ಮಂಗಳೂರು: “ಆತ್ಮವಿಶ್ವಾಸ ನಮ್ಮಲ್ಲಿದ್ದಾಗ ನಮ್ಮ ಯಶಸ್ಸನ್ನು ತಡೆಯಲು ಸಾಧ್ಯವಿಲ್ಲ. ಆಗ ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಪ್ರಾಪ್ತಿಯಾಗುವುದು, ಶಕ್ತಿ ಪಿಯು ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಿ, ಕೆವಿಸಿ ಜೊತೆಗೆ ಇದು ನಿಮ್ಮ ಯಶಸ್ಸಿಗೆ ಅದ್ಭುತ ಸೂತ್ರವಾಗಿದೆ” ಎಂದು ಖ್ಯಾತ ಲೆಕ್ಕ ಪರಿಶೋಧಕ ಸಿಎ ಕಿರಣ್ ವಸಂತ್ ಅಭಿಪ್ರಾಯ ಪಟ್ಟಿದ್ದಾರೆ.

ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಮತ್ತು ಸಿಎಸ್ ಫೌಂಡೇಶನ್ ಆರಂಭಿಸಿದ ವರ್ಚುವಲ್ ಕೋಚಿಂಗ್ ಅನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಪ್ರಯಾಣವು ಮೊದಲ ಹೆಜ್ಜೆಯಿಂದ ಪಾರಂಭವಾಗುತ್ತದೆ. ನಿಮ್ಮ ಮೊದಲ ಹೆಜ್ಜೆ ಪಥಮ ಪಿಯುಸಿನಲ್ಲಿ ಪ್ರಾರಂಭವಾಗುತ್ತದೆ.

ಸಕಾರಾತ್ಮಕವಾಗಿರಿ, ಮುಂದಿನ ನಾಲ್ಕು ಅಥವಾ ಐದು ವರ್ಷಗಳವರೆಗೆ ನಿಮ್ಮ ಬದ್ಧತೆಯನ್ನು ನೀಡಿ, ನೀವು ಯಾವ ಶಕ್ತಿಯನ್ನು ಹೊಂದಿದ್ದೀರಿ ಎಂದು ಊಹಿಸಲಾಗದಷ್ಟು ಬೇಗ ಪದವಿಯನ್ನು ನೀವು ಹೊಂದಿರುತ್ತೀರಿ. ಹಣವು ಹೋಗುತ್ತದೆ, ಸ್ವತ್ತುಗಳು ಹೋಗುತ್ತವೆ. ಆದರೆ ಜ್ಞಾನವು ಯಾವಾಗಲೂ ಉಳಿಯುತ್ತದೆ. ನಿಮಗೆ ಬೇಕಾದುದನ್ನು ಪಡೆಯಲು ಸಿಎ, ಪ್ರಮಾಣಪತ್ರವು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕುಟುಂಬ ಸದಸ್ಯರನ್ನು ಹೆಚ್ಚು ಆರಾಮವಾಗಿಡಲು ನಿಮ್ಮ ಕನಸು ಸಹಕರಿಸುತ್ತದೆ. ಇದು ಅತ್ಯುತ್ತಮ ಜೀವನ ನಿರ್ಮಾಣ ಮಾರ್ಗವಾಗಿದೆ” ಎಂದು ಅವರು ಹೇಳಿದರು.
“ನಮ್ಮ ಅಧ್ಯಾಪಕರು ನಮ್ಮ ನಮ್ಮ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನುಂಟು ಮಾಡಲು ನಾವು ಬಯಸುತ್ತೇವೆ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ವಸಾನಿ, ಸಿಎ ವ್ಯಾಸಂಗವನ್ನು ಪಿಯುಸಿ ಹಂತದಲ್ಲಿಯೇ ಪ್ರಾರಂಭಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ನಾವು ಯಾವಾಗಲೂ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಿದ್ಧಹಸ್ತರು. ಸಿಎ ಕೋರ್ಸ್ ಕಷ್ಟವಾಗಬಹುದು ಅಥವಾ ಕಷ್ಟವಾಗದಿರಬಹುದು, ಆದರೆ ನೀವು ಅದನ್ನು ಪ್ರಯತ್ನಿಸದೆ, ದೂರ ತಳ್ಳಿದರೆ ನೀವು ಖಂಡಿತವಾಗಿಯೂ ವಿಷಾದಿಸುತ್ತೀರಿ, ಸಿಎ ಫೌಂಡೇಶನ್ ಕೋರ್ಸ್ ಭವಿಷ್ಯದಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮನ್ನು ಸಿದ್ಧಪಡಿಸುತ್ತದೆ. ಯಶಸ್ಸಿನ ವಿಳಂಬವು ಗಳಿಕೆಯ ಪ್ರಾರಂಭಿಸುವುದು ಉತ್ತಮ.
ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಅಕಾಡೆಮಿಯೊಂದಿಗೆ ಸಂಯೋಜನೆ ಹೊಂದಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ಕಿವಿಸಿ ಅಕಾಡೆಮಿಯ ಸಹಯೋಗದೊಂದಿಗೆ ಕಲಿಕೆಯ ಹೆಚ್ಚು ಸಂವಾದಾತ್ಮಕ ಪರಿಶೋಧನಾತ್ಮಕ, ಪರಿಣಾಮಕಾರಿಯಾಗಿರುವುದು ಮತ್ತು ಅನುಭವಿ ಶಿಕ್ಷಕ ವೃಂದವು ಎಲ್ಲಾ ವಿದ್ಯಾರ್ಥಿಗಳಿಗೆ ಫಲಪದ ಫಲಿತಾಂಶವನ್ನು ನೀಡಲಿ ಎಂದು ಹಾರೈಸಿದರು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ರಂಗವನ್ನು ಕೇಂದ್ರೀಕರಿಸುವ ಜೊತೆ ಜೊತೆಗೆ ಶಕ್ತಿ ಪಿಯು ಕಾಲೇಜು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸುವುದು ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸುತ್ತದೆ ಎಂದು ಅವರು ಹೇಳಿದರು.
ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ರಾಜರಾಮ್ ರಾವ್ ಅವರು ವಿದ್ಯಾರ್ಥಿಗಳಿಗೆ ಅವಕಾಶವನ್ನು ಬಳಸಿಕೊಳ್ಳಬೇಕು ಮತ್ತು ತಮ್ಮ ಕನಸುಗಳನ್ನು ಸಹಕಾರಗೊಳಿಸಲು ಆಯ್ಕೆಯ ವಿಷಯಗಳ ಬಗ್ಗೆ ಸಂಪೂರ್ಣ ಸಮರ್ಪಣ ಭಾವನೆಯಿಂದ ಕಾರ್ಯ ಪ್ರಾಪ್ತಿಯಡೆಗೆ ಪ್ರಯತ್ನಿಸಬೇಕು ಎಂದು ವಿನಂತಿಸಿದರು. ಸಿಎ ಕಿರಣ್ ವಸಂತ್ ಮತ್ತು ಸಿಎ ದೀಪಿಕಾ ವಸಾನಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಎತ್ತಿದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿದರು.
ಆಡಳಿತಾಧಿಕಾರಿ ಡಾ. ಕೆ.ಸಿ ನ್ಯಾಕ್, ಪ್ರಧಾನ ಸಲಹೆಗಾರ ರಮೇಶ ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕೇನಾ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದ್ವಿತೀಯ ಪಿಯು ವಾಣಿಜ್ಯ ವಿದ್ಯಾರ್ಥಿಗಳಾದ ರಕ್ಷಾ ಎಂ. ಹೊಳ್ಳ ಮತ್ತು ದೀಕ್ಷಾ ಎಂ. ಹೊಳ್ಳ ಅವರು ಪ್ರಾರ್ಥನೆ ಹಾಡಿದರು. ವಾಣಿಜ್ಯ ಉಪನ್ಯಾಸಕಿ ಶಿಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.