ಪ್ರಿತಿ ಎಂಬುವುದು ಪರಿಶುದ್ಧವಾದ ಭಾವನೆ. ಆದರೆ ಈಗ ಅದನ್ನೇ ಬ್ರಹ್ಮಾಸ್ತ್ರವನ್ನಾಗಿಸಿಟ್ಟುಕೊಂಡು ಪ್ರಿತಿ ಎಂಬ ಹೆಸರಿಗೆಯೇ ಕಲಂಕ ತರುವ ರಿತಿ ಯುವಜನತೆ ಮೋಸ ಮಾಡುತ್ತಾ ಬರುತ್ತಿದೆ. ಪ್ರತಿ ದಿನ ಈ ಕುರಿತು ಒಂದಲ್ಲಾ ಒಂದು ರಿತಿಯ ಘಟನೆಗಳು ನಡೆಯುತ್ತಿರುವುದನ್ನು ನೋಡುತ್ತೇವೆ. ಇದಿಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಚಾಲಾಕಿ ಮಹಿಳೆಯೊಬ್ಬಳು ತನಗೆ ಗರ್ಭಕಂಠ ಕ್ಯಾನ್ಸರ್, ಓವರಿಯನ್ ಕ್ಯಾನ್ಸರ್ ಎಂದು ಹೇಳಿ ಬಾಯ್‌ಫ್ರೆಂಡ್‌ನಿಂದ ಬರೋಬ್ಬರಿ 28 ಲಕ್ಷ ರೂಪಾಯಿ ಪೀಕಿದ್ದಾಳೆ. ಅಷ್ಟು ಹಣ ಪಡೆದ ಮಹಿಳೆ ಮಾಡಿದ ಕೆಲಸ ನೋಡಿ ಎಲ್ಲರಿಗೂ ಶಾಕ್ ಆಗಿದೆ. ಏನದು ಘಟನೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

ಲಂಡನ್ : ಲೌರಾ ಮೆಕ್‌ಫೆರ್ಸನ್ ಎಂಬ 35 ವರ್ಷದ ಮಹಿಳೆಗೆ 12 ವರ್ಷದ ಮಗಳಿದ್ದಾಳೆ. ಆದರೆ ಕಳೆದ ಹಲವು ವರ್ಷಗಳಿಂದ ಜಾನ್ ಲಿಯೋನಾರ್ಡ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು. ಜಾನ್ ಲಿಯಾನಾರ್ಡ್ ಜನಪ್ರಿಯ ಚಾರಿಟೇಬಲ್ ಟ್ರಸ್ಟ್ ಕಂಪನಿ ನಡೆಸುತ್ತಿದ್ದ. ಅಗತ್ಯ ಬಿದ್ದವರಿಗೆ ಆರ್ಥಿಕ ನೆರವು ಸೇರಿದಂತೆ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ತನ್ನ ಮಾದಕತೆಯಿಂದ ಈತನ ಬಲೆಗೆ ಬೀಳಿಸಿದ್ದ ಲೌರಾ, ರಿಲೇಶನ್‌ಶಿಪ್‌ನಲ್ಲಿ ತನ್ನ ತನು ಮನ ಅರ್ಪಿಸಿದ್ದಳು. ಆದರೆ ಧನ ಮಾತ್ರ ಆತನಿಂದ ಪೀಕಿದ್ದ ಘಟನೆ ಲಂಡನ್‌ನಲ್ಲಿ ನಡೆದಿದೆ.
ಲೌರಾ ಮೆಕ್‌ಫೆರ್ಸನ್ ಕ್ಯಾನ್ಸರ್ ಎಂದು ಹೇಳಿ 28 ಲಕ್ಷ ಪಡೆದು, ಆ ಹಣದಿಂದ ತನ್ನ ಸ್ತನ ಗಾತ್ರ ದೊಡ್ಡದು ಮಾಡಿಸಿಕೊಳ್ಳುವ ಸರ್ಜರಿಗೆ ಬಳಸಿಕೊಂಡಿದ್ದಾಳೆ. ಲಂಡನ್‌ನಲ್ಲಿ ರಿಲೇಶನ್‌ಶಿಪ್ ದೊಡ್ಡ ವಿಚಾರವೂ ಅಲ್ಲ. ಹಾಗಾಗಿ ಲೌರ ಹಾಗೂ ಜಾನ್ ರಿಲೇಶನ್‌ಶಿಪ್ ಗೌಪ್ಯವಾಗಿ ಇರಲಿಲ್ಲ. ಆದರೆ ಈ ನಡುವೆ ಲೌರಾ ತನಗೆ ಗರ್ಭಕಂಠ ಕ್ಯಾನ್ಸರ್ ಸೇರಿದಂತೆ ಒಂದೆರೆಡ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದೇನೆ ಎಂದು ಸುಳ್ಳು ಹೇಳಿ ಜಾನ್‌ನಿಂದ ದೂರ ಉಳಿದಿದ್ದಳು. ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ತನ್ನಲ್ಲಿದ್ದ ಎಲ್ಲಾ ಉಳಿತಾಯ ಮುಗಿದಿದೆ. ಇನ್ನು ಚಿಕಿತ್ಸೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಜಾನ್ ಬಳಿ ಹೇಳಿಕೊಂಡಿದ್ದಾಳೆ. ಆದರೆ ಧೈರ್ಯ ತುಂಬಿದ ಜಾನ್, ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದ.
ಲೌರಾಳೂ ಜಾನ್‌ನಿಂದ ಇದನ್ನೇ ಬಯಸುತ್ತಿದ್ದಳು. ಕ್ಯಾನ್ಸರ್ ಚಿಕಿತ್ಸೆಗೆ ಎಂದು ಜಾನ್‌ನಿಂದ ಹಂತ ಹಂತವಾಗಿ ಬರೋಬ್ಬರಿ 28 ಲಕ್ಷ ರೂಪಾಯಿ ಪಡೆದುಕೊಂಡಿದ್ದಾಳೆ. ಮತ್ತೆ ಮತ್ತೆ ಹಣ ಪಡೆಯಲು ಮುಂದಾಗಿದ್ದಾಳೆ. ಗೆಳತಿ ಬೇಗ ಗುಣಮುಖವಾಗಲಿ ಎಂದು ಆಕೆಯ ಹತ್ತಿರದ ಆಸ್ಪತ್ರೆಯಲ್ಲಿ ಕೀಮೋಥೆರಪಿ ಸೇರಿದಂತೆ ಕ್ಯಾನ್ಸರ್ ಚಿಕಿತ್ಸೆಗೆ ಎಲ್ಲವನ್ನೂ ಬುಕ್ ಮಾಡಿದ್ದ. ಆದರೆ ಲೌರಾ ಹಣ ಪಡೆದು ಬಳಿಕ ಆತ ಬುಕ್ ಮಾಡಿದ ಆಸ್ಪತ್ರೆಗೆ ತೆರಳಿ ಸ್ತನ ಗಾತ್ರ ದೊಡ್ಡದು ಮಾಡಲು, ಹೊಟ್ಟೆ ಕರಗಿಸಲು ಸೇರಿದಂತೆ ಇತರ ಬ್ಯೂಟಿ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಇದರ ನಡುವೆ ಬಾಯ್‌ಫ್ರೆಂಡ್ ಕ್ಯಾನ್ಸರ್ ಚಿಕಿತ್ಸೆ ಹೇಗಾಗುತ್ತಿದೆ? ಲೌರಾ ಹೇಗಿದ್ದಾಳೆ? ಎಂದು ತಿಳಿದುಕೊಳ್ಳಲು ಆಸ್ಪತ್ರೆಗೆ ಕರೆ ಮಾಡಿದ್ದಾನೆ. ಈ ವೇಳೆ ‘ಆಕೆ ಕ್ಯಾನ್ಸರ್‌ಗೆ ಯಾವುದೇ ಚಿಕಿತ್ಸೆ ಪಡೆದುಕೊಂಡಿಲ್ಲ, ಕೇವಲ ಸ್ತನ ಸೈಝ್ ಹೆಚ್ಚಿಸಲು ಸರ್ಜರಿ ಮಾಡಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಜಾನ್‌ಗೆ ಸತ್ಯಾಂಶವೆಲ್ಲಾ ತಿಳಿದಿದೆ.
ಲೌರಾ ಮಾಡಿದ ಮೋಸವನ್ನು ತಾಳದ ಜಾನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಪ್ರಕರಣ ತನಿಖೆ ನಡೆಸಿದ ಪೊಲೀಸರು, ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಲೌರಾಗೆ ‘ತಪ್ಪಿಕಸ್ಥೆ’ ಎಂದು ವರದಿ ನೀಡಿದೆ. ಇಷ್ಟೇ ಅಲ್ಲ ‘ಲೌರಾ ಮೋಸಗಾರ್ತಿ’ ಎಂದಿದೆ. ‘ಲೌರಾ ತನ್ನ ಬಾಯ್‌ಫ್ರೆಂಡ್ ಮಾತ್ರವಲ್ಲ, ಕುಟುಂಬಸ್ಥರು, ಮಗಳು ಸೇರಿದಂತೆ ಹಲವರಿಗೆ ಸುಳ್ಳು ಹೇಳಿ ಭಾವನೆಗಳ ಜೊತೆ ಆಟವಾಾಡಿದ್ದಾಳೆ’ ಎಂದು ಕೋರ್ಟ್ ಹೇಳಿದೆ.