Connect with us

DAKSHINA KANNADA

ಸ್ಲಮ್ ಹುಡುಗರನ್ನು ತೊಡೆಯ ಮೇಲೆ ಕೂರಿಸಿ ಆರ್ಕೆಸ್ಟ್ರಾ ವೀಕ್ಷಿಸಿದ ಸಂದೇಶ್ ನೀರುಮಾರ್ಗ..!

Published

on

ಮಂಗಳೂರು: ಸಂದೇಶ್ ನೀರುಮಾರ್ಗ ಇವರು  ಹಳ್ಳಿಯಿಂದ ರಾಜ್ಯ ಅಂತರಾಜ್ಯಗಳಲ್ಲೂ ಪ್ರತಿಭೆ ಪಸರಿಸಿದ ಯುವ ಗಾಯಕ. ಹೆಸರು, ಕೀರ್ತಿ ಎಷ್ಟೇ ಎತ್ತರಕ್ಕೂ ಬೆಳೆದರೂ ಇವರ ವಿನಯತೆ, ಮಾನವೀಯತೆಯಲ್ಲಿ ಒಂದು ಚೂರು ಕಡಿಮೆ ಆಗಿಲ್ಲ. ತಾನು ಬೆಳೆದು ಬಂದ ಕಷ್ಟಗಳನ್ನು ಸಂಪೂರ್ಣವಾಗಿ ಅರಿತಿರುವ ಸಂದೇಶ್, ಇತರರ ಕಷ್ಟಗಳನ್ನು ಕೂಡ ಅಷ್ಟೇ ಹತ್ತಿರದಿಂದ ಬಲ್ಲವರಾಗಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ ಮಂಗಳೂರಿನಲ್ಲಿ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಅವರು ನಡೆದುಕೊಂಡ ರೀತಿ ನೋಡಬಹುದು.

ಮಂಗಳೂರಿನ ಒಸಿ ಫ್ರೆಂಡ್ಸ್ ಬೋಳಾರದ ಆಶ್ರಯದಲ್ಲಿ ನಡೆದ ಮಂಗಳಾದೇವಿ ನವರಾತ್ರಿಯ ಜಳಕದ ಅಂಗವಾಗಿ ಭಾವೈಕ್ಯತಾ ಸಂಗಮ 2023 ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾನೂ ಒಬ್ಬ ಪ್ರೇಕ್ಷಕಕನಂತೆ ತೆರಳಿದ್ರು. ಈ ಸಂದರ್ಭ ಅಲ್ಲಿಯೇ ಕೆಲವು ಪುಟ್ಟಪುಟ್ಟ ಸ್ಲಮ್ ಮಕ್ಕಳು ಬಲೂನ್ ಮಾರಿಕೊಂಡು ಅವರ ಹತ್ತಿರ ಬಂದಿದ್ದಾರೆ. ಮಕ್ಕಳ ಮುಗ್ದತೆಯನ್ನು ಕಂಡು ಭಾವಪರವಶರಾಗಿದ್ದು, ಜೊತೆಗೆ ಮಕ್ಕಳನ್ನು ತೊಡೆಯ ಮೇಲೆ ಕೂರಿಸಿ ಆರ್ಕೆಸ್ಟ್ರಾವನ್ನು ಜೊತೆಯಾಗಿ ಸವಿದರು.

ಈಗಿನ ಕಾಲದಲ್ಲಿ ಅಲ್ಪಸ್ವಲ್ಪ ಫೇಮ್, ಹೆಸರು ಬಂದರೆ ಸಾಕು, ಯಾರು ಕಣ್ಣಿಗೆ ಕಾಣಿಸುವುದಿಲ್ಲ ಅನ್ನುವ ಮಟ್ಟಿಗೆ ಇರುವ ಕಲಾವಿದರ ಮಧ್ಯೆ ಸಂದೇಶ್ ನೀರುಮಾರ್ಗ ಮಾತ್ರ ಒಂದೂಚೂರು ಬದಲಾಗದೆ ಇರುವುದು ಅವರ ಘನತೆ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. ಮಂಗಳೂರಿನ ನೀರ್‌ಮಾರ್ಗ ಎನ್ನುವಲ್ಲಿ ಆರ್ಕೆಸ್ಟ್ರಾ ಗಾಯಕರಾಗಿದ್ದವರು ಸಂದೇಶ್. ಆದರೆ ಅವರನ್ನು ಗಾಯಕರನ್ನಾಗಿ ಗುರುತಿಸಿದ್ದಕ್ಕಿಂತ ಜನ ರಿಕ್ಷಾ ಚಾಲಕರಾಗಿ ಗುರುತಿಸಿದ್ದೇ ಹೆಚ್ಚು. ಯಾಕೆಂದರೆ ಬಿಎ ಕಲಿತು ಕೊರಿಯರ್ ಸಂಸ್ಥೆಯಲ್ಲಿ ವೃತ್ತಿ ಸಿಕ್ಕಿದ್ದರೂ, ಆ ಸಂಬಳದಿಂದ ಜೀವನ ಸಾಗಿಸುವುದು ಕಷ್ಟವಾಗಿತ್ತು.

ಮಾತ್ರವಲ್ಲ, ಉಪವೃತ್ತಿಯಾಗಿ ಬೆಳೆದಿದ್ದ ಆರ್ಕೆಸ್ಟ್ರಾ ಹಾಡುಗಾರಿಕೆಗೆ ಸಮಯ ನೀಡುವುದೂ ಸಾಧ್ಯವಾಗಿರಲಿಲ್ಲ. ಆಗ ಕೊರಿಯರ್ ವೃತ್ತಿಗೆ ರಾಜೀನಾಮೆ ನೀಡಿ ರಿಕ್ಷಾ ಚಾಲಕರಾಗಿ, ಮೀನು ಮಾರಾಟಗಾರರಾಗಿ, ಫುಡ್ ಡೆಲಿವರಿ ಬಾಯ್‌ ಆಗಿ ಬದುಕು ಕಟ್ಟಿಕೊಳ್ಳಲು ಹೆಣಗಾಡಿದ್ದ ವ್ಯಕ್ತಿ ಈ ಸಂದೇಶ್.

ಆದರೆ ಈಗ ಕಲೆಯ ಮೇಲೆ ಶ್ರದ್ಧೆ ಇಟ್ಟರೆ, ಇನ್ನಷ್ಟು ಮಂದಿಗೆ ಬದುಕು ಕಟ್ಟಿಕೊಡಬಹುದೆನ್ನುವ ಸಂದೇಶ ನೀಡುವಂತೆ ಬೆಳೆದಿದ್ದಾರೆ.

DAKSHINA KANNADA

ಜಸ್ಟ್ ಪಾಸ್ ಮಾಡಲು ದೈವಕ್ಕೆ ಮನವಿ ಸಲ್ಲಿಸಿದ ವಿದ್ಯಾರ್ಥಿ..! ಹುಂಡಿಯಲ್ಲಿ ಪತ್ತೆಯಾದ ಚೀಟಿ..!

Published

on

ಉಡುಪಿ :  ವಿದ್ಯಾರ್ಥಿಯೊಬ್ಬ ದೈವಕ್ಕೆ ಚೀಟಿ ಬರೆದು ನನಗೆ ಇಂತಿಷ್ಟು ಅಂಕ ಬರುವಂತೆ ಮಾಡಿ ಪಾಸ್ ಮಾಡಿಸು ಅಂತ ಕೋರಿಕೊಂಡ ಪತ್ರವೊಂದು ವೈರಲ್ ಆಗಿದೆ.

ಪರೀಕ್ಷೆ ಅಂದ್ರೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಅದೊಂದು ರೀತಿಯ ಟೆನ್ಷನ್ ಇದ್ದೇ ಇರುತ್ತದೆ. ಟಾಪರ್ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಗಿಂತ ಅಂಕ ಕಡಿಮೆ ಬಾರದಿರಲಿ ಅನ್ನೋ ಟೆನ್ಷನ್ ಇದ್ರೆ, ಸಾಮಾನ್ಯ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಹೇಗಾದ್ರೂ ಹೆಚ್ಚಿನ ಅಂಕ ಗಳಿಸಬೇಕು ಅನ್ನೋ ಚ್ಯಾಲೆಂಜ್ ಇರುತ್ತದೆ. ಆದ್ರೆ ಕಲಿಕೆಯಲ್ಲಿ ತೀರಾ ಹಿಂದೆ ಉಳಿದ ವಿದ್ಯಾರ್ಥಿಗಳು ಜಸ್ಟ್ ಪಾಸ್ ಆದ್ರೆ ಸಾಕು ಅಂತಿರ್ತಾರೆ. ಅಂತಹ ಒಬ್ಬ ವಿದ್ಯಾರ್ಥಿ ದೈವದ ಹುಂಡಿಯಲ್ಲಿ ಚೀಟಿ ಬರೆದು ಅಂಕಗಳ ಆಪ್ಷನ್ ಕೊಟ್ಟು ಇಷ್ಟಾದ್ರೂ ಕೊಡಿಸು ದೇವರೆ ಅಂತ ಬೇಡಿಕೊಂಡಿದ್ದಾನೆ.

ಕುಂದಾಪುರ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಸ್ಥಾನದ ಕಾಣಿಕೆ ಹುಂಡಿಯ ಲೆಕ್ಕಚಾರ ನಡೆಯುವಾಗ ಈ ಪತ್ರ ಲಭ್ಯವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ಬದ್ಧತೆಯ ಬಗ್ಗೆ ಚರ್ಚೆ ನಡೆದಿದೆ. ಜಸ್ಟ್ ಪಾಸ್ ಮಾಡುವ ಅಂಕ ನೀಡು ಅಂತ ದೈವದ ಬಳಿ ಕೋರಿಕೆ ಇಟ್ಟಿರುವ ವಿದ್ಯಾರ್ಥಿ ಅಂಕಗಳ ಅಪ್ಷನ್ ನೀಡಿದ್ದಾನೆ. ಪ್ರತಿಯೊಂದು ಸಬ್ಜೆಕ್ಟ್‌ ಗೆ ಎಷ್ಟು ಎಷ್ಟು ಸಿಗಬೇಕು ಎಂದು ದೈವದ ಬಳಿ ಕೋರಿಕೆ ಇಟ್ಟಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ದೇವರೆ ಅಂತ ಹೊರ ಬೊಬ್ಬರ್ಯ ದೈವಕ್ಕೆ ಮನವಿ ಮಾಡಿಕೊಂಡಿದ್ದಾನೆ.

Continue Reading

DAKSHINA KANNADA

ಬಂಜಾರ ಸಮೂದಾಯದೊಳಗೆ ಒಡಕು ಮೂಡಿಸಿತಾ ಮಲ್ಪೆ ಹಲ್ಲೆ ಪ್ರಕರಣ..!?

Published

on

ಉಡುಪಿ : ಮಲ್ಪೆಯಲ್ಲಿ ಮೀನು ಕದ್ದ ವಿಚಾರವಾಗಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿದ ಪ್ರಕರಣ ಸದ್ಯ ಬಂಜಾರ ಸಮೂದಾಯದ ನಡುವೆಯೆ ಬಿರುಕು ಮೂಡಿಸಿದಂತೆ ಕಾಣುತ್ತಿದೆ. ಹಲ್ಲೆಯನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡು ಮೀನುಗಾರರ ಪರ ನಿಂತಿದ್ದರೆ, ಹ*ಲ್ಲೆಯನ್ನು ಹಾಗೂ ಬಿಜೆಪಿ ನಾಯಕರ ನಡೆಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಇವರಿಬ್ಬರ ನಡುವೆ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಬಂಜಾರ ಸಮೂದಾಯದವರು ಹೆಣಗಾಡುತ್ತಿದ್ದಾರೆ.


ಮಲ್ಪೆಯಲ್ಲಿ ಹ*ಲ್ಲೆಗೊಳಗಾದ ಮಹಿಳೆ ಸಹಿ ಪಡೆದುಕೊಂಡ ಪೊಲೀಸರು ಆಕೆಗೆ ತಿಳಿಯದಂತೆ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ ಅನ್ನೋದು ಸದ್ಯ ಪೊಲೀಸರ ಮೇಲೆ ಇರುವ ಆರೋಪ. ಈ ಬಗ್ಗೆ ಮಹಿಳೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ನಾನು ಊರಿಗೆ ಹೋಗುತ್ತೇನೆ ಎಂದು ಹೇಳಿದ್ದರು. ಆದ್ರೆ ಇದೇ ವೇಳೆ ಪತ್ರಿಕಾಗೋಷ್ಠಿ ನಡೆಸಿದ ಬಂಜಾರ ಸಮೂದಾಯದ ವಿದ್ಯಾರ್ಥಿ ಸಂಘಟನೆ ಹ*ಲ್ಲೆ ನಡೆಸಿದ ಎಲ್ಲರನ್ನೂ ಹಾಗೂ ಪ್ರಮೋದ್ ಮದ್ವರಾಜ್ ಅವರನ್ನೂ ಬಂಧಿಸಬೇಕು ಎಂದು ಒತ್ತಾಯ ಮಾಡಿದೆ. ಆದ್ರೆ ಮತ್ತೊಂದೆಡೆ ಅದೇ ಸಮೂದಾಯದ ಪ್ರಮುಖರು ಇದೊಂದು ದೊಡ್ಡ ಘಟನೆಯೇ ಅಲ್ಲ. ನಾವು ಹೊಟ್ಟೆ ಪಾಡಿಗೆ ಇಲ್ಲಿಗೆ ಬಂದವರು. ಇಲ್ಲಿನ ಜನರು ತುಂಬಾ ಒಳ್ಳೆಯವರು ಹಾಗೂ ಪ್ರಮೋದ್ ಮದ್ವರಾಜ್ ಅವರಷ್ಟು ಒಳ್ಳೆಯವರು ಯಾರೂ ಇಲ್ಲ. ಮಲ್ಪೆ ಬಂದರಿನಲ್ಲಿ ಇಂತಹದು ದಿನಾ ನಡಿತಾ ಇರುತ್ತದೆ ಅದಕ್ಕೆಲ್ಲಾ ಕೇಸ್ ಹಾಕ್ತಾ ಇದ್ರೆ ಪೊಲೀಸ್ ಠಾಣೆಯಲ್ಲಿ ಪುಸ್ತಕ ಸಾಕಾಗದು. ಇದು ನಮ್ಮನ್ನು ಮುಂದಿಟ್ಟು ಮಾಡುತ್ತಿರುವ ರಾಜಕೀಯ ಅಂತ ಹೇಳಿದ್ದಾರೆ.

ಕೇವಲ ಮೀನು ಕದ್ದ ಆರೋಪಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹ*ಲ್ಲೆ ನಡೆಸಿರುವುದನ್ನು ನಾಗರಿಕ ಸಮಾಜ ಒಪ್ಪುವ ವಿಚಾರವಂತು ಖಂಡಿತಾ ಅಲ್ಲ. ಇಂತಹ ಘಟನೆಗಳು ನಡೆದಾಗ ಸಂವಿಧಾನದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕಾಗಿರುವುದು ಪೊಲೀಸರ ಕರ್ತವ್ಯ ಕೂಡಾ. ಆದ್ರೆ ಇದರಲ್ಲಿ ರಾಜಕೀಯದವರು ಮೂಗು ತೂರಿಸಿದ ಕಾರಣ ಇದೀಗ ಹೊಟ್ಟೆಪಾಡಿಗೆ ಬಂದಿರುವ ಬಂಜಾರ ಸಮೂದಾಯದ ನಡುವೆ ಒಡಕು ಮೂಡಿರುವುದು ಸುಳ್ಳಲ್ಲ.

Continue Reading

DAKSHINA KANNADA

ಕಂಬಳಕ್ಕೆ ವಿದಾಯ ಹೇಳಿದ ‘ಚಾಂಪಿಯನ್ ಕುಟ್ಟಿ’ ; 17 ವರ್ಷದಿಂದ ಕಂಬಳಾಭಿಮಾನಿಗಳ ಫೇವರೇಟ್ ಆಗಿದ್ದ ‘ಕುಟ್ಟಿ’..!

Published

on

ಮಂಗಳೂರು : ಕಳೆದ ಹದಿನೇಳು ವರ್ಷಗಳಿಂದ ಕಂಬಳ ಕ್ಷೇತ್ರವನ್ನು ಆಳಿದ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದ ‘ಚಾಂಪಿಯನ್ ಕುಟ್ಟಿ’ ಕಂಬಳ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾನೆ. ಈ ಮೂಲಕ ಸುದೀರ್ಘ ಕಾಲ ಕಂಬಳ ಕರೆಯಲ್ಲಿ ತನ್ನ ಗಾಂಭೀರ್ಯ ಓಟದ ಮೂಲಕ ಕಂಬಳಾಭಿಮಾನಿಗಳ ಹೃದಯ ಗೆದ್ದಿದ್ದ ಪ್ರಸಿದ್ಧ ‘ಕುಟ್ಟಿ’ ಕಂಬಳ ಕ್ಷೇತ್ರದಿಂದ ದೂರ ಉಳಿಯಲಿದ್ದಾನೆ.


17 ವರ್ಷದ ಹಿಂದೆ ಮುಲ್ಕಿಯಲ್ಲಿ ಮೊದಲ ಬಾರಿಗೆ ಜ್ಯೂನಿಯರ್ ವಿಭಾಗದಲ್ಲಿ ಕಂಬಳ ಕರೆಗೆ ಇಳಿದು ಮೊದಲ ಓಟದಲ್ಲೇ ಬಹುಮಾನ ಪಡೆಯುವ ಮೂಲಕ ‘ಕುಟ್ಟಿ’ ತನ್ನ ಗೆಲುವಿನ ನಾಗಾಲೋಟ ಆರಂಭಿಸಿತ್ತು. ಇದಾದ ಬಳಿಕ ಸತತ ಎರಡು ವರ್ಷ ಜ್ಯೂನಿಯರ್ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ‘ಚಾಂಪಿಯನ್ ಕುಟ್ಟಿ’ ಕಂಬಳಾಭಿಮಾನಿಗಳ ಹೃದಯ ಗೆದ್ದಿತ್ತು. ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ ಬಳಿ ಇದ್ದ ‘ಕುಟ್ಟಿ’ ಕೋಪಿಷ್ಠನಾಗಿದ್ದು, ಯಾರ ನಿಯಂತ್ರಣಕ್ಕೂ ಸಿಗುವ ಕೋಣ ಅಲ್ಲ. ಹೀಗಾಗಿ ‘ಚಾಂಪಿಯನ್ ಕುಟ್ಟಿ’ ನಂದಳಿಕೆ ಶ್ರೀಕಾಂತ ಭಟ್ಟರ ತಂಡ ಸೇರಿಕೊಂಡಿತ್ತು. ನಂದಳಿಕೆ ಶ್ರೀಕಾಂತ ಭಟ್ಟರ ಬಳಿ ಮತ್ತಷ್ಟು ಪಳಗಿದ ‘ಕುಟ್ಟಿ’ ಹಲವಾರು ಬಹುಮಾನಗಳನ್ನು ಪಡೆಯುವ ಮೂಲಕ ‘ಚಾಂಪಿಯನ್ ಕುಟ್ಟಿ’ಯಾಗಿ ಬದಲಾಗಿತ್ತು.

ಯಾವುದೇ ಕೋಣಗಳ ಜೊತೆ ಕಟ್ಟಿ ಓಡಿಸಿದ್ರೂ ಬಹುಮಾನ ತಂದು ಕೊಡುವ ಶಕ್ತಿ ಚಾಂಪಿಯನ್ ‘ಕುಟ್ಟಿ’ಗೆ ಇತ್ತು ಅನ್ನೋದೇ ವಿಶೇಷ. ಈ ಕೋಣವನ್ನು ಓಡಿಸಿದ ನಾಲ್ವರು ಓಟಗಾರರು ಕೂಡಾ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ಸಾಮಾನ್ಯವಾಗಿ ಓಟದಲ್ಲಿ ಹಿಂದೆ ಬಿದ್ದಾಗ ಕೋಣಗಳಿಗೆ ನಿವೃತ್ತಿ ಘೊಷಣೆ ಮಾಡಲಾಗುತ್ತದೆ. ಆದ್ರೆ ಉಪ್ಪಿನಂಗಡಿಯಲ್ಲಿ ನಡೆದ ಕಂಬಳದಲ್ಲಿ ಭಾಗವಹಿಸಿದ ‘ಚಾಂಪಿಯನ್ ಕುಟ್ಟಿ’ ಇಲ್ಲೂ ಕೂಡಾ ಹಗ್ಗ ಹಿರಿಯ ವಿಭಾಗದಲ್ಲಿ ಬಹುಮಾನ ಗಳಿಸಿ ತಾನು ಇನ್ನೂ ಚಾಂಪಿಯನ್ ಅಂತ ತೋರಿಸಿಕೊಟ್ಟಿದೆ. ಆದ್ರೆ ಇದಾದ ಬಳಿಕ ನಂದಳಿಗೆ ಶ್ರೀಕಾಂತ್ ಭಟ್ಟರು ‘ಚಾಂಪಿಯನ್ ಕುಟ್ಟಿ’ಯ ನಿವೃತ್ತಿ ಘೋಷಣೆ ಮಾಡಿದ್ದರೆ. ಕಂಬಳ ಅಭಿಮಾನಿಗಳ ಕರತಾಡನದೊಂದಿಗೆ ‘ಚಾಂಪಿಯನ್ ಕುಟ್ಟಿ’ಗೆ ಗೌರವ ನೀಡಿ ವಿಶೇಷ ರೀತಿಯಲ್ಲಿ ಬೀಳ್ಕೊಡಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page