Connect with us

NATIONAL

ಮದುವೆ ಭರವಸೆ ನೀಡಿ ನಡೆಸಿದ ಲೈಂಗಿಕ ಕ್ರಿಯೆ, ಅತ್ಯಾಚಾರಕ್ಕೆ ಸಮ : ಅಲಹಾಬಾದ್ ಹೈ ಕೋರ್ಟ್ ತೀರ್ಪು

Published

on

ಅಲಹಾಬಾದ್‌: ಅಲಹಾಬಾದ್ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ನಡೆಸಿದ ಲೈಂಗಿಕ ಕ್ರಿಯೆ, ಅತ್ಯಾಚಾರಕ್ಕೆ ಸಮ ಎಂದು ತೀರ್ಪು ನೀಡಿದೆ.

‘ಸುಳ್ಳು ಭರವಸೆ ನೀಡಿ ನಡೆಸುವ ಸಮ್ಮತಿಯ ಲೈಂಗಿಕ ಕ್ರಿಯೆಯು ಅತ್ಯಾಚಾರವೇ ಸರಿ. ಏಕೆಂದರೆ ಸಂತ್ರಸ್ತೆಯು ಸುಳ್ಳು ಭರವಸೆ ನಂಬಿ ಒಪ್ಪಿಗೆ ನೀಡಿರುತ್ತಾಳೆ,’ ಎಂದು ನ್ಯಾಯಮೂರ್ತಿ ಪ್ರದೀಪ್‌ಕುಮಾರ್‌ ಶ್ರೀವಾಸ್ತವ ಹೇಳಿದರು.

ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ನಡೆಸಿದ ಲೈಂಗಿಕಕ್ರಿಯೆಯ ವಿರುದ್ಧ ಸಂತ್ರಸ್ತೆ ನೀಡಿದ ದೂರಿನ ಬಗ್ಗೆ ವಿಚಾರಣೆ ನಡೆಸಿದ ಶ್ರೀವಾಸ್ತವ್, ಇದನ್ನು ಅತ್ಯಾಚಾರ ಎಂದು ತೀರ್ಪು ನೀಡಿದ್ದಾರೆ.

‘ಸಮಾಜದಲ್ಲಿ ದಿನೇದಿನೇ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಲೈಂಗಿಕ ದೌರ್ಜನ್ಯದಂತೆಯೇ ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ದೊಡ್ಡ ಪಿಡುಗಿನ ರೀತಿ ಬೆಳೆಯುತ್ತಿದೆ.

ಒಪ್ಪಿತ ಲೈಂಗಿಕ ಕ್ರಿಯೆ ಎಂಬ ಕಾರಣದಿಂದ ಆರೋಪಿಗಳು ಬಚಾವಾಗುತ್ತಿದ್ದಾರೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಕಠಿಣ ಕಾನೂನು ರೂಪಿಸುವ ಅಗತ್ಯವಿದೆ,’ ಎಂದು ನ್ಯಾಯಮೂರ್ತಿ ಹೇಳಿದರು.

LATEST NEWS

ಫರೀದಾಬಾದ್ ಠಾಣೆಯಲ್ಲಿ ಸ್ಪೋ*ಟ; ಸಾವಿನ ಸಂಖ್ಯೆ 9ಕ್ಕೇರಿಕೆ

Published

on

ಮಂಗಳೂರು/ಶ್ರೀನಗರ :  ಜಮ್ಮು ಮತ್ತು ಕಾಶ್ಮೀರದ  ನೌಗಮ್ ಪೊಲೀಸ್ ಠಾಣೆಯಲ್ಲಿಉಂಟಾದ  ಸ್ಫೋ*ಟದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ. ಕಳೆದ ವಾರ ದೆಹಲಿ ಸ್ಫೋಟ ಹಿನ್ನೆಲೆಯಲ್ಲಿ ಫರೀದಾಬಾದ್ ಭಯೋತ್ಪಾದನಾ ಮಾಡ್ಯೂಲ್ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ಫೋ*ಟಕಗಳ ಸಂಗ್ರಹದಿಂದ ಅಧಿಕಾರಿಗಳು ಮಾದರಿಗಳನ್ನು ಹೊರತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಸ್ಫೋ(ಟ ಸಂಭವಿಸಿದೆ ಎಂದು ವರದಿಯಾಗಿದೆ.

ಭೀಕರ ಸ್ಫೋ*ಟ ಶಬ್ಧಕ್ಕೆ ಸುತ್ತಮುತ್ತಲಿನ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಹಲವು ವಾಹನಗಳು ಬೆಂ*ಕಿಗೆ ಆಹುತಿಯಾಗಿದ್ದು, ಸ್ಫೋ*ಟದ ತೀವ್ರತೆಗೆ ಅಕ್ಕಪಕ್ಕದ ಮನೆಯ ಕಿಟಕಿ ಗಾಜುಗಳು ಹಾ*ನಿಗೊಳಗಾಗಿವೆ. ಅಲ್ಲದೇ, ಮಾನವ ದೇಹದ ಅವಶೇಷಗಳು ಸುಮಾರು 300 ಅಡಿ ದೂರದಲ್ಲಿ ಬಿದ್ದಿದ್ದವು ಎನ್ನಲಾಗಿದೆ.

ಇದನ್ನೂ ಓದಿ : ಪಣಂಬೂರು ಬಳಿ ಭೀಕರ ಸರಣಿ ಅಪ*ಘಾತ; ಮೂವರ ದುರ್ಮ*ರಣ

ಶುಕ್ರವಾರ(ನ.14) ತಡರಾತ್ರಿ 11:22ರ ಸುಮಾರಿಗೆ ಈ ಸ್ಫೋ*ಟ ಸಂಭವಿಸಿದೆ. ಈವರೆಗೆ 9 ಮಂದಿ ಸಾ*ವನ್ನಪ್ಪಿರುವುದು ದೃಢಪಟ್ಟಿದೆ. ಸಾವಿನ ಸಂ*ಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು,  30ಕ್ಕೂ ಹೆಚ್ಚು ಮಂದಿ ಗಾ*ಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Continue Reading

LATEST NEWS

ವಿಮಾನದ ಫೋಟೋ ತೆಗೆಯಲು ಹೋಗಿ ಹುಡುಗನ ಜೀವಾಂತ್ಯ..!

Published

on

ದುಬೈ: ಗಗನಚುಂಬಿ ಕಟ್ಟಡದಿಂದ ಕೆಳಗೆ ಬಿದ್ದು, ಕೇರಳದ 19 ವರ್ಷದ ತರುಣನೋರ್ವ ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ದುಬೈನಲ್ಲಿ ನಡೆದಿದೆ.


ಯುಎಇಗೆ ಪ್ರವಾಸಕ್ಕೆಂದು ಭೇಟಿ ನೀಡಿದ ಈ ಬಾಲಕ ಕೇರಳದ ಕೋಯಿಕೋಡ್ ನಿವಾಸಿಯಾಗಿದ್ದಾನೆ. ಮೊಹಮ್ಮದ್ ಮಿಶಾಲ್ ಮೃತಪಟ್ಟ ಬಾಲಕ.

ವರದಿಗಳ ಪ್ರಕಾರ ದುಬೈನ ಗಗನಚುಂಬಿ ಕಟ್ಟಡದ ತುತ್ತತುದಿಯಲ್ಲಿ ನಿಂತು ಮೇಲೆ ಹಾರುತ್ತಿದ್ದ ವಿಮಾನವೊಂದರ ಅತೀ ಸಮೀಪದ ಕ್ಲೋಸಪ್ ಫೋಟೋ ತೆಗೆಯುವುದಕ್ಕೆ ಮುಂದಾದ ವೇಳೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಿ.ಸಿ.ರೋಡ್‌ ಸರ್ಕಲ್ ನಲ್ಲಿ ಭೀ*ಕರ ಕಾರು ಅಪ*ಘಾತ; ಓರ್ವ ಸಾ*ವು, ಆರು ಮಂದಿಗೆ ಗಂ*ಭೀರ ಗಾಯ

ಮೃತ ಮೊಹಮ್ಮದ್ ಮಿಶಾಲ್ ಕೇವಲ 15 ದಿನಗಳ ಹಿಂದಷ್ಟೇ ತನ್ನ ಸೋದರ ಸಂಬಂಧಿಗಳನ್ನು ಭೇಟಿಯಾಗುವುದಕ್ಕಾಗಿ ದುಬೈಗೆ ಹೋಗಿದ್ದ. ಮಿಶಾಲ್‌ಗೆ ಫೋಟೋಗ್ರಾಫಿ ಹುಚ್ಚು ತುಂಬಾ ಇತ್ತು. ಇದೇ ಕಾರಣಕ್ಕೆ ಈ ಹುಡುಗ ಈ ಕಟ್ಟಡದ ತುತ್ತತುದಿಗೆ ಹೋಗಿ ಆಕಾಶದಲ್ಲಿ ಹಾರಾಡುವ ವಿಮಾನಗಳನ್ನು ತನ್ನ ಕ್ಯಾಮರಾದಲ್ಲಿ ಹತ್ತಿರದಿಂದ ತೆಗೆಯುವುದಕ್ಕೆ ಮುಂದಾದ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

ಆಸ್ಪತ್ರೆಗೆ ತಲುಪುವವರೆಗೂ ಆತ ಜೀವಂತವಿದ್ದ. ಆದರೆ ಸ್ವಲ್ಪ ಹೊತ್ತಿನಲ್ಲಿ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Continue Reading

LATEST NEWS

ಕಮಲ ಬಿ’ಹಾರ’; ಎನ್‌ಡಿಎ ಮೈತ್ರಿಗೆ ಮುನ್ನಡೆ

Published

on

ಮಂಗಳೂರು/ಬಿಹಾರ : ಬಿಹಾರ ವಿಧಾನಸಭೆಯ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಬಿಜೆಪಿ – ಜೆಡಿಯು ಮೈತ್ರಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ದಾಟಿ ಮುಂದಡಿ ಇಟ್ಟಿದೆ.

ಆರ್‌ಜೆಡಿ – ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನಕ್ಕೆ ಭಾರಿ ಹಿನ್ನೆಡೆ ಉಂಟಾಗಿದೆ. 191 ಕ್ಷೇತ್ರಗಳಲ್ಲಿ ಎನ್ ಡಿ ಎ ಮುನ್ನಡೆ ಕಾಯ್ದುಕೊಂಡಿದೆ. ಎಂಜಿಬಿ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ : ಈ ಪ್ರಯಾಣವನ್ನು ನೆನಪಿಸಿಕೊಂಡರೆ ಭಯವಾಗುತ್ತದೆ…ಕಿಚ್ಚ ಸುದೀಪ್ ಹೀಗಂದಿದ್ಯಾಕೆ?

ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಬಿಹಾರದಲ್ಲಿ ಮತದಾನ ನಡೆದಿತ್ತು. ಶೇ. 67.13 ರಷ್ಟು ಮತದಾನದ ಮೂಲಕ ಬಿಹಾರ ಐತಿಹಾಸಿಕ ಮತದಾನವನ್ನು ದಾಖಲಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page