Connect with us

LATEST NEWS

ಚಡ್ಡಿಗಳೇ, ಧಂ ಇದ್ರೆ ರೆಡ್ಡಿ ನಾಶಗೈದ ಕ್ಷೇತ್ರದ ತಾಂಬೂಲ ಪ್ರಶ್ನೆ ಕೇಳಿ: ಅಬ್ದುಲ್‌ ಮಜೀದ್‌

Published

on

ಮಂಗಳೂರು: ಸಂಘಪರಿವಾರದ ಚಡ್ಡಿಗಳೇ ಧಂ ಇದ್ರೆ, ತಾಕತ್ತಿದ್ರೆ ಬಳ್ಳಾರಿಯಲ್ಲಿ ನಿಮ್ಮದೇ ನಾಯಕ ಜನಾರ್ದನ ರೆಡ್ಡಿ 200 ವರ್ಷ ಹಳೆಯದಾದ ದೇವಸ್ಥಾನ ಒಡೆದ ಸ್ಥಳದಲ್ಲಿ ತಾಂಬೂಲ ಪ್ರಶ್ನೆ ಕೇಳಿ.  ಇಲ್ಲಿ ವ್ಯಾಪಾರ ಬಹಿಷ್ಕಾರ ಮಾಡಿ,

ನಿಮ್ಮ ಗುರು ಬೊಮ್ಮಾಯಿ ಯೂಸಫ್‌ ಅಲಿ ಜೊತೆ 2 ಸಾವಿರ ಕೋಟಿ ಒಪ್ಪಂದ ಮಾಡಿದಾಗ ನಾಚಿಕೆಯಾಗಲ್ವಾ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಮೈಸೂರು ಪ್ರಶ್ನಿಸಿದ್ದಾರೆ.


ನಗರ ಹೊರವಲಯದ ಕಣ್ಣೂರು ಮೈದಾನದಲ್ಲಿ ಎಸ್‌ಡಿಪಿಐ ಏರ್ಪಡಿಸಿದ ‘ಬೃಹತ್‌ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಅವರು, 2006ರ ಸೆ.3.ರಂದು ಬಳ್ಳಾರಿಯ ಸಂಡೂರಿನಲ್ಲಿ 200 ವರ್ಷದ ಹಳೆಯದಾದ ಸುಗ್ಗುಲಮ್ಮ ದೇವಸ್ಥಾನವನ್ನು ಬಾಂಬ್‌ ಇಟ್ಟು ಒಡೆದು ಹಾಕಿ,

ದೇವಿಯ ವಿಗ್ರಹ ನಾಶ ಮಾಡಿದ್ದು ನಿಮ್ಮದೇ ಬಿಜೆಪಿ ನಾಯಕ ಜನಾರ್ದನ ರೆಡ್ಡಿ. ಈಗ ನಿಮಗೆ ತಾಕತ್ತಿದ್ದರೆ ತಾಂಬೂಲ ಪ್ರಶ್ನೆ ಕೇಳಿ, ರೆಡ್ಡಿ ಮನೆಗೆ ಪಾದಾಯಾತ್ರೆ ಮಾಡಿ. ಈ ಬಗ್ಗೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ತಮ್ಮ ಬೆತ್ತಲೆ ಪ್ರಪಂಚ ಪುಸ್ತಕದಲ್ಲಿ ಬರೆದಿದ್ದಾರೆ.

ಒಂದು ನೆನಪಿಡಿ ಮಳಲಿ ಮಸೀದಿಯ ಜಾಗದ ಒಂದು ಹಿಡಿ ಮರಳು ನಿಮಗೆ ಸಿಗಲಿಕ್ಕಿಲ್ಲ. ಆರ್‌ಎಸ್‌ಎಸ್‌ ಆಟಾಟೋಪಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಬೆದರಬಹುದು ನಿಮ್ಮ ಆಟಕ್ಕೆ ಬೆದರುವ ಮಕ್ಕಳು ನಾವಲ್ಲ. ಬೊಮ್ಮಾಯಿ ಅಧಿಕಾರಕ್ಕೆ ಬಂದ ನಂತರ ನಾಗ್ಪುರದ ಅಜೆಂಡಾವನ್ನು ಜಾರಿಗೆ ತರಲು ಯತ್ನಿಸುತ್ತಿದ್ದಾರೆ.

ಇಲ್ಲಿ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕುವ ನಿಮ್ಮ ಗುರು ಇದೇ ಬೊಮ್ಮಾಯಿ ಯೂಸಫ್‌ ಅಲಿ ಎಂಬ ಬ್ಯಾರಿಯೊಂದಿಗೆ 2 ಸಾವಿರ ಕೋಟಿಯ ವ್ಯವಹಾರಕ್ಕೆ ಸಹಿ ಹಾಕುತ್ತಾರೆ.

ನಾಚಿಕೆಯಾಗುದಿಲ್ವಾ, ನಿಮ್ಮ ಬಹಿಷ್ಕಾರ ಬಡ ಮುಸ್ಲಿಂಮನ ಮೇಲಾ, ನಿಮಗೆ ಯೂಸಫ್‌ ಅಲಿ ಪರ್ಸೆಂಟ್‌ ಕೊಡ್ತಾರೆ. ಮಂಗಳೂರು ಎನ್‌ಆರ್‌ಸಿ ಪ್ರತಿಭಟನೆ ವೇಳೆ ಗುಂಡು ಹಾರಿಸಲು ಸಾಧ್ಯವಾ ಗುವುದಾದರೆ.

ಶಿವಮೊಗ್ಗದಲ್ಲಿ 144 ಸೆಕ್ಷನ್‌ ವೇಳೆ ಮುಸ್ಲಿಂ ಅಂಗಡಿಗಳ ಮೇಲೆ ಸಂಘಪರಿವಾರದ ಗೂಂಡಾಗಳು ದಾಳಿ ನಡೆಸುವಾಗ ಪೊಲೀಸರೇ ನಿಮ್ಮ ಬಂದೂಕಿನಲ್ಲಿ ಗುಂಡುಗಳು ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು ಈ ಜನಾಧಿಕಾರ ಸಮಾವೇಶ ರಾಜ್ಯದ ವಿವಿಧ ಜಿಲ್ಲೆಯಲ್ಲಿ ನಡೆಯಲಿದೆ ಎಂದರು.


ಮುಖಂಡ ರಿಯಾಝ್‌ ಫರಂಗಿಪೇಟೆ ಮಾತನಾಡಿ, ದೇಶದಲ್ಲಿ ನಡೆಯುವ ಕೋಮುವಾದ ಆಟಾಟೋಪಗಳನ್ನು ನೋಡಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಟ್ಟೆ ಕಟ್ಟಿಕೊಂಡಿದ್ದಾರೆ. ಒಂದಲ್ಲ ಒಂದು ದಿನ ನಿಮ್ಮ ಕಣ್ಣಿನ ಬಟ್ಟೆ ಬಿಚ್ಚಿ ಬೀದಿಯಲ್ಲಿ ಅಟ್ಟಾಡಿಸಿ ಹೊಡೆಯುವ ದಿನಗಳು ದೂರವಿಲ್ಲ.

ಶ್ರೀಲಂಕಾ ಉದಾಹರಣೆಯಾಗಿ ನೋಡಿ ಎಲ್ಲಿ ಅನೀತಿ, ಕೋಮುವಾದ ಹೆಚ್ಚಾದಾಗ ಆಡಳಿತ ವ್ಯವಸ್ಥೆಯ ವಿರುದ್ಧ ದಂಗೆ ಏಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಭಾಸ್ಕರ್ ಪ್ರಸಾದ್, ಅಬ್ದುಲ್ ಲತೀಫ್, ಅಲ್ಫೊನ್ಸ್ ಫ್ರಾಂಕೋ, ಶಾಫಿ ಬೆಳ್ಳಾರೆ, ರಿಯಾಝ್‌ ಫರಂಗಿಪೇಟೆ ಇದ್ದರು.

DAKSHINA KANNADA

ಮಂಗಳೂರು : ವಕ್ಫ್ ಕಾಯ್ದೆ ವಿರುದ್ಧ ನಡೆಯಬೇಕಿದ್ದ ಪ್ರತಿಭಟನೆ ಮುಂದೂಡಿಕೆ

Published

on

ಮಂಗಳೂರು :ಈಗಾಗಲೇ ವಕ್ಫ್ ತಿದ್ದುಪಡಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದ್ದು, ಈ ಮಸೂದೆಯ ವಿರುದ್ಧ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ಎ.29ರಂದು ಕೂಳೂರು ಡೆಲ್ಟಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿತ್ತು. ಆದರೆ ಈಗ ಅಚಾನಕ್‌ ಆಗಿ ಆ ಪ್ರತಿಭಟನೆಯನ್ನು ಮುಂದೂಡಲಾಗಿದೆ.

ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್‌ರ ನಿವಾಸದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮೇ 16ರ ಶುಕ್ರವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಸಲಾಗಿದೆ ಎಂದು ಉಪಾಧ್ಯಕ್ಷ ಕೆ.ಅಶ್ರಫ್ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಲಹೆಗಾರರು ಪಾಲ್ಗೊಂಡಿದ್ದರು.

Continue Reading

DAKSHINA KANNADA

ಕ್ರಿಶ್ಚಿಯನ್‌ ಧರ್ಮಗುರು ಪೋಪ್ ಫ್ರಾನ್ಸಿಸ್ ವಿಧಿವಶ; ಖಾದರ್ ಸಂತಾಪ

Published

on

ಮಂಗಳೂರು : ಪೋಪ್‌ ಫ್ರಾನ್ಸಿಸ್​​ ಅಂದರೆ ಜನರಿಗೆ ನೆರಳು ಕೊಡುವ ಮರ. ನಿಸ್ವಾರ್ಥ ಮನಸ್ಸಿನ ದೊರೆ. ತಂಪಾಗಿ ಮಳೆ ಸುರಿಯುವ ಸೋನೆ, ಹಿಂದುಳಿದ ಬಡಜನರ ಪಾಲಿಗೆ ಆತನೇ ದೈವ. ಬದುಕಿನಲ್ಲಿನ ಸುಖ ಶಾಂತಿ, ನೆಮ್ಮದಿಗಳಿರುವ ಆಟಕ್ಕೆ ಫ್ರಾನ್ಸಿಸ್​​ ಚಾಂಪಿಯನ್.ಈಗಲೂ ವ್ಯಾಟಿಕನ್ ಸಿಟಿಯ ಮಂದಿಗೆ ಪೋಪ್​ ಫ್ರಾನ್ಸಿಸ್​​ ಚಾಂಪಿಯನ್ನೇ. ಅಂತಹ ಮಹಾನ್ ವ್ಯಕ್ತಿ, 88 ವರ್ಷದ ಪೋಪ್ ಫ್ರಾನ್ಸಿಸ್ ಡಬಲ್​​ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು.

ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಅಂಗಳದಲ್ಲಿ ಸಾವಿರಾರು ಭಕ್ತರು ಸೇರಿ “ಹ್ಯಾಪಿ ಈಸ್ಟರ್” ಆಚರಣೆ ನಡೆಸುವಾಗ, ಅವರನ್ನ ಹಾರೈಸಲು ಫ್ರಾನ್ಸಿಸ್ ವೀಲ್‌ಚೇರ್‌ನಲ್ಲಿ ಹೊರಬಂದಿದ್ದ ​​. ಅದೇ ಅವರ ಕೊನೆ ದರ್ಶನ ಎಂದು ಯಾರಿಗೂ ತಿಳಿದಿರಲಿಲ್ಲ. ಯಾಕೆಂದರೆ ಡಬಲ್ ನ್ಯುಮೋನಿಯಾ ಚಿಕಿತ್ಸೆ ಪಡೆದು ಮನೆಗೆ ಬಂದು ವಾರಗಳು ಕಳೆದಿದಷ್ಟೇ. ನಿನ್ನೆ (ಏ.21) ಪೋಪ್​ ಫ್ರಾನ್ಸಿಸ್ ಇಹಲೋಕ ತ್ಯಜಿಸಿದ್ದಾರೆ. ಫ್ರಾನ್ಸಿಸ್ ನಿಧನಕ್ಕೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ :  ಕ್ಯಾಥೊಲಿಕ್‌ ಕ್ರೈಸ್ತರ ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

“ಆಧ್ಯಾತ್ಮಿಕ ಗುರುಗಳಾಗಿದ್ದ ಫ್ರಾನ್ಸಿಸ್ ಸಹಾನುಭೂತಿ, ಸರಳತೆ, ನ್ಯಾಯ ಮತ್ತು ಶಾಂತಿ ಬಯಸುವ ನೈತಿಕ ಧ್ವನಿಯಾಗಿದ್ದರು. ಪೋಪ್ ಆಗಿ ಅವರ ಸರಳ ಜೀವನ ಮತ್ತು ಬಡವರ ಬಗ್ಗೆ ಪ್ರೀತಿ, ವಿಶೇಷ ಕಾಳಜಿ, ಪ್ರತಿಯೊಬ್ಬ ಮನುಷ್ಯನ ಘನತೆಯ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದರು. ಫ್ರಾನ್ಸಿಸ್ ಅವರ ಸೌಮ್ಯ ಸ್ವಭಾವ ಮತ್ತು ವಿವೇಕಪೂರ್ಣ ಮಾತುಗಳಿಗೆ ಬಹಳ ಆಕರ್ಷಿತನಾಗಿದ್ದೆ. ಈ ಉದಾತ್ತ ಗುಣಗಳು ನನ್ನಲ್ಲಿ ಮಾತ್ರವಲ್ಲ ಜಗತ್ತಿನ ಕೋಟ್ಯಂತರ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿಯಲಿವೆ” ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರನ್ನು 2024ರ ಡಿಸೆಂಬರ್‌ನಲ್ಲಿ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದ ಕ್ಷಣಗಳನ್ನು ನೆನಪಿಸಿಕೊಂಡಿರುವ ಸ್ಪೀಕರ್ ಯು.ಟಿ.ಖಾದರ್ “ಪೋಪ್ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಸ್ವೀಕರಿಸಿರುವುದು ಬದುಕಿನ ಅಮೂಲ್ಯ ಕ್ಷಣವಾಗಿ ಸದಾ ನೆನಪಿನಲ್ಲಿ ಉಳಿಯಲಿದೆ. ಅವರು ನೀಡಿರುವ ಸಲಹೆಯು ತನ್ನ ಮೇಲೆ ಪ್ರಭಾವ ಬೀರಿದೆ. ಕರ್ನಾಟಕ ವಿಧಾನಸಭೆಯ ಸದಸ್ಯರು ಮತ್ತು ನಮ್ಮ ರಾಜ್ಯದ ಜನರ ಪರವಾಗಿ, ಸಂತಾಪ ವ್ಯಕ್ತಪಡಿಸುವೆನು. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ . ಅವರ ದಯೆ ಮತ್ತು ಏಕತೆಯ ಪರಂಪರೆ ಮಾನವತೆಗಾಗಿ ಬೆಳಕು ನೀಡುವ ದಾರಿಯಾಗಿ ಮುಂದುವರಿಯಲಿ ಎಂದು ನಾವು ಆಶಿಸುತ್ತೇವೆ” ಎಂದು ಖಾದರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Continue Reading

DAKSHINA KANNADA

ಮಂಗಳೂರು: ಪಾವನಿ ಸಿಲ್ಕ್ಸ್ & ಟೆಕ್ಸ್‌ಟೈಲ್ಸ್ ಶೋರೂಂ ಲೋಕಾರ್ಪಣೆ

Published

on

ಮಂಗಳೂರು: ಕಳೆದ 10 ವರ್ಷಗಳಿಂದ ಜವುಳಿ ಉದ್ಯಮದಲ್ಲಿ ಜನಮನ್ನಣೆಗೆ ಪಾತ್ರವಾಗಿರುವ ಪಾವನಿ ಸಿಲ್ಕ್ಸ್ ಮತ್ತು ಫ್ಯಾಬ್ರಿಕ್ಸ್‌ನ ಸಹ ಸಂಸ್ಥೆ ಪಾವನಿ ಸಿಲ್ಕ್ಸ್ ಮತ್ತು ಟೆಕ್ಸ್ ಟೈಲ್ಸ್ ಎರಡನೇ ಶೋರೂಂ ಮಂಗಳೂರಿನ ಭವಂತಿ ಸ್ಟ್ರೀಟ್ ನ ಮಹಾಲಕ್ಷ್ಮಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಶುಭಾರಂಭಗೊಂಡಿತು.

ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್, ಕಟ್ಟಡ ಮಾಲಕ ರವೀಂದ್ರ ನಿಕಂ ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಶೋರೂಂ ಉದ್ಘಾಟಿಸಿದರು. ಪುಟ್ಟ ಮಕ್ಕಳಿಂದ ದೀಪ ಬೆಳಗಿಸುವ ಮೂಲಕ ಶೋರೂಂ ವಿಶೇಷ, ವಿಭಿನ್ನ ರೀತಿಯಲ್ಲಿ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗದಲ್ಲಿ ವ್ಯವಹಾರ ಮಾಡಬೇಕಾದರೆ ತುಂಬಾ ಕಷ್ಟವಿದೆ. ನಾವು ವ್ಯವಹಾರಕ್ಕೆ ಇಳಿದಾಗ ಅದರ ಕಷ್ಟ ಗೊತ್ತಾಗುತ್ತದೆ. ಆದರೆ ಆ ಕಷ್ಟವನ್ನು ಮೀರಿ ನಾವು ಯಶಸ್ವಿ ಆಗುವುದೇ ನಮ್ಮ ಸಾಧನೆ. ಆ ಸಾಧನೆ ಮಾಡಿ ಇನ್ನೂ ಹಲವರಿಗೆ ಉದ್ಯೋಗ ನೀಡುವ ಕೆಲಸಕ್ಕೆ ದೇವರ ಅನುಗ್ರಹ ಇರುತ್ತದೆ ಎಂದರು. ಪಾವನಿ ಸಂಸ್ಥೆಯ ಇನ್ನೂ ಹಲವು ಶಾಖೆಗಳು ಬೆಳೆದುಕೊಂಡು ಬರಲಿ ಎಂಧರು.

ದೈವಜ್ಞ ಕೆ ಸಿ ನಾಗೇಂದ್ರ ಅವರು ಮಾತನಾಡಿ ಶ್ರಮಜೀವಿಯಾಗಿರುವ ಐವರು ಯುವಕರು ಇಂದು ತಮ್ಮದೇ ಸಂಸ್ಥೇಯನ್ನು ಕಟ್ಟಿಕೊಂಡು ಇದೀಗ ೨ನೇ ಶೋರೂಂ ಉದ್ಘಾಟನೆ ಮಾಡಿರುವುದು ಸಂತಸದ ವಿಷಯ. ಈ ಮೂಲಕ ಅನ್ಯರಿಗೂ ಕೆಲಸ ನೀಡುತ್ತಿರುವುದು ಪುಣ್ಯದ ಕೆಲಸವಾಗಿದೆ. ಸಮಾಜಕ್ಕೆ ನಾವು ಮಾದರಿಯಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು.

ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಮ್ ಜಮಾಅತ್ ನ ಖತೀಬ್ ಬಿ.ಕೆ.ಇಲ್ಯಾಸ್ ಬಾಖವಿ ಮಾತನಾಡಿ, ಇಲ್ಲಿ ಸರ್ವಧರ್ಮದವರು ಜೊತೆಗೆ ಸೇರಿ ಈ ಜವುಳಿ ಸಂಸ್ಥೇಯನ್ನು ಕಟ್ಟಿಕೊಂಡು ಬಂದಿದ್ದಾರೆ. ನಾವು ವ್ಯವಹಾರ ಮಾಡುವಾಗ ಜಾತಿ, ಧರ್ಮ ಎನ್ನುವ ಮನೋಭಾವನೆಯನ್ನು ಕಾಣದೇ ಎಲ್ಲರೊಂದಿಗೂ ಪ್ರೀತಿಯಿಂದ ಇದ್ದರೆ ವ್ಯವಹಾರಕ್ಕೆ ಆ ಭಗವಂತ ಕೂಡಾ ಕೈಹಿಡಿಯುತ್ತಾನೆ ಎಂದು ಶುಭ ನುಡಿದರು.

ನೂತನ ಶೋರೂಂನಲ್ಲಿ ಕೆಲಸ ಮಾಡಿದ ಕಂಟ್ರಾಕ್ಟರ್ ಶರತ್‌ಚಂದ್ರ, ಇಲೆಕ್ಟ್ರಿಕ್ ಕೆಲಸ ಮಾಡಿದ ಅನೂಪ್ ಬಂಗೇರ, ಇಂಟೀರಿಯರ್ ಡಿಸೈನಿಂಗ್ ಮಾಡಿದ ದೀಕ್ಷಿತ್ ರಾಜ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಸಮಾರಂಭದಲ್ಲಿ ಅಡ್ವೋಕೇಟ್ ದಯಾನಂಧ ರೈ, ಅಡ್ವೋಕೇಟ್ ಮತ್ತು ತೆರಿಗೆ ಸಲಹೆಗಾರ ಅಬ್ದುಲ್ ಖಾದರ್ ಇಡ್ಯಾ, ದಕ್ಷಿಣ ಕನ್ನಡ ಟೆಕ್ಸ್‌ಟೈಲ್ಸ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ್ ವಿ. ರಾವಲ್, ಐಸಿವೈಎಂ ನಿರ್ದೇಶಕ ರೆ. ಫಾ.ಅಶ್ವಿನ್ ಕಾರ್ಡೋಜ, ರವೀಂದ್ರ ನಿಕ್ಕಂ ಅವರ ಸಹೋದರ ಅರುಣ್ ನಿಕ್ಕಂ ಮೊದಲಾದವರಿದ್ದರು. ಸಂಸ್ಥೆಯ ಪಾಲುದಾರರಾದ ಹೈದರ್, ಗೌತಮ್ ಬಂಗೇರ, ಇಬ್ರಾಹಿಂ, ನರಸಿಂಹ, ನಾಗೇಶ್ ಅವರು ಅತಿಥಿಗಳನ್ನು ಗೌರವಿಸಿದರು. ನೂತನವಾಗಿ ಉದ್ಘಾಟನೆಗೊಂಡ ಈ ಶೋರೂಂನಲ್ಲಿ ಮದುವೆ, ನಿಶ್ಚಿತಾರ್ಥ ಸೇರಿದಂತೆ ಸಭೆ ಸಮಾರಂಭ ಹಾಗೂ ಇತರ ಎಲ್ಲಾ ಸಂದರ್ಭಗಳಿಗೆ ಪೂರಕವಾದ ಬಟ್ಟೆಬರೆಗಳ ಅಪೂರ್ವ ಸಂಗ್ರಹವಿದೆ. ಸಂಸ್ಥೆಯ 10ನೇ ವಾರ್ಷಿಕೋತ್ಸವ ಮತ್ತು ಹೊಸ ಶಾಖೆಯ ಉದ್ಘಾಟನೆ ಪ್ರಯುಕ್ತ ಏಪ್ರಿಲ್ 39ರವರೆಗೆ ಎಲ್ಲಾ ಬಟ್ಟೆಗಳ ಮೇಲೆ ಶೇ.೧೦ರಷ್ಟು ವಿಶೇಷ ರಿಯಾಯಿತಿ ಗ್ರಾಹಕರಿಗೆ ನೀಡಲಾಗುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page