Connect with us

UDUPI

ಕಾಪುವಿನಲ್ಲಿ ಕಾರುಗಳ ನಡುವೆ ಸರಣಿ ಅಪಘಾತ

Published

on

ಉಡುಪಿ/ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ನಿನ್ನೆ(ನ.30) ಭೀಕರ ಅಪಘಾತ ನಡೆದು ಐವರು ಅಸುನೀಗಿದ್ದರು. ಅಲ್ಲಿಂದ ಸ್ವಲ್ಪ ದೂರ ಮತ್ತೊಂದು ಸರಣಿ ಅಪಘಾತ ಸಂಭವಿಸಿ ಸಾರ್ವಜನಿಕರು ಆತಂಕ ಗೊಂಡಿದ್ದಾರೆ.


ಕಟಪಾಡಿಯಿಂದ ಶಿರ್ವ ಕಡೆಗೆ ತೆರಳುತ್ತಿದ್ದಾಗ ಈ ಸರಣಿ ಅಪಘಾತ ಸಂಭವಿಸಿದೆ. ಕುರ್ಕಾಲು ಪರಿಸರದಲ್ಲಿ, ಕಾರೊಂದು ಏಕಾಏಕಿ ಬಲ ಮಗ್ಗುಲಿಗೆ ತಿರುಗಿದಾಗ, ಹಿಂದಿನಿಂದ ಬಂದ ಇತರ ಎರಡು ಕಾರುಗಳು ಡಿಕ್ಕಿಯಾಗಿದೆ. ಒಟ್ಟು 3 ಕಾರುಗಳು ಅಪಘಾತದಲ್ಲಿ ಜಖಂಗೊಂಡಿವೆ.

ಇದನ್ನೂ ಓದಿ: Kapu: ಮಿನಿ ಟೆಂಪೋ ಪಲ್ಟಿ; ಐವರು ಸಾವು, ಹಲವರಿಗೆ ಗಾಯ


ಕಾರುಗಳಲ್ಲಿದ್ದ ಅನೇಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಪರಿಸರದಲ್ಲಿ ಅನೇಕ ಜಾತ್ರೆ ಸಮಾರಂಭಗಳು ಇದ್ದ ಕಾರಣ ವಾಹನ ಸಂಚಾರ ದಟ್ಟವಾಗಿತ್ತು.

LATEST NEWS

ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಟ್ಯಾಂಕರ್ ಚಾಲನೆ ; ತಪ್ಪಿದ ಭಾರಿ ದುರಂ*ತ

Published

on

ಉಡುಪಿ : ಟ್ಯಾಂಕರ್ ಚಾಲಕನೊಬ್ಬ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯರ್ರಾಬಿರ್ರಿಯಾಗಿ ಚಲಾಯಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಅದೃಷ್ಟವಶಾತ್,  ಕೂದಲೆಳೆಯ ಅಂತರದಲ್ಲಿ ಹಲವಾರು ಅಪ*ಘಾತಗಳು ತಪ್ಪಿದ್ದು, ಕೊನೆಗೆ ಅಂಬಲಪಾಡಿಯ ಬಳಿ ವಾಹನವನ್ನು ನಿಲ್ಲಿಸಿದ ವಿಶು ಶೆಟ್ಟಿ ಅಂಬಲಪಾಡಿ, ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದು, ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದವನಾಗಿದ್ದು, ಬಹಳಷ್ಟು ಮದ್ಯ ಸೇವಿಸಿ ರಾತ್ರಿ ಹೆಡ್ ಲೈಟ್ ಕೂಡ ಹಾಕದೆ ವೇಗವಾಗಿ ಯರ್ರಾ ಬಿರ್ರಿಯಾಗಿ ಬರುತ್ತಿದ್ದ. ಇದನ್ನು ಗಮನಿಸಿದ ಸಾರ್ವಜನಿಕರ ವಾಹನವೊಂದು ಆತನನ್ನು ಹಿಂಬಾಲಿಸಿಕೊಂಡು ಬಂದು ಅಂಬಲಪಾಡಿಯ ಬಳಿ ನಿಲ್ಲಿಸಿದ್ದಾರೆ. ಸಾರ್ವಜನಿಕರು ಹ*ಲ್ಲೆಯನ್ನೂ ನಡೆಸಿದ್ದಾರೆ‌.

ಇದನ್ನೂ ಓದಿ : ಬಿಗ್ ಬಾಸ್ ಮನೆಯೀಗ ‘ವಿಲನ್’ ತೆಕ್ಕೆಗೆ…ಚೈತ್ರಾ ಕಿರುಚಿದ್ದೇಕೆ!?

ವಿಶು ಶೆಟ್ಟಿ ಬಂದು ಆತನಿಗೆ ಹ*ಲ್ಲೆಯಾಗುವುದನ್ನು ತಡೆದು ಕೂಡಲೆ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ‌. ಬಳಿಕ  ವಿಶು ಶೆಟ್ಟಿ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಟ್ಯಾಂಕರನ್ನು ಚಾಲಕರೊಬ್ಬರ ಸಹಾಯದಿಂದ ಠಾಣೆಗೆ  ಮುಟ್ಟಿಸಿದ್ದಾರೆ.  ಟ್ಯಾಂಕರ್ ಚಾಲಕನನ್ನು ತಡೆಯದೆ ಹೋಗುತ್ತಿದ್ದರೆ ಬಹಳ ದೊಡ್ಡ ದುರಂ*ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗುತ್ತಿತ್ತು. ಅದೃಷ್ಟವಶಾತ್  ಅವಘಡವೊಂದು ತಪ್ಪಿದೆ.

Continue Reading

LATEST NEWS

ಇಂದೆಂಥ ದುರವಸ್ಥೆ! 108 ಆ್ಯಂಬುಲೆನ್ಸ್ ಸಿಗದೆ ಪರದಾಟ; ಗೂಡ್ಸ್ ಟೆಂಪೋ ಮೂಲಕ ರೋಗಿ ಆಸ್ಪತ್ರೆಗೆ!

Published

on

ಉಡುಪಿ : ತೀವ್ರ ಅಸ್ವಸ್ಥಗೊಂಡಿದ್ದ ವೃದ್ಧ ರೋಗಿಯೊಬ್ಬರಿಗೆ  ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ತನ್ನ ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿದ ಆಘಾತಕಾರಿ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

ರೋಗಿಗೆ ಸಂಬಂಧಪಟ್ಟವರು ರಾತ್ರಿ 7 ಗಂಟೆಗೆ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, 9.30 ಆದರೂ ಆ್ಯಂಬುಲೆನ್ಸ್ ಲಭ್ಯವಾಗಿಲ್ಲ. ಹೀಗಾಗಿ ಅವರು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿಯವರನ್ನು ಸಂಪರ್ಕಿಸಿದ್ದಾರೆ. ರೋಗಿಯ ಚಿಂತಾಜನಕ ಸ್ಥಿತಿ ಕಂಡ ವಿಶು ಶೆಟ್ಟಿ ಬೇರೆ ದಾರಿ ಕಾಣದೆ ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ಅದರಲ್ಲಿ ರೋಗಿಯನ್ನು ಮಲಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.

ಇದನ್ನೂ ಓದಿ : ಸುರತ್ಕಲ್‌: ದೇವರಿಗೆ ಕೈಮುಗಿವ ನೆಪದಲ್ಲಿ ಭಕ್ತರೊಬ್ಬರ ಬ್ಯಾಗಿಗೆ ಕನ್ನ ಹಾಕಿದ ಕಳ್ಳ

ಕಳೆದ ಒಂದು ವರ್ಷದಿಂದ 108 ಆ್ಯಂಬುಲೆನ್ಸ್  ಸಮಸ್ಯೆ ತಲೆದೋರುತ್ತಿದ್ದು, ಇನ್ನೂ ಪರಿಹಾರ ಕಂಡಿಲ್ಲ. ಇನ್ನಾದರೂ ಸರ್ಕಾರ, ಜಿಲ್ಲಾಡಳಿತ ಕ್ರಮ ಕೈಗೊಂಡು ಸಹಕರಿಸಿ.  ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು  ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.

Continue Reading

LATEST NEWS

ಸುರತ್ಕಲ್: ಬಾಲಕನಿಗೆ ಲೈಂ*ಗಿಕ ಕಿರುಕುಳ; ಆರೋಪಿ ಬಂಧನ

Published

on

ಸುರತ್ಕಲ್: ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಸುರತ್ಕಲ್ ಬಳಿಯ ಚೊಕ್ಕಬೆಟ್ಟು ಜುಮ್ಮಾ ಮಸೀದಿ ಬಳಿ ಇರುವ ಹನಿ ಫ್ಯಾಷನ್ ಶಾಪ್, ಜನರಲ್ ಸ್ಟೋರ್ ಅಂಗಡಿ ಮಾಲಕ ಮೊಹಮ್ಮದ್ ಇಸ್ಮಾಯಿಲ್ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಪೋಕ್ಸೋ ಕೇಸು ದಾಖಲಿಸಿದ್ದಾರೆ.

6ನೇ ತರಗತಿ ಬಾಲಕ ಚಾಕೊಲೇಟ್ ಖರೀದಿಸಲು ಹೋದಾಗ ಅಂಗಡಿಯಲ್ಲಿರುವ ರೂಂ ಒಂದರಲ್ಲಿ ಕೂಡಿ ಹಾಕಿ ಬಾಲಕನ ಕೈ-ಕಾಲನ್ನು ಹಗ್ಗದಿಂದ ಕಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನಾಲ್ಕು ತಿಂಗಳ ಹಿಂದಷ್ಟೇ ಮದುವೆ… ನವವಿವಾಹಿತೆಯ ದುರಂ*ತ ಅಂತ್ಯ!

ಆರೋಪಿಯನ್ನು ಬಂಧಿಸಿ ರವಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page