Connect with us

dehali

ಬೆಡ್‌ರೂಮ್, ಬಾತ್‌ರೂಮ್ನಲ್ಲಿ ರಹಸ್ಯ ಕ್ಯಾಮರಾ !! ಯುವತಿಯರೇ ಹುಷಾರ್

Published

on

ಮಂಗಳೂರು/ದೆಹಲಿ: ಪೂರ್ವ ದೆಹಲಿಯ ಶಕರ್‌ಪುರ ಪ್ರದೇಶದ ಬಾಡಿಗೆ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಿದ ಪ್ರಕರಣ ಬೆಳಕಿಗೆ ಬಂದಿದೆ.


ಕೆಲವು ತಿಂಗಳುಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಒಂಟಿ ಮಹಿಳೆಯ ಮಲಗುವ ಕೋಣೆ ಹಾಗೂ ಬಾತ್‌ ರೂಮ್‌ನಲ್ಲಿ ಕರಣ್ ರಹಸ್ಯ ಕ್ಯಾಮರ ಅಳವಡಿಸಿರುವುದು ತಿಳಿದು ಬಂದಿದೆ.
ಯುವತಿ ಹೊರಗೆ ಹೋಗುವಾಗ ಅವರ ಮನೆಯ ಕೀಯನ್ನು ಓನರ್‌ ಮಗ ಕರಣ್‌ ಕೈಯಲ್ಲಿ ಕೊಟ್ಟು ಹೋಗುತ್ತಿದ್ದಳು. ಇದನ್ನೇ ಬಂಡವಾಳ ಮಾಡಿಕೊoಡ ಕಿರಾತಕ ಅವಳ ರೂಮ್‌ನಲ್ಲಿ ಸಿಸಿ ಕ್ಯಾಮರಾವನ್ನು ಬಲ್ಬ್‌ನ ಹೋಲ್ಡರ್‌ನಲ್ಲಿ ಅಳವಡಿಸಿ ಇಟ್ಟಿದ್ದಾನೆ. ಯುವತಿಗೆ ವಾಟ್ಸಾಪ್‌ನಲ್ಲಿ ಕೆಲವು ಅಶ್ಲೀಲ ಫೋಟೋ, ವಿಡಿಯೋಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಯುವತಿ ಪೊಲೀಸ್ ಉಪ ಕಮಿಷನರ್ ಅಪೂರ್ವ ಗುಪ್ತಾ ಗೆ ಮಾಹಿತಿ ನೀಡಿದ್ದಾಳೆ. ನಂತರ ದೂರಿನ ಅನ್ವಯ ಪೊಲೀಸ್ ತಂಡವು ಸಂಪೂರ್ಣ ಹುಡುಕಾಟ ನಡೆಸಿದಾಗ, ಯುವತಿ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‌ನಲ್ಲಿ ಹಾಗೂ ಬಾತ್‌ ರೂಮ್‌ನಲ್ಲಿ ಅಳವಡಿಸಿದ್ದ ಕ್ಯಾಮರಾಗಳು ಪತ್ತೆಯಾಗಿವೆ.
ವಿಚಾರಣೆ ವೇಳೆ ಕರಣ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಆರೋಪಿ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರು ಸ್ಪೈ ಕ್ಯಾಮೆರಾಗಳನ್ನು ಖರೀದಿಸಿ, ಅವುಗಳಲ್ಲಿ ಒಂದನ್ನು ಯುವತಿಯ ಮಲಗುವ ಕೋಣೆಯಲ್ಲಿ ಮತ್ತು ಇನ್ನೊಂದನ್ನು ಬಾತ್‌ರೂಮ್‌ನಲ್ಲಿ ಇಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕರಣ್ ಕೈಯಲ್ಲಿದ್ದ ಮತ್ತೊಂದು ಸ್ಪೈ ಕ್ಯಾಮೆರಾವನ್ನು ಹಾಗೂ ರೆಕಾರ್ಡ್ ಮಾಡಿದ ವೀಡಿಯೊಗಳ ಸಂಗ್ರಹಕ್ಕೆ ಬಳಸಿದ ಎರಡು ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿಎನ್‌ಎಸ್‌ನ ಸೆಕ್ಷನ್ 77 ಅಡಿಯಲ್ಲಿ ಶಕರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪದವೀಧರನಾಗಿದ್ದು, ಕಳೆದ ಏಳು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

dehali

ದಟ್ಟ ಮಂಜಿನಿಂದ ನಡೆಯಿತು ದುರಂತ; ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ

Published

on

ದೆಹಲಿ: ದಟ್ಟ ಮಂಜಿನಿಂದ ಉತ್ತರ ಪ್ರದೇಶದ ಮಥುರಾದಲ್ಲಿ ಇಂದು ನಸುಕಿನ ಜಾವ ದುರಂತ ಸಂಭವಿಸಿದೆ. ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ7 ಬಸ್ ಗಳು ಮತ್ತು ಮೂರು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, 4 ಮಂದಿ ಮೃತಪಟ್ಟಿದ್ದಾರೆ. 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.


ಅಪಘಾತದಿಂದಾಗಿ ಹಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಂಗಳೂರು ಆರ್‌ಟಿಒ ಕಚೇರಿಗೆ ಬಾಂಬ್ ಬೆದರಿಕೆ; ಎಎಸ್ ಸಿ ಮತ್ತು ಬಿಡಿಡಿಎಸ್ ತಂಡದವರಿಂದ ಪರಿಶೀಲನೆ

ಇನ್ನು ವಾಹನಗಳು ಹೊತ್ತಿ ಉರಿಯುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Continue Reading

dehali

ಕೆಂಪುಕೋಟೆ ಬಳಿ ಸ್ಪೋಟ ಪ್ರಕರಣ, ವೈದ್ಯೆ ಶಾಹಿನಾ ಕಾರಿನಲ್ಲಿ ರೈಫಲ್, ಮದ್ದುಗುಂಡುಗಳು ಪತ್ತೆ..!

Published

on

ನವದೆಹಲಿ: ಕೆಂಪುಕೋಟೆಯ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದ್ದು,  ಪೊಲೀಸರು ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿ ಜೈಶ್ ಮಹಿಳಾ ವಿಂಗ್‌ನ ಭಾರತದ ನಾಯಕಿ, ವೈದ್ಯೆ ಶಾಹಿನಾ ಶಾಹಿದ್ ಎಂಬಾಕೆಯನ್ನು ಬಂಧಿಸಿದ್ದಾರೆ. ಸೋಮವಾರ ಜಮ್ಮು ಕಾಶ್ಮೀರ ಮತ್ತು ಫರೀದಾಬಾದ್ ಪೊಲೀಸರು ಜಂಟಿ ಕಾರ್ಯಾಚರಣೆ ವೇಳೆ 2,900 ಕೆ.ಜಿ ಸ್ಫೋಟಕಗಳನ್ನು ಪತ್ತೆ ಹಚ್ಚಿ. ಎಂಟು ಜನರನ್ನು ಬಂಧಿಸಿದ್ದರು.

ಅದರ ಬೆನ್ನಲ್ಲೇ ಇದೀಗ ಅಲ್-ಫಲಾಹ್ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ವೈದ್ಯ ಶಾಹಿನಾ ಕಾರಿನಲ್ಲಿ ರೈಫಲ್, ಮದ್ದುಗುಂಡುಗಳು ಪತ್ತೆಯಾಗಿವೆ. ಬಂಧಿತ ವೈದ್ಯೆ ಜೈಶ್ ಮಹಿಳಾ ವಿಂಗ್‌ಗೆ ಭಾರತದ ನಾಯಕಿಯಾಗಿದ್ದು, ಜೆಇಎಂ ಸಂಸ್ಥಾಪಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್‌-ಮೊಮಿನಾತ್‌ ಕಮಾಂಡ್ ಜವಾಬ್ದಾರಿಯನ್ನು ಕೂಡ ಆರೋಪಿತೆಗೆ ವಹಿಸಲಾಗಿತ್ತು.

ಜೊತೆಗೆ ಸಾದಿಯಾ ಅಜರ್ ಪತಿ ಯೂಸುಫ್ ಅಜರ್ 1996ರ ಕಂದಹಾರ್ ಹೈಜಾಕ್‌ನ ಸೂತ್ರಧಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಶಾಹಿನಾ ಶಾಹಿದ್ ಲಕ್ಷೆದ ಲಾಲ್‌ಬಾಗ್ ನಿವಾಸಿಯಾಗಿದ್ದು, ಬಂಧಿತ ಕಾಶ್ಮೀರಿ ವೈದ್ಯ ಮುಜಮ್ಮಿಲ್ ಗನ್ನೆ ಅಲಿಯಾಸ್ ಮುಸ್ಕೆಬ್ ಜೊತೆಗೆ ನಿಕಟ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.

ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ 1ರ ಬಳಿ ಸೋಮವಾರ ಸಂಜೆ 6:45ರ ಸುಮಾರಿಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದು. ಹಲವು ಜನರು ಗಾಯಗೊಂಡಿದ್ದಾರೆ.

Continue Reading

dehali

ಹೊಸದಿಲ್ಲಿ: ಎನ್ ಎಂಪಿಎ ಸಾಧನೆಯನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸರ್ಬಾನಂದ್‌ ಸೋನೊವಾಲ್

Published

on

ಹೊಸದಿಲ್ಲಿ: ನವಮಂಗಳೂರು ಬಂದರು ಪ್ರಾಧಿಕಾರವು ಸಾರ್ಥಕ 50 ವರ್ಷಗಳ ಸೇವೆಯನ್ನು ಪೂರ್ತಿಗೊಳಿಸಿದ್ದು, ಸುವರ್ಣ ಮಹೋತ್ಸವ ವರ್ಷಾಚರಣೆಗೆ ಕೇಂದ್ರ ಬಂದರು ಮತ್ತು ನೌಕಾಯಾನ ಸಚಿವ ಸರ್ಬಾನಂದ್‌ ಸೋನೊವಾಲ್ ಅವರು ನಿನ್ನೆ ರಾಜಧಾನಿ ಹೊಸದಿಲ್ಲಿಯಲ್ಲಿ ಚಾಲನೆ ನೀಡಿದ್ದಾರೆ. ಕಳೆದ 50 ವರ್ಷಗಳಲ್ಲಿ ನವ ಮಂಗಳೂರು ಬಂದರು ದೇಶದ ಅಭಿವೃದ್ಧಿಯಲ್ಲಿ ವಹಿಸಿದ ಪಾತ್ರ ಹಾಗೂ ನೀಡಿದ ಕೊಡುಗೆಗಳ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸಮಾರಂಭದ ಬಳಿಕ ಮಾಧ್ಯಮಗಳ ಪ್ರತಿನಿಧಿಗಳ ಜತೆ ಸಚಿವರು ಮಾತನಾಡಿ, ಕೆಲವೇ ಮೆಟ್ರಿಕ್‌ ಟನ್ ಸರಕು ನಿರ್ವಹಣೆಯೊಂದಿಗೆ ಆರಂಭವಾಗಿದ್ದ ನವ ಮಂಗಳೂರು ಬಂದರು ಈಗ 46.2 ದಶಲಕ್ಷ ಮೆಟ್ರಿಕ್ ಟನ್‌ ಸರಕು ನಿರ್ವಹಣೆ ಮಾಡುವ ಸಾಮರ್ಥ್ಯ ಪಡೆದಿದ್ದು, ಈ ಮೂಲಕ ದೇಶದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದೆ. ಇದಕ್ಕಾಗಿ ಬಂದರು ಆಡಳಿತ ಮತ್ತು ಇದಕ್ಕೆ ಸಹಕರಿಸಿದ ಕರ್ನಾಟಕ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನವಮಂಗಳೂರು ಬಂದರು ದೇಶದ ಬೃಹತ್‌ ಬಂದರುಗಳ ಪೈಕಿ 9 ನೇ ಸ್ಥಾನದಲ್ಲಿದೆ. ಸಂಪೂರ್ಣ ಸೌರ ವಿದ್ಯುತ್ ಬಂದರು ಇದಾಗಿದ್ದು, ಸರಕು ನಿರ್ವಹಣೆ ಸಂದರ್ಭದ ಮಾಲಿನ್ಯ ಶೂನ್ಯ ಮಟ್ಟಕ್ಕೆ ಇಳಿದಿದೆ. ಗ್ರೀನ್‌ ಪೋರ್ಟ್‌ ಎಂಬ ಕೀರ್ತಿಗೆ ಪಾತ್ರವಾಗಿದ್ದು, ಪ್ರಧಾನ ಮಂತ್ರಿಯವರ ಹೈಡ್ರೊಜನ್‌ ನೇಶನ್‌ ಗುರಿ ಸಾಧಿಸಲು ಕೈಜೋಡಿಸಿದೆ. ಈ ಸಾಧನೆಗೆ ಕಾರಣಕರ್ತರಾದ ಎನ್‌.ಎಂ.ಪಿ.ಎ. ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮೆರಿಟೈಮ್ ಇಂಡಿಯಾ ವಿಶನ್‌ 2030 ಮತ್ತು ಮೆರಿಟೈಮ್‌ ಅಮೃತ್ ಕಾಲ್ ವಿಶನ್ 2047 ಎಂಬ ಎರಡು ದೂರದೃಷ್ಟಿಯ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿದ್ದು, ಈ ಯೋಜನೆಗಳನ್ನು ಸಾಕಾರಗೊಳಿಸಲು ಬೇರೆ ಬೇರೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2047 ರ ವೇಳೆಗೆ ದೇಶದ ಬಂದರುಗಳ ಸರಕು ನಿರ್ವಹಣಾ ಸಾಮರ್ಥ್ಯವನ್ನು 10 ಸಾವಿರ ದಶ ಲಕ್ಷ ಮೆಟ್ರಿಕ್ ಟನ್‌ ಗೆ ಏರಿಸುವ ಮಹತ್ವದ ಗುರಿ ಹೊಂದಲಾಗಿದೆ ಎಂದು ಸಚಿವ ಸರ್ಬಾನಂದ ಸೋನೊವಾಲ್ ತಿಳಿಸಿದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page