ್ತು ನಿಕಮ್ಮಾ ಬಳಿಕ ಹೆಚ್ಚಿನ ಅವಕಾಶಗಳಿಗೆ ನಟಿ ಕಾಯುತ್ತಿದ್ದಾರೆ ಎಂದು ವೆಬ್ ಪೋರ್ಟಲ್​​ವೊಂದಕ್ಕೆ ಶಿಲ್ಪಾ ಶೆಟ್ಟಿಯ ಸ್ನೇಹಿತೆ ತಿಳಿಸಿದ್ದಾರೆ.

FILM

ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ನಟ ರಾಮ್ ಚರಣ್; ವ್ಹಾವ್ ಅಂದ್ರು ಫ್ಯಾನ್ಸ್!

Published

on

ಮಂಗಳೂರು/ತೆಲಂಗಾಣ : ಸದ್ಯ ನಟ ರಾಮ್ ಚರಣ್ ಮನೆಯಲ್ಲಿ ಡಬಲ್ ಸಂಭ್ರಮವಿದೆ. ಇತ್ತೀಚೆಗಷ್ಟೆ ರಾಮ್  ಚರಣ್ ಪತ್ನಿ ಉಪಾಸನಾ ಕೊನಿಡೆಲ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಹೆಣ್ಣು, ಒಂದು ಗಂಡು ಮಗು ಆಗಿರುವ ಬಗ್ಗೆ ನಟ ಚಿರಂಜೀವಿ  ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಇದೀಗ ಮಕ್ಕಳ ಹೆಸರನ್ನು ರಿವೀಲ್ ಮಾಡಲಾಗಿದೆ. ಸಾಂಪ್ರದಾಯಿಕ ಹೆಸರನ್ನು ಮಕ್ಕಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ ದಂಪತಿ. ಮಕ್ಕಳ ಸುಂದರ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಸರೇನು?

ಗಂಡು ಮಗುವಿಗೆ ಶಿವರಾಮ್ ಎಂದು ಹೆಸರಿಟ್ಟರೆ,  ಹೆಣ್ಣು ಮಗುವಿಗೆ ಅನ್ವೀರಾ ದೇವಿ ಎಂದು ನಾಮಕರಣ ಮಾಡಲಾಗಿದೆ.  ಹೆಸರಿನ ವಿಶೇಷತೆ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಅಪರಿಮಿತ ಸಂತೋಷ ಮತ್ತು ದೈವಿಕ ಅನುಗ್ರಹದಿಂದ ನಮ್ಮ ಎರಡು  ಪುಟ್ಟ ಆಶೀರ್ವಾದಗಳ ಸುಂದರ ಹೆಸರುಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ

‘ಶಿವ ರಾಮ ಕೊನಿಡೆಲ  ಮತ್ತು ಅನ್ವೀರಾ ದೇವಿ ಕೊನಿಡೆಲ’

ಶಿವ ರಾಮ ಎರಡು ಶಾಶ್ವತ ಆದರ್ಶಗಳ ಆಳವಾದ ಸಂಗಮವಾಗಿದೆ. ‘ಶಿವ’ ಶಿವ ಶಂಕರ ವರ ಪ್ರಸಾದ್(ಮೆಗಾಸ್ಟಾರ್ ಚಿರಂಜೀವಿ ಅವರ ಮೂಲ ಹೆಸರು) ಅವರಿಂದ ಪ್ರೇರಿತವಾಗಿದೆ. ಇದು ಆಂತರಿಕ ಶಕ್ತಿ, ಆಧ್ಯಾತ್ಮಿಕ ಆಳ ಮತ್ತು ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ.

ರಾಮ್ ಚರಣ್ ಹೆಸರಿನ ‘ರಾಮ’ ಪದವನ್ನು ಆಯ್ಕೆ ಮಾಡಲಾಗಿದ್ದು, ರಾಮ ಎನ್ನುವುದು ಸದಾಚಾರ, ಕರುಣೆ ಮತ್ತು ನೈತಿಕ ಧೈರ್ಯವನ್ನು ಸಾಕಾರಗೊಳಿಸುತ್ತದೆ. ಒಟ್ಟಿನಲ್ಲಿ, ಈ ಹೆಸರು ಆಂತರಿಕ ಶಕ್ತಿ ಮತ್ತು ಜವಾಬ್ದಾರಿಯುತ ಕ್ರಿಯೆಯ ನಡುವಿನ ಸಾಮರಸ್ಯವನ್ನು ಸೂಚಿಸುತ್ತದೆ.

ಅನ್ವೀರಾ ದೇವಿ ದೈವಿಕ ಸ್ತ್ರೀತ್ವದ ಅಪರೂಪದ ಮತ್ತು ಶಕ್ತಿಯುತ ಅಭಿವ್ಯಕ್ತಿ. ಕನಕ ದುರ್ಗಾ ದೇವಿಯ ಆಶೀರ್ವಾದದಿಂದ ಪ್ರೇರಿತವಾದ ಅನ್ವೀರಾ ನಿರ್ಭಯತೆ, ಸ್ಥಿತಿಸ್ಥಾಪಕತ್ವ ಮತ್ತು ದೈವಿಕ ರಕ್ಷಣೆಯನ್ನು ಪ್ರತಿನಿಧಿಸುತ್ತದೆ. ಅನುಗ್ರಹ, ಧೈರ್ಯ ಮತ್ತು ಅಚಲ ಶಕ್ತಿಯನ್ನು ಪ್ರತಿಬಿಂಬಿಸುವ ಹೆಸರು.

ಇದನ್ನೂ ಓದಿ : ಕಾವ್ಯ ಶೈವ ಹಿಂದೆ ಬಿದ್ದ ಗಿಲ್ಲಿ ನಟ: ರಕ್ಷಿತಾ ಶೆಟ್ಟಿಗೆ ಶುರುವಾಯ್ತಾ ಅಸೂಯೆ?

ಶಿವ ರಾಮ ಮತ್ತು ಅನ್ವೀರಾ ದೇವಿ ತಮ್ಮ ಸುಂದರ ಜೀವನ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ನಾವು ಅವರಿಗೆ ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ ಎಂದು ಮನವಿ ಮಾಡಿದ್ದಾರೆ.

Continue Reading

FILM

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಶ್ರೀಲೀಲಾ…ಫೋಟೋ, ವೀಡಿಯೋ ವೈರಲ್!

Published

on

ಮಂಗಳೂರು/ಬೆಂಗಳೂರು : ಶ್ರೀಲೀಲಾ  ಸಿನಿರಸಿಕರ ಮನಗೆದ್ದಿರುವ ಚೆಲುವೆ. ತನ್ನ ನಟನೆ, ನೃತ್ಯ ಎಲ್ಲದರ ಮೂಲಕ ಗಮನ ಸೆಳೆದಿರುವ ನಟಿ. ಇದೀಗ ಕಿಸ್ ಬೆಡಗಿ ಡಾಕ್ಟರ್ ಆಗಿದ್ದಾರೆ.

ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಶ್ರೀಲೀಲಾ ಸಿನಿಮಾಗಳಲ್ಲಿ ಬಿಝಿ ಆಗಿದ್ದರೂ, ಮತ್ತೊಂದೆಡೆ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಡಾಕ್ಟರ್ ಶ್ರೀಲೀಲಾ ಆಗಿದ್ದಾರೆ.

ಒಂದೆಡೆ ಸಿನಿಮಾ, ಮತ್ತೊಂದೆಡೆ ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು  ಬಂದಿರುವ ಶ್ರೀಲೀಲಾ, ಎಂಬಿಬಿಎಸ್ ಮಾಡಿದ್ದಾರೆ. ಘಟಿಕೋತ್ಸವದಲ್ಲಿ ಅವರು ಕಾಣಿಸಿಕೊಂಡ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.

ಇದನ್ನೂ ಓದಿ : ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕ

ಕನ್ನಡದ ಕಿಸ್ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಶ್ರೀಲೀಲಾ ಬಳಿಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪೆಲ್ಲಿ ಸಂದಡಿ ಚಿತ್ರದ ಮೂಲಕ ಗಮನ ಸೆಳೆದರು. ಪುಷ್ಪ 2 ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದರು. ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಶ್ರೀಲೀಲಾ ಸದ್ಯ ಧನುಷ್ ಜೊತೆ D55ನಲ್ಲಿ ನಟಿಸುತ್ತಿದ್ದಾರೆ.

Continue Reading

FILM

ಮೋಕ್ಷಿತಾ ಪೈ ಈಗ ‘ಜಗದ್ಧಾತ್ರಿ’: ಜೀ ಕನ್ನಡದಲ್ಲಿ ಶುರುವಾಗಲಿದೆ ಹೊಸ ಪಯಣ

Published

on

‘ಪಾರು’ ಧಾರಾವಾಹಿಯ ಮೂಲಕ ಮನೆಮಾತಾದ ಮೋಕ್ಷಿತಾ ಪೈ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿಯಾಗಿದ್ದರು. ಆದಾದ ಬಳಿಕ ಯಾವುದೇ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಹೋಸ ಧಾರವಾಹಿ ಮೂಲಕ ಜೀ ಕನ್ನಡಕ್ಕೆ ಮತ್ತೆ ಕಾಲಿಡುತ್ತಿದ್ದಾರೆ. ಇದರಿಂದ ಅವರ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದಾರೆ.


ಜೀ ಕನ್ನಡ ವಾಹಿನಿಯ ‘ಜಗದ್ಧಾತ್ರಿ’ ಎಂಬ ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ಮೋಕ್ಷಿತಾ ಪೈ ನಟಿಸುತ್ತಿದ್ದಾರೆ. ನಾಯಕನಾಗಿ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನಮ್ಮನೆ ಯುವರಾಣಿ’ ನಾಯಕ ಹಾಗೂ ವೀಕ್ಷಕರ ಮೆಚ್ಚಿನ ಅನಿಕೇತ್ ಖ್ಯಾತಿಯ ದೀಪಕ್ ಗೌಡ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ವೈರಲ್ ಆಗುತ್ತಿದ್ದಂತೆ ವೀಕ್ಷಕರು ಸಖತ್ ಖುಷಿಯಾಗಿದ್ದಾರೆ.


ಇದನ್ನೂ ಓದಿ: 11 ವರ್ಷದ ಮಗಳ ಕತ್ತು ಹಿಸುಕಿ ಕೊಂ*ದ ತಾಯಿ!


ಪಾರು’ ಸೀರಿಯಲ್‌ನಲ್ಲಿ ಸುಮಾರು 5 ವರ್ಷಗಳ ಕಾಲ ನಟಿಸಿದ್ದ ಮೋಕ್ಷಿತಾ, ನಂತರ ಬಿಗ್ ಬಾಸ್‌ನಲ್ಲಿ ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಈಗ ಮತ್ತೆ ಕಿರುತೆರೆಗೆ ಮರಳುತ್ತಿದ್ದು, ಈ ಹೊಸ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್‌ ಕಾಯುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page