Connect with us

DAKSHINA KANNADA

ನಾವು ಡೆಡ್‌ಲೈನ್ ಅದರೂ ಕೊಡುತ್ತೇವೆ, ಕಾಂಗ್ರೆಸ್ ತರ ಡೆಡ್ ಆಗಲ್ಲ: SDPI 

Published

on

ಮಂಗಳೂರು: “ನಾವು ಡೆಡ್‌ಲೈನ್‌ ಆದರೂ ಕೊಡುತ್ತೇವೆ, ಆದರೆ ಯಾವತ್ತೂ ಕಾಂಗ್ರೆಸಿನಂತೆ ಡೆಡ್ ಆಗಲಿಲ್ಲ, ಆಗುವುದೂ ಇಲ್ಲ ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ.


ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷ ಶಾಹುಲ್ ಹಮೀದ್ ಪತ್ರಿಕಾ ಗೋಷ್ಠಿಯೊಂದರಲ್ಲಿ ಕಾಂಗ್ರೆಸ್ ನಾಯಕರ ಅಣತಿಯಂತೆ ಎಸ್‌ಡಿಪಿಐ ವಿರುದ್ಧ ಅನಗತ್ಯ ವಿಚಾರಗಳನ್ನು ಎಳೆದು ಹಾಕಿ ಅಪಪ್ರಚಾರ ನಡೆಸಿದ್ದಾರೆ.

ಜಿಲ್ಲೆಯಲ್ಲಿ ನಡೆದ ಹಲವಾರು ಘಟನೆಗಳನ್ನು ಉಲ್ಲೇಖಿಸುತ್ತಾ ಎಸ್‌ಡಿಪಿಐ ಕೇವಲ ಡೆಡ್‌ಲೈನ್ ಕೊಡುತ್ತಿದೆ ಎಂದು ಹತಾಶರಾಗಿ ಆರೋಪ ಹೊರಿಸಿದ್ದಾರೆ.

ಕೆಲ ದಿನಗಳ ಹಿಂದೆ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯಾದ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಅವರು, ‘ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವು ತಳೆಯಬೇಕು,

ಈ ವಿಚಾರದಲ್ಲಿ ಕಾಂಗ್ರೆಸ್ ಮೌನವಾಗಿದೆ. ಪತ್ರಿಕಾಗೋಷ್ಠಿ ಕರೆದ ಕಾಂಗ್ರೆಸ್ ಅಲ್ಪಸಂಖ್ಯಾತರ ಮುಖಂಡ ಶಾಹುಲ್ ಹಮೀದ್ ಹತಾಶೆಯಿಂದ ಎಸ್‌ಡಿಪಿಐ ಮೇಲೆ ನಿರಾಧಾರ ಆರೋಪ ಹೊರಿಸಿದ್ದಾರೆ ಬಗ್ಗೆ ಟೀಕಿಸಿದರು.

ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯ ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ಕಾರಣದಿಂದ ನೀವು ನಿರಂತರ ಅಧಿಕಾರದ ಸುಖ ಅನುಭವಿಸಿದ್ದೀರಿ,

ಆದರೆ ಇಂದು ಮುಸ್ಲಿಂ ಸಮುದಾಯ ಸಂಕಷ್ಟದಲ್ಲಿರುವಾಗ ಅದರ ಬಗ್ಗೆ ತುಟಿ ಬಿಚ್ಚಬಾರದೆಂದು ಕೆ.ಪಿ.ಸಿ.ಸಿ ಅಧ್ಯಕ್ಷರು ಫರ್ಮಾನು ಹೊರಡಿಸಿದ್ದಾರೆ,

ಆದರೆ ಕೆಲವು ಮುಖಂಡರು ಇನ್ನೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಹಾಗಾದರೆ ಪಕ್ಷದ ಅಧಿಕೃತ ನಿಲುವು ಏನು ಎಂದು ಎಸ್‌ಡಿಪಿಐ ಪ್ರಶ್ನಿಸುತ್ತದೆ.

ಕಾಂಗ್ರೇಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ಘಟಕ ಎಂಬುದು ಅಲ್ಪ ಸಂಖ್ಯಾತರ ಹಿತರಕ್ಷಣೆ ಮಾಡಲು ಇರುವುದೊ ಅಥವಾ ಎಸ್‌ಡಿಪಿಐ ಮೇಲೆ ಅಪಪ್ರಚಾರ ನಡೆಸಲು ಇರುವುದೋ ಎಂದು ಶಾಹುಲ್ ಹಮೀದ್ ಸ್ಪಷ್ಟಪಡಿಸಬೇಕು ಎಂದು ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಹಿಜಾಬ್ ವಿವಾದದ ಹಿನ್ನೆಲೆ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು “ಕಳೆದ 50 ದಿನಗಳಿಂದ ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿನ ಹೊರಗೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾಗ ಕಾಂಗ್ರೆಸ್ ನಾಯಕರು ಎಮ್ಮೆ ಮೇಯಿಸುತ್ತಿದ್ದೀರಾ..,

ಯಾರಾದರೂ ಹೇಳಿಕೆ ಕೊಟ್ಟರೆ ಕೂಡಲೇ ಅವರಿಂದ ಹೇಳಿಕೆಯನ್ನು ಹಿಂಪಡೆಯಲು ಒತ್ತಡ ಹೇರಿ ಕ್ಷಮೆ ಕೇಳಿಸುವಂತಹ ವಾತಾವರಣ ಸೃಷ್ಟಿಸುವ ಮೂಲಕ ಕಾಂಗ್ರೇಸ್ ಪಕ್ಷ ಸಾಫ್ಟ್ ಹಿಂದುತ್ವವನ್ನು ದಾಟಿ ಹಾರ್ಡ್ ಹಿಂದುತ್ವದ ಕಡೆಗೆ ಸಾಗುತ್ತಿರುವುದು ಸ್ಪಷ್ಟವಾಗುತ್ತಿದೆ.

ಕನಿಷ್ಠ ಪಕ್ಷ ಸದನದಲ್ಲಿ ಈ ವಿಚಾರವನ್ನು ಮಂಡಿಸುವ ಎದೆಗಾರಿಕೆ ಇಲ್ಲದ ಕಾಂಗ್ರೆಸ್ ನಾಯಕರು ಎಸ್‌ಡಿಪಿಐ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ.

ಎಸ್‌ಡಿಪಿಐ ಪಕ್ಷಕ್ಕೆ ಯಾವ ವಿಚಾರದ ಬಗ್ಗೆ ಹೋರಾಟ ಮಾಡಬೇಕು, ಯಾವುದರ ಬಗ್ಗೆ ಮಾತನಾಡಬೇಕು ಎಂಬ ಸ್ಪಷ್ಟ ಅರಿವಿದೆ. ಕಳೆದ 13 ವರ್ಷಗಳಿಂದ ಸಂಘಪರಿವಾರವನ್ನು ಯಾವ ರೀತಿ ಎದುರಿಸಿಕೊಂಡು ಬಂದಿದ್ದೇವೆ,

ಸಂಘಪರಿವಾರದ ಹಿಡೆನ್ ಅಜೆಂಡಾಗಳನ್ನು ಜನರ ಬಳಿಗೆ ಕೊಂಡೊಯ್ದು ಅದನ್ನು ಕಾನೂನಾತ್ಮಕವಾಗಿ ಎದುರಿಸಿದ್ದೇವೆ ಎಂಬುದು ನಾಡಿನ ಪ್ರಜ್ಞಾವಂತ ನಾಗರಿಕರಿಗೆ ಗೊತ್ತಿದೆ.

ಬಿಜೆಪಿ ಯನ್ನು ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಬೆಳೆಸುತ್ತಿರುವವರು ಯಾರು ಎಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ.

ನೀವು ಮುಸ್ಲಿಂ ಸಮುದಾಯಕ್ಕೆ ವಂಚನೆ ಹಾಗೂ ದ್ರೋಹವೆಸಗಿದ ಇತಿಹಾಸ ನಮಗೆ ಚೆನ್ನಾಗಿ ಗೊತ್ತಿದೆ.

ಈ ಬಗ್ಗೆ ಬಹಿರಂಗ ಸವಾಲಿಗೆ ಎಸ್‌ಡಿಪಿಐ ತಯಾರಾಗಿದೆ. ನಮಗೆ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕವೆಂಬ ಅಲ್ಪರಿಂದ ತುಂಬಿ ಹೋಗಿರುವ ಸ್ವಯಂ ಘೋಷಿತ ನಾಯಕರ ಅನುಮತಿ ಅಗತ್ಯವಿಲ್ಲ ಎಂದು ಪತ್ರಿಕಾ ಹೇಳಿಕೆಯ ಮೂಲಕ ವ್ಯಂಗ್ಯವಾಡಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಫೆ.14ರಂದು 16ನೇ ವರ್ಷದ ಜಯ-ವಿಜಯ ಜೋಡುಕರೆ ಕಂಬಳ; ಆಮಂತ್ರಣ ಪತ್ರಿಕೆ ಬಿಡುಗಡೆ

Published

on

ಮಂಗಳೂರು: ಜಯ-ವಿಜಯ ಜೋಡುಕರೆ ಕಂಬಳ ಸಮಿತಿ (ರಿ) ಜಪ್ಪಿನಮೊಗರು ಮಂಗಳೂರು ಇವರ ನೇತೃತ್ವದಲ್ಲಿ ಮನ್ಕು ತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೇಷ ಜೆ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಫೆ.14 ಮತ್ತು 15ರಂದು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ನಡೆಯಲಿದೆ.

ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು ನಗರದ ಓಷಿಯನ್ ಪರ್ಲ್ ಹೊಟೇಲ್ ನಲ್ಲಿ ನಡೆಯಿತು. ಸುತೇಜ್ ಎಂಟರ್ ಪ್ರೈಸಸ್ ಮುಂಬಯಿ ಇದರ ಎಂಡಿ, ಹಾಗೂ ಕಂಬಳದ ಮಾರ್ಗದರ್ಶಕ ಎಚ್. ಸುಧಾಕರ್ ಶೆಟ್ಟಿ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಮುಂದಾಳತ್ವದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು.

ನಂತರ ಈ ಬಗ್ಗೆ ಸುಧಾಕರ್ ಶೆಟ್ಟಿ ಮಾತನಾಡಿ ಜಪ್ಪಿನಮೊಗರುವಿನಲ್ಲಿ ನಡೆಯುತ್ತಿರುವ ಕಂಬಳ ಅತ್ಯಂತ ವಿಶೇಷವಾದದ್ದು. ಯಾಕಂದ್ರೆ ಶಾಸಕ ವೇದವ್ಯಾಸ್ ಕಾಮತ್ ಅವರ ಸಹಕಾರದಿಂದ ವ್ಯವಸ್ಥಿತವಾಗಿ ಈಗ ನಡೆಯುತ್ತಿದೆ. ಕಂಬಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸ್ತಾರೆ. ಕಂಬಳವನ್ನು ನಾಡಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: 33ನೇ ವರ್ಷದ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

ಗೌರವಾಧ್ಯಕ್ಷ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ಶ್ರೀ ಅನಂತಪದ್ಮನಾಭ ಅಸ್ರಣ್ಣರ ಆಶೀರ್ವಚನದೊಂದಿಗೆ ವೇದಮೂರ್ತಿ ಬ್ರಹ್ಮ ಶ್ರೀ ವಿಠಲದಾಸ್ ತಂತ್ರಿವರ್ಯರಿಂದ ಕಂಬಳವು ಉದ್ಘಾಟನೆಗೊಳ್ಳಲಿದೆ. ಉದ್ಯಮಿಗಳು ಸೇರಿದಂತೆ ಸಿನಿಮಾ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಕಂಬಳದಲ್ಲಿ 150ಕ್ಕೂ ಹೆಚ್ಚಿನ ಸಂಖ್ಯೆಯ ಕೋಣಗಳು ಭಾಗವಹಿಸಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಯ ವಿಜಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ, ಕಾರ್ಯಾಧ್ಯಕ್ಷೆ ವೀಣಾಮಂಗಳ, ಮತ್ತೋರ್ವ ಕಾರ್ಯಾಧ್ಯಕ್ಷ ಪ್ರವೀಣ್ ಚಂದ್ರ ಆಳ್ವ ತಿರುವೈಲುಗುತ್ತು, ಸಂದೀಪ್ ಶೆಟ್ಟಿ ಎಕ್ಕೂರು ಮತ್ತಿತ್ತರರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕಾಂಗ್ರೆಸ್ ನಲ್ಲಿರುವ ಹಿಂದೂಗಳಿಗೆ ರಾಮ ದೇವರಲ್ಲವೇ: ಕಾಂಗ್ರೆಸ್ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ

Published

on

ಮಂಗಳೂರು: ರಾಮನ ಹೆಸರಿಟ್ಟರೆ ಕಾಂಗ್ರೆಸಿಗರಿಗೆ ಹೊಟ್ಟೆ ಉರಿ ಏಕೆ? ಕಾಂಗ್ರೆಸ್ ನಲ್ಲಿರುವ ಹಿಂದೂಗಳಿಗೆ ರಾಮ ದೇವರಲ್ಲವೇ ಎಂದು ಶಾಸಕ ವೇದವ್ಯಾಸ ಕಾಮತ್‌ ಕೇಂದ್ರ ಸರಕಾರದ ವಿಬಿ- ಜಿ- ರಾಮ್‌- ಜಿ- ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿ ರಾಮನ ಹೆಸರು ಬಂತು ಎಂದಾಗ ಕಾಂಗ್ರೆಸಿಗರು ಅಲರ್ಜಿ ತರ ಮಾತನಾಡುವುದೇಕೆ? ಮನ್ ರೇಗಾ ಹೆಸರನ್ನು ನರೇಗಾ ಎಂದು ಬದಲಿಸಿದ್ದು ಕಾಂಗ್ರೆಸ್ ಅಲ್ಲವೇ ಎಂದರು.

ವೋಟ್‌ ಬ್ಯಾಂಕಿಗಾಗಿ ಕಾಂಗ್ರೆಸ್‌ ಮಾಡುತ್ತಿರುವ ರಾಜಕಾರಣ ಈಗ ಜನರಿಗೆ ಅರ್ಥವಾಗಿದೆ. ದೇಶದ ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಆಡಳಿತವಿದೆ. ಕಾಂಗ್ರೆಸಿಗರಿಗೆ ರಾಮನ ಶಾಪ ಇದೆ, ಇದನ್ನು ಸರಿ ಮಾಡಲು ಮೊದಲು ಕಲಿಯಿರಿ ಎಂದವರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ದೇವಸ್ಥಾನದ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂಬ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ ಮಾಜಿ ಸಚಿವ ಬಿ ರಮಾನಾಥ ರೈ

ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ರಾಜ್ಯದಲ್ಲಿ ಅವರದೇ ಸರಕಾರವಿದೆ. ಆವರ ಆಡಳಿತ ವೈಫಲ್ಯಗಳನ್ನು ಸರಿಪಡಿಸುವ ಸಾಮರ್ಥ್ಯ ಅವರಿಗಿಲ್ಲ. ಮಂಗಳೂರಿನಲ್ಲಿ ಈ- ಖಾತಾ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಜೈಲಿನ ಜಾಮರ್ ಸಮಸ್ಯೆ ನಿವಾರಣೆ ಮಾಡುವ ಸಾಮರ್ಥ್ಯ ಇಲ್ಲ. ಮೂಡಾ, ತಾಲೂಕು ಕಚೇರಿಗಳು ಸಮಸ್ಯೆಗಳ ಆಗರವಾಗಿವೆ ಎಂದು ಟೀಕಿಸಿದರು.

Continue Reading

DAKSHINA KANNADA

33ನೇ ವರ್ಷದ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

Published

on

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ 33ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಇಂದು ಬೆಳಿಗ್ಗೆ ಆರಂಭಗೊಂಡಿದೆ.

ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟನೆ ನರೆವೇರಿಸಿದರು.

ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ನಗರಸಭೆ ಮುಖ್ಯಾಧಿಕಾರಿ ವಿದ್ಯಾ ಕಾಳೆ, ಪದ್ಮನಾಭ ಶೆಟ್ಟಿ, ಜಯಂತ್ ನಡುಬೈಲು, ಸುಂದರ ಗೌಡ, ಉದ್ಯಮಿ ದಿವ್ಯಾ ಶೆಟ್ಟಿ, ಡಾ ಶರತ್‌ ಶೆಟ್ಟಿ, ಬಾಬು ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಅಡ್ವೆ ನಂದಿಕೂರು 33ನೇ ವರ್ಷದ “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟ; ಇಲ್ಲಿದೆ ಫಲಿತಾಂಶ

ನೇಗಿಲು ಹಿರಿಯ, ನೇಗಿಲು ಕಿರಿಯ, ಕನೆಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ ವಿಭಾಗಗಳಲ್ಲಿ ಕಂಬಳ ನಡೆಯಿತು. ಕಳೆದ ವರ್ಷ ಪುತ್ತೂರು ಕಂಬಳದಲ್ಲಿ ಕರೆಯಲ್ಲೆ ರಾಜ್ಯಮಟ್ಟದ ಕೆಸರು ಗದ್ದೆ ಓಟ ಸ್ಪರ್ಧೆ ಏರ್ಪಡಿಸಲಾಗಿತ್ತು . ಈ ವರ್ಷ ಇದರ ಜೊತೆಗೆ ಮೊದಲ ಬಾರಿ ರಿಲೇ ಸ್ಪರ್ಧೆ ಏರ್ಪಡಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page